ಇಂದಿನಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ; ಬಾಂಗ್ಲಾ-ಸ್ಕಾಟ್ಲೆಂಡ್ ಮೊದಲ ಫೈಟ್, ಗೂಗಲ್ ಡೂಡಲ್ ವಿಶೇಷ ಗೌರವ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂದಿನಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ; ಬಾಂಗ್ಲಾ-ಸ್ಕಾಟ್ಲೆಂಡ್ ಮೊದಲ ಫೈಟ್, ಗೂಗಲ್ ಡೂಡಲ್ ವಿಶೇಷ ಗೌರವ

ಇಂದಿನಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ; ಬಾಂಗ್ಲಾ-ಸ್ಕಾಟ್ಲೆಂಡ್ ಮೊದಲ ಫೈಟ್, ಗೂಗಲ್ ಡೂಡಲ್ ವಿಶೇಷ ಗೌರವ

9ನೇ ಆವೃತ್ತಿಯ ಐಸಿಸಿ ಮಹಿಳಾ ವಿಶ್ವಕಪ್ 2024 ಟೂರ್ನಿ ಅಕ್ಟೋಬರ್ 3 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಉದ್ಘಾಟನಾ ದಿನ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಬಾಂಗ್ಲಾ ಮತ್ತು ಸ್ಕಾಟ್ಲೆಂಡ್ ಮುಖಾಮುಖಿಯಾಗುತ್ತಿವೆ. ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಗೆ ಗೂಗಲ್ ಡೂಡಲ್ ವಿಶೇಷ ಗೌರವ ಸಲ್ಲಿಸಿದೆ.

ಅಕ್ಟೋಬರ್ 3 ರಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಆರಂಭವಾಗಲಿದೆ. ಗೂಗಲ್ ಡೂಡಲ್ ವಿಶೇಷ ಗೌರವ ಸಲ್ಲಿಸಿದೆ. ಮೊದಲ ಪಂದ್ಯ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ವಿರುದ್ಧ ನಡೆಯಲಿದೆ.
ಅಕ್ಟೋಬರ್ 3 ರಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಆರಂಭವಾಗಲಿದೆ. ಗೂಗಲ್ ಡೂಡಲ್ ವಿಶೇಷ ಗೌರವ ಸಲ್ಲಿಸಿದೆ. ಮೊದಲ ಪಂದ್ಯ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ವಿರುದ್ಧ ನಡೆಯಲಿದೆ.

ಬಹು ನಿರೀಕ್ಷಿತ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2024ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು (ಅಕ್ಟೋಬರ್ 3, ಗುರುವಾರ) ಯುಎಇಯಲ್ಲಿರುವ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಟೂರ್ನಿ ಉದ್ಘಾಟನಾ ದಿನವೇ ಎರಡು ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿರುವ ಈ ಚುಟುಕು ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ಸೇರಿ ಒಟ್ಟು 10 ತಂಡಗಳು ಭಾಗವಹಿಸಿವೆ. ಮೊದಲ ಪಂದ್ಯ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ಮಹಿಳಾ ತಂಡಗಳ ನಡುವೆ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಎರಡನೇ ಪಂದ್ಯ ಶರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲೇ ಪಾಕಿಸ್ತಾನ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವೆ ನಡೆಯಲಿದೆ. ಐಸಿಸಿ ಮಹಿಳಾ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ.

ಮಹಿಳಾ ಬ್ಯಾಟರ್ ಒಬ್ಬರು ಬ್ಯಾಟ್ ಬೀಸುತ್ತಿರುವುದು, ಮತ್ತೊಂದು ಕಡೆ ಆಟಗಾರ್ತಿ ಫೀಲ್ಡಿಂಗ್ ಮಾಡುತ್ತಿರುವುದು, ಇನ್ನೂಂದು ಕಡೆ ಮತ್ತೊಬ್ಬ ಆಟಗಾರ್ತಿ ವಿಕೆಟ್ ಪಡೆದಾಗ ಸಂಭ್ರಮಿಸುತ್ತಿರುವ ಚಿತ್ರಗಳೊಂದಿಗೆ ಚೆಂಡನ್ನು ಪ್ರದರ್ಶಿಸುವ ಮೂಲಕ ಗೂಗಲ್ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2024 ಟೂರ್ನಿಗೆ ತನ್ನದೇ ಶೈಲಿಯಲ್ಲಿ ವಿಭಿನ್ನವಾಗಿ ಶುಭಹಾರೈಸಿದೆ.

ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಿವೆ. ಈ ಪೈಕಿ ತಲಾ 5 ತಂಡಗಳನ್ನು ಎರಡು ಗುಂಪುಗಳಾಗಿ ಮಾಡಲಾಗಿದ್ದು, ಎ ಗುಂಪಿನಲ್ಲಿ ಬಳಿಷ್ಠ ತಂಡಗಳೇ ಇವೆ. ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳಿವೆ. ಇನ್ನ ಉಳಿದಂತೆ ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳಿವೆ. ಗುಂಪು ಹಂತದ ಪಂದ್ಯಗಳಿಂದ ಅತಿ ಹೆಚ್ಚು ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆಯುವ ತಂಡಗಳು ಸೆಮಿ ಫೈನಲ್ ಪ್ರವೇಶಿಸಲಿವೆ.

ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸಾರಥಿ ಹರ್ಮನ್ ಪ್ರೀತ್‌ಕೌರ್

ಹರ್ಮನ್ ಪ್ರೀತ್‌ಕೌರ್ ಭಾರತದ ಮಹಿಳಾ ತಂಡವನ್ನು ಮುನ್ನಡೆಸುತ್ತಿದ್ದು, ಮೊದಲ ಪಂದ್ಯವನ್ನು ಅಕ್ಟೋಬರ್ 4ರ ಶುಕ್ರವಾರ ತನ್ನ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಸೆಪ್ಟೆಂಬರ್ 3 ರಂದು ಅಂದ್ರೆ 1 ತಿಂಗಳ ಹಿಂದಷ್ಟೇ ಬಾಂಗ್ಲಾದೇಶದ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟ್ರೋಫಿಯನ್ನು ಅನಾವರಣಗೊಳಿಸಲಾಗಿತ್ತು. ದುಬೈ, ಭಾರತ ಸೇರಿದಂತೆ ಕೆಲವು ದೇಶಗಳನ್ನು ಸುತ್ತಿ ಬಂದ ಟ್ರೋಫಿಯನ್ನು ಮತ್ತೆ ಬಾಂಗ್ಲಾದೇಶಕ್ಕೆ ವಾಪಸ್ ಆಗಿದೆ.

Whats_app_banner