ಇಂದು ಐಸಿಸಿ ವಾರ್ಷಿಕ ಸಾಮಾನ್ಯ ಸಭೆ; ಪಾಕ್​ಗೆ ಭಾರತ ಪ್ರಯಾಣ, ನೂತನ ಐಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂದು ಐಸಿಸಿ ವಾರ್ಷಿಕ ಸಾಮಾನ್ಯ ಸಭೆ; ಪಾಕ್​ಗೆ ಭಾರತ ಪ್ರಯಾಣ, ನೂತನ ಐಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚೆ

ಇಂದು ಐಸಿಸಿ ವಾರ್ಷಿಕ ಸಾಮಾನ್ಯ ಸಭೆ; ಪಾಕ್​ಗೆ ಭಾರತ ಪ್ರಯಾಣ, ನೂತನ ಐಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚೆ

ICC Annual General Meeting: ಜುಲೈ 19ರಂದು ಶ್ರೀಲಂಕಾದ ಕೊಲೊಂಬೊದಲ್ಲಿ ಐಸಿಸಿ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಈ ಮೀಟಿಂಗ್​ನಲ್ಲಿ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ನಾಳೆಯೇ ಐಸಿಸಿ ವಾರ್ಷಿಕ ಸಾಮಾನ್ಯ ಸಭೆ; ಪಾಕ್​ಗೆ ಭಾರತ ಪ್ರಯಾಣ, ಮುಂದಿನ ಐಸಿಸಿ ಅಧ್ಯಕ್ಷ ಯಾರು ಎಂಬುದರ ಕುರಿತು ಚರ್ಚೆ
ನಾಳೆಯೇ ಐಸಿಸಿ ವಾರ್ಷಿಕ ಸಾಮಾನ್ಯ ಸಭೆ; ಪಾಕ್​ಗೆ ಭಾರತ ಪ್ರಯಾಣ, ಮುಂದಿನ ಐಸಿಸಿ ಅಧ್ಯಕ್ಷ ಯಾರು ಎಂಬುದರ ಕುರಿತು ಚರ್ಚೆ

ICC Annual General Meeting: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವಾರ್ಷಿಕ ಸಾಮಾನ್ಯ ಸಭೆ ಜುಲೈ 19ರಂದು ಶ್ರೀಲಂಕಾದ ಕೊಲೊಂಬೊದಲ್ಲಿ ನಡೆಯಲಿದೆ. ಮಹತ್ವದ ಸಭೆಯಲ್ಲಿ ಪ್ರಮುಖ ಟೂರ್ನಿಗಳ ಆರ್ಥಿಕ ಸ್ಥಿತಿಗತಿಗಳ ಬಗ್ಗೆ, ಭವಿಷ್ಯದ ಯೋಜನೆಗಳ ಕುರಿತು, ಪಾಕಿಸ್ತಾನಕ್ಕೆ ಭಾರತ ತಂಡ ಪ್ರಯಾಣಿಸಬೇಕೇ ಅಥವಾ ಬೇಡವೇ, ಐಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹತ್ತು ಹಲವು ಪ್ರಮುಖ ಅಂಶಗಳ ಕುರಿತು ಚರ್ಚೆ ನಡೆಯಲಿದೆ. ಚರ್ಚೆಯಾಗುವ ಅಂಶಗಳ ಪಟ್ಟಿ ಇಲ್ಲಿದೆ.

1. ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ

2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿ ಇದೇ ಸಭೆಯಲ್ಲಿ ಅಂತಿಮಗೊಳ್ಳಲಿದೆ. 8 ತಂಡಗಳ ನಡುವೆ ನಡೆಯುವ ಈ ಹೋರಾಟವು ಫೆಬ್ರವರಿ 19 ರಿಂದ ಮಾರ್ಚ್​ 19ರವರೆಗೂ ಟೂರ್ನಿ ಜರುಗಲಿದೆ ಎಂದು ಈ ಹಿಂದೆ ವರದಿಯಾಗಿದೆ. ಪಾಕಿಸ್ತಾನ-ಭಾರತ ನಡುವಿನ ಹೈವೋಲ್ಟೇಜ್ ಪಂದ್ಯ ಮಾ. 1ರಂದು ಆಯೋಜಿಸಲು ಮುಂದಾಗಿದೆ. ಇದೇ ವೇಳಾಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ.

2. ಪಾಕಿಸ್ತಾನಕ್ಕೆ ಭಾರತ ಪ್ರಯಾಣಿಸುತ್ತಾ?

ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನಕ್ಕೆ ಭಾರತ ಪ್ರಯಾಣಿಸುವ ಮಾತು ಅಸಾಧ್ಯವಾದ ಮಾತು. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಹಾಗಾಗಿ, ಪಾಕ್​ಗೆ ಪ್ರಯಾಣಿಸಲು ಒಪ್ಪದ ಬಿಸಿಸಿಐ, ಹೈಬ್ರಿಡ್ ಮಾಡೆಲ್​ನಲ್ಲಿ ಟೂರ್ನಿಯನ್ನು ಆಯೋಜಿಸಲು ಐಸಿಸಿಗೆ ಮನವಿ ಮಾಡಿದೆ. ತಟಸ್ಥ ಸ್ಥಳದಲ್ಲಿ ಭಾರತದ ಪಂದ್ಯಗಳ ಆಯೋಜನೆಗೆ ಐಸಿಸಿ ಒಪ್ಪುತ್ತಾ, ಇಲ್ಲವೇ ಎಂಬುದು ಈ ಮೀಟಿಂಗ್​ನಲ್ಲಿ ತಿಳಿಯುತ್ತದೆ. ಆದರೆ, ಟೀಮ್ ಇಂಡಿಯಾ ಪಂದ್ಯಗಳನ್ನು ಭಾರತದ ಗಡಿಗೆ ಸಮೀಪ ಇರುವ ಲಾಹೋರ್​​ನಲ್ಲಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿದ್ಧತೆ ನಡೆಸಿದೆ.

3. ಟಿ20 ವಿಶ್ವಕಪ್​​ 2024 ಆಯೋಜನೆ ನಷ್ಟದ ಕುರಿತು ಚರ್ಚೆ

ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ಆಯೋಜನೆಯಾದ ಟಿ20 ವಿಶ್ವಕಪ್​ನಲ್ಲಿ ಐಸಿಸಿ ತೀವ್ರ ನಷ್ಟಕ್ಕೊಳಗಾಗಿದೆ ಎಂದು ವರದಿಯಾಗಿದೆ. ಟಿ20 ವಿಶ್ವಕಪ್ ಬೆನ್ನಲ್ಲೇ ಟೂರ್ನಿ ಆಯೋಜಕ ನಿರ್ದೇಶಕ ಕ್ರಿಸ್ ಟೆಟ್ಲಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ, ಎಲ್ಲಿ, ಹೇಗೆ, ಏನೆಲ್ಲಾ ತಪ್ಪುಗಳು ನಡೆದವು. ಮುಂದಿನ ಟೂರ್ನಿಗಳಲ್ಲಿ ಆ ತಪ್ಪುಗಳಿಂದ ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ.

4. ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು?

ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೆ ಅವರ ಅಧಿಕಾರವಧಿ ಇದೇ ವರ್ಷದ ಕೊನೆಯಲ್ಲಿ ಮುಕ್ತಯಗೊಳ್ಳಲಿದೆ. ಆದರೆ, ಅವರ ನಂತರ ಈ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಎದ್ದಿದೆ. ಅಥವಾ ಅವರೇ ಮತ್ತೆ ಮುಂದುವರೆಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಆದರೆ, ಈ ಸ್ಥಾನ ಅಲಂಕರಿಸಿಲು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ರೇಸ್​ನಲ್ಲಿದ್ದಾರೆ ಎಂದು ವರದಿಯಾಗಿದೆ. ಕೆಲವೊಂದು ವರದಿಗಳಲ್ಲಿ ಜಯ್ ಶಾ ಅವರೇ ಐಸಿಸಿ ಚೇರ್ಮನ್ ಆಗುವುದು ಖಚಿತ ಎನ್ನಲಾಗಿದೆ.

5. ಭವಿಷ್ಯದ ಯೋಜನೆಗಳ ಕುರಿತು ಚರ್ಚೆ

ಐಸಿಸಿ ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಂಡು ಯಾವೆಲ್ಲಾ ಯೋಜನೆ ರೂಪಿಸಬೇಕು ಎಂಬುದರ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. 2025ರ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್, 2026ರ ಟಿ20 ವಿಶ್ವಕಪ್ ಸೇರಿದಂತೆ ಐಸಿಸಿ ಟೂರ್ನಿಗಳ ಕುರಿತು ಚರ್ಚೆ ನಡೆಯಲಿದೆ. ಕ್ರಿಕೆಟ್​ನಲ್ಲಿ ಆಗಬೇಕಿರುವ ಬದಲಾವಣೆ ಸೇರಿದಂತೆ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

 

Whats_app_banner