IND vs NZ: ಸೊಳ್ಳೆಗಳ ವಿರುದ್ಧ ಸೇಡು ತೀರಿಸಿಕೊಂಡ ಗಿಲ್; ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಮಂಜು ಅಡ್ಡಿಪಡಿಸಿದ ಕುರಿತ ಮೀಮ್ಸ್ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Nz: ಸೊಳ್ಳೆಗಳ ವಿರುದ್ಧ ಸೇಡು ತೀರಿಸಿಕೊಂಡ ಗಿಲ್; ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಮಂಜು ಅಡ್ಡಿಪಡಿಸಿದ ಕುರಿತ ಮೀಮ್ಸ್ ವೈರಲ್

IND vs NZ: ಸೊಳ್ಳೆಗಳ ವಿರುದ್ಧ ಸೇಡು ತೀರಿಸಿಕೊಂಡ ಗಿಲ್; ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಮಂಜು ಅಡ್ಡಿಪಡಿಸಿದ ಕುರಿತ ಮೀಮ್ಸ್ ವೈರಲ್

ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಏಕಾಏಕಿ ಮಂಜು ಆವರಿಸಿ ಕೆಲಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಮಂಜು ಪಂದ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಕೆಲವು ಮೀಮ್ಸ್‌ಗಳು ಜಾಲತಾಣಗಳಲ್ಲಿ ಗಮನ ಸೆಳೆಯತ್ತಿವೆ.

ಮಂಜು ಏಕಾಏಕಿ ಕ್ರೀಡಾಂಗಣವನ್ನು ಆವರಿಸಿದಾಗ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವನ್ನ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.
ಮಂಜು ಏಕಾಏಕಿ ಕ್ರೀಡಾಂಗಣವನ್ನು ಆವರಿಸಿದಾಗ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವನ್ನ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. (AFP)

ಧರ್ಮಶಾಲಾ (ಹಿಮಾಚಲ ಪ್ರದೇಶ): ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಐಸಿಸಿ ಏಕದಿನ ವಿಶ್ವಕಪ್‌ನ (ICC ODI World Cup 2023) 21ನೇ ಪಂದ್ಯ ಭಾನುವಾರ (ಅಕ್ಟೋಬರ್ 22) ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ (Team India) ವಿರಾಟ್ ಕೊಹ್ಲಿ (Virat Kohli) ಅವರ ಬೊಂಬಾಟ್ ಬ್ಯಾಟಿಂಗ್‌ ನೆರವಿನಿಂದ 4 ವಿಕೆಟ್‌ಗಳ ಗೆಲುವು ಸಾಧಿಸಿ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ನ್ಯೂಜಿಲೆಂಡ್ ನೀಡಿದ್ದ 273 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ 2 ವಿಕೆಟ್‌ಗೆ 100 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದು ರನ್‌ಗಾಗಿ ಓಡುತ್ತಿದ್ದಾಗ ಏಕಾಏಕಿ ಮಂಜು ಮೈದಾನವನ್ನು ಆವರಿಸಿಕೊಂಡು ಪಂದ್ಯ ಕೆಲ ನಿಮಿಷಗಳ ಮಟ್ಟಿಗೆ ಸ್ಥಗಿತಗೊಳ್ಳುವಂತೆ ಮಾಡಿತ್ತು. ಸ್ಟೇಡಿಯಂನಲ್ಲಿ ದಟ್ಟವಾದ ಮಂಜು ಆವರಿಸಿತು. ಕಡಿಮೆ ಗೋಚರತೆಯಿಂದಾಗಿ ಟೀಂ ಇಂಡಿಯಾದ ಬ್ಯಾಟಿಂಗ್‌ ಅನ್ನು ಸ್ಥಗಿತಗೊಳಿಸಲಾಗಿತ್ತು.

ಪಂದ್ಯಕ್ಕೆ ಮಂಜು ಅಡ್ಡಿ ಪಡಿಸಿದ ಬಗ್ಗೆ ಮೀಮ್ಸ್‌ಗಳು ವೈರಲ್

ಪಂದ್ಯ ಕೆಲಕಾಲ ಸ್ಥಗಿತಗೊಂಡಾಗ ಕ್ರಿಕೆಟ್ ಅಭಿಮಾನಿಗಳು ಹಾಸ್ಯದ ಚಟಾಕಿ ಹಾರಿಸಿದ್ದಾರೆ. ಅತ್ತ ಆಟಗಾರರು ಸ್ವಲ್ಪ ಕಾಲ ಮೈದಾನವನ್ನು ತೊರೆದಿದ್ದಾಗ ಜಾಲತಾಣಗಳಲ್ಲಿ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಮೀಮ್ಸ್‌ಗಳನ್ನು ಹರಿಬಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಝ್ಯಾನ್ ಎಂಬ ಖಾತೆದಾರ 'ಬ್ರೇಕಿಂಗ್ ನ್ಯೂಸ್- WWE ಸ್ಟಾರ್ ಅಂಡರ್‌ಟೇಕರ್ ಪ್ರವೇಶದಿಂದ ಧರ್ಮಶಾಲದ ಪಂದ್ಯ ಕೆಲಕಾಲ ಸ್ಥಗಿತಗೊಳಿಸಲಾಗಿದೆ' ಎಂದು ವಿಡಿಯೊ ಸಹಿತ ಬರೆದುಕೊಂಡಿದ್ದಾರೆ.

ಸಿ ಎಂಬ ಹೆಸರಿನ ಮತ್ತೊಬ್ಬ ಖಾತೆದಾರರು ಪಾಕಿಸ್ತಾನ ಕ್ರಿಕೆಟ್ ಮಂಡಲಿ-ಪಿಸಿಬಿಯ ಪಿತೂರಿಯಿಂದ ಧರ್ಮಶಾಲಾದಲ್ಲಿ ಮಂಜು ಪಂದ್ಯಕ್ಕೆ ಅಡ್ಡಿಪಡಿಸಿರುವುದಲ್ಲ ಎಂದು ವಿಸ್ವಾಸ ನನಗಿದೆ ಬರೆದುಕೊಂಡಿದ್ದಾರೆ.

ಸಮೀರ್ ಅಲ್ಲಾನಾ ಎಂಬುವವರು ಇದೇ ವಿಚಾರದ ಬಗ್ಗೆ 'ಸೊಳ್ಳೆಗಳ ವಿರುದ್ಧ ಶುಭ್ಮನ್ ಗಿಲ್ ಸೇಡು ತೀರಿಸಿಕೊಂಡಿದ್ದಾರೆ' ಎಂದು ಧರ್ಮಶಾಲಾ ಮೈದಾನನ ಫಾಗ್‌ ಬಗ್ಗೆ ಬರೆದುಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ರೋಹಿತ್ ಪಡೆ 4 ವಿಕೆಟ್‌ಗಳ ಗೆಲುವಿನೊಂದಿಗೆ ಐಸಿಸಿ ವಿಶ್ವಕಪ್‌ನಲ್ಲಿ ಸತತ್ 5 ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ತಂಡ ಟೀಂ ಇಂಡಿಯಾ ವಿರುದ್ಧ ಸೋಲುವ ಮೂಲಕ ಎರಡನೇ ಸ್ಥಾನಕ್ಕೆ ಜಾರಿದೆ.

ಐಸಿಸಿ ವಿಶ್ವಕಪ್‌ನಲ್ಲಿ ಕಳೆದ 20 ವರ್ಷಗಳಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಗೆಲ್ಲೋಕೆ ಸಾಧ್ಯವಾಗಿರಲಿಲ್ಲ. ಆದರೆ ಭಾನುವಾರ (ಅಕ್ಟೋಬರ್ 22) ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಪಡೆ ಉತ್ತಮ ಬೌಲಿಂಗ್ ಮತ್ತು ಬ್ಯಾಟಿಂಗ್‌ನೊಂದಿಗೆ 2 ದಶಕಗಳ ದಾಖಲೆಯನ್ನು ಮುರಿದಿದೆ.

Whats_app_banner