ICC World Cup: ಐಸಿಸಿ ವಿಶ್ವಕಪ್ 2023, ಮೊದಲ ಪಂದ್ಯಕ್ಕೆ ಆಗಮಿಸಿದ ಕಿವೀಸ್ ತಂಡಕ್ಕೆ ಅಹಮದಾಬಾದ್‌ನಲ್ಲಿ ಗುಜರಾತಿ ಶೈಲಿ ಸ್ವಾಗತ VIDEO
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಾಳೆ (ಅ.5) ಶುರುವಾಗುತ್ತಿದೆ. ಉದ್ಘಾಟನಾ ಪಂದ್ಯ ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಇದರಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ನ್ಯೂಜಿಲೆಂಡ್ ತಂಡ ಅಹಮದಾಬಾದ್‌ಗೆ ಬಂದಾಗ ಗುಜರಾತ್ ಶೈಲಿಯಲ್ಲಿ ಅವರನ್ನು ಸ್ವಾಗತಿಸಿ ಬರಮಾಡಿಕೊಂಡ ವಿಡಿಯೋ ಗಮನಸೆಳೆದಿದೆ.
ಭಾರತದಲ್ಲಿ ವಿಶ್ವಕಪ್ ಕ್ರಿಕೆಟ್ 2023 ನಾಳೆ ಶುರುವಾಗುತ್ತಿದೆ. ಮೊದಲ ಪಂದ್ಯದಲ್ಲಿ ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇದು 2019ರ ವಿಶ್ವಕಪ್‌ನ ಫೈನಲ್ ಪಂದ್ಯದ ಪುನರಾವರ್ತನೆಯಂತೆ ತೋರುತ್ತದೆ. ಭಾರತದ ಆತಿಥ್ಯದಲ್ಲಿ ವಿಶ್ವಕಪ್ ನಡೆಯುತ್ತಿರುವ ಕಾರಣ, ಒಂದೊಂದೇ ತಂಡಗಳು ಭಾರತಕ್ಕೆ ಬಂದಿಳಿಯುತ್ತಿವೆ.
ನ್ಯೂಜಿಲೆಂಡ್ ತಂಡವು 2015 ಮತ್ತು 2019 ರ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದರಿಂದ ಎರಡು ವಿಶ್ವಕಪ್ ಟ್ರೋಫಿಗಳನ್ನು ಕಳೆದುಕೊಂಡಿದೆ. ನ್ಯೂಜಿಲೆಂಡ್ ತಂಡ ಗುಜರಾತ್‌ನ ಅಹಮದಾಬಾದ್‌ಗೆ ಮಂಗಳವಾರ ಆಗಮಿಸಿದೆ. ಗುಜರಾತಿ ಶೈಲಿಯಲ್ಲಿ ಕಿವೀಸ್ ತಂಡಕ್ಕೆ ಸ್ವಾಗತ ಸಿಕ್ಕಿದೆ. ಸಾಂಪ್ರದಾಯಿಕ ಗುಜರಾತಿ ಶೈಲಿಯಲ್ಲಿ ಧೋಲ್ ಬೀಟ್‌ಗಳ ಜತೆಗೆ ಕಿವೀಸ್ ತಂಡದ ಸದಸ್ಯರ ಹಣೆಗೆ ತಿಲಕ ಇಟ್ಟು ಸ್ವಾಗತಿಸಲಾಗಿದೆ. ಕಿವೀಸ್ ಆಟಗಾರರು ತಾವು ಉಳಿದುಕೊಳ್ಳಬೇಕಾಗಿದ್ದಹೋಟೆಲ್ ಪ್ರವೇಶಿಸಿದ ನಂತರ, ಸಾಂಪ್ರದಾಯಿಕ ಗುಜರಾತಿ ಜಾನಪದ ನೃತ್ಯ ಗಾರ್ಬಾವನ್ನು ಕಲಾವಿದರು ಪ್ರದರ್ಶಿಸಿದರು.
ಗುಜರಾತಿ ಸಾಂಪ್ರದಾಯಿಕ ಶೈಲಿಯ ಸ್ವಾಗತ ಪಡೆದ ನಂತರ ನ್ಯೂಜಿಲೆಂಡ್ ತಂಡದ ಸದಸ್ಯರು ತಮ್ಮ ಆಗಮನದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ನ್ಯೂಜಿಲೆಂಡ್ ತಂಡದ ಅಧಿಕೃತ ಇನ್‌ಸ್ಟಾಗ್ರಾಂ ಖಾತೆ ಬ್ಲ್ಯಾಕ್‌ಕ್ಯಾಪ್ಸ್‌ನಲ್ಲಿ ಈ ವಿಡಯೋ ಶೇರ್ ಆಗಿದೆ.
ಕಿವೀಸ್ ತಂಡವನ್ನು ಬರಮಾಡಿಕೊಳ್ಳಲು ಗುಜರಾತಿ ಶೈಲಿಯ ಸಾಂಪ್ರದಾಯಿಕ ಸ್ವಾಗತ ಕಾರ್ಯಕ್ರಮ
ಇದೇ ವೇಳೆ ಹಾಲಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಕೂಡ ಅಹಮದಾಬಾದ್ ಗೆ ಆಗಮಿಸಿದೆ. ಅಹಮದಾಬಾದ್‌ನ ಹೋಟೆಲ್‌ನಲ್ಲಿ ಆತ್ಮೀಯ ಸ್ವಾಗತವನ್ನು ಶ್ಲಾಘಿಸಲು ಹಲವಾರು ಇಂಗ್ಲಿಷ್ ಆಟಗಾರರು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕರೆದೊಯ್ದರು.
ಇನ್‌ಸ್ಟಾಗ್ರಾಂನಲ್ಲಿರುವ ವಿಡಿಯೋದಲ್ಲಿ ಕಂಡು ಬಂದ ದೃಶ್ಯದ ಪ್ರಕಾರ, ಸಾಂಪ್ರದಾಯಿಕ ಸ್ವಾಗತ ಪಡೆದು ಹೋಟೆಲ್ ಕೊಠಡಿಗಳಿಗೆ ತೆರಳುತ್ತಿರುವ ಆಟಗಾರರ ಮೇಲೆ ಪುಷ್ಪವೃಷ್ಟಿ ಗೈಯುತ್ತಿರುವುದು ಕೂಡ ಕಂಡುಬಂದಿದೆ. ಮಿಚೆಲ್ ಸ್ಯಾಂಟ್ನರ್ ಬೀಟ್‌ಗೆ ಲಗ್ಗೆ ಇಟ್ಟರೆ, ಇತ್ತೀಚೆಗೆ ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡ ನಾಯಕ ಕೇನ್ ವಿಲಿಯಮ್ಸನ್ ಅವರನ್ನೂ ಹೋಟೆಲ್‌ನಲ್ಲಿ ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿದೆ.
ನಿನ್ನೆ ಅಪ್ಲೋಡ್ ಆಗಿರುವ ಈ ವಿಡಿಯೋಕ್ಕೆ 95 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. 300ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.