2024ರ ಟಿ20 ವಿಶ್ವಕಪ್ ಪಂದ್ಯಗಳ ಟಿಕೆಟ್ ಈ ದಿನಾಂಕದಿಂದ ಮಾರಾಟ; ಭಾರತದ ಪಂದ್ಯಗಳ ಟಿಕೆಟ್‌ಗೆ ಭಾರಿ ಬೇಡಿಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  2024ರ ಟಿ20 ವಿಶ್ವಕಪ್ ಪಂದ್ಯಗಳ ಟಿಕೆಟ್ ಈ ದಿನಾಂಕದಿಂದ ಮಾರಾಟ; ಭಾರತದ ಪಂದ್ಯಗಳ ಟಿಕೆಟ್‌ಗೆ ಭಾರಿ ಬೇಡಿಕೆ

2024ರ ಟಿ20 ವಿಶ್ವಕಪ್ ಪಂದ್ಯಗಳ ಟಿಕೆಟ್ ಈ ದಿನಾಂಕದಿಂದ ಮಾರಾಟ; ಭಾರತದ ಪಂದ್ಯಗಳ ಟಿಕೆಟ್‌ಗೆ ಭಾರಿ ಬೇಡಿಕೆ

T20 World Cup 2024: ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ ಪಂದ್ಯಾವಳಿಯ 13 ಹೆಚ್ಚುವರಿ ಪಂದ್ಯಗಳ ಟಿಕೆಟ್‌ಗಳನ್ನು ಮುಂದಿನ ವಾರ ಬಿಡುಗಡೆ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ. ಅಮೆರಿಕದಲ್ಲಿ ನಡೆಯುವ ಭಾರತದ ಪಂದ್ಯಗಳ ಟಿಕೆಟ್‌ಗೆ ಬೇಡಿಕೆ ಹೆಚ್ಚಿದ್ದು, ಈ ಟೆಕೆಟ್‌ಗಳ ಬೆಲೆ ಕೂಡಾ ಹೆಚ್ಚಾಗಿದೆ.

ಟಿ20 ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರ್ಚ್ 19ರಿಂದ ಮಾರಾಟ
ಟಿ20 ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರ್ಚ್ 19ರಿಂದ ಮಾರಾಟ (AFP)

ಐಪಿಎಲ್‌ ಪಂದ್ಯಾವಳಿ ಮುಗಿಯುತ್ತಿದ್ದಂತೆಯೇ, ಜಾಗತಿಕ ಕ್ರೀಡಾಸಕ್ತರ ಚಿತ್ತವು ಟಿ20 ವಿಶ್ವಕಪ್‌ನತ್ತ ವರ್ಗಾವಣೆಯಾಗಲಿದೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 13 ಪಂದ್ಯಗಳ ಹೆಚ್ಚುವರಿ ಟಿಕೆಟ್‌ಗಳನ್ನು ಮುಂದಿನ ವಾರ ಬಿಡುಗಡೆ ಮಾಡುವುದಾಗಿ ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಟೂರ್ನಿಯ 37 ಪಂದ್ಯಗಳ ಟಿಕೆಟ್‌ಗಳನ್ನು ಈಗಾಗಲೇ ಮಾರಾಟಕ್ಕೆ ಬಿಡಲಾಗಿದೆ. ಭಾರತ ಮತ್ತು ಐರ್ಲೆಂಡ್ ಪಂದ್ಯ ಸೇರಿದಂತೆ ಚುಟುಕು ವಿಶ್ವಕಪ್‌ನ ಹೆಚ್ಚುವರಿ ಟಿಕೆಟ್‌ಗಳು ಮಾರ್ಚ್ 19ರಿಂದ ಮಾರಾಟವಾಗಲಿವೆ.

ಮಹತ್ವದ ಟಿ20 ವಿಶ್ವಕಪ್‌ ಪಂದ್ಯಾವಳಿಯು ಜೂನ್‌ 01ರಂದು ಆರಂಭವಾಗಲಿದೆ. ಭಾರತ ತಂಡದ ಆಭಿಯಾನವು ಜೂನ್ 5ರಂದು ಆರಂಭವಾಗಲಿದೆ. ನ್ಯೂಯಾರ್ಕ್‌ಲ್ಲಿ ಐರ್ಲೆಂಡ್ ವಿರುದ್ಧ ರೋಹಿತ್‌ ಶರ್ಮಾ ಪಡೆ ಮೊದಲ ಪಂದ್ಯ ಆಡಲಿದೆ. ಆ ಬಳಿಕ ಜೂನ್ 9ರಂದು ಇದೇ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಹೀಗಾಗಿ ಭಾರತದ ಪಂದ್ಯಗಳ ಟಿಕೆಟ್‌ಗಳಿಗೆ ವ್ಯಾಪಕ ಬೇಡಿಕೆ ಇವೆ. ಅದರಲ್ಲೂ ಅಮೆರಿಕದಲ್ಲಿ ಅನಿವಾಸಿ ಭಾರತೀಯರ ಸಂಖ್ಯೆ ಹೆಚ್ಚಿದ್ದು, ಭಾರತದ ಪಂದ್ಯಗಳಿಗೆ ಸ್ಟೇಡಿಯಂ ಭರ್ತಿಯಾಗುವುದರಲ್ಲಿ ಅನುಮಾನವಿಲ್ಲ.

ಜೂನ್ 1ರಿಂದ ಆರಂಭವಾಗುವ ಪಂದ್ಯಾವಳಿಯ ಟಿಕೆಟ್ ಮಾರಾಟವನ್ನು ಫೆಬ್ರವರಿ 1ರಂದು ಸಾರ್ವಜನಿಕಗೊಳಿಸಲಾಗಿದೆ. ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಕೆಲವು ಆಯ್ದ ಪಂದ್ಯಗಳ ಟಿಕೆಟ್‌ ದರವು 6 ಡಾಲರ್‌ನಿಂದ ಆರಂಭವಾದರೆ, ಯುಎಸ್ಎ ಮೈದಾನಗಳಲ್ಲಿ ನಡೆಯುವ ಪಂದ್ಯಗಳ ಬೆಲೆಯು 35 ಡಾಲರ್‌ನಿಂದ ಆರಂಭವಾಗುತ್ತವೆ.

ಇದನ್ನೂ ಓದಿ | ಐಪಿಎಲ್‌ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೆ ಹಿನ್ನಡೆ; ಬ್ರೂಕ್‌ ಬಳಿಕ ಲುಂಗಿ ಎನ್‌ಗಿಡಿ ಔಟ್, ಬದಲಿ ಘೋಷಣೆ

ಹೈವೋಲ್ಟೇಜ್‌ ಟೂರ್ನಮೆಂಟ್‌ ಟಿಕೆಟ್‌ಗಳಿಗೆ ಭಾರಿ ಬೇಡಿಕೆಯಿದೆ. ಟಿಕೆಟ್‌ಗಾಗಿ 3 ಮಿಲಿಯನ್‌ಗಿಂತಲೂ (30 ಲಕ್ಷ) ಹೆಚ್ಚು ಟಿಕೆಟ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.

ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಟೂರ್ನಿಯ ಪಂದ್ಯಗಳು ನಡೆಯುತ್ತಿದ್ದು, ಮೂರು ಸ್ಥಳಗಳಲ್ಲಿ ಒಟ್ಟು 16 ಪಂದ್ಯಗಳಿಗೆ ಯುಎಸ್‌ಎ ಆತಿಥ್ಯ ವಹಿಸಲಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 20 ತಂಡಗಳನ್ನು ಭಾಗವಹಿಸಲಿದ್ದು, 9 ಮೈದಾನಗಳಲ್ಲಿ 55 ಪಂದ್ಯಗಳು ನಡೆಯಲಿವೆ. ಜೂನ್ 26 ಮತ್ತು 27ರಂದು ಟ್ರಿನಿಡಾಡ್ ಮತ್ತು ಗಯಾನಾದಲ್ಲಿ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಇದರ ಟಿಕೆಟ್‌ಗಳನ್ನು ಮಾರ್ಚ್‌ 19ರಂದು ಬಿಡುಗಡೆ ಮಾಡಲಾಗುತ್ತಿದೆ.

ಭಾರತದ ಗುಂಪು ಹಂತದ ಪಂದ್ಯಗಳ ವೇಳಾಪಟ್ಟಿ

  • ಭಾರತ vs ಐರ್ಲೆಂಡ್ - ಜೂನ್ 5
  • ಭಾರತ vs ಪಾಕಿಸ್ತಾನ - ಜೂನ್ 9
  • ಭಾರತ vs ಯುಎಸ್‌ಎ - ಜೂನ್ 12
  • ಭಾರತ vs ಕೆನಡಾ - ಜೂನ್ 15

ಇದನ್ನೂ ಓದಿ | WPL 2024 Eliminator: ಮುಂಬೈ vs ಆರ್​ಸಿಬಿ ಪ್ಲೇಯಿಂಗ್ XI ಹೀಗಿದೆ; ಹವಾಮಾನ, ಪಿಚ್, ಲೈವ್ ಸ್ಟ್ರೀಮಿಂಗ್ ವಿವರ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner