ಕನ್ನಡ ಸುದ್ದಿ  /  Photo Gallery  /  I Had 4000 Followers Mayank Yadav Reveals Surge In Social Media Followers After Fastest Ball Of The Ipl Season Taken Prs

ಫಾಸ್ಟ್​ ಬಾಲ್ ಹಾಕಿ ಫಾರ್ಲೋವರ್ಸ್ ಏರಿಸಿಕೊಂಡ ಮಯಾಂಕ್ ಯಾದವ್; ರಾತ್ರೋರಾತ್ರಿ ಹೀರೋ ಆದ ವೇಗಿಗೆ ಮೊದಲಿದ್ದಿದ್ದೇ 4000!

  • 2024ರ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ವೇಗಿ ಮಯಾಂಕ್ ಯಾದವ್ ಫಾಸ್ಟೆಸ್ಟ್​ ಬಾಲ್​ ಹಾಕುವ ಮೂಲಕ ತನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ 21 ವರ್ಷದ ಯುವ ವೇಗಿ ಮಯಾಂಕ್ ಯಾದವ್ ರಾತ್ರೋ ರಾತ್ರಿ ಸೂಪರ್​ ಸ್ಟಾಗಿ ಆಗಿ ಹೊರ ಹೊಮ್ಮಿದ್ದಾರೆ. ವೇಗದ ಎಸೆತಗಳು ಹಾಕಿಯೇ ತನ್ನ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.
icon

(1 / 7)

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ 21 ವರ್ಷದ ಯುವ ವೇಗಿ ಮಯಾಂಕ್ ಯಾದವ್ ರಾತ್ರೋ ರಾತ್ರಿ ಸೂಪರ್​ ಸ್ಟಾಗಿ ಆಗಿ ಹೊರ ಹೊಮ್ಮಿದ್ದಾರೆ. ವೇಗದ ಎಸೆತಗಳು ಹಾಕಿಯೇ ತನ್ನ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಹೌದು, ಮಯಾಂಕ್ ಯಾದವ್ ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್​ ಸಂಖ್ಯೆ ನಿರೀಕ್ಷೆಗಿಂತ ದುಪ್ಪಟ್ಟಾಗಿದೆ. ಮೊದಲಿದ್ದದ್ದ ಸಂಖ್ಯೆಗೂ ಈಗಿನ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸ ಇದೆ. ತನ್ನ ಪದಾರ್ಪಣೆ ಐಪಿಎಲ್ ಪಂದ್ಯದಲ್ಲೇ ಗಂಟೆಗೆ 150+ ಕಿ.ಮೀ ವೇಗದಲ್ಲಿ ಬೌಲಿಂಗ್​​ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
icon

(2 / 7)

ಹೌದು, ಮಯಾಂಕ್ ಯಾದವ್ ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್​ ಸಂಖ್ಯೆ ನಿರೀಕ್ಷೆಗಿಂತ ದುಪ್ಪಟ್ಟಾಗಿದೆ. ಮೊದಲಿದ್ದದ್ದ ಸಂಖ್ಯೆಗೂ ಈಗಿನ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸ ಇದೆ. ತನ್ನ ಪದಾರ್ಪಣೆ ಐಪಿಎಲ್ ಪಂದ್ಯದಲ್ಲೇ ಗಂಟೆಗೆ 150+ ಕಿ.ಮೀ ವೇಗದಲ್ಲಿ ಬೌಲಿಂಗ್​​ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.(PTI)

ಪಿಬಿಕೆಎಸ್ ವಿರುದ್ಧದ ಪಂದ್ಯದ ನಂತರ ಎಲ್​ಎಸ್​ಜಿ ವೇಗಿ ಮಯಾಂಕ್ ಯಾದವ್ ತನ್ನ ಇನ್‌ಸ್ಟಾಗ್ರಾಂ ಫಾಲೋವರ್ಸ್‌ನಲ್ಲಿ ಗಮನಾರ್ಹ ಏರಿಕೆ ಕಂಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಎಲ್​ಎಸ್​ಜಿ ತಂಡ ಹಂಚಿಕೊಂಡ ವಿಡಿಯೋದಲ್ಲಿ ಮಯಾಂಕ್, ತಮ್ಮ ಇನ್​ಸ್ಟಾಗ್ರಾಂ ಅನುಯಾಯಿಗಳ ಏರಿಕೆ ಬಳಿಕ ಖುಷಿಯಾಗಿದ್ದಾರೆ.
icon

(3 / 7)

ಪಿಬಿಕೆಎಸ್ ವಿರುದ್ಧದ ಪಂದ್ಯದ ನಂತರ ಎಲ್​ಎಸ್​ಜಿ ವೇಗಿ ಮಯಾಂಕ್ ಯಾದವ್ ತನ್ನ ಇನ್‌ಸ್ಟಾಗ್ರಾಂ ಫಾಲೋವರ್ಸ್‌ನಲ್ಲಿ ಗಮನಾರ್ಹ ಏರಿಕೆ ಕಂಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಎಲ್​ಎಸ್​ಜಿ ತಂಡ ಹಂಚಿಕೊಂಡ ವಿಡಿಯೋದಲ್ಲಿ ಮಯಾಂಕ್, ತಮ್ಮ ಇನ್​ಸ್ಟಾಗ್ರಾಂ ಅನುಯಾಯಿಗಳ ಏರಿಕೆ ಬಳಿಕ ಖುಷಿಯಾಗಿದ್ದಾರೆ.(ANI)

ಇಂದಿನ ಆಟಕ್ಕೂ (ಪಂಜಾಬ್ vs ಲಕ್ನೋ) ಮೊದಲು ನಾನು 4,000 ಫಾಲೋವರ್ಸ್​ ಅನ್ನು ಹೊಂದಿದ್ದೆ. ಇದೀಗ, ಅದರ ಸಂಖ್ಯೆ ಏರಿದೆ ಎಂದು ಮಯಾಂಕ್ ಉತ್ಸಾಹದಿಂದ ಬಹಿರಂಗಪಡಿಸಿದ್ದಾರೆ. ಪ್ರಸ್ತುತ ಅವರ ಫಾಲೋವರ್ಸ್ ಸಂಖ್ಯೆ 97+ ಸಾವಿರ ದಾಟಿದೆ. (ಗಮನಕ್ಕೆ: ಈ ಅಂಕಿ-ಸಂಖ್ಯೆ ಈ ಸುದ್ದಿ ಪಬ್ಲಿಷ್ ಆದ ವೇಳೆಗೆ ಮಾತ್ರ, ನೀವು ಓದಿದ ವೇಳೆ ಅದರ ಸಂಖ್ಯೆ ಜಾಸ್ತಿ ಆಗಿರುವ ಸಾಧ್ಯತೆ ಇರುತ್ತದೆ)
icon

(4 / 7)

ಇಂದಿನ ಆಟಕ್ಕೂ (ಪಂಜಾಬ್ vs ಲಕ್ನೋ) ಮೊದಲು ನಾನು 4,000 ಫಾಲೋವರ್ಸ್​ ಅನ್ನು ಹೊಂದಿದ್ದೆ. ಇದೀಗ, ಅದರ ಸಂಖ್ಯೆ ಏರಿದೆ ಎಂದು ಮಯಾಂಕ್ ಉತ್ಸಾಹದಿಂದ ಬಹಿರಂಗಪಡಿಸಿದ್ದಾರೆ. ಪ್ರಸ್ತುತ ಅವರ ಫಾಲೋವರ್ಸ್ ಸಂಖ್ಯೆ 97+ ಸಾವಿರ ದಾಟಿದೆ. (ಗಮನಕ್ಕೆ: ಈ ಅಂಕಿ-ಸಂಖ್ಯೆ ಈ ಸುದ್ದಿ ಪಬ್ಲಿಷ್ ಆದ ವೇಳೆಗೆ ಮಾತ್ರ, ನೀವು ಓದಿದ ವೇಳೆ ಅದರ ಸಂಖ್ಯೆ ಜಾಸ್ತಿ ಆಗಿರುವ ಸಾಧ್ಯತೆ ಇರುತ್ತದೆ)(AFP)

ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಮ್ಯಾಚ್​ ವಿನ್ನಿಂಗ್ ಪ್ರದರ್ಶನ ನೀಡಿದ ಮಯಾಂಕ್, 4 ಓವರ್​​ಗಳಲ್ಲಿ 27 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಜಾನಿ ಬೈರ್​ಸ್ಟೋ, ಜಿತೇಶ್ ಶರ್ಮಾ, ಪ್ರಭುಶಿಮ್ರಾನ್ ಸಿಂಗ್ ಅವರನ್ನು ಔಟ್ ಮಾಡಿದರು. ಈ ಅದ್ಭುತ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಗೆದ್ದುಕೊಂಡರು.
icon

(5 / 7)

ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಮ್ಯಾಚ್​ ವಿನ್ನಿಂಗ್ ಪ್ರದರ್ಶನ ನೀಡಿದ ಮಯಾಂಕ್, 4 ಓವರ್​​ಗಳಲ್ಲಿ 27 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಜಾನಿ ಬೈರ್​ಸ್ಟೋ, ಜಿತೇಶ್ ಶರ್ಮಾ, ಪ್ರಭುಶಿಮ್ರಾನ್ ಸಿಂಗ್ ಅವರನ್ನು ಔಟ್ ಮಾಡಿದರು. ಈ ಅದ್ಭುತ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಗೆದ್ದುಕೊಂಡರು.(ANI)

ಗಂಟೆಗೆ 147 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ಆರಂಭಿಸಿದ ಮಯಾಂಕ್‌, ನಂತರ ಗಂಟೆಗೆ 155.8 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ 5ನೇ ಅತಿ ವೇಗದ ಎಸೆತ ಬೌಲ್‌ ಮಾಡಿದ ದಾಖಲೆ ನಿರ್ಮಿಸಿದ್ದಾರೆ.
icon

(6 / 7)

ಗಂಟೆಗೆ 147 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ಆರಂಭಿಸಿದ ಮಯಾಂಕ್‌, ನಂತರ ಗಂಟೆಗೆ 155.8 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ 5ನೇ ಅತಿ ವೇಗದ ಎಸೆತ ಬೌಲ್‌ ಮಾಡಿದ ದಾಖಲೆ ನಿರ್ಮಿಸಿದ್ದಾರೆ.(ANI)

ಅದ್ಭುತ ಪ್ರದರ್ಶನ ನೀಡಿದ ಬೆನ್ನಲ್ಲೇ ಮಯಾಂಕ್ ಅವರನ್ನು ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಬೇಕು ಎಂಬ ಕೂಗು ಎದ್ದಿದೆ. 21 ವರ್ಷದ ವೇಗಿಯ ಪೇಸ್ ಅದ್ಭುತವಾಗಿದ್ದು, ವೆಸ್ಟ್ ಇಂಡೀಸ್ ಮತ್ತು ಯುಎಸ್​​ಎ ಪಿಚ್​​ಗಳಲ್ಲಿ ವರ್ಕೌಟ್ ಆಗಲಿದೆ ಎನ್ನುತ್ತಿದ್ದಾರೆ ಮಾಜಿ ಕ್ರಿಕೆಟರ್ಸ್.
icon

(7 / 7)

ಅದ್ಭುತ ಪ್ರದರ್ಶನ ನೀಡಿದ ಬೆನ್ನಲ್ಲೇ ಮಯಾಂಕ್ ಅವರನ್ನು ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಬೇಕು ಎಂಬ ಕೂಗು ಎದ್ದಿದೆ. 21 ವರ್ಷದ ವೇಗಿಯ ಪೇಸ್ ಅದ್ಭುತವಾಗಿದ್ದು, ವೆಸ್ಟ್ ಇಂಡೀಸ್ ಮತ್ತು ಯುಎಸ್​​ಎ ಪಿಚ್​​ಗಳಲ್ಲಿ ವರ್ಕೌಟ್ ಆಗಲಿದೆ ಎನ್ನುತ್ತಿದ್ದಾರೆ ಮಾಜಿ ಕ್ರಿಕೆಟರ್ಸ್.(LSG-X)


IPL_Entry_Point

ಇತರ ಗ್ಯಾಲರಿಗಳು