ವಿಶ್ವಕಪ್‌ಗಾಗಿ 2 ಮ್ಯಾಸ್ಕಾಟ್‌ಗಳ ಬಿಡುಗಡೆ; ನೀವೇ ಹೆಸರಿಡಿ ಎಂದು ಫ್ಯಾನ್ಸ್‌ಗೆ ಕೇಳಿದ ಐಸಿಸಿ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್‌ಗಾಗಿ 2 ಮ್ಯಾಸ್ಕಾಟ್‌ಗಳ ಬಿಡುಗಡೆ; ನೀವೇ ಹೆಸರಿಡಿ ಎಂದು ಫ್ಯಾನ್ಸ್‌ಗೆ ಕೇಳಿದ ಐಸಿಸಿ

ವಿಶ್ವಕಪ್‌ಗಾಗಿ 2 ಮ್ಯಾಸ್ಕಾಟ್‌ಗಳ ಬಿಡುಗಡೆ; ನೀವೇ ಹೆಸರಿಡಿ ಎಂದು ಫ್ಯಾನ್ಸ್‌ಗೆ ಕೇಳಿದ ಐಸಿಸಿ

ಐಸಿಸಿ ವತಿಯಿಂದ ಏಕದಿನ ವಿಶ್ವಕಪ್‌ಗಾಗಿ ಮ್ಯಾಸ್ಕಾಟ್‌ಗಳ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 19 ರಂದು ಗುರುಗ್ರಾಮ್‌ನಲ್ಲಿ ನಡೆದಿದೆ. ಭಾರತದ ಅಂಡರ್-19 ಮಹಿಳಾ ಮತ್ತು ಪುರುಷರ ವಿಜೇತ ತಂಡಗಳ ನಾಯಕರಾದ ಶಫಾಲಿ ವರ್ಮಾ ಮತ್ತು ಯಶ್ ಧುಲ್ ಮ್ಯಾಸ್ಕಾಟ್‌ಗಳ ಮುಂದೆ ನಿಂತು ಫೋಸ್ ನೀಡಿದ್ದಾರೆ.

ಏಕದಿನ ವಿಶ್ವಕಪ್‌ಗಾಗಿ ಐಸಿಸಿ ಬಿಡುಗಡೆ ಮಾಡಿರುವ ಮ್ಯಾಸ್ಕಾಟ್‌ಗಳ ಮುಂದೆ ನಿಂತು ಫೋಟೋಗೆ ಫೋಸ್ ನೀಡಿದ ಭಾರತದ 19ರೊಳಗಿನ ಮಹಿಳಾ ಮತ್ತು ಪುರುಷರ ವಿಜೇತ ತಂಡಗಳ ನಾಯಕರಾದ ಶಫಾಲಿ ವರ್ಮಾ ಮತ್ತು ಯಶ್ ಧುಲ್.
ಏಕದಿನ ವಿಶ್ವಕಪ್‌ಗಾಗಿ ಐಸಿಸಿ ಬಿಡುಗಡೆ ಮಾಡಿರುವ ಮ್ಯಾಸ್ಕಾಟ್‌ಗಳ ಮುಂದೆ ನಿಂತು ಫೋಟೋಗೆ ಫೋಸ್ ನೀಡಿದ ಭಾರತದ 19ರೊಳಗಿನ ಮಹಿಳಾ ಮತ್ತು ಪುರುಷರ ವಿಜೇತ ತಂಡಗಳ ನಾಯಕರಾದ ಶಫಾಲಿ ವರ್ಮಾ ಮತ್ತು ಯಶ್ ಧುಲ್.

ದೆಹಲಿ: ಭಾರತದಲ್ಲಿ ಅಕ್ಟೋಬರ್‌ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ (ICC ODI World Cup 2023) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ-ಐಸಿಸಿ (ICC) ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಲು ಹೊಸ ಹೊಸ ಪ್ರಯೋಗಗಳಿಗೆ ಮುಂದಾಗಿದೆ.

ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಶನಿವಾರ (ಆಗಸ್ಟ್ 19) ಎರಡು ಮ್ಯಾಸ್ಕಾಟ್‌ಗಳನ್ನು (Mascots) ಬಿಡುಗಡೆ ಮಾಡಿದೆ. ಅಲ್ಲದೆ, ಈ ನೂತನ ಮ್ಯಾಸ್ಕಾಟ್‌ಗಳಿಗೆ ನೀವೇ ಹೆಸರಿಡಿ ಎಂದು ಕ್ರಿಕೆಟ್ ಅಭಿಮಾನಿಗಳನ್ನು ಕೇಳಿದೆ.

ಮುಂದಿನ ಪೀಳಿಗೆಯ ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸುವ ಜೊತೆಗೆ ಜಗತ್ತಿನಾದ್ಯಂತ ಕ್ರಿಕೆಟ್ ಉತ್ತೇಜಿಸುವ ಹಾಗೂ ಏಕತೆಯನ್ನು ಈ ಮ್ಯಾಸ್ಕಾಟ್‌ಗಳು ಪ್ರತಿನಿಧಿಸುತ್ತವೆ ಎಂದು ಐಸಿಸಿ ಹೇಳಿದೆ.

ಮ್ಯಾಸ್ಕಾಟ್‌ಗಳು ಲಿಂಗ ಸಮಾನತೆ ಮತ್ತು ವೈವಿಧ್ಯತೆಯ ಸಂಕೇತಗಳಾಗಿ ಹೊರಹೊಮ್ಮುವ ವಿಶಿಷ್ಟ ಗುಣಗಳನ್ನು ಹೊಂದಿದ್ದು, ಕ್ರಿಕೆಟ್ ಅಭಿಮಾನಿಗಳು ಭಾಗವಹಿಸುವಿಕೆ ಹಾಗೂ ಪಂದ್ಯಗಳನ್ನು ವೀಕ್ಷಿಸಲು ಮೈದಾನಗಳಲ್ಲಿ ಸೇರುವವರನ್ನು ರಂಜಿಸಲಿವೆ.

ರೋಮಾಂಚಕ ವಾತಾವರಣಕ್ಕೆ ಕೊಂಡ್ಯೊಯುತ್ತವೆ

ರಾಷ್ಟ್ರ ರಾಜಧಾನಿ ದೆಹಲಿ ಸಮೀಪದ ಗುರುಗ್ರಾಮದಲ್ಲಿ ಆಗಸ್ಟ್ 19 (ಶನಿವಾರ) ರಂದು ನಡೆದ ಕಾರ್ಯಕ್ರಮದಲ್ಲಿ ಐಸಿಸಿ ಅಂಡರ್-19 ಮಹಿಳಾ ಮತ್ತು ಪುರುಷರ ವಿಜೇತ ತಂಡಗಳ ನಾಯಕರಾದ ಶಫಾಲಿ ವರ್ಮಾ ಮತ್ತು ಯಶ್ ಧುಲ್ ಮ್ಯಾಸ್ಕಾಟ್‌ಗಳನ್ನು ಅನಾವರಣಗೊಳಿಸಿದ್ದಾರೆ. ಇವು ಅಭಿಮಾನಿಗಳಿಗೆ ಹೊಸ ಅನುಭವದ ಜೊತೆಗೆ ರೋಮಾಂಚಕ ವಾತಾವರಣಕ್ಕೆ ಕೊಂಡ್ಯೊಯುತ್ತವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹೇಳಿದೆ.

ಮ್ಯಾಸ್ಕಾಟ್‌ಗಳಿಗೆ ನೀವೇ ಹೆಸರಿಡಿ ಎಂದು ಐಸಿಸಿ ಕ್ರಿಕೆಟ್ ಅಭಿಮಾನಿಗಳಿಗೆ ಅವಕಾಶ ನೀಡಿದೆ. ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ 2023ಗಾಗಿ ಮ್ಯಾಸ್ಕಾಟ್‌ ಜೋಡಿಯನ್ನು ಅನಾವರಣಗೂಳಿಸಿರುವುದು ಸಂತಸ ತಂದಿದೆ. ಇವು ಸಂಸ್ಕೃತಿ ಮತ್ತು ಗಡಿಗಳನ್ನು ಮೀರಿದ ಕ್ರಿಕೆಟ್‌ನಲ್ಲಿ ಸಾರ್ವತ್ರಿಕ ಆಕರ್ಷಣೆಯಾಗಿದೆ. ಮಾಸ್ಕಾಟ್‌ಗಳು ಏಕತೆ ಮತ್ತು ಉತ್ಸಾಹದ ದಾರಿದೀಪಗಳಾಗಿ ನಿಂತಿವೆ ಎಂದು ಐಸಿಸಿ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿದ್ದಾರೆ.

ಎರಡು ಮ್ಯಾಸ್ಕಾಟ್‌ಗಳು ನಮ್ಮ ಕ್ರಿಯಾತ್ಮಕ ಜಗತ್ತಿನಲ್ಲಿ ಲಿಂಗ ಸಮಾನತೆಯ ಪ್ರಮುಖ ಪಾತ್ರವನ್ನು ನಿರೂಪಿಸುತ್ತವೆ. ಕ್ರಿಕೆಟ್ ಪಂದ್ಯಗಳ ಸಂದರ್ಭಗಳಲ್ಲಿ ಇವು ಮಕ್ಕಳನ್ನು ರಂಜಿಸಲಿವೆ ಎಂದೂ ಟೆಟ್ಲಿ ತಿಳಿಸಿದ್ದಾರೆ.

ಅಕ್ಟೋಬರ್ 14ಕ್ಕೆ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ

ಅಕ್ಟೋಬರ್ 5 ರಿಂದ ಐಸಿಸಿ ಪುರುಷಕ ಏಕದಿನ ವಿಶ್ವಕಪ್ 2023 ಆರಂಭವಾಗಲಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಅಕ್ಟೋಬರ್ 8 ರಂದು ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಆ ನಂತರ ಆಕ್ಟೋಬರ್ 11 ರಂದು ಆಫ್ಘಾನಿಸ್ತಾನ ವಿರುದ್ಧ, ಅಕ್ಟೋಬರ್ 14 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ (India vs Pakistan) ಹೈವೋಲ್ಟೇಜ್ ಪಂದ್ಯವನ್ನು ಆಡಲಿದೆ.

Whats_app_banner