ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಪಾಕಿಸ್ತಾನ ಪಂದ್ಯಕ್ಕೆ ನ್ಯೂಯಾರ್ಕ್‌ನಲ್ಲಿ ಗಂಟೆ ಗಂಟೆಗೂ ಹೆಚ್ಚುತ್ತಿದೆ ಮಳೆ ಭೀತಿ; ರದ್ದಾದರೆ ಮೀಸಲು ದಿನ ಇದೆಯೇ?

ಭಾರತ vs ಪಾಕಿಸ್ತಾನ ಪಂದ್ಯಕ್ಕೆ ನ್ಯೂಯಾರ್ಕ್‌ನಲ್ಲಿ ಗಂಟೆ ಗಂಟೆಗೂ ಹೆಚ್ಚುತ್ತಿದೆ ಮಳೆ ಭೀತಿ; ರದ್ದಾದರೆ ಮೀಸಲು ದಿನ ಇದೆಯೇ?

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜೂನ್‌ 9ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಲಿದೆ. ಪಂದ್ಯದ ದಿನ ನ್ಯೂಯಾರ್ಕ್‌ ನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಿದೆ ಹವಾಮಾನ ವರದಿ.

ಭಾರತ vs ಪಾಕಿಸ್ತಾನ ಪಂದ್ಯಕ್ಕೆ ನ್ಯೂಯಾರ್ಕ್‌ನಲ್ಲಿ ಗಂಟೆ ಗಂಟೆಗೂ ಹೆಚ್ಚುತ್ತಿದೆ ಮಳೆ ಭೀತಿ
ಭಾರತ vs ಪಾಕಿಸ್ತಾನ ಪಂದ್ಯಕ್ಕೆ ನ್ಯೂಯಾರ್ಕ್‌ನಲ್ಲಿ ಗಂಟೆ ಗಂಟೆಗೂ ಹೆಚ್ಚುತ್ತಿದೆ ಮಳೆ ಭೀತಿ (AFP)

ಟಿ20 ವಿಶ್ವಕಪ್‌ 2024ರಲ್ಲಿ ಬಹುನಿರೀಕ್ಷಿತ ಪಂದ್ಯದ ದಿನ ಬಂದೇ ಬಿಟ್ಟಿದೆ. ಇಂದು (ಜೂನ್‌ 9) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳ ನಡುವೆ ಅತಿ ರೋಚಕ ಪಂದ್ಯ ನಡೆಯುತ್ತಿದೆ. ನ್ಯೂಯಾರ್ಕ್‌ನಲ್ಲಿ ತಲೆ ಎತ್ತಿರುವ ನಸ್ಸೌ ಕೌಂಟಿ ಕ್ರೀಡಾಂಗಣವು, ಇಂಡೋ-ಪಾಕ್‌ ಮುಖಾಮುಖಿಗೆ ಸಾಕ್ಷಿಯಾಗಲಿದೆ. ಉನ್ನತ ಮಟ್ಟದ ಘರ್ಷಣೆಗೆ ಜಾಗತಿಕ ಕ್ರಿಕೆಟ್‌ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಸವಾಲಿನ ನ್ಯೂಯಾರ್ಕ್ ಪಿಚ್‌ನಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವುದು ಪಂದ್ಯದ ಕೌತುಕ ಹೆಚ್ಚಿಸಿದೆ. ಅಭಿಮಾನಿಗಳ ಎಲ್ಲಾ ನಿರೀಕ್ಷೆಯನ್ನು ಮೀರಿಸಿ, ಇಂದಿನ ಪಂದ್ಯ ನಡೆಯಲು ವರುಣ ಕೃಪೆ ತೋರಬೇಕಾಗಿದೆ. ಹಾಗಿದ್ದರೆ, ಮಹತ್ವ ಪಂದ್ಯಕ್ಕೆ ಹವಾಮಾನ ಹೇಗಿರಲಿದೆ ಎಂಬುದನ್ನು ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

ಆಕ್ಯುವೆದರ್ ಪ್ರಕಾರ, ಪಂದ್ಯದ ಸಮಯದಲ್ಲಿ ನ್ಯೂಯಾರ್ಕ್‌ನಲ್ಲಿ ಮಳೆಯಾಗುವ ಸಾಧ್ಯತೆ ಸುಮಾರು 40 ಶೇಕಡದಷ್ಟಿದೆ. ಒಟ್ಟಾರೆಯಾಗಿ ಸುಮಾರು 1 ಗಂಟೆಗಳ ಕಾಲ ವರುಣ ಆರ್ಭಟ ಮೆರೆಯುವ ನಿರೀಕ್ಷೆಯಿದೆ.

ಮುಖ್ಯವಾಗಿ ಭಾರತದ ಕಾಲಮಾನಕ್ಕೂ ಅಮೆರಿಕದ ಸಮಯಕ್ಕೂ ವ್ಯತ್ಯಾಸವಿದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯವು ಅಮೆರಿಕದಲ್ಲಿ (ಸ್ಥಳೀಯ ಕಾಲಮಾನ) ಬೆಳಗ್ಗೆ 10:30ಕ್ಕೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆಯು ಬೆಳಗ್ಗೆ 10:00 ಗಂಟೆಗೆ ನಡೆಯಲಿದೆ. ಆದರೆ, ಭಾರತದಲ್ಲಿ ಇದು ರಾತ್ರಿ ಸಮಯ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 8 ಗಂಟೆಗೆ ಪಂದ್ಯ ಆರಂಭವಾದರೆ, 7.30ಕ್ಕೆ ಟಾಸ್‌ ನಡೆಯಲಿದೆ.

ಅಮೆರಿಕದಲ್ಲಿ ಇಂದು ಬೆಳಗ್ಗಿನಿಂದಲೇ (ಭಾರತದಲ್ಲಿ ರಾತ್ರಿ) ಮಳೆಯಾಗುವ ಸಾಧ್ಯತೆಗಳಿವೆ. ಅಲ್ಲಿ ಬೆಳಗ್ಗೆ 8 ಗಂಟೆ, ಅಂದರೆ ಪಂದ್ಯ ಆರಂಭಕ್ಕೂ 2 ಗಂಟೆ ಮುಂಚಿತವಾಗಿ ಮಳೆಯ ಸಾಧ್ಯತೆ 11 ಶೇಕಡಾದಷ್ಟಿದೆ. ಪಂದ್ಯ ಆರಂಭವಾಗಿ ಒಂದು ಗಂಟೆ ಬಳಿಕ ಈ ಸಾಧ್ಯತೆ 47ಕ್ಕೆ ಏರಿಕೆಯಾಗುತ್ತದೆ. ಹವಾಮಾನ ಮುನ್ಸೂಚನೆ ಪ್ರಕಾರ ಪಂದ್ಯಕ್ಕೆ ಮಳೆ ಅಡ್ಡಿಯಾಗುವುದು ಖಚಿತವಾಗಿದೆ.

ಜೂನ್ 09ರ ಭಾನುವಾರ ನ್ಯೂಯಾರ್ಕ್ ಹವಾಮಾನ ವರದಿ ಹೀಗಿದೆ (ಮಳೆಯಾಗುವ ಸಾಧ್ಯತೆ)

  • ಅಮೆರಿಕದಲ್ಲಿ ಬೆಳಗ್ಗೆ 8:00 ಗಂಟೆ (ಭಾರತದಲ್ಲಿ ಸಂಜೆ 5.30 ಗಂಟೆ): 11 ಶೇಕಡಾ
  • 9:00 (ಭಾರತದಲ್ಲಿ ಸಂಜೆ 6.30 ಗಂಟೆ): 11 ಶೇಕಡಾ
  • 10:00 (ಭಾರತದಲ್ಲಿ ಸಂಜೆ 7.30 ಗಂಟೆ): 15 ಶೇಕಡಾ
  • 11:00 (ಭಾರತದಲ್ಲಿ ರಾತ್ರಿ 8.30 ಗಂಟೆ): 47 ಶೇಕಡಾ
  • 12:00 (ಭಾರತದಲ್ಲಿ ರಾತ್ರಿ 9.30 ಗಂಟೆ): 51 ಶೇಕಡಾ
  • 1:00 (ಭಾರತದಲ್ಲಿ ರಾತ್ರಿ 10.30 ಗಂಟೆ): 44 ಶೇಕಡಾ
  • 2:00 (ಭಾರತದಲ್ಲಿ ರಾತ್ರಿ 11.30 ಗಂಟೆ): 25 ಶೇಕಡಾ
  • 3:00 (ಭಾರತದಲ್ಲಿ ರಾತ್ರಿ 12.30 ಗಂಟೆ): 20 ಶೇಕಡಾ
  • 4:00 (ಭಾರತದಲ್ಲಿ ರಾತ್ರಿ 1.30 ಗಂಟೆ): 20 ಶೇಕಡಾ

ಪಂದ್ಯ ರದ್ದಾದರೆ ಮೀಸಲು ದಿನ ಇದೆಯೇ?

ಈ ಬಾರಿಯ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಗುಂಪು ಹಂತದ ಯಾವುದೇ ಪಂದ್ಯಗಳಿಗೂ ಮೀಸಲು ದಿನ ನಿಗದಿಪಡಿಸಿಲ್ಲ. ಪಂದ್ಯ ರದ್ದಾದರೆ, ಉಭಯ ತಂಡಗಳಿಗೂ ತಲಾ 1 ಅಂಕ ನೀಡಾಗುತ್ತದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಸೋತಿರುವ ಪಾಕ್, ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅತ್ತ, ಸೂಪರ್‌ ಫೋರ್‌ ಹಂತಕ್ಕೆ ಮುನ್ನಡೆಯಲು ಭಾರತಕ್ಕೂ ಈ ಗೆಲುವು ಅನಿವಾರ್ಯವಾಗಿದೆ.

ಟಿ20 ವರ್ಲ್ಡ್‌ಕಪ್ 2024