ನಮ್ಮ ದೇಶದವರು ಮೂರ್ಖರು; ಇನ್ಸ್ಟಾದಲ್ಲಿ ನೆಟ್ಟಿಗನನ್ನು ನಿಂದಿಸಿ ಪೇಚಿಗೆ ಸಿಲುಕಿದ ವಾಸೀಂ ಅಕ್ರಮ್
Wasim Akram: ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಫೋಟೋಗೆ ಅಸಭ್ಯವಾಗಿ ಕಮೆಂಟ್ ಮಾಡಿದ್ದ ನೆಟ್ಟಿಗನ ಚಳಿ ಬಿಡಿಸಿರುವ ವಾಸೀಂ ಅಕ್ರಮ್ ಚಳಿ ಬಿಡಿಸಿದ್ದಾರೆ. ಆತನನ್ನು ಬೈಯುವ ಈ ವೇಳೆ ಇಡೀ ಪಾಕಿಸ್ತಾನ ದೇಶವನ್ನು ಎಳೆದು ತಂದು ಪೇಚಿಗೆ ಸಿಲುಕಿದ್ದಾರೆ.
ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಮ್ (Wasim Akram) ಅವರು ನೆಲೆಸಿರುವುದು ಆಸ್ಟ್ರೇಲಿಯಾದಲ್ಲಿ. ಅಲ್ಲಿ ತಮ್ಮ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯ ನಂತರ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾಮೆಂಟೇಟರ್ ಕೂಡ ಆಗಿದ್ದ ಮಾಜಿ ನಾಯಕ, ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುತ್ತಾರೆ.
ಆದರೆ, ಇತ್ತೀಚೆಗೆ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಫೋಟೋಗೆ ಅಸಭ್ಯವಾಗಿ ಕಮೆಂಟ್ ಮಾಡಿದ್ದ ನೆಟ್ಟಿಗನಿಗೆ ಅಕ್ರಮ್ ಚಳಿ ಬಿಡಿಸಿದ್ದಾರೆ. ಆತನನ್ನು ಬೈಯುವ ಈ ವೇಳೆ ಇಡೀ ಪಾಕಿಸ್ತಾನ ದೇಶವನ್ನು ಎಳೆದು ತಂದು ಪೇಚಿಗೆ ಸಿಲುಕಿದ್ದಾರೆ. ನಮ್ಮ ದೇಶದವರು ಮೂರ್ಖರು ಎಂದು ನೆಟ್ಟಿಗನ ಕಮೆಂಟ್ ಗೆ ಅಕ್ರಮ್ ಉತ್ತರಿಸಿದ್ದಾರೆ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ರಮ್ ಹಂಚಿಕೊಂಡಿದ್ದ ಫೋಟೊದಲ್ಲಿ ಏನಿತ್ತು?
ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಮತ್ತು ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಅವರೊಂದಿಗೆ ಮಾರ್ನಿಂಗ್ ವಾಕ್ ಹೋದ ಚಿತ್ರವೊಂದನ್ನು ವಾಸೀಂ ಅಕ್ರಮ್ ಹಂಚಿಕೊಂಡಿದ್ದರು. ಆದರೆ ಅಕ್ರಮ್ ಸೆಲ್ಫಿ ತೆಗೆದಿದ್ದರು. ಈ ಚಿತ್ರಕ್ಕೆ ನೆಟ್ಟಿಗನೊಬ್ಬ ಅವರ ಕಂಕುಳಿನ ಕೂದಲಿನ ಬಗ್ಗೆ ಕಮೆಂಟ್ ಮಾಡಿದ್ದರು. ಇದಕ್ಕೆ ಸರಿಯಾಗಿ ತಿರುಗೇಟು ನೀಡಿದ್ದಾರೆ ಮಾಜಿ ಕ್ರಿಕೆಟಿಗ.
ನಮ್ಮ ದೇಶದವರು ಮೂರ್ಖರು
ನೆಟ್ಟಿಗ ಮಾಡಿದ್ದ ಕಮೆಂಟ್ ಉತ್ತರಿಸಿದ ಲೆಜೆಂಡರಿ ಆಟಗಾರ, ಸರಿಯಾಗಿ ತಿರುಗಿಸಿಕೊಟ್ಟಿದ್ದಾರೆ. ಹೀಗಿದೆ ನೋಡಿ ಉತ್ತರ. ಇಡೀ ಜಗತ್ತು ಚಂದ್ರನತ್ತ ಹೋಗುತ್ತಿದೆ. ಆದರೆ, ನನ್ನ ದೇಶದ ಮೂರ್ಖರು ನನ್ನ ಕಂಕುಳಿನ ಕೂದಲಿನ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನಾವಿಲ್ಲಿದ್ದೇವೆ ಎಂಬುದನ್ನು ಮತ್ತು ನಮ್ಮ ಆಘಾತಕಾರಿ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಈ ಕುರಿತ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಆದರೆ ಮೂರ್ಖರು ಎಂದು ಕರೆದ ಕಾರಣ ಲೆಜೆಂಡರಿ ನಾಯಕನ ವಿರುದ್ಧ ಪಾಕಿಸ್ತಾನ ದೇಶದ ಜನತೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಒಬ್ಬ ಪಾಕಿಸ್ತಾನದವರಾಗಿ ತಮ್ಮ ದೇಶದ ಜನರ ಕುರಿತು ಮಾತನಾಡಿದ ಕುರಿತು ಖಂಡಿಸಿದ್ದಾರೆ. ಕೆಲವರು ಕ್ಷಮೆಯಾಚಿಸುವಂತೆ ಕೇಳಿದ್ದಾರೆ. ಹಲವರು ಮನಬಂದಂತೆ ಬೈದಿದ್ದಾರೆ.
ಪಾಕ್ ವೈಟ್ ವಾಶ್
ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ವೈಟ್ ವಾಶ್ ಮುಖಭಂಗಕ್ಕೆ ಒಳಗಾಗಿದೆ. ಶಾನ್ ಮಸೂದ್ ನೇತೃತ್ವದ ಪಾಕ್ ತಂಡವು ಮೊದಲ ಟೆಸ್ಟ್‌ನಲ್ಲಿ 360 ರನ್ ಗಳ ದೊಡ್ಡ ಅಂತರದ ಸೋಲು ಅನುಭವಿಸಿತ್ತು. ಎರಡನೇ ಟೆಸ್ಟ್‌ನಲ್ಲಿ 79 ರನ್ ಗಳಿಂದ ಸೋತರು. ಮೂರನೇ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು 3-0 ಅಂತರದಲ್ಲಿ ಕೈವಶ ಮಾಡಿಕೊಂಡಿತು. ಆದರೆ ವಾಸೀಂ ಅಕ್ರಮ್ ಪೋಸ್ಟ್ ಈ ಸೋಲನ್ನು ಮರೆಸುವಂತೆ ಮಾಡಿದೆ.
ಹೊಸ ಕ್ಯಾಪ್ಟನ್ ಬಂದರೂ ಸಿಗಲಿಲ್ಲ ಗೆಲುವು
ತಂಡಕ್ಕೆ ನೂತನ ಸಾರಥಿ ನೇಮಕಗೊಂಡರೂ ಆಸೀಸ್ ನೆಲದಲ್ಲಿ ಪಾಕಿಸ್ತಾನ, ಟೆಸ್ಟ್‌ನಲ್ಲಿ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಲ್ಲದೆ, ನಾಯಕತ್ವದಿಂದ ಕೆಳಗಿಳಿದ ಬಾಬರ್ ಅಜಮ್ ಅವರು ಒತ್ತಡ ಮುಕ್ತರಾಗಿ ಆಡುತ್ತಾರೆ ಎಂದು ಇಡಲಾಗಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಪಾಕ್ ತೀವ್ರ ಮುಖಭಂಗಕ್ಕೆ ಒಳಗಾಗಿ ತವರಿಗೆ ಮರಳಿದೆ.