SA vs ENG: ಏಕದಿನ ವಿಶ್ವಕಪ್; 400 ರನ್‌ಗಳ ಬೃಹತ್ ಮೊತ್ತದೆದುರು ಮುಗ್ಗರಿಸಿದ ಇಂಗ್ಲೆಂಡ್; ದಕ್ಷಿಣ ಆಫ್ರಿಕಾಗೆ 229 ರನ್‌ಗಳ ಭರ್ಜರಿ ಗೆಲುವು
ಕನ್ನಡ ಸುದ್ದಿ  /  ಕ್ರಿಕೆಟ್  /  Sa Vs Eng: ಏಕದಿನ ವಿಶ್ವಕಪ್; 400 ರನ್‌ಗಳ ಬೃಹತ್ ಮೊತ್ತದೆದುರು ಮುಗ್ಗರಿಸಿದ ಇಂಗ್ಲೆಂಡ್; ದಕ್ಷಿಣ ಆಫ್ರಿಕಾಗೆ 229 ರನ್‌ಗಳ ಭರ್ಜರಿ ಗೆಲುವು

SA vs ENG: ಏಕದಿನ ವಿಶ್ವಕಪ್; 400 ರನ್‌ಗಳ ಬೃಹತ್ ಮೊತ್ತದೆದುರು ಮುಗ್ಗರಿಸಿದ ಇಂಗ್ಲೆಂಡ್; ದಕ್ಷಿಣ ಆಫ್ರಿಕಾಗೆ 229 ರನ್‌ಗಳ ಭರ್ಜರಿ ಗೆಲುವು

ಮುಂಬೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 229 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಇಂಗ್ಲೆಂಡ್ ತಂಡದ ಸ್ಪೋಟಕ ಬ್ಯಾಟರ್ ಜಾನಿ ಬೈರ್‌ಸ್ಟೋ ಅವರ ವಿಕೆಟ್ ಪಡೆದಾಗ ದಕ್ಷಿಣ ಆಫ್ರಿಕಾದ ಆಟಗಾರರು ಸಂಭ್ರಮಿಸಿದ್ದು ಹೀಗೆ
ಇಂಗ್ಲೆಂಡ್ ತಂಡದ ಸ್ಪೋಟಕ ಬ್ಯಾಟರ್ ಜಾನಿ ಬೈರ್‌ಸ್ಟೋ ಅವರ ವಿಕೆಟ್ ಪಡೆದಾಗ ದಕ್ಷಿಣ ಆಫ್ರಿಕಾದ ಆಟಗಾರರು ಸಂಭ್ರಮಿಸಿದ್ದು ಹೀಗೆ (ANI )

ಮುಂಬೈ (ಮಹಾರಾಷ್ಟ್ರ): ಐಸಿಸಿ ವಿಶ್ವಕಪ್‌ನ 20ನೇ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ 229 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಹೆನ್ರಿಕ್ ಕ್ಲಾಸೆನ್ ಅವರ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 399 ರನ್ ಚಚ್ಚಿದರು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ 22 ಓವರ್‌ಗಳಲ್ಲಿ 170 ರನ್ ಗಳಿಸಿ ಸರ್ವ ಪತನ ಕಂಡಿತು.

16.3 ಓವರ್‌ಗಳು ಆಗುವಷ್ಟರಲ್ಲಿ 100 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡಿತ್ತು.ಜಾನಿ ಬೈರ್‌ಸ್ಟೋ (10), ಡೇವಿಡ್ ಮಲಾನ್ (6), ಜೋ ರೂಟ್(2), ಬೆನ್ ಸ್ಟೋಕ್ಸ್ (5) ಹ್ಯಾರಿ ಬ್ರೂಕ್ (17) ಜೋಸ್ ಬಟ್ಲರ್ (15), ಡೇವಿಡ್ ವಿಲ್ಲಿ (12), ಅದಿಲ್ ರಶೀದ್ 10 ವಿಕೆಟ್ ಗಳಿಸಿ ಬೇಗ ಔಟಾದರು.

ಕೊನೆಯಲ್ಲಿ ಅಬ್ಬರಿಸಿದ ಅಟ್ಕಿನ್ಸನ್, ಮಾರ್ಕ್ ವುಡ್

16.3 ಓವರ್‌ಗೆ 8 ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ 100 ರನ್ ಗಳಿಸಿತ್ತು. ಆದರೆ 22 ಓವರ್‌ ಅಂದರೆ ಮುಂದಿನ 33 ಎಸೆತಗಳಲ್ಲಿ 70 ರನ್ ಬಾರಿಸಿದ ಬೌಲರ್‌ಗಳಾದ ಗಸ್ ಅಟ್ಕಿನ್ಸನ್ ಮತ್ತು ಮಾರ್ಕ್ ವುಡ್ ಜೋಡಿ ಭರ್ಜರಿ ಅರ್ಧ ಶತಕದ ಜೊತೆಯಾಟ ನೀಡಿತು. ಅಟ್ಕಿನ್ಸನ್ 21 ಎಸೆತಗಳಲ್ಲಿ 7 ಬೌಂಡರಿ ಸೇರಿ 35 ರನ್ ಬಾರಿಸಿ ಕೇಶವ್ ಮಹಾರಾಜ್‌ಗೆ ವಿಕೆಟ್ ಒಪ್ಪಿಸಿದರು.

ಪ್ರಮುಖ ಬ್ಯಾಟರ್‌ಗಳು ನಾಚುವಂತೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಾರ್ಕ್ ವುಡ್ 17 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳ ಸಹಿತ 43 ರನ್‌ ಬಾರಿಸಿ ಔಟಾಗದೆ ಉಳಿದರು. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೊಯಿಟ್ಜ್ 4 ಓವರ್‌ಗಳಲ್ಲಿ 35 ರನ್ ನೀಡಿ ಮೂರು ವಿಕೆಟ್ ಪಡೆದರೆ, ಲುಂಗಿ ಎನ್‌ಗಿಡಿ, ಮಾರ್ಕೊ ಜಾನ್ಸೆನ್ ತಲಾ 2 ವಿಕೆಟ್, ಕಗಿಸೊ ರಬಾಡ, ಕೇಶವ್ ಮಹಾರಾಜ್ ತಲಾ 1 ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 24 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಇಂಗ್ಲೆಂಡ್ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 26 ರಂದು ಶ್ರೀಲಂಕಾ ವಿರುದ್ಧ ಆಡಲಿದೆ.

ಇಂಗ್ಲೆಂಡ್ ಆಡಿದ 11ರ ಬಳಗ

ಜಾನಿ ಬೈರ್​ಸ್ಟೋ, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಡೇವಿಡ್ ವಿಲ್ಲಿ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ರೀಸ್ ಟೋಪ್ಲಿ, ಮಾರ್ಕ್ ವುಡ್.

ದಕ್ಷಿಣ ಆಫ್ರಿಕಾ ಆಡಿದ 11ರ ಬಳಗ

ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯಿಟ್ಜ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ.

Whats_app_banner