ಐಸಿಸಿ ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಸೇರಿ ಹಲವು ಸರಣಿಗಳು; ಭಾರತ ಕ್ರಿಕೆಟ್ ತಂಡದ 2025ರ ಸಂಪೂರ್ಣ ವೇಳಾಪಟ್ಟಿ
ಭಾರತ ಪುರುಷರ ಕ್ರಿಕೆಟ್ ತಂಡವು 2025ರಲ್ಲೂ ಹಲವು ಟೂರ್ನಿ ಹಾಗೂ ಸರಣಿಗಳಲ್ಲಿ ಆಡಲಿದೆ. ಐಸಿಸಿ ಹಾಗೂ ಎಸಿಸಿ ಟೂರ್ನಿ ಕೂಡಾ ನಡೆಯಲಿದ್ದು, ಜೊತೆಗೆ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡಗಳ ವಿರುದ್ಧ ಕಣಕ್ಕಿಳಿಯಲಿದೆ.
ಭಾರತೀಯ ಪುರುಷರ ಕ್ರಿಕೆಟ್ ತಂಡವು ಸದ್ಯ ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಡುತ್ತಿದೆ. 2024ರ ವರ್ಷವು, ಟೀಮ್ ಇಂಡಿಯಾ ಪಾಲಿಗೆ ಸೋಲು-ಗೆಲುವುಗಳ ಸಮ್ಮಿಶ್ರಣವಿದ್ದ ವರ್ಷ. ಅದರಂತೆಯೇ 2025ರ ವರ್ಷ ಕೂಡಾ ಹಲವು ಮಹತ್ವದ ಟೂರ್ನಿಗಳಲ್ಲಿ ಭಾರತ ತಂಡ ಆಡಲಿದೆ. ಪ್ರಮುಖ ಐಸಿಸಿ ಟೂರ್ನಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಬಳಗ ಆಡಲಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿ ಸೇರಿದಂತೆ ವಿವಿಧ ಈವೆಂಟ್‌ಗಳಲ್ಲಿ ಭಾಗಿಯಾಗಲಿದೆ. ಕೆರಿಬಿಯನ್ ನಾಡಿನಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ನಂತರ, ಈ ವರ್ಷ ಮತ್ತೊಂದು ಐಸಿಸಿ ಕಪ್ ಗೆಲ್ಲುವ ಭರವಸೆಯಲ್ಲಿ ಭಾರತ ತಂಡವಿದೆ.
2024 ಭಾರತ ತಂಡದ ಪಾಲಿಗೆ ಕೆಲವೊಂದು ಅನಿರೀಕ್ಷಿತ ಸೋಲುಗಳನ್ನೂ ತಂದೊಡ್ಡಿತು. ಗೆಲುವುಗಳು ಒಂದೆಡೆಯಾದರೆ, ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಸೋಲು ಮತ್ತು ನ್ಯೂಜಿಲೆಂಡ್ ವಿರುದ್ಧ ತವರು ನೆಲದಲ್ಲೇ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆಗಿದ್ದು, ಬಲಿಷ್ಠ ಭಾರತ ತಂಡಕ್ಕೆ ಕಪ್ಪುಚುಕ್ಕೆಯಾಗಿದೆ. 2024ರಲ್ಲಿ ಭಾರತ ಆಡಿರುವ 15 ಟೆಸ್ಟ್ ಪಂದ್ಯಗಳಲ್ಲಿ 8 ಗೆಲುವು ಕಂಡರೆ, 6 ಪಂದ್ಯಗಳಲ್ಲಿ ಸೋಲುಂಡಿದೆ.
2025ರ ಹೊಸ ವರ್ಷವನ್ನು ಭಾರತ ತಂಡವು ಟೆಸ್ಟ್ ಪಂದ್ಯದೊಂದಿಗೆ ಆರಂಭಿಸಲಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಅರ್ಹತೆ ಪಡೆಯುವ ಆಸೆ ಜೀವಂತವಾಗಿರಲು, ಈ ಪಂದ್ಯ ಗೆಲ್ಲಲೇಬೇಕಿದೆ. ಸಿಡ್ನಿ ಟೆಸ್ಟ್ ಬಳಿಕ ತಂಡದ ಗಮನವು ಕೆಲವು ಸರಣಿಗಳ ಮೇಲಿರಲಿದೆ. ಆದರೆ, ಐಸಿಸಿ ಟೂರ್ನಿಯಾದ ಚಾಂಪಿಯನ್ಸ್ ಟ್ರೋಫಿ ಗೆಲುವು ತಂಡಕ್ಕೆ ಮುಖ್ಯವಾಗಲಿದೆ.
ಜನವರಿ 22ರಿಂದ ಇಂಗ್ಲೆಂಡ್ ವಿರುದ್ಧ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಈ ವರ್ಷದ ಕೊನೆಯಲ್ಲಿ, ಭಾರತವು ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. ಅಕ್ಟೋಬರ್‌ನಲ್ಲಿ ಏಷ್ಯಾಕಪ್ ಕೂಡಾ ನಡೆಯಲಿದೆ. ಈಗ 2025ರ ಭಾರತ ಕ್ರಿಕೆಟ್ ತಂಡದ ಸಂಪೂರ್ಣ ವೇಳಾಪಟ್ಟಿ ನೋಡೋಣ
ಬಾರ್ಡರ್-ಗವಾಸ್ಕರ್ ಟ್ರೋಫಿ
- ಭಾರತ vs ಆಸ್ಟ್ರೇಲಿಯಾ ನಡುವಿನ 5ನೇ ಟೆಸ್ಟ್ ಪಂದ್ಯ - ಜನವರಿ 3ರಿಂದ 7 (ಸಿಡ್ನಿ)
ಭಾರತ vs ಇಂಗ್ಲೆಂಡ್ (5 ಟಿ20, 3 ಏಕದಿನ) - ಜನವರಿ-ಫೆಬ್ರವರಿ 2025
- ಮೊದಲ ಟಿ20 ಪಂದ್ಯ: ಜನವರಿ 22 (ಚೆನ್ನೈ)
- 2ನೇ ಟಿ20 ಪಂದ್ಯ: ಜನವರಿ 25 (ಕೋಲ್ಕತಾ)
- 3ನೇ ಟಿ20 ಪಂದ್ಯ: ಜನವರಿ 28 (ರಾಜ್ಕೋಟ್)
- 4ನೇ ಟಿ20: ಜನವರಿ 31 (ಪುಣೆ)
- 5ನೇ ಟಿ20: ಫೆಬ್ರವರಿ 2 (ಮುಂಬೈ)
ಏಕದಿನ ಸರಣಿ
- ಮೊದಲ ಏಕದಿನ ಪಂದ್ಯ: ಫೆಬ್ರುವರಿ 6 (ನಾಗ್ಪುರ)
- ಎರಡನೇ ಏಕದಿನ ಪಂದ್ಯ: ಫೆಬ್ರುವರಿ 9 (ಕಟಕ್)
- 3ನೇ ಏಕದಿನ: ಫೆಬ್ರುವರಿ 12 (ಅಹಮದಾಬಾದ್)
ಚಾಂಪಿಯನ್ಸ್ ಟ್ರೋಫಿ - ಫೆಬ್ರುವರಿ-ಮಾರ್ಚ್ 2025
- ಭಾರತ vs ಬಾಂಗ್ಲಾದೇಶ: ಫೆಬ್ರುವರಿ 20 (ದುಬೈ)
- ಭಾರತ vs ಪಾಕಿಸ್ತಾನ: ಫೆಬ್ರುವರಿ 23 (ದುಬೈ)
- ಭಾರತ vs ನ್ಯೂಜಿಲೆಂಡ್: ಮಾರ್ಚ್ 2 (ದುಬೈ)
- ಸೆಮಿಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 4 (ದುಬೈ)
- ಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 9 (ದುಬೈ)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ಅರ್ಹತೆ ಪಡೆದರೆ) - ಜೂನ್ 2025 (ಲಾರ್ಡ್ಸ್ ಕ್ರಿಕೆಟ್ ಮೈದಾನ)
ಭಾರತ ವಿರುದ್ಧ ಇಂಗ್ಲೆಂಡ್ (5 ಟೆಸ್ಟ್) - ಜೂನ್-ಆಗಸ್ಟ್ 2025 (ವಿದೇಶ)
- ಮೊದಲ ಟೆಸ್ಟ್: ಜೂನ್ 20-24 (ಹೆಡಿಂಗ್ಲೆ)
- 2ನೇ ಟೆಸ್ಟ್: ಜುಲೈ 2-6 (ಎಡ್ಜ್‌ಬಾಸ್ಟನ್)
- 3ನೇ ಟೆಸ್ಟ್: ಜೂನ್ 10-14 (ಲಾರ್ಡ್ಸ್)
- 4ನೇ ಟೆಸ್ಟ್: ಜೂನ್ 23-27 (ಮ್ಯಾಂಚೆಸ್ಟರ್)
- 5ನೇ ಟೆಸ್ಟ್: ಜುಲೈ 31-ಆಗಸ್ಟ್ 4 (ಓವಲ್)
ಇದನ್ನೂ ಓದಿ | Explainer: 2-1 ಅಂತರದ ಹಿನ್ನಡೆಯಿದ್ದರೂ ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸಿಕೊಳ್ಳಬಹುದು; ಹೇಗೆಂದರೆ
- ಭಾರತ-ಬಾಂಗ್ಲಾದೇಶ (3 ಏಕದಿನ, 3 ಟಿ20) - ಆಗಸ್ಟ್ 2025 (ವಿದೇಶ)
- ಭಾರತ vs ವೆಸ್ಟ್ ಇಂಡೀಸ್ (2 ಟೆಸ್ಟ್) - ಅಕ್ಟೋಬರ್ 2025
- ಏಷ್ಯಾ ಕಪ್ ಟಿ20 - ಅಕ್ಟೋಬರ್-ನವೆಂಬರ್ 2025
- ಭಾರತ vs ಆಸ್ಟ್ರೇಲಿಯಾ (3 ಏಕದಿನ, 5 ಟಿ20) - ನವೆಂಬರ್ 2025 (ವಿದೇಶ)
- ಭಾರತ vs ದಕ್ಷಿಣ ಆಫ್ರಿಕಾ (2 ಟೆಸ್ಟ್‌ಗಳು, 3 ಏಕದಿನ 5 ಟಿ20) ನವೆಂಬರ್-ಡಿಸೆಂಬರ್ 2025
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.