ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತ ತಂಡದ ಉಪನಾಯಕನ ಸ್ಥಾನಕ್ಕೆ ಐವರ ನಡುವೆ ಪೈಪೋಟಿ, ಆಯ್ಕೆದಾರರಿಗೆ ತಲೆನೋವು
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತ ತಂಡದ ಉಪನಾಯಕನ ಸ್ಥಾನಕ್ಕೆ ಐವರ ನಡುವೆ ಪೈಪೋಟಿ, ಆಯ್ಕೆದಾರರಿಗೆ ತಲೆನೋವು

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತ ತಂಡದ ಉಪನಾಯಕನ ಸ್ಥಾನಕ್ಕೆ ಐವರ ನಡುವೆ ಪೈಪೋಟಿ, ಆಯ್ಕೆದಾರರಿಗೆ ತಲೆನೋವು

Indian Cricket Team: ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್​, ಕೆಎಲ್ ರಾಹುಲ್, ಶುಭ್ಮನ್ ಗಿಲ್, ರಿಷಭ್ ಪಂತ್ ಅವರು ವೈಸ್ ಕ್ಯಾಪ್ಟನ್ಸಿ ರೇಸ್​​ನಲ್ಲಿದ್ದಾರೆ. ಯಾರು? ಎಷ್ಟು ಅರ್ಹರು ಎಂಬುದನ್ನು ಈ ಮುಂದೆ ನೋಡೋಣ.

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತ ತಂಡದ ಉಪನಾಯಕನ ಸ್ಥಾನಕ್ಕೆ ಐವರ ನಡುವೆ ಪೈಪೋಟಿ, ಆಯ್ಕೆದಾರರಿಗೆ ತಲೆನೋವು
ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತ ತಂಡದ ಉಪನಾಯಕನ ಸ್ಥಾನಕ್ಕೆ ಐವರ ನಡುವೆ ಪೈಪೋಟಿ, ಆಯ್ಕೆದಾರರಿಗೆ ತಲೆನೋವು

ಬಾರ್ಡರ್-ಗವಾಸ್ಕರ್ ಟ್ರೋಫಿ ಸೋಲಿನ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿ-2025ಗೆ ಭಾರತ ತಂಡದ ಆಯ್ಕೆಯ ಚರ್ಚೆ ಬಿರುಸು ಪಡೆದಿದೆ. ವರದಿಗಳ ಪ್ರಕಾರ, ಮಹತ್ವದ ಟೂರ್ನಿಗೆ ತಂಡವನ್ನು ಪ್ರಕಟಿಸುವುದು ಜನವರಿ 12 ಅಂತಿಮ ದಿನಾಂಕವಾಗಿದೆ. ಅದರಂತೆ, ಎಲ್ಲಾ ತಂಡಗಳು ಅಂತಿಮ ಸಿದ್ದತೆ ನಡೆಸುತ್ತಿವೆ. ಇದೀಗ ಬಿಸಿಸಿಐ ಆಯ್ಕೆ ಸಮಿತಿ, ಬಲಿಷ್ಠ ಭಾರತ ತಂಡದ ಆಯ್ಕೆ ಕಸರತ್ತು ನಡೆಸುತ್ತಿದೆ. ರೋಹಿತ್​ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸುವುದು ಖಚಿತ ಎಂದು ವರದಿಯಾಗಿದೆ. ಆದರೆ, ಉಪನಾಯಕನ ಸ್ಥಾನ ಯಾರಿಗೆ ನೀಡಬೇಕು ಎನ್ನುವುದು ಆಯ್ಕೆದಾರರಿಗೆ ಗೊಂದಲ ಸೃಷ್ಟಿಸಿದೆ. ಈ ಸ್ಥಾನಕ್ಕೆ ಐವರ ನಡುವೆ ಪೈಪೋಟಿ ನಡೆಯುತ್ತಿರುವುದು ಇದಕ್ಕೆ ಕಾರಣ.

ಬಿಸಿಸಿಐ ಜನವರಿ 12ರ ಭಾನುವಾರ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕೆಲವೊಂದಿಷ್ಟು ಗೊಂದಲಗಳು ಬಿಟ್ಟರೆ ತಂಡ ಬಹುತೇಕ ಅಂತಿಮಗೊಂಡಿದೆ ಎಂದು ಹೇಳಲಾಗಿದೆ. ಕೆಲ ಆಟಗಾರರು ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂದೂ ವರದಿ ತಿಳಿಸಿದೆ. ಆದರೆ ಉಪನಾಯಕ ಸ್ಥಾನದ ಆಯ್ಕೆ ಆಯ್ಕೆದಾರರ ತಲೆ ಕೆಡಿಸಿದೆ. ಏಕೆಂದರೆ ಈ ಸ್ಥಾನಕ್ಕೆ ಐವರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್​, ಕೆಎಲ್ ರಾಹುಲ್, ಶುಭ್ಮನ್ ಗಿಲ್, ರಿಷಭ್ ಪಂತ್ ಅವರು ವೈಸ್ ಕ್ಯಾಪ್ಟನ್ಸಿ ರೇಸ್​​ನಲ್ಲಿದ್ದಾರೆ. ಯಾರು? ಎಷ್ಟು ಅರ್ಹರು ಎಂಬುದನ್ನು ಈ ಮುಂದೆ ನೋಡೋಣ.

1. ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ ಏಕದಿನ ಕ್ರಿಕೆಟ್​ನಲ್ಲಿ ಇನ್ನೂ ನಾಯಕತ್ವ ಪಡೆದಿಲ್ಲ. ಉಪನಾಯಕನೂ ಆಗಿಲ್ಲ. ಟಿ20ಐ ಮತ್ತು ಟೆಸ್ಟ್​​ನಲ್ಲಿ ವೈಸ್ ಕ್ಯಾಪ್ಟನ್ಸಿ ಜತೆಗೆ ಕ್ಯಾಪ್ಟನ್ ಆಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಬಿಜಿಟಿ ಸರಣಿಯಲ್ಲಿ ರೋಹಿತ್​ ಶರ್ಮಾ ಅಲಭ್ಯತೆಯಲ್ಲಿ ಎರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಸದ್ಯ ಬುಮ್ರಾ ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೂ ಕ್ರಿಕೆಟ್ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಹಾಗಾಗಿ, ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಅವರೇ ಉಪನಾಯಕನಾಗುತ್ತಾರೆ ಎನ್ನುತ್ತಿದ್ದಾರೆ. ಬಿಸಿಸಿಐ ಮೂಲಗಳು ಸಹ ಬುಮ್ರಾ ಅವರೇ ವೈಸ್ ಕ್ಯಾಪ್ಟನ್ ಎನ್ನುತ್ತಿವೆ.

2. ಶ್ರೇಯಸ್ ಅಯ್ಯರ್​

ಕಳೆದ ವರ್ಷ ಶ್ರೀಲಂಕಾ ಸರಣಿಯ ನಂತರ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಶ್ರೇಯಸ್ ಅಯ್ಯರ್ ಸಹ ಈ ರೇಸ್​​ನಲ್ಲಿದ್ದಾರೆ. ಅಯ್ಯರ್​ ಇನ್ನೂ ಭಾರತ ತಂಡದ ನಾಯಕನಾಗಿಲ್ಲ. ಆದರೆ ಇತ್ತೀಚೆಗೆ ದೇಶೀಯ ಕ್ರಿಕೆಟ್​​ನಲ್ಲಿ ಅವರ ನಾಯಕತ್ವದಲ್ಲಿ ಮುಂಬೈ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದುಕೊಂಡಿತ್ತು. ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯಲ್ಲೂ ಮುಂಬೈ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಅಲ್ಲದೆ, 2024ರ ಐಪಿಎಲ್​ನಲ್ಲಿ ನಾಯಕನಾಗಿ ಕೆಕೆಆರ್ ತಂಡಕ್ಕೆ 3ನೇ ಟ್ರೋಫಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು. ನಾಯಕನಾಗಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಕಾರಣ ಅಯ್ಯರ್​​ಗೆ ಮತ್ತೆ ತಂಡದಲ್ಲಿ ಸ್ಥಾನ ನೀಡಿ ವೈಸ್ ಕ್ಯಾಪ್ಟನ್​ ಪಟ್ಟ ಕಟ್ಟಿದರೂ ಅಚ್ಚರಿ ಇಲ್ಲ.

3. ಶುಭ್ಮನ್ ಗಿಲ್

ಭಾರತದ ಸೀಮಿತ ಓವರ್​​ಗಳ ಕ್ರಿಕೆಟ್​​ನಲ್ಲಿ ಉಪನಾಯಕನಾಗಿರುವ ಶುಭ್ಮನ್ ಗಿಲ್ ಆ ಸ್ಥಾನವನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಕಳೆದ ವರ್ಷ ಟಿ20ಐ ಕ್ರಿಕೆಟ್​​ನಲ್ಲಿ ಭಾರತದ ನಾಯಕತ್ವ ವಹಿಸಿದ್ದ ಗಿಲ್, ಜಿಂಬಾಬ್ವೆ ವಿರುದ್ಧ 4-1 ರಲ್ಲಿ ಸರಣಿ ಗೆದ್ದಿದ್ದರು. ಅಲ್ಲದೆ, ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಮುನ್ನಡೆಸಿರುವ ಅನುಭವ ಹೊಂದಿರುವ ಗಿಲ್, ಈಗ ತನ್ನ ವೈಸ್ ಕ್ಯಾಪ್ಟನ್ಸಿ ಪಟ್ಟವನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಆದರೆ ಐಪಿಎಲ್​ನಲ್ಲಿ ಅವರ ಕ್ಯಾಪ್ಟನ್ಸಿ ಉತ್ತಮವಾಗಿರಲಿಲ್ಲ.

4. ಕೆಎಲ್ ರಾಹುಲ್

ಕೆಎಲ್ ರಾಹುಲ್ ಅವರನ್ನು ರೋಹಿತ್​ ಶರ್ಮಾ ಅವರ ಉತ್ತರಾಧಿಕಾರಿ ಎಂದೇ ಹೇಳಲಾಗಿತ್ತು. ಆದರೆ, ತನ್ನ ಕಳಪೆ ಪ್ರದರ್ಶನದ ಕಾರಣ ವೈಸ್​ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ದರು. ಇದೀಗ ಮತ್ತೆ ಆ ಸ್ಥಾನದ ಮೇಲೆ ಕಣ್ಣು ಹಾಕಿದ್ದಾರೆ. ಭಾರತದ ಜೊತೆಗೆ ಐಪಿಎಲ್​​ನಲ್ಲೂ ನಾಯಕನಾಗಿ ಅಪಾರ ಅನುಭವ ಹೊಂದಿದ್ದಾರೆ. ರಾಹುಲ್ (16 ಪಂದ್ಯಗಳಲ್ಲಿ), ನಾಯಕತ್ವದಲ್ಲಿ ಭಾರತ ತಂಡ 11 ಗೆಲುವು, 5 ಸೋಲು ಕಂಡಿದೆ. ಗೆಲುವಿನ ಶೇಕಡವಾರು 68.75 ರಷ್ಟಿದೆ. 3 ಫಾರ್ಮೆಟ್​ಗಳಲ್ಲೂ ಟೀಮ್ ಇಂಡಿಯಾಗೆ ನಾಯಕನಾಗಿದ್ದ ಕೆಎಲ್, ಮತ್ತೆ ವೈಸ್ ಕ್ಯಾಪ್ಟನ್​ ಆಗುವ ಲೆಕ್ಕಾಚಾರದಲ್ಲಿದ್ದಾರೆ.

5. ಹಾರ್ದಿಕ್ ಪಾಂಡ್ಯ

ಭಾರತದ ಜತೆಗೆ ಐಪಿಎಲ್​ನಲ್ಲೂ ನಾಯಕನಾಗಿ ಅಪಾರ ಅನುಭವ ಹೊಂದಿರುವ ಹಾರ್ದಿಕ್ ಪಾಂಡ್ಯ ಇದೀಗ ಉಪನಾಯಕತ್ವ ಮರಳಿ ಪಡೆಯಲು ಸಜ್ಜಾಗಿದ್ದಾರೆ. ಟಿ20ಐ, ಏಕದಿನದಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಹಾರ್ದಿಕ್ ಅನೇಕ ಸರಣಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಟಿ20ಐಯಲ್ಲಿ 16 ಪಂದ್ಯಗಳಿಗೆ ನಾಯಕನಾಗಿದ್ದು, 10 ಗೆಲುವು, 5 ಸೋಲು ಅನುಭವಿಸಿದ್ದಾರೆ. ಏಕದಿನದಲ್ಲಿ 3 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದು, 2 ಗೆಲುವು, 1 ಸೋಲು ಕಂಡಿದ್ದಾರೆ. ಆದರೆ ಕಳಪೆ ಪ್ರದರ್ಶನದ ಕಾರಣ ತನ್ನ ಬಳಿ ಇದ್ದ ನಾಯಕತ್ವವನ್ನೂ ಕಳೆದುಕೊಂಡರು. ಇದೀಗ ರೇಸ್​ಗೆ ಬಂದಿದ್ದಾರೆ.

Whats_app_banner