ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸ; ವಿಜೇತರು, ರನ್ನರ್​ಅಪ್, ಹೆಚ್ಚು ರನ್-ವಿಕೆಟ್ ಪಡೆದವರು, ಕಪ್ ಗೆದ್ದ ನಾಯಕರ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸ; ವಿಜೇತರು, ರನ್ನರ್​ಅಪ್, ಹೆಚ್ಚು ರನ್-ವಿಕೆಟ್ ಪಡೆದವರು, ಕಪ್ ಗೆದ್ದ ನಾಯಕರ ವಿವರ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸ; ವಿಜೇತರು, ರನ್ನರ್​ಅಪ್, ಹೆಚ್ಚು ರನ್-ವಿಕೆಟ್ ಪಡೆದವರು, ಕಪ್ ಗೆದ್ದ ನಾಯಕರ ವಿವರ

ICC Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸ, ವಿಜೇತರು, ರನ್ನರ್​ಅಪ್, ಹೆಚ್ಚು ರನ್ ಗಳಿಸಿದವರು, ಅಧಿಕ ವಿಕೆಟ್ ಪಡೆದವರು, ಟ್ರೋಫಿ ಗೆದ್ದ ಕ್ಯಾಪ್ಟನ್​ಗಳ ಬಗ್ಗೆ ತಿಳಿಯೋಣ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸ; ವಿಜೇತರು, ರನ್ನರ್​ಅಪ್, ಹೆಚ್ಚು ರನ್-ವಿಕೆಟ್ ಪಡೆದವರು, ಕಪ್ ಗೆದ್ದ ನಾಯಕರ ವಿವರ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸ; ವಿಜೇತರು, ರನ್ನರ್​ಅಪ್, ಹೆಚ್ಚು ರನ್-ವಿಕೆಟ್ ಪಡೆದವರು, ಕಪ್ ಗೆದ್ದ ನಾಯಕರ ವಿವರ

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy 2025) ಫೆಬ್ರವರಿ 19ರಂದು ಅದ್ಧೂರಿ ಚಾಲನೆ ಸಿಗಲಿದೆ. ಪಾಕಿಸ್ತಾನ ಮತ್ತು ದುಬೈ ಜಂಟಿ ಆತಿಥ್ಯದಲ್ಲಿ ಈ ಟೂರ್ನಿ ಜರುಗಲಿದೆ. ಮಹತ್ವದ ಟೂರ್ನಿಯಲ್ಲಿ ಪಾಲ್ಗೊಳ್ಳುವ 8 ತಂಡಗಳ ಪೈಕಿ ಏಳು ತಂಡಗಳು ಪಾಕಿಸ್ತಾನದ ನೆಲದಲ್ಲಿ ಆಡಲಿವೆ. ಆದರೆ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿವೆ. ಲೀಗ್​ನಲ್ಲಿ ಪ್ರತಿ ತಂಡವೂ ಮೂರು ಪಂದ್ಯಗಳಲ್ಲಿ ಕಣಕ್ಕಿಳಿಯಲಿವೆ. ಎ ಮತ್ತು ಬಿ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಳ್ಳಲಿವೆ. ಟೂರ್ನಿ ಆರಂಭಕ್ಕೂ ಮುನ್ನ ಇದರ ಇತಿಹಾಸ, ವಿಜೇತರು, ರನ್ನರ್​ಅಪ್, ಹೆಚ್ಚು ರನ್ ಗಳಿಸಿದವರು, ಅಧಿಕ ವಿಕೆಟ್ ಪಡೆದವರು, ಟ್ರೋಫಿ ಗೆದ್ದ ಕ್ಯಾಪ್ಟನ್​ಗಳ ಬಗ್ಗೆ ತಿಳಿಯೋಣ.

ಚಾಂಪಿಯನ್ಸ್ ಟ್ರೋಫಿ ಇತಿಹಾಸ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಗೊಂಡಿದ್ದು 1998ರಲ್ಲಿ. ಮೊದಲ ಆವೃತ್ತಿಯ ಟೂರ್ನಿಗೆ ಬಾಂಗ್ಲಾದೇಶ ಆತಿಥ್ಯ ವಹಿಸಿತ್ತು. ಇದನ್ನು ಈ ಹಿಂದೆ ಐಸಿಸಿ ನಾಕೌಟ್ ಟ್ರೋಫಿ ಎಂದು ಕರೆಯಲಾಗುತ್ತಿತ್ತು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಟೂರ್ನಿ ಆಯೋಜಿಸುವ ಐಸಿಸಿ, ಏಕದಿನ ಮಾದರಿಯಲ್ಲಿ ಆಡಲಾಗುತ್ತಿದೆ. ಈ ಟೂರ್ನಿ ಆಯೋಜನೆಗೆ ಮಹತ್ವದ ಉದ್ದೇಶವೂ ಇದೆ. ಟೆಸ್ಟ್ ಕ್ರಿಕೆಟ್ ಆಡದ ದೇಶಗಳಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಹಣವನ್ನು ಸಂಗ್ರಹಿಸುವ ಸಲುವಾಗಿ ಆಯೋಜಿಸುವ ಒಂದು ಸಣ್ಣ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಮೊದಲ ಎರಡು ಚಾಂಪಿಯನ್ಸ್ ಟ್ರೋಫಿಗಳನ್ನು ಐಸಿಸಿ ಅಸೋಸಿಯೇಟ್ ಸದಸ್ಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಕೀನ್ಯಾದಲ್ಲಿ ನಡೆಸಲಾಗಿತ್ತು. ಏಕದಿನ ವಿಶ್ವಕಪ್​ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ-8 ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುತ್ತವೆ.

ಚಾಂಪಿಯನ್ಸ್ ಟ್ರೋಫಿ ವಿಜೇತರು ಮತ್ತು ರನ್ನರ್​ಅಪ್ ಪಟ್ಟಿ

1998 - ದಕ್ಷಿಣ ಆಫ್ರಿಕಾ (ವೆಸ್ಟ್ ಇಂಡೀಸ್)

2000- ನ್ಯೂಜಿಲೆಂಡ್ (ಭಾರತ)

2002 - ಭಾರತ ಮತ್ತು ಶ್ರೀಲಂಕಾ (ಜಂಟಿ ಚಾಂಪಿಯನ್)

2004 - ವೆಸ್ಟ್ ಇಂಡೀಸ್ (ಇಂಗ್ಲೆಂಡ್)

2006 - ಆಸ್ಟ್ರೇಲಿಯಾ (ವೆಸ್ಟ್ ಇಂಡೀಸ್)

2009 - ಆಸ್ಟ್ರೇಲಿಯಾ (ನ್ಯೂಜಿಲೆಂಡ್)

2013 - ಭಾರತ (ಇಂಗ್ಲೆಂಡ್)

2017 - ಪಾಕಿಸ್ತಾನ (ಭಾರತ)

ಚಾಂಪಿಯನ್ಸ್ ಟ್ರೋಫಿ: ಅತ್ಯಧಿಕ ರನ್ ಗಳಿಸಿದ ಟಾಪ್​-5 ಬ್ಯಾಟರ್ಸ್

1. ಕ್ರಿಸ್​ಗೇಲ್ (ವೆಸ್ಟ್ ಇಂಡೀಸ್) - 17 ಇನ್ನಿಂಗ್ಸ್, 791 ರನ್

2. ಮಹೇಲಾ ಜಯವರ್ಧನೆ (ಶ್ರೀಲಂಕಾ) - 21 ಇನ್ನಿಂಗ್ಸ್, 741 ರನ್

3. ಶಿಖರ್ ಧವನ್ (ಭಾರತ) - 10 ಇನ್ನಿಂಗ್ಸ್, 701 ರನ್

4. ಕುಮಾರ್ ಸಂಗಕ್ಕಾರ (ಶ್ರೀಲಂಕಾ) - 21 ಇನ್ನಿಂಗ್ಸ್, 683 ರನ್

5. ಸೌರವ್ ಗಂಗೂಲಿ (ಭಾರತ) - 11 ಇನ್ನಿಂಗ್ಸ್, 665 ರನ್

ಚಾಂಪಿಯನ್ಸ್ ಟ್ರೋಫಿ: ಅಧಿಕ ವಿಕೆಟ್ ಪಡೆದ ಟಾಪ್-5 ಬೌಲರ್ಸ್

1. ಕೈಲ್ ಮಿಲ್ಸ್ (ನ್ಯೂಜಿಲೆಂಡ್) - 15 ಇನ್ನಿಂಗ್ಸ್, 28 ವಿಕೆಟ್

2. ಲಸಿತ್ ಮಾಲಿಂಗ (ಶ್ರೀಲಂಕಾ) - 16 ಇನ್ನಿಂಗ್ಸ್, 25 ವಿಕೆಟ್

3. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 17 ಇನ್ನಿಂಗ್ಸ್, 24 ವಿಕೆಟ್

4. ಬ್ರೆಟ್ ಲೀ (ಆಸ್ಟ್ರೇಲಿಯಾ) - 15 ಇನ್ನಿಂಗ್ಸ್, 22 ವಿಕೆಟ್

5. ಗ್ಲೆನ್ ಮೆಕ್​ಗ್ರಾಥ್ (ಆಸ್ಟ್ರೇಲಿಯಾ) - 12 ಇನ್ನಿಂಗ್ಸ್, 21 ವಿಕೆಟ್

ಚಾಂಪಿಯನ್ಸ್ ಟ್ರೋಫಿ: ಆತಿಥ್ಯ ವಹಿಸಿದ್ದ ದೇಶಗಳು

ಬಾಂಗ್ಲಾದೇಶ (1998), ಕೀನ್ಯಾ (200), ಶ್ರೀಲಂಕಾ (2002), ಇಂಗ್ಲೆಂಡ್ (2004), ಭಾರತ (2006), ಸೌತ್ ಆಫ್ರಿಕಾ (2009), ಇಂಗ್ಲೆಂಡ್ (2013), ಇಂಗ್ಲೆಂಡ್ (2017), ಪಾಕಿಸ್ತಾನ-ದುಬೈ (2025)

ಚಾಂಪಿಯನ್ಸ್ ಟ್ರೋಫಿ: ಟ್ರೋಫಿ ಗೆದ್ದ ಕ್ಯಾಪ್ಟನ್ಸ್

  1. ಹ್ಯಾನ್ಸಿ ಕ್ರೋನಿಯೆ - ದಕ್ಷಿಣ ಆಫ್ರಿಕಾ (1998)
  2. ಸ್ಟೀಫನ್ ಫ್ಲೆಮಿಂಗ್ - ನ್ಯೂಜಿಲೆಂಡ್ (2000)
  3. ಸೌತ್ ಗಂಗೂಲಿ (ಭಾರತ) - ಸನತ್ ಜಯಸೂರ್ಯ (ಶ್ರೀಲಂಕಾ) - (2002 ಜಂಟಿ ಚಾಂಪಿಯನ್)
  4. ಬ್ರಿಯಾನ್ ಲಾರಾ - ವೆಸ್ಟ್ ಇಂಡೀಸ್ (2004)
  5. ರಿಕಿ ಪಾಂಟಿಂಗ್ - ಆಸ್ಟ್ರೇಲಿಯಾ (2006)
  6. ರಿಕಿ ಪಾಂಟಿಂಗ್ - ಆಸ್ಟ್ರೇಲಿಯಾ (2009)
  7. ಎಂಎಸ್ ಧೋನಿ - ಭಾರತ (2013)
  8. ಸರ್ಫರಾಜ್ ಅಹ್ಮದ್ - ಪಾಕಿಸ್ತಾನ (2017)

ಇದನ್ನೂ ಓದಿ: ಪಾಕಿಸ್ತಾನದ ಹೇಯ ಕೃತ್ಯಕ್ಕೆ ಆಕ್ರೋಶ; ಚಾಂಪಿಯನ್ಸ್ ಟ್ರೋಫಿಗೆ ಹೋಗದ್ದಕ್ಕೆ ಭಾರತದ ಧ್ವಜವೇ ಮಾಯ!

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner