ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತ ಪ್ರಕಟ; ಪ್ರೈಜ್ ಮನಿ ಶೇ 53ರಷ್ಟು ಏರಿದರೂ ಪಂತ್-ಅಯ್ಯರ್ ಐಪಿಎಲ್ ವೇತನಕ್ಕಿಂತ ಕಡಿಮೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತ ಪ್ರಕಟ; ಪ್ರೈಜ್ ಮನಿ ಶೇ 53ರಷ್ಟು ಏರಿದರೂ ಪಂತ್-ಅಯ್ಯರ್ ಐಪಿಎಲ್ ವೇತನಕ್ಕಿಂತ ಕಡಿಮೆ

ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತ ಪ್ರಕಟ; ಪ್ರೈಜ್ ಮನಿ ಶೇ 53ರಷ್ಟು ಏರಿದರೂ ಪಂತ್-ಅಯ್ಯರ್ ಐಪಿಎಲ್ ವೇತನಕ್ಕಿಂತ ಕಡಿಮೆ

ICC Champions Trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ವಿಜೇತ ಮತ್ತು ರನ್ನರ್​ಅಪ್ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು ಎಂಬುದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ.

ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತ ಪ್ರಕಟ; ಪ್ರೈಜ್ ಮನಿ ಶೇ 53ರಷ್ಟು ಏರಿದರೂ ಪಂತ್-ಅಯ್ಯರ್ ಐಪಿಎಲ್ ವೇತನಕ್ಕಿಂತ ಕಡಿಮೆ
ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತ ಪ್ರಕಟ; ಪ್ರೈಜ್ ಮನಿ ಶೇ 53ರಷ್ಟು ಏರಿದರೂ ಪಂತ್-ಅಯ್ಯರ್ ಐಪಿಎಲ್ ವೇತನಕ್ಕಿಂತ ಕಡಿಮೆ

ನವದೆಹಲಿ, ಫೆ 14: ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ವಿಜೇತರು, ರನ್ನರ್​ಅಪ್ ತಂಡ ಗಳಿಸುವ ಬಹುಮಾನ ಮೊತ್ತ ಎಷ್ಟೆಂಬುದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. 2017ರ ಆವೃತ್ತಿಯಲ್ಲಿ ಪಡೆದ ಮೊತ್ತಕ್ಕಿಂತ ಶೇ 53ರಷ್ಟು ಏರಿಕೆ ಕಂಡಿದೆ. ಆದರೆ ಐಪಿಎಲ್​ನಲ್ಲಿ ವಿಕೆಟ್-ಕೀಪರ್ ಬ್ಯಾಟರ್ ರಿಷಭ್ ಪಂತ್, ಬ್ಯಾಟರ್​ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಪಡೆದ ವೇತನಕ್ಕಿಂತ ಕಡಿಮೆ.

ಫೆಬ್ರವರಿ 19ರಿಂದ 2025ರ ಚಾಂಪಿಯನ್ಸ್ ಟ್ರೋಫಿಗೆ ಚಾಲನೆ ಸಿಗಲಿದೆ. ಆರಂಭಿಕ ಪಂದ್ಯದಲ್ಲಿ ಅತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕಣಕ್ಕಿಳಿಯುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿವೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಈ ಬಾರಿ ಒಟ್ಟಾರೆ ಬಹುಮಾನ 6.9 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 60 ಕೋಟಿ ರೂಪಾಯಿ ಇದೆ.

ಬಹುಮಾನ ಮೊತ್ತ ಎಷ್ಟು? ಇಲ್ಲಿದೆ ವಿವರ

  • ಒಟ್ಟು ಬಹುಮಾನ ಮೊತ್ತ 6.9 ಮಿಲಿಯನ್ ಡಾಲರ್ (ಸುಮಾರು 60 ಕೋಟಿ ರೂ)
  • ಈ ಬಾರಿ ವಿಜೇತ ತಂಡಕ್ಕೆ ಸುಮಾರು 19.45 ಕೋಟಿ ರೂ (ಸುಮಾರು 2.24 ಯುಎಸ್ ಮಿಲಿಯನ್ ಡಾಲರ್​) ಬಹುಮಾನ ಸಿಗಲಿದೆ
  • ಇದು 2017ರ ಆವೃತ್ತಿಗಿಂತ ಶೇ 53 ಹೆಚ್ಚಾಗಿದೆ ಎಂದು ಐಸಿಸಿ ಶುಕ್ರವಾರ (ಫೆ 14) ಪ್ರಕಟಿಸಿದೆ.
  • ರನ್ನರ್​ಅಪ್ ತಂಡಕ್ಕೆ 1.12 ಮಿಲಿಯನ್ ಡಾಲರ್ (ಸುಮಾರು 9.72 ಕೋಟಿ ರೂ) ಸಿಗಲಿದೆ
  • ಸೆಮಿಫೈನಲ್​ನಲ್ಲಿ ಸೋತವರಿಗೆ ತಲಾ 5,60,000 ಡಾಲರ್ (4.86 ಕೋಟಿ ರೂ) ಸಿಗಲಿದೆ
  • ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಪರ್ಧಿಸಲು ಎಲ್ಲಾ 8 ತಂಡಗಳಿಗೆ ತಲಾ 1,25,000 ಡಾಲರ್ (ಸುಮಾರು 1.08 ಕೋಟಿ ರೂ) ಸಿಗಲಿದೆ
  • ಟೂರ್ನಿಯಲ್ಲಿ ಪ್ರತಿ ಪಂದ್ಯದಲ್ಲಿ ಗೆಲ್ಲುವ 34,000 ಡಾಲರ್​ (ಸುಮಾರು 29 ಲಕ್ಷ ರೂ) ದೊರೆಯಲಿದೆ
  • ಐದು ಅಥವಾ 6ನೇ ಸ್ಥಾನ ಪಡೆಯುವ ತಂಡಗಳು ತಲಾ 350,000 ಡಾಲರ್ (3.04 ಕೋಟಿ) ಗಳಿಸಲಿವೆ
  • 7ನೇ ಮತ್ತು 8ನೇ ಸ್ಥಾನ ಪಡೆಯುವ ತಂಡಗಳು ತಲಾ 140,000 ಡಾಲರ್ (1.21 ಕೋಟಿ) ಪಡೆಯುತ್ತವೆ
  • ಒಂದು ತಂಡವು ಚಾಂಪಿಯನ್ಸ್ ಟ್ರೋಫಿ ಗೆದ್ದರೆ, ಅದು ವಿಜೇತರ ಬಹುಮಾನದ ಹಣ, ಟೂರ್ನಿಯಲ್ಲಿ ಪಾಲ್ಗೊಂಡದ್ದರ ಹಣ ಮತ್ತು ಲೀಗ್​​ನಲ್ಲಿ ಎಲ್ಲಾ 3 ಪಂದ್ಯಗಳ ಗೆದ್ದ ಹಣ ಸೇರಿದಂತೆ 22 ಕೋಟಿ ರೂಪಾಯಿ ಗಳಿಸಬಹುದು.

ಇದನ್ನೂ ಓದಿ: ಐಪಿಎಲ್ 2025ರ ಉಚಿತ ಸ್ಟ್ರೀಮಿಂಗ್ ಇಲ್ಲ; ಜಿಯೋ-ಹಾಟ್‌ಸ್ಟಾರ್‌ ವಿಲೀನ ಬಳಿಕ ಹೊಸ ಕ್ರಮ ಸಾಧ್ಯತೆ, ಚಂದಾದಾರಿಕೆ ಯೋಜನೆ ಘೋಷಣೆ

ಪಂತ್, ಅಯ್ಯರ್​ಗಿಂತ ಕಡಿಮೆ ಮೊತ್ತ

ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತವು ಐಪಿಎಲ್​ನಲ್ಲಿ ಭಾರತೀಯ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ವೆಂಕಟೇಶ್ ಅಯ್ಯರ್ ಅವರ ವೇತನಕ್ಕಿಂತ ಕಡಿಮೆ. ಕಳೆದ ವರ್ಷ ಕೆಕೆಆರ್​ ತಂಡವನ್ನು ಮೂರನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುನ್ನಡೆಸಿದ್ದ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂಪಾಯಿಗೆ ಖರೀದಿಸಿತ್ತು. ಐಪಿಎಲ್ ಹರಾಜಿನಲ್ಲಿ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 27 ಕೋಟಿ ರೂಪಾಯಿಗೆ ಖರೀದಿಸಿದೆ. ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ 23.75 ಕೋಟಿ ರೂಪಾಯಿಗೆ ಖರೀದಿಸಿದೆ.

1996ರ ನಂತರ ಐಸಿಸಿ ಟೂರ್ನಿಗೆ ಆತಿಥ್ಯ

1996ರ ನಂತರ ಪಾಕಿಸ್ತಾನದಲ್ಲಿ ಆತಿಥ್ಯ ವಹಿಸುತ್ತಿರುವ ಮೊದಲ ಐಸಿಸಿ ಟೂರ್ನಿ ಇದಾಗಿದೆ. ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಗಳು ಜರುಗಲಿವೆ. ಟೂರ್ನಿಯಲ್ಲಿ 8 ತಂಡಗಳು 4 ಗುಂಪುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಲಿವೆ. ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಪ್ರತಿ 4 ವರ್ಷಗಳಿಗೊಮ್ಮೆ ವಿಶ್ವದ ಅಗ್ರ 8 ಏಕದಿನ ತಂಡಗಳೊಂದಿಗೆ ನಡೆಯಲಿದ್ದು, ಮಹಿಳಾ ಚಾಂಪಿಯನ್ಸ್ ಟ್ರೋಫಿ 2027ರಲ್ಲಿ ಟಿ 20 ಸ್ವರೂಪದಲ್ಲಿ ಪ್ರಾರಂಭವಾಗಲಿದೆ.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner