ಅಂಡರ್​-19 ಮಹಿಳೆಯರ ಟಿ20 ವಿಶ್ವಕಪ್ 2025: ಭಾರತದ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್, ತಂಡಗಳ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂಡರ್​-19 ಮಹಿಳೆಯರ ಟಿ20 ವಿಶ್ವಕಪ್ 2025: ಭಾರತದ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್, ತಂಡಗಳ ವಿವರ

ಅಂಡರ್​-19 ಮಹಿಳೆಯರ ಟಿ20 ವಿಶ್ವಕಪ್ 2025: ಭಾರತದ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್, ತಂಡಗಳ ವಿವರ

ICC U19 Womens T20 World Cup 2025: ಜನವರಿ 18ರಿಂದ ಐಸಿಸಿ ಅಂಡರ್​-19 ಮಹಿಳೆಯರ ಟಿ20 ವಿಶ್ವಕಪ್​ ಪ್ರಾರಂಭವಾಗಲಿದೆ. ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳು, ಲೈವ್ ಸ್ಟ್ರೀಮಿಂಗ್ ವಿವರ, ಎಲ್ಲಿ ವೀಕ್ಷಿಸಬೇಕು ಎಂಬುದರ ವಿವರ ಇಲ್ಲಿದೆ.

ಅಂಡರ್​-19 ಮಹಿಳೆಯರ ಟಿ20 ವಿಶ್ವಕಪ್ 2025: ಭಾರತದ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್, ತಂಡಗಳ ವಿವರ
ಅಂಡರ್​-19 ಮಹಿಳೆಯರ ಟಿ20 ವಿಶ್ವಕಪ್ 2025: ಭಾರತದ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್, ತಂಡಗಳ ವಿವರ

2023ರಲ್ಲಿ ಆರಂಭವಾದ ಐಸಿಸಿ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಗೆದ್ದಿರುವ ಭಾರತ ತಂಡ (Indian Cricket Team), ಈಗ ಎರಡನೇ ಆವೃತ್ತಿಯ ಟೂರ್ನಿಯಲ್ಲೂ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸಜ್ಜಾಗಿದೆ. ಜನವರಿ 18 ರಿಂದ ಮಲೇಷ್ಯಾದಲ್ಲಿ ಪ್ರಾರಂಭವಾಗುವ ವಿಶ್ವಕಪ್​ನಲ್ಲಿ ಯುವ ಘಟಕವನ್ನು ಕನ್ನಡತಿ ನಿಕ್ಕಿ ಪ್ರಸಾದ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ ಇಂಗ್ಲೆಂಡ್ ತಂಡವನ್ನು ಮಣಿಸಿದ್ದ ಶಫಾಲಿ ವರ್ಮಾ ನಾಯಕತ್ವದ ತಂಡ ಚೊಚ್ಚಲ ಟೂರ್ನಿಯಲ್ಲೇ ಚೊಚ್ಚಲ ಚಾಂಪಿಯನ್ ಆಗಿತ್ತು.

ಟಿ20 ವಿಶ್ವಕಪ್‌ನಲ್ಲಿ ಭಾರತ ಮಹಿಳಾ ಅಂಡರ್-19 ತಂಡವನ್ನು ಮುನ್ನಡೆಸಲಿರುವ ನಿಕ್ಕಿ ಪ್ರಸಾದ್‌ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಭಾರತ ತಂಡವು ಆತಿಥೇಯ ಮಲೇಷ್ಯಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೈ-ಆಕ್ಟೇನ್ ಟೂರ್ನಿಯಲ್ಲಿ 16 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಹಂತದಲ್ಲಿ ಪ್ರತಿ ತಂಡ 3 ಪಂದ್ಯಗಳನ್ನು ಆಡಲಿದ್ದು, ಗುಂಪಿನಿಂದ ಅಗ್ರ 3 ತಂಡಗಳು ಸೂಪರ್ ಸಿಕ್ಸ್​ಗೆ ಅರ್ಹವಾಗುತ್ತವೆ.

ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳು, ಲೈವ್ ಸ್ಟ್ರೀಮಿಂಗ್ ವಿವರ, ಎಲ್ಲಿ ವೀಕ್ಷಿಸಬೇಕು, ಭಾರತೀಯ ಕಾಲಮಾನದಲ್ಲಿ ಎಷ್ಟೊತ್ತಿಗೆ ಪಂದ್ಯಗಳು ಆರಂಭವಾಗುತ್ತವೆ ಎಂಬುದರ ವಿವರ ಇಲ್ಲಿದೆ.

ಲೈವ್​ ಸ್ಟ್ರೀಮಿಂಗ್ ಮತ್ತು ನೇರ ಪ್ರಸಾರ

ಭಾರತೀಯ ಕಾಲಮಾಲ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಪಂದ್ಯಗಳು ಆರಂಭವಾಗಲಿವೆ. ಪಂದ್ಯಗಳನ್ನು ಸ್ಟಾರ್​ ಸ್ಪೋರ್ಟ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್​ನಲ್ಲಿ ವೀಕ್ಷಿಸಬಹುದು.

ಅಂಡರ್-19 ಮಹಿಳಾ ಟಿ20 ವಿಶ್ವಕಪ್ 2025: ಗುಂಪುಗಳು

ಗುಂಪು ಎ: ಭಾರತ, ಮಲೇಷ್ಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್

ಗುಂಪು ಬಿ: ಇಂಗ್ಲೆಂಡ್, ಐರ್ಲೆಂಡ್, ಪಾಕಿಸ್ತಾನ, ಯುಎಸ್​ಎ

ಗುಂಪು ಸಿ: ನ್ಯೂಜಿಲೆಂಡ್, ನೈಜೀರಿಯಾ, ಸಮೋವಾ, ದಕ್ಷಿಣ ಆಫ್ರಿಕಾ

ಗುಂಪು ಡಿ: ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೇಪಾಳ, ಸ್ಕಾಟ್ಲೆಂಡ್

ಭಾರತದ ಪೂರ್ಣ ತಂಡ

ನಿಕ್ಕಿ ಪ್ರಸಾದ್ (ನಾಯಕ), ಸನಿಕಾ ಚಾಲ್ಕೆ, ಜಿ ತ್ರಿಶಾ, ಕಮಲಿನಿ ಜಿ, ಭಾವಿಕಾ ಅಹಿರೆ, ಈಶ್ವರಿ ಅವಸಾರೆ, ಮಿಥಿಲಾ ವಿನೋದ್, ಜೋಶಿತಾ ವಿಜೆ, ಸೋನಮ್ ಯಾದವ್, ಪರುಣಿಕಾ ಸಿಸೋಡಿಯಾ, ಕೇಸರಿ ದೃತಿ, ಆಯುಷಿ ಶುಕ್ಲಾ, ಆನಂದಿತ ಕಿಶೋರ್, ಎಂಡಿ ಶಬ್ನಮ್, ವೈಷ್ಣವಿ ಎಸ್.

ಭಾರತದ ಪೂರ್ಣ ವೇಳಾಪಟ್ಟಿ
ಪಂದ್ಯ ಸಂತಂಡಗಳುಸ್ಥಳದಿನಾಂಕಸಮಯ
ಪಂದ್ಯ 8ಭಾರತ vs ವೆಸ್ಟ್ ಇಂಡೀಸ್ಬೇಯುಮಾಸ್ ಓವಲ್, ಕೌಲಾಲಂಪುರ್19-ಜನವರಿ-2512:00
ಪಂದ್ಯ 16ಭಾರತ vs ಮಲೇಷ್ಯಾ ಬೇಯುಮಾಸ್ ಓವಲ್, ಕೌಲಾಲಂಪುರ್21-ಜನವರಿ-2512:00
ಪಂದ್ಯ 24ಭಾರತ vs ಶ್ರೀಲಂಕಾಬೇಯುಮಾಸ್ ಓವಲ್, ಕೌಲಾಲಂಪುರ್23-ಜನವರಿ-2512:00
ಸೂಪರ್ ಸಿಕ್ಸ್ ಪಂದ್ಯ 8A1 vs D3ಬೇಯುಮಾಸ್ ಓವಲ್, ಕೌಲಾಲಂಪುರ್29-ಜನವರಿ-2512:00
ಸೂಪರ್ ಸಿಕ್ಸ್ ಪಂದ್ಯ 12A1 vs D1YSD-UKM ಕ್ರಿಕೆಟ್ ಓವಲ್, ಬಾಂಗಿ31-ಜನವರಿ-2512:00
ಸೆಮಿಫೈನಲ್ 1ಟಿಬಿಸಿಬೇಯುಮಾಸ್ ಓವಲ್, ಕೌಲಾಲಂಪುರ್31-ಜನವರಿ-2508:00
ಸೆಮಿಫೈನಲ್ 2ಟಿಬಿಸಿಬೇಯುಮಾಸ್ ಓವಲ್, ಕೌಲಾಲಂಪುರ್31-ಜನವರಿ-2512:00
ಅಂತಿಮಟಿಬಿಸಿಬೇಯುಮಾಸ್ ಓವಲ್, ಕೌಲಾಲಂಪುರ್02-ಫೆಬ್ರವರಿ-2512:00
Whats_app_banner