Organ Donation: ಮಹತ್ವದ ಹೆಜ್ಜೆ ಇರಿಸಿದ ಬಿಸಿಸಿಐ; ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿ ಭಾರತೀಯ ಕ್ರಿಕೆಟಿಗರು ಸಾಥ್
ಕನ್ನಡ ಸುದ್ದಿ  /  ಕ್ರಿಕೆಟ್  /  Organ Donation: ಮಹತ್ವದ ಹೆಜ್ಜೆ ಇರಿಸಿದ ಬಿಸಿಸಿಐ; ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿ ಭಾರತೀಯ ಕ್ರಿಕೆಟಿಗರು ಸಾಥ್

Organ Donation: ಮಹತ್ವದ ಹೆಜ್ಜೆ ಇರಿಸಿದ ಬಿಸಿಸಿಐ; ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿ ಭಾರತೀಯ ಕ್ರಿಕೆಟಿಗರು ಸಾಥ್

ಫೆಬ್ರವರಿ 12ರ ಬುಧವಾರ ಅಹ್ಮದಾಬಾದ್​​​ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನಕ್ಕೆ ಪಂದ್ಯದ ಸಂದರ್ಭದಲ್ಲಿ 'ಅಂಗಾಂಗ ದಾನ'ದ ಬಗ್ಗೆ ಜಾಗೃತಿ ಮೂಡಿಸಲು ಬಿಸಿಸಿಐ ಉಪಕ್ರಮ ಕೈಗೊಂಡಿದೆ.

ಮಹತ್ವದ ಹೆಜ್ಜೆ ಇರಿಸಿದ ಬಿಸಿಸಿಐ; ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿ ಭಾರತೀಯ ಕ್ರಿಕೆಟಿಗರೂ ಸಾಥ್
ಮಹತ್ವದ ಹೆಜ್ಜೆ ಇರಿಸಿದ ಬಿಸಿಸಿಐ; ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿ ಭಾರತೀಯ ಕ್ರಿಕೆಟಿಗರೂ ಸಾಥ್

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ನಡೆಯುತ್ತಿರುವ 3 ಪಂದ್ಯಗಳ ಸರಣಿಯ 3ನೇ ಮತ್ತು ಅಂತಿಮ ಏಕದಿನವು ಫೆಬ್ರವರಿ 12ರ ಬುಧವಾರ ಅಹ್ಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಐಸಿಸಿ ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ. 'ಅಂಗಾಂಗ ದಾನ'ದ ಬಗ್ಗೆ ಜಾಗೃತಿ ಮೂಡಿಸುವ ಉಪಕ್ರಮ ಕೈಗೊಂಡಿದ್ದು, ‘ಅಂಗಾಂಗ ದಾನ ಮಾಡಿ, ಜೀವಗಳನ್ನು ಉಳಿಸಿ’ ಎಂಬ ಧ್ಯೇಯವಾಕ್ಯ ಘೋಷಿಸಿದೆ.

ಬಿಸಿಸಿಐ ಮಾಜಿ ಕಾರ್ಯದರ್ಶಿ ಆಗಿದ್ದ ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಎಕ್ಸ್​​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಎಲ್ಲರೂ ಕೈ ಜೋಡಿಸುವಂತೆ ಕೋರಿದ್ದಾರೆ. ಅಲ್ಲದೆ, ಬಿಸಿಸಿಐ ಟೀಮ್ ಇಂಡಿಯಾ ಆಟಗಾರರು ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ಸೇರಿ ಭಾರತದ ಕ್ರಿಕೆಟಿಗರು ಮಾತನಾಡಿರುವ ವಿಡಿಯೋವೊಂದನ್ನು ಬಿಸಿಸಿಐ ಹಂಚಿಕೊಂಡಿದೆ. ಇದಕ್ಕೂ ಮುನ್ನ ಜಯ್​ ಶಾ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದು, ಜೀವಗಳನ್ನು ಉಳಿಸಲು ಕೈ ಜೋಡಿಸೋಣ ಎಂದು ಮನವಿ ಮಾಡಿದ್ದಾರೆ. ಪಂದ್ಯದ ದಿನ ಅಂಗಾಂಗ ದಾನ ಮಾಡಲು ನೋಂದಣಿ ಮಾಡಿಕೊಳ್ಳಲು ಅವಕಾಶ ಇರಲಿದೆ.

ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಜಯ್ ಶಾ, ‘ಫೆಬ್ರವರಿ 12 ರಂದು ಅಹ್ಮದಾಬಾದ್​​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಏಕದಿನ ಪಂದ್ಯದ ಸಂದರ್ಭದಲ್ಲಿ ಅಂಗಗಳನ್ನು ದಾನ ಮಾಡಿ, ಜೀವಗಳನ್ನು ಉಳಿಸಿ ಎಂಬ ಜಾಗೃತಿ ಉಪಕ್ರಮ ಪ್ರಾರಂಭಿಸಲು ನಾವು ಹೆಮ್ಮೆಪಡುತ್ತೇವೆ’ ಎಂದಿದ್ದಾರೆ.

‘ಕ್ರೀಡೆಯು ಕ್ಷೇತ್ರವನ್ನು ಮೀರಿ ಸ್ಫೂರ್ತಿ ನೀಡುವ, ಒಗ್ಗೂಡಿಸುವ ಮತ್ತು ಶಾಶ್ವತ ಪರಿಣಾಮ ಸೃಷ್ಟಿಸುವ ಶಕ್ತಿ ಹೊಂದಿದೆ. ಈ ಉಪಕ್ರಮದ ಮೂಲಕ ಎಲ್ಲಕ್ಕಿಂತ ಶ್ರೇಷ್ಠ ಉಡುಗೊರೆಯಾದ ಜೀವನದ ಉಡುಗೊರೆ ನೀಡುವತ್ತ ಎಲ್ಲರೂ ಹೆಜ್ಜೆ ಇಡಬೇಕೆಂದು ನಾವು ಒತ್ತಾಯಿಸುತ್ತೇವೆ. ಒಂದು ಪ್ರತಿಜ್ಞೆ, ಒಂದು ನಿರ್ಧಾರ, ಅನೇಕ ಜೀವಗಳನ್ನು ಉಳಿಸಬಹುದು. ನಾವೆಲ್ಲರೂ ಒಟ್ಟಾಗಿ ಬದಲಾವಣೆ ತರೋಣ’ ಎಂದು ಬರೆದಿದ್ದಾರೆ.

ಸತ್ತ ಮೇಲೂ ಶತಕ ಗಳಿಸಿ; ವಿರಾಟ್ ಕೊಹ್ಲಿ

ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಈ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿ, 'ಸತ್ತ ಮೇಲೂ ನಾವು ಶತಕ ಗಳಿಸಬಹುದು. ಅದುವೇ ನಿಮ್ಮ ಅಂಗಾಂಗ ದಾನ ಮಾಡುವ ಮೂಲಕ. ನಿಮ್ಮ ಅಂಗಗಳು ಇತರರಿಗೆ ಸಹಾಯ ಮಾಡಬಹುದು. ನಿಮ್ಮ ಜೀವನವನ್ನು ಮೀರಿ ಬದುಕಿ. ದಾನಿಯಾಗಿ ನೋಂದಾಯಿಸಿ, ಪ್ರತಿಯೊಂದು ಜೀವಕ್ಕೂ ಪ್ರಾಮುಖ್ಯತೆ ನೀಡಿ' ಎಂದು ಮನವಿ ಮಾಡಿದ್ದಾರೆ. ಕೊಹ್ಲಿ ಜತೆಗೆ ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಸೇರಿ ಕ್ರಿಕೆಟಗರು ಉಪಕ್ರಮವನ್ನು ಉತ್ತೇಜಿಸಿದ್ದಾರೆ.

ಶುಭ್ಮನ್ ಗಿಲ್ ಹೇಳಿದ್ದೇನು?

ಜೀವನದ ನಾಯಕನಾಗಿರಿ. ಒಬ್ಬ ನಾಯಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಂತೆಯೇ, ನಿಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡುವ ಮೂಲಕ ನೀವು ಯಾರನ್ನಾದರೂ ಜೀವನಕ್ಕೆ ಕರೆದೊಯ್ಯಬಹುದು ಎಂದು ಭಾರತದ ಏಕದಿನ ತಂಡದ ಉಪನಾಯಕ ಶುಭ್ಮನ್ ಗಿಲ್ ಹೇಳಿದ್ದಾರೆ.

ಫೆಬ್ರವರಿ 9ರ ಭಾನುವಾರ ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯವನ್ನು ಗೆದ್ದು ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು. ನಾಯಕ ರೋಹಿತ್ ಶರ್ಮಾ 90 ಎಸೆತಗಳಲ್ಲಿ 119 ರನ್ ಗಳಿಸಿ ಮತ್ತೆ ಲಯಕ್ಕೆ ಮರಳಿದ್ದಾರೆ. ಪಂದ್ಯದಲ್ಲಿ ಭಾರತ 4 ವಿಕೆಟ್​ಗಳಿಂದ ಜಯಭೇರಿ ಬಾರಿಸಿತು.

Whats_app_banner