ಟಿ20 ವಿಶ್ವಕಪ್ನಲ್ಲಿ ಸೂಪರ್-8 ಅರ್ಹತೆ ಲೆಕ್ಕಾಚಾರ; ಆತಂಕಕ್ಕೆ ಸಿಲುಕಿದ ಹಾಲಿ ಚಾಂಪಿಯನ್-ರನ್ನರ್ಅಪ್ ತಂಡಗಳು
ICC T20 World Cup 2024: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಸೂಪರ್-8 ಪ್ರವೇಶಿಸಿದ ತಂಡಗಳು ಯಾವುವು, ಯಾವ ತಂಡಗಳು ಹೊರ ಬೀಳುವ ಆತಂಕಕ್ಕೆ ಸಿಲುಕಿವೆ? ಇಲ್ಲಿದೆ ವಿವರ.

ಐಸಿಸಿ ಟಿ20 ವಿಶ್ವಕಪ್ 2024 ಲೀಗ್ (ICC T20 World Cup 2024) ಮುಕ್ತಾಯದ ಹಂತ ತಲುಪಿದ್ದು, ದಿನದಿಂದ ದಿನಕ್ಕೆ ರೋಚಕತೆ ಹೆಚ್ಚುತ್ತಿದೆ. ಅಚ್ಚರಿಯ ಫಲಿತಾಂಶಗಳು ಹೊರ ಬರುತ್ತಿವೆ. ಪ್ರಮುಖ ತಂಡಗಳೇ ಸೂಪರ್-8 ಹಂತಕ್ಕೆ ಪ್ರವೇಶಿಸಲು ಹೆಣಗಾಡುತ್ತಿವೆ. ಈ ಪೈಕಿ ಹಾಲಿ ಚಾಂಪಿಯನ್ ಇಂಗ್ಲೆಂಡ್ (England), ರನ್ನರ್ಅಪ್ ಪಾಕಿಸ್ತಾನ (Pakistan) ಮತ್ತು ನ್ಯೂಜಿಲೆಂಡ್ (New Zealand) ತಂಡಗಳೇ ಲೀಗ್ನಿಂದಲೇ ಹೊರಬೀಳುವ ಆತಂಕಕ್ಕೆ ಸಿಲುಕಿವೆ. ಸೂಪರ್ 8 ಅರ್ಹತಾ ಸುತ್ತು ಹೇಗಿದೆ ಎಂಬುದರ ವಿವರ ಇಲ್ಲಿದೆ.
ಸೂಪರ್-8 ಪ್ರವೇಶಿಸಿದ ಪ್ರಮುಖ ತಂಡಗಳು
ಜೂನ್ 1 ರಿಂದ ಶುರುವಾದ ವಿಶ್ವಕಪ್ ಜೂನ್ 13ರ ತನಕ 26 ಲೀಗ್ ಪಂದ್ಯಗಳು ನಡೆದಿವೆ. ಒಟ್ಟು 20 ತಂಡಗಳ ನಡುವಿನ ಹೋರಾಟದಲ್ಲಿ ಪ್ರಸ್ತುತ 4 ತಂಡಗಳಷ್ಟೇ ಸೂಪರ್-8ಕ್ಕೆ ಅರ್ಹತೆ ಪಡೆದುಕೊಂಡಿವೆ. ಜೂನ್ 17ರ ತನಕ 40 ಗ್ರೂಪ್ ಪಂದ್ಯಗಳು ನಡೆಯಲಿದ್ದು, ಸೂಪರ್-8ಕ್ಕೆ ಅರ್ಹತೆ ಪಡೆದುಕೊಳ್ಳಲು 4 ಸ್ಥಾನಗಳಿಗೆ ಪೈಪೋಟಿ ನಡೆಯುತ್ತಿದೆ. ಈಗಾಗಲೇ ಕೆಲ ದುರ್ಬಲ ತಂಡಗಳು ಎಲಿಮಿನೇಟ್ ಆಗಿವೆ.
ಎಲ್ಲಾ ನಾಲ್ಕು ಗುಂಪುಗಳಲ್ಲಿ ತಲಾ ಮೂರು ಪಂದ್ಯ ಗೆದ್ದಿರುವ ಭಾರತ (ಗ್ರೂಪ್ ಎ), ಆಸ್ಟ್ರೇಲಿಯಾ (ಗ್ರೂಪ್ ಬಿ), ವೆಸ್ಟ್ ಇಂಡೀಸ್ (ಗ್ರೂಪ್ ಸಿ), ಸೌತ್ ಆಫ್ರಿಕಾ (ಗ್ರೂಪ್ ಡಿ) ತಂಡಗಳು ಸೂಪರ್ 8ಕ್ಕೆ ಅರ್ಹತೆ ಪಡೆದುಕೊಂಡಿವೆ. ಗ್ರೂಪ್ ಬಿನಲ್ಲಿ ನಮೀಬಿಯಾ ಮತ್ತು ಓಮನ್ ತಂಡಗಳು ಎಲಿಮಿನೇಟ್ ಆಗಿವೆ. ಆದರೀಗ ಪ್ರಮುಖ ತಂಡಗಳೇ ಹೊರ ಬೀಳುವ ಆತಂಕಕ್ಕೆ ಸಿಲುಕಿವೆ.
ಚಾಂಪಿಯನ್-ರನ್ನರ್ಅಪ್ ತಂಡಗಳಿಗೇ ಆತಂಕ
2022ರ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ಮತ್ತು ರನ್ನರ್ಅಪ್ ಪಾಕಿಸ್ತಾನ ತಂಡಗಳೇ ಹೊರಬೀಳುವ ಭೀತಿಗೆ ಸಿಲುಕಿವೆ. ಪ್ರಸ್ತುತ ಎ ಗುಂಪಿನಲ್ಲಿರುವ 3 ಪಂದ್ಯಗಳಲ್ಲಿ 1 ಗೆದ್ದಿದ್ದು, ಉಳಿದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೆ ಈ ಗುಂಪಿನಲ್ಲಿ ಅಮೆರಿಕ ಸೋಲಬೇಕು. ಒಂದು ಅಮೆರಿಕ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ರನ್ನರ್ಅಪ್ ಪಾಕ್ ಹೊರಬೀಳುವ ಆತಂಕಕ್ಕೆ ಸಿಲುಕಿದೆ.
ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೂಡ ಲೀಗ್ನಿಂದ ಹೊರಬೀಳುವ ಆತಂಕದ ಸುಳಿಗೆ ಸಿಲುಕಿದೆ. ಈ ಗುಂಪಿನಲ್ಲಿ ಆಸೀಸ್ ಈಗಾಗಲೇ ಸೂಪರ್-8 ಪ್ರವೇಶಿಸಿದೆ. ಮತ್ತೊಂದೆಡೆ ಸ್ಕಾಟ್ಲೆಂಡ್ 3ರಲ್ಲಿ ಎರಡು ಪಂದ್ಯ ಗೆದ್ದಿದ್ದು, ಮತ್ತೊಂದು ಪಂದ್ಯ ರದ್ದಾಗಿದೆ. ಇಂಗ್ಲೆಂಡ್ ಆಡಿದ ಎರಡರಲ್ಲಿ ಒಂದು ಸೋಲು, 1 ರದ್ದುಗೊಂಡಿದೆ. ಈಗ ಉಳಿದ 2 ಪಂದ್ಯಗಳಲ್ಲಿ ಆಂಗ್ಲರು ಗೆಲ್ಲುವುದು ಅನಿವಾರ್ಯ. ಒಂದು ವೇಳೆ ಮಳೆಯಿಂದ ಒಂದು ರದ್ದಾದರೂ ಅಥವಾ ಒಂದು ಪಂದ್ಯ ಸೋತರೂ ಲೀಗ್ನಿಂದಲೇ ಹೊರ ಬೀಳುವುದು ಖಚಿತ.
ನ್ಯೂಜಿಲೆಂಡ್ ತಂಡಕ್ಕೂ ಆತಂಕ
ಬಲಿಷ್ಠ ತಂಡಗಳ ಪೈಕಿ ನ್ಯೂಜಿಲೆಂಡ್ ಕೂಡ ಲೀಗ್ನಿಂದಲೇ ಹೊರ ಬೀಳುವ ಭೀತಿಗೆ ಸಿಲುಕಿದೆ. ಸಿ ಗುಂಪಿನಲ್ಲಿ ವೆಸ್ಟ್ ಇಂಡೀಸ್ ಈಗಾಗಲೇ ಸೂಪರ್-8ಕ್ಕೆ ಅರ್ಹತೆ ಪಡೆದುಕೊಂಡಿದೆ. ಈಗಾಗಲೇ ಅಫ್ಘಾನಿಸ್ತಾನ ಎರಡಕ್ಕೆ ಎರಡು ಗೆದ್ದಿದ್ದು, ಉಳಿದ ಎರಡಲ್ಲಿ ಒಂದು ಗೆದ್ದರೆ ಕಿವೀಸ್ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳುತ್ತದೆ. ಕಿವೀಸ್ ಸೂಪರ್-8ಕ್ಕೆ ಅರ್ಹತೆ ಪಡೆದುಕೊಳ್ಳಬೇಕೆಂದರೆ, ಅಫ್ಘನ್ ಇರುವ ಎರಡರಲ್ಲಿ ಸೋಲು ಕಾಣಬೇಕು. ಆಗ ಕಿವೀಸ್ ತನ್ನ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಬೇಕು. ಶ್ರೀಲಂಕಾ ಸಹ ಹೊರಬೀಳುವುದು ಖಚಿತವಾಗಿದೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ