SA vs BAN: ಏಕದಿನ ವಿಶ್ವಕಪ್; ಬಾಂಗ್ಲಾದೇಶವನ್ನ 149 ರನ್‌ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ; ಅಂಕಪಟ್ಟಿಯಲ್ಲಿ ಟಾಪ್ 2ಗೆ ಜಿಗಿತ; ಫೋಟೊಸ್
ಐಸಿಸಿ ವಿಶ್ವಕಪ್‌ನ 23ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾ ಪಡೆಯನ್ನು 149 ರನ್‌ಗಳಿಂದ ಸೋಲಿಸಿದೆ. ಮುಂಬೈನ ವಾಂಖೆಡೆಯಲ್ಲಿ ಪಂದ್ಯ ನಡೆದಿದೆ. ಈ ಫಲಿತಾಂಶದ ಬಳಿಕ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಜಿಗಿತ ಕಂಡಿದೆ.
(1 / 5)
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್ ಅವರ 174 ರನ್‌ಗಳ ಸ್ಫೋಟಕ ಶತಕದ ನೆರವಿನಿಂದ 382 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 383 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಶಕೀಬ್ ಪಡೆ ವಿಫಲವಾಯಿತು. 46.4 ಓವರ್‌ನಲ್ಲಿ 233 ರನ್‌ಗಳಿಸಿ ಸರ್ವಪತನ ಕಂಡಿತು. ದಕ್ಷಿಣ ಆಫ್ರಿಕಾ 149 ರನ್‌ಗಳ ದೊಡ್ಡ ಗೆಲುವು ಪಡೆಯಿತು.(ICC Twitter)
(2 / 5)
383 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಆರಂಭಿಕ ಅಘಾತವನ್ನು ಅನುಭವಿಸಿತು. 81 ರನ್‌ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಮಹಮ್ಮದುಲ್ಲಾ ಶತಕದ ಮೂಲಕ ತಂಡವನ್ನು ಮೊತ್ತವನ್ನು 200ರ ಗಡಿ ದಾಟಿಸಿದರು. ಮಹದುಲ್ಲಾ 111 ಎಸೆತಗಳಿಂದ 111 ರನ್ ಬಾರಿಸಿದರು. (AFP)
(3 / 5)
ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೊಯೆಟ್ಜಿ 3 ವಿಕೆಟ್ ಪಡೆದು ಮಿಂಚಿದರೆ, ಮಾರ್ಕೊ ಜಾನ್ಸೆನ್ ಮತ್ತು ಕಗಿಸೊ ರಬಾಡ ತಲಾ 2 ವಿಕೆಟ್ ಕಿತ್ತರು.(AP)
(4 / 5)
ಆರಂಭದಲ್ಲಿ ತಾಳ್ಮೆಯ ಆಟವಾಡಿದ ಕ್ವಿಂಟನ್ ಡಿ ಕಾಕ್ ಶತಕದ ಬಳಿಕ ಅಬ್ಬರಿಸಿದರು. 140 ಎಸೆತಗಳನ್ನು ಎದುರಿಸಿದ ಅವರು 15 ಬೌಂಡರಿ ಹಾಗೂ 7 ಸಿಕ್ಸರ್ ಸೇರಿ 174 ರನ್ ಬಾರಿಸಿದರು. ಹೆನ್ರಿಕ್ ಕ್ಲಾಸೆನ್ 49 ಎಸೆತಗಳಲ್ಲಿ 90 ರನ್‌ಗಳ ಸ್ಫೋಟಕ ಆಟವಾಡಿದರು. (ANI )
ಇತರ ಗ್ಯಾಲರಿಗಳು