ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಆರಂಭಕ್ಕೆ ದಿನಾಂಕ ನಿಗದಿ; ಫೆಬ್ರವರಿ 19ರಿಂದ ಪ್ರಾರಂಭ, ಈ ದಿನ ಫೈನಲ್!

ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಆರಂಭಕ್ಕೆ ದಿನಾಂಕ ನಿಗದಿ; ಫೆಬ್ರವರಿ 19ರಿಂದ ಪ್ರಾರಂಭ, ಈ ದಿನ ಫೈನಲ್!

Champions Trophy 2025 : ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಆರಂಭಕ್ಕೆ ದಿನಾಂಕ ನಿಗದಿಯಾಗಿದ್ದು, ಫೆಬ್ರವರಿ 19 ರಿಂದ ಮಾರ್ಚ್ 9ರ ತನಕ ನಡೆಸಲು ಐಸಿಸಿ ಯೋಜನೆ ರೂಪಿಸಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಆರಂಭಕ್ಕೆ ದಿನಾಂಕ ನಿಗದಿ, ಫೆಬ್ರವರಿ 19ರಿಂದ ಪ್ರಾರಂಭ, ಈ ದಿನ ಫೈನಲ್
ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಆರಂಭಕ್ಕೆ ದಿನಾಂಕ ನಿಗದಿ, ಫೆಬ್ರವರಿ 19ರಿಂದ ಪ್ರಾರಂಭ, ಈ ದಿನ ಫೈನಲ್

ಮುಂದಿನ ವರ್ಷ ಪಾಕಿಸ್ತಾನ (Pakistan Cricket Team) ಅತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ-2025ರ (ICC Champions Trophy 2025) ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Council) ಅಂತಿಮಗೊಳಿಸಿದೆ. ಫೆಬ್ರವರಿ 19 ರಿಂದ ಮಾರ್ಚ್ 9ರವರೆಗೂ ಟೂರ್ನಿಯನ್ನು ಆಯೋಜಿಸಲು ಐಸಿಸಿ ಚಿಂತನೆ ನಡೆಸಿದೆ. ಏಳು ವರ್ಷಗಳಲ್ಲಿ ಮೊದಲ ಬಾರಿಗೆ ನಡೆಯಲಿರುವ ಎಂಟು ತಂಡಗಳ ಟೂರ್ನಿಯನ್ನು ಮಂಡಳಿಯು ಈ 20 ದಿನಗಳನ್ನು ನಿಗದಿಪಡಿಸಿದೆ ಎಂದು ಐಸಿಸಿ ಮೂಲಗಳು ಕ್ರಿಕ್‌ಬಜ್‌ಗೆ ದೃಢಪಡಿಸಿವೆ.

ಟ್ರೆಂಡಿಂಗ್​ ಸುದ್ದಿ

ಪಂದ್ಯಾವಳಿಯ ನಿಖರವಾದ ಪಂದ್ಯದ ದಿನಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ವರದಿಯ ಪ್ರಕಾರ ಈ 20 ದಿನಗಳಲ್ಲಿ ವೇಳಾಪಟ್ಟಿಯನ್ನು ಅಳವಡಿಸಲಾಗುವುದು. ಇದು ಪಂದ್ಯಾವಳಿಯ 9ನೇ ಆವೃತ್ತಿಯಾಗಿದೆ. ಎಂಟು ಅಗ್ರ ಶ್ರೇಯಾಂಕದ ಏಕದಿನ ಪುರುಷರ ರಾಷ್ಟ್ರೀಯ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. ಚಾಂಪಿಯನ್ಸ್ ಟ್ರೋಫಿ ಶುಕ್ರವಾರ ಆರಂಭವಾಗಿ ಭಾನುವಾರದಂದು ಮುಕ್ತಾಯವಾಗಲಿದೆ ಎಂದು ಭಾವಿಸಲಾಗಿತ್ತು.

ಆದರೆ, ಆರಂಭದ ದಿನಾಂಕವನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಬಹಿರಂಗಪಡಿಸಿದ ವೇಳಾಪಟ್ಟಿ ಪ್ರಕಾರ, ಫೆಬ್ರವರಿ 19ರ ಬುಧವಾರ ಆರಂಭವಾದರೆ, ಮಾರ್ಚ್ 9ರ ಭಾನುವಾರ ಫೈನಲ್ ಜರುಗಲಿದೆ. 2017 ರ ಆವೃತ್ತಿಯು 19-ದಿನಗಳ ನಡೆದಿತ್ತು. ಟೂರ್ನಿಯು ಜೂನ್ 1ರಂದು ಪ್ರಾರಂಭವಾಗಿ ಭಾನುವಾರ (ಜೂನ್ 18) ಕೊನೆಗೊಂಡಿತ್ತು. ಚಾಂಪಿಯನ್ಸ್ ಟ್ರೋಫಿಯ ಸ ಭವನೀಯ ದಿನಾಂಕಗಳನ್ನು ಎಲ್ಲಾ 8 ಬೋರ್ಡ್‌ಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಇದರಿಂದ ಆಯಾ ಕ್ರಿಕೆಟ್ ಮಂಡಳಿಗಳು ತಮ್ಮ ದೇಶೀಯ ಲೀಗ್​ಗಳಿಗೆ ಅನುಗುಣವಾಗಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮಗೊಳಿಸಬಹುದು. ಐಎಲ್​ಟಿ20 ತನ್ನ 3ನೇ ಆವೃತ್ತಿಯು ಜನವರಿ 11ರಿಂದ ಫೆಬ್ರವರಿ 9 ರವರೆಗೆ ನಡೆಯುತ್ತದೆ ಎಂದು ಘೋಷಿಸಿದೆ. ಅದೇ ಸಮಯದಲ್ಲಿ ಸೌತ್ ಆಫ್ರಿಕಾ ಟಿ20 ಲೀಗ್​ ಆಯೋಜಿಸುವ ಲೆಕ್ಕಾಚಾರವನ್ನೂ ಹೊಂದಿದೆ.

ಎಸ್​ಎ20 ಇತ್ತೀಚೆಗೆ ದಿನಾಂಕ ಬಿಡುಗಡೆಯ ಪ್ರಕಾರ, ಸೀಸನ್ ಜನವರಿ 9 ರಂದು ಪ್ರಾರಂಭವಾಗಲಿದ್ದು, ಫೆಬ್ರವರಿ 8ರವರೆಗೆ ನಡೆಯುತ್ತದೆ. ಮಾರ್ಕಸ್ ಸ್ಟೋಯ್ನಿಸ್, ಕೇಶವ್ ಮಹಾರಾಜ್ ಸೇರಿದಂತೆ ಪ್ರಮುಖ ಆಟಗಾರರು ನಿಯಮಿತವಾಗಿ ಈ ಲೀಗ್​​ನಲ್ಲಿ ಕಣಕ್ಕಿಳಿಯಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತದೆ. ಆದರೆ, ಅಧಿಕೃತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಏಕೆಂದರೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣಿಸುವ ಸಾಧ್ಯತೆ ತೀರಾ ಕಡಿಮೆ.

ಪಾಕಿಸ್ತಾನಕ್ಕೆ ಭಾರತ ತಂಡ ಪ್ರಯಾಣಿಸುತ್ತಾ?

ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಿದ್ಧವಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳ ವರದಿ ಮಾಡಿತ್ತು. ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನ ಐಕಾನಿಕ್ ಗಡಾಫಿ ಸ್ಟೇಡಿಯಂನ ಒಂದು ಸ್ಥಳಕ್ಕೆ ಸೀಮಿತಗೊಳಿಸಲು ಪಿಸಿಬಿ ಚಿಂತನೆ ನಡೆಸಿದೆ. ವಾಘಾ ಗಡಿಗೆ (ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ) ಹತ್ತಿರವಿರುವ ಕಾರಣ, ಲಾಹೋರ್ ಅನ್ನು ಭಾರತೀಯ ತಂಡಕ್ಕೆ ಆತಿಥ್ಯ ವಹಿಸಲು ಪಿಸಿಬಿ ಆಯ್ಕೆ ಮಾಡಿದೆ. ನಗರವು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೂ ಆತಿಥ್ಯ ವಹಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಟಿ20 ವರ್ಲ್ಡ್‌ಕಪ್ 2024

ವಿಭಾಗ

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ