ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಅಂಪೈರ್ಸ್, ರೆಫರಿ ಪಟ್ಟಿ ಪ್ರಕಟ; ಇಂಡೋ-ಪಾಕ್ ಕದನಕ್ಕೆ ಯಾರು?
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಅಂಪೈರ್ಸ್, ರೆಫರಿ ಪಟ್ಟಿ ಪ್ರಕಟ; ಇಂಡೋ-ಪಾಕ್ ಕದನಕ್ಕೆ ಯಾರು?

ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಅಂಪೈರ್ಸ್, ರೆಫರಿ ಪಟ್ಟಿ ಪ್ರಕಟ; ಇಂಡೋ-ಪಾಕ್ ಕದನಕ್ಕೆ ಯಾರು?

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಮೈದಾನದ ಅಂಪೈರ್​​ಗಳು, 4ನೇ ಅಂಪೈರ್, ರೆಫರಿ ಪಟ್ಟಿಯನ್ನು ಪ್ರಕಟಿಸಿದೆ. ಹೈವೋಲ್ಟೇಜ್ ಇಂಡೋ-ಪಾಕ್ ಪಂದ್ಯಕ್ಕೆ ಯಾರು? ಇಲ್ಲಿದೆ ಸಂಪೂರ್ಣ ಪಟ್ಟಿ.

ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಮೈದಾನದ ಅಂಪೈರ್ಸ್, 4ನೇ ಅಂಪೈರ್, ರೆಫರಿ ಪಟ್ಟಿ ಪ್ರಕಟ; ಇಂಡೋ-ಪಾಕ್ ಕದನಕ್ಕೆ ಯಾರು?
ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಮೈದಾನದ ಅಂಪೈರ್ಸ್, 4ನೇ ಅಂಪೈರ್, ರೆಫರಿ ಪಟ್ಟಿ ಪ್ರಕಟ; ಇಂಡೋ-ಪಾಕ್ ಕದನಕ್ಕೆ ಯಾರು?

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 19ರಿಂದ ಪಾಕಿಸ್ತಾನ ಮತ್ತು ದುಬೈ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಈ ಮೆಗಾ ಈವೆಂಟ್​ನ ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಆನ್​ಫೀಲ್ಡ್, ಮ್ಯಾಚ್​ ರೆಫ್ರಿ, ನಾಲ್ಕನೇ ಅಂಪೈರ್​ಗಳನ್ನು ಘೋಷಿಸಿದೆ. ಹೈವೋಲ್ಟೇಜ್​ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಆಸ್ಟ್ರೇಲಿಯಾದ ಫಾಲ್ ರೈಫಲ್ ಮತ್ತು ಇಂಗ್ಲೆಂಡ್​ನ ರಿಚರ್ಡ್ ಇಲ್ಲಿಂಗ್‌ವರ್ತ್ ಅವರನ್ನು ಆನ್-ಫೀಲ್ಡ್ ಅಂಪೈರ್‌ಗಳಾಗಿ ನೇಮಿಸಲಾಗಿದೆ.

ಫೆಬ್ರವರಿ 23ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮೈಕೆಲ್ ಗೌಫ್ ಟಿವಿ ಅಂಪೈರ್ ಆಗಿದ್ದರೆ, ಆಡ್ರಿಯನ್ ಹೋಲ್ಡ್‌ಸ್ಟಾಕ್ 4ನೇ ಅಂಪೈರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಡೇವಿಡ್ ಬೂನ್ ಪಂದ್ಯದ ರೆಫರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಎಲ್ಲಾ 12 ಲೀಗ್ ಪಂದ್ಯಗಳಿಗೆ ಅಂಪೈರ್​ಗಳನ್ನು ಘೋಷಿಸಿದೆ. ಉದ್ಘಾಟನಾ ಪಂದ್ಯದಲ್ಲಿ ರಿಚರ್ಡ್ ಕೆಟಲ್‌ಬರೋ ಮತ್ತು ಶರ್ಫುದ್ದೌಲಾ ಇಬ್ನೆ ಶಾಹಿದ್ ಆನ್-ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಐಸಿಸಿ ಬಹಿರಂಗಪಡಿಸಿದೆ.

ಜೋಯಲ್ ವಿಲ್ಸನ್ ಟಿವಿ ಅಂಪೈರ್ ಮತ್ತು ಅಲೆಕ್ಸ್ ವಾರ್ಫ್ ನಾಲ್ಕನೇ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಆಂಡ್ರ್ಯೂ ಪೈಕ್ರಾಫ್ಟ್ ಮ್ಯಾಚ್ ರೆಫರಿಯಾಗಿರಲಿದ್ದಾರೆ. ಫೆಬ್ರವರಿ 20 ರಂದು ದುಬೈನಲ್ಲಿ ನಡೆಯಲಿರುವ ಭಾರತ-ಬಾಂಗ್ಲಾದೇಶ ಪಂದ್ಯಕ್ಕೆ ಫಾಲ್ ರೈಫಲ್ ಮತ್ತು ಹೋಲ್ಡ್‌ಸ್ಟಾಕ್ ಆನ್-ಫೀಲ್ಡ್ ಅಂಪೈರ್‌ಗಳಾಗಿರಲಿದ್ದಾರೆ. ಇಲ್ಲಿಂಗ್‌ವರ್ತ್ ಟಿವಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮೈಕೆಲ್ ಗೌಫ್ ನಾಲ್ಕನೇ ಅಂಪೈರ್, ಬೂನ್ ಮ್ಯಾಚ್ ರೆಫರಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಯಾವ ಪಂದ್ಯಕ್ಕೆ ಯಾರು ನೇಮಕವಾಗಿದ್ದಾರೆ ಎನ್ನುವುದರ ವಿವರ ಇಂತಿದೆ.

ಚಾಂಪಿಯನ್ಸ್ ಟ್ರೋಫಿ ಗುಂಪು ಹಂತದ ಪಂದ್ಯಗಳಿಗೆ ಅಂಪೈರ್ಸ್ ನೇಮಕ

ಫೆಬ್ರವರಿ 19: ಪಾಕಿಸ್ತಾನ vs ನ್ಯೂಜಿಲೆಂಡ್, ಕರಾಚಿ

ಆನ್-ಫೀಲ್ಡ್ ಅಂಪೈರ್ಸ್: ರಿಚರ್ಡ್ ಕೆಟಲ್‌ಬರೋ, ಶರ್ಫುದ್ದೌಲಾ ಇಬ್ನೆ ಶಾಹಿದ್

ಟಿವಿ ಅಂಪೈರ್: ಜೋಯಲ್ ವಿಲ್ಸನ್

4ನೇ ಅಂಪೈರ್: ಅಲೆಕ್ಸ್ ವಾರ್ಫ್

ರೆಫರಿ: ಆಂಡ್ರ್ಯೂ ಪೈಕ್ರಾಫ್ಟ್

ಫೆಬ್ರವರಿ 20: ಬಾಂಗ್ಲಾದೇಶ vs ಭಾರತ, ದುಬೈ

ಮೈದಾನದ ಅಂಪೈರ್ಸ್: ಆಡ್ರಿಯನ್ ಹೋಲ್ಡ್‌ಸ್ಟಾಕ್, ಫಾಲ್ ರೈಫಲ್

ಟಿವಿ ಅಂಪೈರ್: ರಿಚರ್ಡ್ ಇಲ್ಲಿಂಗ್‌ವರ್ತ್

4ನೇ ಅಂಪೈರ್: ಮೈಕೆಲ್ ಗೌಫ್

ರೆಫರಿ: ಡೇವಿಡ್ ಬೂನ್

ಫೆಬ್ರವರಿ 21: ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ, ಕರಾಚಿ

ಮೈದಾನದ ಅಂಪೈರ್ಸ್: ಅಲೆಕ್ಸ್ ವಾರ್ಫ್, ರಾಡ್ನಿ ಟಕರ್

ಟಿವಿ ಅಂಪೈರ್: ರಿಚರ್ಡ್ ಕೆಟಲ್‌ಬರೋ

4ನೇ ಅಂಪೈರ್: ಶರ್ಫುದ್ದೌಲಾ ಇಬ್ನೆ ಶಾಹಿದ್

ರೆಫರಿ: ರಂಜನ್ ಮದುಗಲ್ಲೆ

ಫೆಬ್ರವರಿ 22: ಆಸ್ಟ್ರೇಲಿಯಾ vs ಇಂಗ್ಲೆಂಡ್, ಲಾಹೋರ್

ಮೈದಾನದ ಅಂಪೈರ್ಸ್: ಜೋಯಲ್ ವಿಲ್ಸನ್, ಕ್ರಿಸ್ ಗ್ಯಾಫನಿ

ಟಿವಿ ಅಂಪೈರ್: ಕುಮಾರ್ ಧರ್ಮಸೇನ

4ನೇ ಅಂಪೈರ್: ಅಹ್ಸಾನ್ ರಜಾ

ರೆಫರಿ: ಆಂಡ್ರ್ಯೂ ಪೈಕ್ರಾಫ್ಟ್

ಫೆಬ್ರವರಿ 23: ಪಾಕಿಸ್ತಾನ v ಭಾರತ, ದುಬೈ

ಮೈದಾನದ ಅಂಪೈರ್ಸ್: ಫಾಲ್ ರೈಫಲ್, ರಿಚರ್ಡ್ ಇಲ್ಲಿಂಗ್‌ವರ್ತ್

ಟಿವಿ ಅಂಪೈರ್: ಮೈಕೆಲ್ ಗೌಫ್

4ನೇ ಅಂಪೈರ್: ಆಡ್ರಿಯನ್ ಹೋಲ್ಡ್‌ಸ್ಟಾಕ್

ರೆಫರಿ: ಡೇವಿಡ್ ಬೂನ್

ಫೆಬ್ರವರಿ 24: ಬಾಂಗ್ಲಾದೇಶ vs ನ್ಯೂಜಿಲೆಂಡ್, ರಾವಲ್ಪಿಂಡಿ

ಆನ್-ಫೀಲ್ಡ್ ಅಂಪೈರ್ಸ್: ಅಹ್ಸಾನ್ ರಜಾ, ಕುಮಾರ್ ಧರ್ಮಸೇನ

ಟಿವಿ ಅಂಪೈರ್: ರಾಡ್ನಿ ಟಕರ್

4ನೇ ಅಂಪೈರ್: ಜೋಯಲ್ ವಿಲ್ಸನ್

ರೆಫರಿ: ರಂಜನ್ ಮದುಗಲೆ

ಫೆಬ್ರವರಿ 25: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ

ಆನ್-ಫೀಲ್ಡ್ ಅಂಪೈರ್ಸ್: ರಿಚರ್ಡ್ ಕೆಟಲ್‌ಬರೋ, ಕ್ರಿಸ್ ಗ್ಯಾಫನಿ

ಟಿವಿ ಅಂಪೈರ್: ಅಲೆಕ್ಸ್ ವಾರ್ಫ್

4ನೇ ಅಂಪೈರ್: ಕುಮಾರ್ ಧರ್ಮಸೇನ

ರೆಫರಿ: ಆಂಡ್ರ್ಯೂ ಪೈಕ್ರಾಫ್ಟ್

ಫೆಬ್ರವರಿ 26: ಅಫ್ಘಾನಿಸ್ತಾನ vs ಇಂಗ್ಲೆಂಡ್, ಲಾಹೋರ್

ಆನ್-ಫೀಲ್ಡ್ ಅಂಪೈರ್ಸ್: ಶರ್ಫುದ್ದೌಲಾ ಇಬ್ನೆ ಶಾಹಿದ್, ಜೋಯಲ್ ವಿಲ್ಸನ್

ಟಿವಿ ಅಂಪೈರ್: ಅಹ್ಸಾನ್ ರಜಾ

4ನೇ ಅಂಪೈರ್: ರಾಡ್ನಿ ಟಕರ್

ರೆಫರಿ: ರಂಜನ್ ಮದುಗಲ್ಲೆ

ಫೆಬ್ರವರಿ 27: ಪಾಕಿಸ್ತಾನ vs ಬಾಂಗ್ಲಾದೇಶ, ರಾವಲ್ಪಿಂಡಿ

ಮೈದಾನದ ಅಂಪೈರ್ಸ್: ಮೈಕೆಲ್ ಗೌಫ್, ಆಡ್ರಿಯನ್ ಹೋಲ್ಡ್‌ಸ್ಟಾಕ್

ಟಿವಿ ಅಂಪೈರ್: ಫಾಲ್ ರೈಫಲ್

4ನೇ ಅಂಪೈರ್: ರಿಚರ್ಡ್ ಇಲ್ಲಿಂಗ್‌ವರ್ತ್

ರೆಫರಿ: ಡೇವಿಡ್ ಬೂನ್

ಫೆಬ್ರವರಿ 28: ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ, ಲಾಹೋರ್

ಆನ್-ಫೀಲ್ಡ್ ಅಂಪೈರ್ಸ್: ಅಲೆಕ್ಸ್ ವಾರ್ಫ್ ಮತ್ತು ಕುಮಾರ್ ಧರ್ಮಸೇನ

ಟಿವಿ ಅಂಪೈರ್: ಕ್ರಿಸ್ ಗ್ಯಾಫನಿ

4ನೇ ಅಂಪೈರ್: ರಿಚರ್ಡ್ ಕೆಟಲ್‌ಬರೋ

ರೆಫರಿ: ಆಂಡ್ರ್ಯೂ ಪೈಕ್ರಾಫ್ಟ್

ಮಾರ್ಚ್ 1: ದಕ್ಷಿಣ ಆಫ್ರಿಕಾ v ಇಂಗ್ಲೆಂಡ್, ಕರಾಚಿ

ಆನ್-ಫೀಲ್ಡ್ ಅಂಪೈರ್ಸ್: ರಾಡ್ನಿ ಟಕರ್, ಅಹ್ಸಾನ್ ರಾಜಾ

ಟಿವಿ ಅಂಪೈರ್: ಶರ್ಫುದ್ದೌಲಾ ಇಬ್ನೆ ಶಾಹಿದ್

4ನೇ ಅಂಪೈರ್: ಜೋಯಲ್ ವಿಲ್ಸನ್

ರೆಫರಿ: ರಂಜನ್ ಮದುಗಲ್ಲೆ

ಮಾರ್ಚ್ 2: ನ್ಯೂಜಿಲೆಂಡ್ v ಭಾರತ, ದುಬೈ

ಮೈದಾನದ ಅಂಪೈರ್ಸ್: ಮೈಕೆಲ್ ಗೌಫ್, ರಿಚರ್ಡ್ ಇಲ್ಲಿಂಗ್‌ವರ್ತ್

ಟಿವಿ ಅಂಪೈರ್: ಆಡ್ರಿಯನ್ ಹೋಲ್ಡ್‌ಸ್ಟಾಕ್

4ನೇ ಅಂಪೈರ್: ಫಾಲ್ ರೈಫಲ್

ರೆಫರಿ: ಡೇವಿಡ್ ಬೂನ್

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner