ODI World Cup 2023: ಏಷ್ಯಾದ ಈ 3 ದೇಶ ಐಸಿಸಿ ವಿಶ್ವಕಪ್‌ ಗೆಲ್ಲದಿರಬಹುದು; ಆದರೆ ಇವರ ಸ್ಪಿನ್ನರ್‌ಗಳ ಮುಂದೆ ಬ್ಯಾಟರ್‌ಗಳಿಗೆ ಇದೆ ಮಾರಿಹಬ್ಬ
ಕನ್ನಡ ಸುದ್ದಿ  /  ಕ್ರಿಕೆಟ್  /  Odi World Cup 2023: ಏಷ್ಯಾದ ಈ 3 ದೇಶ ಐಸಿಸಿ ವಿಶ್ವಕಪ್‌ ಗೆಲ್ಲದಿರಬಹುದು; ಆದರೆ ಇವರ ಸ್ಪಿನ್ನರ್‌ಗಳ ಮುಂದೆ ಬ್ಯಾಟರ್‌ಗಳಿಗೆ ಇದೆ ಮಾರಿಹಬ್ಬ

ODI World Cup 2023: ಏಷ್ಯಾದ ಈ 3 ದೇಶ ಐಸಿಸಿ ವಿಶ್ವಕಪ್‌ ಗೆಲ್ಲದಿರಬಹುದು; ಆದರೆ ಇವರ ಸ್ಪಿನ್ನರ್‌ಗಳ ಮುಂದೆ ಬ್ಯಾಟರ್‌ಗಳಿಗೆ ಇದೆ ಮಾರಿಹಬ್ಬ

ಏಷ್ಯಾ ಖಂಡದ ಮೂರು ತಂಡಗಳ ಸ್ಪಿನ್ನರ್‌ಗಳು ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಯಾವ ದೇಶದ ಯಾರು ಆ ಸ್ಪಿನ್ನರ್‌ಗಳು ಅನ್ನೋದರ ಮಾಹಿತಿ ಇಲ್ಲಿದೆ.

ಐಸಿಸಿ ಏಕದಿನ ವಿಶ್ವಕಪ್ 2023
ಐಸಿಸಿ ಏಕದಿನ ವಿಶ್ವಕಪ್ 2023 (AFP)

ಬೆಂಗಳೂರು: ಇಡೀ ಜಗತ್ತಿನ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತರದಿಂದ ಕಾಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ (ICC ODI World Cup 2023) ಕೆಲವೇ ಕೆಲವು ದಿನಗಳು ಬಾಕಿ ಇದೆ. ಮಹಾ ಟೂರ್ನಿಯಲ್ಲಿ ಭಾಗವಹಿಸಲಿರುವ 10 ತಂಡಗಳು ಸರ್ವಸನ್ನದ್ಧವಾಗಿದ್ದು, ಹಂತ ಹಂತವಾಗಿ ಭಾರತಕ್ಕೆ (India) ಆಗಮಿಸುತ್ತಿವೆ. ಈ ಬಾರಿಯ ವಿಶ್ವಕಪ್‌ನಲ್ಲೂ ಬಲಿಷ್ಠ ತಂಡಗಳಿಗೆ ಕ್ರಿಕೆಟ್ ಕೂಸುಗಳು ದೊಡ್ಡ ಸವಾಲನ್ನ ನೀಡುವ ಸಾಧ್ಯತೆ ಇದ್ದು, ಅಚ್ಚರಿ ಫಲತಾಂಶ ಕೊಡೋಕೆ ರೆಡಿಯಾಗಿವೆ.

2023ರ ಐಸಿಸಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವುದರಿಂದ ಇಲ್ಲಿನ ಪಿಚ್‌ಗಳು ಹೆಚ್ಚಾಗಿ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಿವೆ. ಅದರಲ್ಲೂ ಏಷ್ಯಾದ ಕ್ರಿಕೆಟ್ ತಂಡಗಳ ಪೈಕಿ ಪ್ರಮುಖವಾಗಿ ಅಫ್ಘಾನಿಸ್ತಾನ (Afghanistan), ಬಾಂಗ್ಲಾದೇಶ (Bangladesh) ಹಾಗೂ ಶ್ರೀಲಂಕಾ (Sri Lanka) ತಂಡಗಳು ಈ ಬಾರಿಯ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಾಗದಿರಬಹುದು ಅಥವಾ ಸೆಮಿಫೈನಲ್ ವರೆಗೆ ಬಾರದೆ ಇರಬಹುದು.

ಆದರೆ ಈ ಮೂವರ ದೇಶಗಳ ಸ್ಪಿನ್ನರ್‌ಗಳು ತಮ್ಮ ಸ್ಪಿನ್ ಕೌಶಲ್ಯಗಳಿಂದ ಬಲಿಷ್ಠ ತಂಡಗಳ ಬ್ಯಾಟರ್‌ಗಳಿಗೆ ದೊಡ್ಡ ತಲೆನೋವಾಗಿ ಪರಣಮಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅಲ್ಲದೆ, ಬಲಿಷ್ಠ ತಂಡಗಳನ್ನು ಹೀನಾಯವಾಗಿ ಮಣಿಸಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ರಶೀದ್ ಖಾನ್ ನೇತೃತ್ವದ ಆಫ್ಘಾನ್ ಸ್ಪಿನ್ ವಿಭಾಗ ತುಂಬಾ ಸ್ಟ್ರಾಂಗು ಗುರು

ಏಷ್ಯಾದ ತಂಡಗಳಾದ ಆತಿಥೇಯ ಭಾರತ (India) ಮತ್ತು ಪಾಕಿಸ್ತಾನ (Pakistan) ತಂಡಗಳು, ದಕ್ಷಿಣ ಆಫ್ರಿಕಾ ಎರಡು ಅಗ್ರ ತಂಡಗಳಲ್ಲಿ ಅನುಭವಿ ಬ್ಯಾಟರ್‌ಗಳ ಪಡೆಯೇ ಇದೆ. ಆದರೆ ಸ್ಪಿನ್ ವಿಭಾಗದಲ್ಲಿ ಅಷ್ಟು ಬಲಿಷ್ಠವಾಗಿಲ್ಲ. ಈ ತಂಡಗಳು ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಅಫ್ಘಾನಿಸ್ತಾನದ ಸ್ಪಿನ್ನರ್‌ಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಈ ಮೂರು ತಂಡಗಳು ವಿಶ್ವಕಪ್ ಗೆಲ್ಲದಿದ್ದರೂ ಅನುಭವಿ ಬ್ಯಾಟರ್‌ಗಳನ್ನೇ ಕಟ್ಟಿಹಾಕುವ ಮೂಲಕ ದೊಡ್ಡ ತಂಡಗಳನ್ನ ಸೋಲಿಸುವ ಸಾಮರ್ಥ್ಯವನ್ನು ಹೊಂದಿವೆ.

ಅಫ್ಘಾನಿಸ್ತಾನದಲ್ಲಿ ಲೆಗ್ ಸ್ಪಿನ್ನರ್ ರಶೀದ್ ಖಾನ್ (Rashid Khan) ಆ ತಂಡದ ಬೌಲಿಂಗ್ ಅಸ್ತ್ರವಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ಮುಜೀಬ್ ಉರ್ ರೆಹಮಾನ್ ಮತ್ತು ಮೊಹಮ್ಮದ್ ನಬಿ ಅವರು ರಶೀದ್‌ ಖಾಗ್‌ಗೆ ಸಾಥ್ ನೀಡಲಿದ್ದಾರೆ. ಎಡಗೈ ಸ್ಪಿನ್ನರ್ ನೂರ್ ಅಹ್ಮದ್ ಕೂಡ ವಿಕೆಟ್ ಪಡೆಯುವಂತ ಬೌಲರ್. ಇಂಡಿಯನ್ ಪ್ರೀಮಿಯರ್ ಲೀಗ್-ಐಪಿಎಲ್‌ನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ರಶೀದ್ ಖಾನ್ ಅವರ ಅನುಭವ ಅಫ್ಘಾನಿಸ್ತಾನ ತುಂಬಾ ನೆರವಿಗೆ ಬರಲಿದೆ.

ಗಾಯದ ಹೊಡೆತ ನಡುವೆ ಶ್ರೀಲಂಕಾ ಬೌಲರ್ಸ್ ಸವಾಲು

ನಿರೀಕ್ಷೆಯಂತೆ ಶ್ರೀಲಂಕಾ ತಂಡಕ್ಕೆ ಗಾಯದ ಹೊಡೆತ ಬಿದ್ದಿದೆ. ಆಲ್‌ರೌಂಡರ್ ವನಿಂದು ಹರಸಂಗ ವಿಶ್ವಕಪ್‌ನಿಂದ ಹೊರಬಿದ್ದಿರುವುದು ಲಂಕಾ ತಂಡಕ್ಕೆ ಬಾರಿ ಹಿನ್ನಡೆಯಾಗಿದೆ. ಆದರೂ ಹಸರಂಗ ಅವರ ಅನುಪಸ್ಥಿತಿಯಲ್ಲಿ ಯುವ ಪ್ರತಿಭೆ ದುನಿತ್ ವೆಲ್ಲಲಾಗೆ ಭರ್ಜರಿ ಫಾರ್ಮ್‌ನಲ್ಲಿರುವುದು ದಸುನ್ ಶನಕ ಪಡೆಯ ಶಕ್ತಿಯಾಗಿದ್ದಾರೆ. ಆಫ್‌ ಸ್ಪಿನ್ನರ್ ಮಹೇಶ್ ತೀಕ್ಷಣ ಅವರು ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆಯುವುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಕಳಪೆ ಫಾರ್ಮ್ ಹೊಂದಿದರೂ ದಸುನ್ ಶತಕ ಶ್ರೀಲಂಕಾ ತಂಡದ ನಾಯಕತ್ವ ವಹಿಸಿದ್ದಾರೆ. ಅವರು ಕಳೆದ 17 ಏಕದಿನ ಪಂದ್ಯಗಳಿಂದ 150 ರನ್ ಗಳಿಸಿದ್ದಾರೆ.

ಬಾಂಗ್ಲಾಗೆ ಇದೆ ದೊಡ್ಡ ತಂಡಗಳನ್ನು ಸೋಲಿಸುವ ಸಾಮರ್ಥ್ಯ

ಇತ್ತ ಬಾಂಗ್ಲಾದೇಶದಲ್ಲಿ ಶಕೀಬ್ ಉಲ್ ಅಸನ್ ನಾಯಕತ್ವದ ಜೊತೆಗೆ ಸ್ಪಿನ್ ಬೌಲಿಂಗ್‌ನ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ದೊಡ್ಡ ಬ್ಯಾಟರ್‌ಗಳ ವಿಕೆಟ್‌ ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರ ಜೊತೆಗೆ ಮೆಹದಿ ಹಸನ್ ಮೀರಜ್, ಮೊಹಮ್ಮದುಲ್ಲಾ ಬಾಂಗ್ಲಾದ ಸ್ಪಿನ್ ಬಲ ಎನಿಸಿದ್ದಾರೆ.

Whats_app_banner