ಟಿ20 ವಿಶ್ವಕಪ್ ಯಶಸ್ಸು ಕಂಡರೂ ಐಸಿಸಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟ; ಕೊಲಂಬೊದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್ ಯಶಸ್ಸು ಕಂಡರೂ ಐಸಿಸಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟ; ಕೊಲಂಬೊದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆ

ಟಿ20 ವಿಶ್ವಕಪ್ ಯಶಸ್ಸು ಕಂಡರೂ ಐಸಿಸಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟ; ಕೊಲಂಬೊದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆ

International Cricket Council: ಕೊಲಂಬೊದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ 2024 ಟಿ20 ವಿಶ್ವಕಪ್ ವೆಚ್ಚದ ಬಗ್ಗೆ ಐಸಿಸಿ ಮಂಡಳಿ ಸಭೆಯಲ್ಲಿ ಚರ್ಚೆ ಸಾಧ್ಯತೆ ಇದೆ.

ಟಿ20 ವಿಶ್ವಕಪ್ ಯಶಸ್ಸು ಕಂಡರೂ ಐಸಿಸಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ; ಕೊಲಂಬೊದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆ
ಟಿ20 ವಿಶ್ವಕಪ್ ಯಶಸ್ಸು ಕಂಡರೂ ಐಸಿಸಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ; ಕೊಲಂಬೊದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆ

ನವದೆಹಲಿ: ವೆಸ್ಟ್​ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ಜರುಗಿದ 2024ರ ಟಿ20 ವಿಶ್ವಕಪ್​​ ಟೂರ್ನಿ (T20 World Cup 2024) ಅತ್ಯಂತ ಯಶಸ್ವಿಯಾಯಿತು. ಭಾರತ ತಂಡ (Team India) ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಶ್ವಕಪ್ ವಿಶ್ವಮಟ್ಟದಲ್ಲಿ​ ಪ್ರಸಿದ್ಧಿ ಪಡೆದರೂ ಟೂರ್ನಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ತೀವ್ರ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ. ಯುಎಸ್​ಎನಲ್ಲಿ (USA) ಕ್ರಿಕೆಟ್​​ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಯುಎಸ್​ಎನಲ್ಲಿ ಐಸಿಸಿ ಈವೆಂಟ್ ಅನ್ನು ಆಯೋಜಿಸಲಾಗಿತ್ತು.

ವಿಶ್ವಕಪ್​ ಹೆಚ್ಚು ಖ್ಯಾತಿ ಪಡೆದರೂ ಟೂರ್ನಿ ಆಯೋಜನೆಯಿಂದ ಆರ್ಥಿಕ ಲೆಕ್ಕಾಚಾರ ವಿಚಾರದಲ್ಲಿ ಐಸಿಸಿ ತೀವ್ರ ನಷ್ಟಕ್ಕೆ ಒಳಗಾಗಿದೆ ಎಂದು ಐಸಿಸಿ ಉನ್ನತ ಮೂಲಗಳು ತಿಳಿಸಿವೆ. ಹೀಗಾಗಿ ಈ ಬಗ್ಗೆ  ಜುಲೈ 19 ರಂದು ಕೊಲಂಬೊದಲ್ಲಿ ನಡೆಯಲಿರುವ ವಿಶ್ವ ಕ್ರಿಕೆಟ್​​ ಆಡಳಿತ ಮಂಡಳಿಯ ವಾರ್ಷಿಕ ಸಮ್ಮೇಳನದಲ್ಲಿ  ಐಸಿಸಿ ಅನುಭವಿಸಿದ ನಷ್ಟದ ಬಗ್ಗೆ ಚರ್ಚೆ ನಡೆಸಲಿದೆ. ಲೆಕ್ಕ ಪರಿಶೋಧನೆ ಪೂರ್ಣಗೊಳ್ಳದ ಕಾರಣ ಗೇಟ್ ರಸೀದಿಗಳ ಮೂಲಕ ಪಡೆದ ಮೊತ್ತ ಇನ್ನೂ ಸಂಪೂರ್ಣವಾಗಿ ಲೆಕ್ಕಹಾಕಿಲ್ಲ. ಹೀಗಾಗಿ ನಷ್ಟದ ಅಂಕಿಅಂಶವನ್ನು ಉಲ್ಲೇಖಿಸುವುದು ಕಷ್ಟ.

ಆದಾಗ್ಯೂ, ಟೂರ್ನಿಯ ಯುಎಸ್​ನಲ್ಲಿ ನಡೆದ ಪಂದ್ಯಗಳ ನಷ್ಟವು ಲಕ್ಷಾಂತರ ಡಾಲರ್​​ಗಳು ಆಗಬಹುದು ಎಂಬುದು ಐಸಿಸಿ ಸದಸ್ಯರ ಭಾವನೆಯಾಗಿದೆ. ಟಿ20 ವಿಶ್ವಕಪ್ ಬೆನ್ನಲ್ಲೇ ಟೂರ್ನಿ ಆಯೋಜಕ ನಿರ್ದೇಶಕ ಕ್ರಿಸ್ ಟೆಟ್ಲಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಬೆಳವಣಿಗೆಗಳ ಬಗ್ಗೆ ತಿಳಿದಿರುವ ಮೂಲಗಳ ಪ್ರಕಾರ, 49 ವರ್ಷದ ಇಂಗ್ಲಿಷ್ ಆಟಗಾರ ಪಂದ್ಯಾವಳಿ ಪ್ರಾರಂಭಕ್ಕೂ ಮೊದಲೇ ತಮ್ಮ ದಾಖಲೆ ಸಲ್ಲಿಸಲು ನಿರ್ಧರಿಸಿದ್ದರು. ಆದರೆ ಐಸಿಸಿ ಒಪ್ಪಿರಲಿಲ್ಲ.

ಕ್ರಿಸ್ ಟೆಟ್ಲಿ ರಾಜೀನಾಮೆ?

ಟೆಟ್ಲಿಯ ಪ್ರದರ್ಶನವು ಐಸಿಸಿ ಸದಸ್ಯರಿಗೆ ಬೇಸರ ತರಿಸಿದೆ. ಹೀಗಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಟಿ20 ವಿಶ್ವಕಪ್​ನ ಯುಎಸ್ಎ ಲೆಗ್​ಗೂ, ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನಲಾಗುತ್ತಿದೆ ಎಂದು ಐಸಿಸಿ ಮೂಲಗಳು ಪಿಟಿಐಗೆ ತಿಳಿಸಿವೆ. ಕನಿಷ್ಠ ಮೂರು ಐಸಿಸಿ ಜಾಗತಿಕ ಪಂದ್ಯಾವಳಿಗಳು ಮತ್ತು ಎಲ್ಲಾ ಅಸೋಸಿಯೇಟ್ ರಾಷ್ಟ್ರಗಳು ಟಿ20ಐ ಸ್ಥಾನ ಪಡೆಯುತ್ತಿರುವುದರಿಂದ, ನಿರ್ವಹಣಾ ಕಾರ್ಯಗಳು ನಿರಂತರವಾಗಿವೆ.

ಟೆಟ್ಲಿ ಸ್ವಲ್ಪ ಸಮಯದ ಹಿಂದೆಯೇ ಕೆಲಸವನ್ನು ತ್ಯಜಿಸಲು ನಿರ್ಧರಿಸಿದ್ದರು ಎಂದೂ ಕೂಡ ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ. ಟೂರ್ನಿ ಆಯೋಜಿಸಲು ನಿಕಟವಾಗಿ ಕೆಲಸ ಮಾಡಿದ್ದರು. ಟಿಕೆಟ್ ಮಾರಾಟದ ಮೂಲಕ ಐಸಿಸಿ ನಿಜವಾಗಿಯೂ ಸಾಕಷ್ಟು ಆದಾಯ ಗಳಿಸುತ್ತದೆ ಎಂದು ಅಂದಾಜಿಸಲಾಗಿತ್ತು. ಆದಾಗ್ಯೂ, ನ್ಯೂಯಾರ್ಕ್ ನಗರವನ್ನು ಮಾರ್ಕ್ಯೂ ಈವೆಂಟ್​ನ ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಿದ್ದು, ಐಸಿಸಿಯ ಪ್ರಭಾವಿ ಸದಸ್ಯರನ್ನು ಕೆರಳಿಸಿದೆ.

ನಸ್ಸೌ ಕೌಂಟಿ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಮತ್ತು ಔಟ್ ಫೀಲ್ಡ್ ಸಾಕಷ್ಟು ಟೀಕೆಗಳನ್ನು ಎದುರಿಸಿತು. 'ಈವೆಂಟ್ ಯುಎಸ್ಎಯಲ್ಲಿ ನಡೆಯಬೇಕಿತ್ತು. ನ್ಯೂಯಾರ್ಕ್ ಹೊರತುಪಡಿಸಿ ಇತರ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಬಹುದಿತ್ತು. ಅದನ್ನು ಏಕೆ ಪರಿಗಣಿಸಲಿಲ್ಲ? ಎಂದು ಐಸಿಸಿ ಸದಸ್ಯರು, ಟೂರ್ನಿ ಆಯೋಜಕರನ್ನು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Whats_app_banner