ICC World Cup Tickets: ಇಂದಿನಿಂದ ಐಸಿಸಿ ವಿಶ್ವಕಪ್ ಟಿಕೆಟ್‌ಗಳ ಮಾರಾಟ; ಹೀಗೆ ಬುಕ್ ಮಾಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  Icc World Cup Tickets: ಇಂದಿನಿಂದ ಐಸಿಸಿ ವಿಶ್ವಕಪ್ ಟಿಕೆಟ್‌ಗಳ ಮಾರಾಟ; ಹೀಗೆ ಬುಕ್ ಮಾಡಿ

ICC World Cup Tickets: ಇಂದಿನಿಂದ ಐಸಿಸಿ ವಿಶ್ವಕಪ್ ಟಿಕೆಟ್‌ಗಳ ಮಾರಾಟ; ಹೀಗೆ ಬುಕ್ ಮಾಡಿ

ಇಂದಿನಿಂದಲೇ ಐಸಿಸಿ ವಿಶ್ವಕಪ್ ಪಂದ್ಯಗಳ ಟಿಕೆಟ್‌ಗಳು ಮಾರಾಟಕ್ಕೆ ಲಭ್ಯವಾಗಲಿವೆ. ಟೀಂ ಇಂಡಿಯಾ ಪಂದ್ಯದ ಟಿಕೆಟ್‌ಗಳು ಆಗಸ್ಟ್ 30 ರಿಂದ ಸಿಗಲಿವೆ. ಎಲ್ಲಿ ಬುಕ್ ಮಾಡೋದು ಅನ್ನೋದರ ಮಾಹಿತಿ ಇಲ್ಲಿದೆ.

ವಿಶ್ವಕಪ್ ಟಿಕೆಟ್ ಬುಕಿಂಗ್‌ ಮಾಡಲು ಬುಕ್ ಮೈ ಶೋವನ್ನು ಬಿಸಿಸಿಐ ಮತ್ತು ಐಸಿಸಿ ಅಧಿಕೃತಗೊಳಿಸಿವೆ. ಈ ಫ್ಲಾಟ್‌ ಫಾರಂನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ವಿಶ್ವಕಪ್ ಟಿಕೆಟ್ ಬುಕಿಂಗ್‌ ಮಾಡಲು ಬುಕ್ ಮೈ ಶೋವನ್ನು ಬಿಸಿಸಿಐ ಮತ್ತು ಐಸಿಸಿ ಅಧಿಕೃತಗೊಳಿಸಿವೆ. ಈ ಫ್ಲಾಟ್‌ ಫಾರಂನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.

ಮುಂಬೈ: ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗಾಗಿ ಭಾರಿ ಕುತೂಹಲದಿಂದ ಕಾಯುತ್ತಿರುವ ಕ್ರಿಕೆಟ್ ಅಭಿಮಾನಿಗಳು ಗುಡ್ ನ್ಯೂಸ್ ಬಂದಿದೆ. ಬಹು ನಿರೀಕ್ಷಿತ ಪಂದ್ಯಗಳ ಟಿಕೆಟ್‌ಗಳಿಗಾಗಿ ಬುಕ್‌ ಮೈ ಶೋವನ್ನು ಬಿಸಿಸಿಐ ಮತ್ತು ಐಸಿಸಿ ಅಧಿಕೃತಗೊಳಿಸಿದ್ದು, ಈ ಪ್ಲಾಟ್‌ಫಾಂನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು.

ಐಸಿಸಿ ವಿಶ್ವಕಪ್: ಯಾವಾಗ ಟಿಕೆಟ್ ಮಾರಾಟ ಆರಂಭವಾಗುತ್ತೆ?

ಐಸಿಸಿ ಪುರುಷರ ವಿಶ್ವಕಪ್‌ ಪಂದ್ಯಗಳ ಟಿಕೆಟ್ ಮಾರಾಟವು 2023ರ ಆಗಸ್ಟ್ 25 ರಂದು ಅಂದರೆ ನಾಳೆ ಆರಂಭವಾಗುತ್ತದೆ. ಸೆಪ್ಟೆಂಬರ್ 15ರವರೆಗೆ ಹಂತ ಹಂತವಾಗಿ ಟಿಕೆಟ್ ಮಾರಾಟ ಮಾಡಲಾಗುತ್ತದೆ. ಇದಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್‌ ಸೈಟ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. https://www.cricketworldcup.com/register ಇಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.

ಆಗಸ್ಟ್ 24 ರಿಂದಲೇ ಬುಕಿಂಗ್ ಮಾಡಲು ಅವಕಾಶ

ಮಾಸ್ಟರ್‌ಕಾರ್ಡ್ ಐಸಿಸಿಯ ವಾಣಿಜ್ಯ ಪಾಟ್ನರ್ ಆಗಿದೆ. ಹೀಗಾಗಿ ಮಾಸ್ಟರ್ ಕಾರ್ಡ್ ಹೊಂದಿರುವ ಬಳಕೆದಾರರಿಗಾಗಿ ಪೂರ್ವ-ಮಾರಾಟ ವಿಂಡೋವನ್ನು ತೆರೆಯಲಾಗುತ್ತದೆ. ಮಾಸ್ಟರ್ ಕಾರ್ಡ್‌ನ ಕ್ರೆಡಿಟ್ ಅಥವಾ ಡಿಬಿಟ್ ಹೊಂದಿರುವ ಕ್ರಿಕೆಟ್ ಅಭಿಮಾನಿಗಳು ಇಂದು (ಆಗಸ್ಟ್ 24, ಗುರುವಾರ) ಸಂಜೆ 6 ಗಂಟೆಯಿಂದಲೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಆದರೆ ಪೂರ್ವ-ಮಾರಾಟದ ವಿಂಡೋದಲ್ಲಿ ಮಾರಾಟವಾಗುವ ಶೇಕಡಾವಾರು ಟಿಕೆಟ್‌ಗಳ ಬಗ್ಗೆ ಇನ್ನೂ ಖಚಿತವಾಗಿಲ್ಲ.

ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ?

ಐಸಿಸಿ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪಂದ್ಯಗಳ ಟಿಕೆಟ್‌ಗಳು ಆಗಸ್ಟ್ 29 ರಂದು ಸಂಜೆ 6 ಗಂಟೆಯ ನಂತರ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಳ್ಳಬಹುದು. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಟಿಕೆಟ್‌ಗಳು ಸೆಪ್ಟೆಂಬರ್ 14 ರಂದು ಸಂಜೆ 6 ರಿಂದ ಲಭ್ಯವಿರುತ್ತವೆ.

ಆಗಸ್ಟ್ 24, ಸಂಜೆ 6 ಗಂಟೆಗೆ: ಅಭ್ಯಾಸ ಪಂದ್ಯಗಳನ್ನು ಹೊರತುಪಡಿಸಿ ಎಲ್ಲಾ ಭಾರತೇತರರ ಪಂದ್ಯಗಳ ಟಿಕೆಟ್‌ಗಳು ಲಭ್ಯ

ಆಗಸ್ಟ್ 25, ರಾತ್ರಿ 8 ಗಂಟೆಗೆ: ಭಾರತೇತರ ಅಭ್ಯಾಸ ಪಂದ್ಯಗಳು ಮತ್ತು ಸಾಮಾನ್ಯ ಪಂದ್ಯಗಳ ಟಿಕೆಟ್‌ಗಳು ಲಭ್ಯ

ಆಗಸ್ಟ್ 29, ಸಂಜೆ 6 ಗಂಟೆಗೆ: ಅಭ್ಯಾಸ ಪಂದ್ಯಗಳನ್ನು ಹೊರತುಪಡಿಸಿದ ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಲಭ್ಯ

ಸೆಪ್ಟೆಂಬರ್ 14, ಸಂಜೆ 6 ಗಂಟೆಗೆ : ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಟಿಕೆಟ್‌ಗಳು ಮಾರಾಟಕ್ಕೆ ಲಭ್ಯ

ವಿಶ್ವಕಪ್ 2023 ವೇಳಾಪಟ್ಟಿ

ಅಕ್ಟೋಬರ್ 5 ರಿಂದ ವಿಶ್ವಕಪ್ ಆರಂಭವಾಗಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಒಟ್ಟು 58 ಪಂದ್ಯಗಳು ನಡೆಯಲಿವೆ. ಇದಕ್ಕೂ ಮುನ್ನ 10 ಅಭ್ಯಾಸ ಪಂದ್ಯಗಳು ಜರುಗಲಿವೆ. ಭಾರತದ 12 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ.

ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ಪಂದ್ಯದ ಮೂಲಕ ಟೀಂ ಇಂಡಿಯಾ ಅಭಿಯಾನವನ್ನು ಆರಂಭಿಸಲಿದೆ. ಅಕ್ಟೋಬರ್ 14 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯವನ್ನು ಆಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಮಹತ್ವದ ಪೈಪೋಟಿಗೆ ವೇದಿಕೆ ಸಿದ್ಧಗೊಂಡಿದೆ.

Whats_app_banner