ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಕೆಆರ್ ಗೆದ್ದರೆ ಪ್ಲೇಆಫ್​ಗೆ, ಮುಂಬೈಗೆ ಔಪಚಾರಿಕ ಪಂದ್ಯ; ಸಂಭಾವ್ಯ ಪ್ಲೇಯಿಂಗ್ Xi, ಪಿಚ್ ಹಾಗೂ ಹವಾಮಾನ ವರದಿ

ಕೆಕೆಆರ್ ಗೆದ್ದರೆ ಪ್ಲೇಆಫ್​ಗೆ, ಮುಂಬೈಗೆ ಔಪಚಾರಿಕ ಪಂದ್ಯ; ಸಂಭಾವ್ಯ ಪ್ಲೇಯಿಂಗ್ XI, ಪಿಚ್ ಹಾಗೂ ಹವಾಮಾನ ವರದಿ

Kolkata Knight Riders vs Mumbai Indians: 17ನೇ ಆವೃತ್ತಿಯ ಐಪಿಎಲ್​ನ 60ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಟ ನಡೆಸಲಿವೆ.

ಕೆಕೆಆರ್ ಗೆದ್ದರೆ ಪ್ಲೇಆಫ್​ಗೆ, ಮುಂಬೈಗೆ ಔಪಚಾರಿಕ ಪಂದ್ಯ; ಸಂಭಾವ್ಯ ಪ್ಲೇಯಿಂಗ್ XI, ಪಿಚ್ ಹಾಗೂ ಹವಾಮಾನ ವರದಿ
ಕೆಕೆಆರ್ ಗೆದ್ದರೆ ಪ್ಲೇಆಫ್​ಗೆ, ಮುಂಬೈಗೆ ಔಪಚಾರಿಕ ಪಂದ್ಯ; ಸಂಭಾವ್ಯ ಪ್ಲೇಯಿಂಗ್ XI, ಪಿಚ್ ಹಾಗೂ ಹವಾಮಾನ ವರದಿ

2024ರ ಇಂಡಿಯನ್ ಪ್ರೀಮಿಯರ್​ ಲೀಗ್​​​​​ನ 60ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ಕಾದಾಟಕ್ಕೆ ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನ ವೇದಿಕೆ ಕಲ್ಪಿಸಲಿದೆ. ಈಗಾಗಲೇ ಎಲಿಮಿನೇಟ್ ಆಗಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಎಂಐಗೆ ಇದು ಔಪಚಾರಿಕ, ಕೆಕೆಆರ್​​​ಗೆ​​ ಪ್ಲೇಆಫ್​ ಪ್ರವೇಶಿಸಲು ಮಹತ್ವದ ಪಂದ್ಯವಾಗಿದೆ.

ಟ್ರೆಂಡಿಂಗ್​ ಸುದ್ದಿ

ಈಗಾಗಲೇ ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿ 3 ಸೋತಿರುವ ಕೋಲ್ಕತ್ತಾ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಎದುರು ಜಯದ ನಗೆ ಬೀರಿದರೆ 18 ಅಂಕಗಳೊಂದಿಗೆ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಆದರೆ ಮುಂಬೈ ಗೆದ್ದರೆ 2 ಅಂಕ ಹೆಚ್ಚಿಸಿಕೊಳ್ಳುತ್ತದೆ. ಪ್ಲೇಆಫ್ ದೃಷ್ಟಿಯಿಂದ ಯಾವುದೇ ಮಹತ್ವ ಇಲ್ಲ. ಆದರೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರಲು ಯತ್ನಿಸುತ್ತದೆ.

ಕೆಕೆಆರ್​ ತಂಡದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಯಾವುದೇ ಬದಲಾವಣೆ ನಿರೀಕ್ಷೆ ಇಲ್ಲ. ಗೆಲುವಿನ ಸಂಯೋಜನೆಯನ್ನೇ ಮುಂದುವರೆಸುವ ಚಿಂತನೆ ನಡೆಸಿದೆ ಮ್ಯಾನೇಜ್​ಮೆಂಟ್. ಕೆಲವು ವರದಿಗಳು ಆಂಗ್ಕ್ರಿಶ್ ರಘುವಂಶಿ ಬದಲಿಗೆ ನಿತೀಶ್ ರಾಣಾ ತಂಡವನ್ನು ಸೇರುತ್ತಾರೆ ಎಂದು ಹೇಳಲಾಗಿದೆ. ಮುಂಬೈ ತಂಡದಲ್ಲಿ ಸ್ಟಾರ್ ಆಟಗಾರರಿಗೆ ರೆಸ್ಟ್ ನೀಡುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ದೃಷ್ಟಿಯಿಂದ ನಿರ್ಧಾರಕ್ಕೆ ಬರಲಾಗಿದೆ. ಅದರಲ್ಲೂ ಬುಮ್ರಾ ವಿಶ್ರಾಂತಿ ಪಡೆಯುವ ನಿರೀಕ್ಷೆಯಿದೆ. ಬದಲಿಗೆ ಆಕಾಶ್ ಮಧ್ವಾಲ್ ಪ್ಲೇಯಿಂಗ್​ XIನಲ್ಲಿ ಸ್ಥಾನ ಪಡೆಯಲಿದ್ದಾರೆ.

ಕೆಕೆಆರ್​​ ಪ್ಲೇಯಿಂಗ್ XI

ಫಿಲ್ ಸಾಲ್ಟ್ (ವಿಕೆಟ್ ಕೀಪರ್​), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ/ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ರಿಂಕು ಸಿಂಗ್, ಮಿಚೆಲ್ ವಾರ್ಕ್, ಚಕ್ರವರ್ತಿ, ಹರ್ಷಿತ್ ರಾಣಾ

ಎಂಐ ಪ್ಲೇಯಿಂಗ್ XI

ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ನಮನ್ ಧೀರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ನೇಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ/ಆಕಾಶ್ ಮಧ್ವಲ್, ನುವಾನ್ ತುಷಾರ, ಪಿಯೂಷ್ ಚಾವ್ಲಾ.

ಮುಖಾಮುಖಿ ದಾಖಲೆ

ಒಟ್ಟು ಪಂದ್ಯಗಳು - 33

ಮುಂಬೈ ಗೆಲುವು - 23

ಕೆಕೆಆರ್ ಗೆಲುವು - 10

ಈಡನ್ ಗಾರ್ಡನ್ಸ್ ಪಿಚ್ ರಿಪೋರ್ಟ್

ಈಡನ್ ಗಾರ್ಡನ್ಸ್​​ನ ಪಿಚ್ ಬ್ಯಾಟರ್​​ಗಳಿಗೆ ಹೆಚ್ಚು ನೆರವಾಗಲಿದೆ. ಇಲ್ಲಿನ ಪಿಚ್ ಸಮತಟ್ಟಾಗಿದೆ. ಬ್ಯಾಟರ್​ಗಳು ಸ್ಟ್ರೋಕ್‌ಗಳನ್ನು ಆಡಲು ಸುಲಭವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇತರ ಮೈದಾನಗಳಿಗೆ ಹೋಲಿಸಿದರೆ ಇಲ್ಲಿನ ಬೌಂಡರಿಗಳು ಚಿಕ್ಕದಾಗಿದೆ. ಹೀಗಾಗಿ ಸಿಕ್ಸರ್​​​-ಬೌಂಡರಿಗಳ ಮಳೆಯನ್ನು ನಿರೀಕ್ಷಿಸಬಹುದು. ಈ ಪಿಚ್​​ನಲ್ಲಿ ಇದೇ ವರ್ಷ ನಡೆದ 6 ಐಪಿಎಲ್​ ಪಂದ್ಯಗಳಲ್ಲಿ ಅಧಿಕ ಬಾರಿ 200+ ಸ್ಕೋರ್​ ಹರಿದು ಬಂದಿದೆ. ಬೌಲರ್​​​ಗಳು ವಿಕೆಟ್ ಪಡೆಯಲು ಸರ್ಕಸ್ ಮಾಡಬೇಕಿದೆ.

ಹವಾಮಾನ ವರದಿ

ಕೋಲ್ಕತ್ತಾದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಪಂದ್ಯದುದ್ದಕ್ಕೂ ಮೋಡ ಕವಿದ ವಾತಾವರಣ ಇರಲಿದೆ. 80-82 ಶೇಕಡಾ ಆರ್ದ್ರತೆಯ ಮಟ್ಟದೊಂದಿಗೆ, ತಾಪಮಾನವು ಸುಮಾರು 28 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಸ್ಥಳದಲ್ಲಿ ಗಾಳಿಯ ವೇಗ ಗಂಟೆಗೆ 15 ಕಿಮೀ. ಆದರೆ ಸಂಜೆ ಮಳೆಯ ಸಾಧ್ಯತೆ ಕಡಿಮೆ. ಹಾಗಾಗಿ ಅಭಿಮಾನಿಗಳು ಆತಂಕವಿಲ್ಲದೆ ಪೂರ್ಣ ಪಂದ್ಯವನ್ನ ಕಣ್ತುಂಬಿಕೊಳ್ಳಬಹುದು. ಒಂದು ವೇಳೆ ಮಳೆ ಅಡ್ಡಿಪಡಿಸಿದರೂ ಹೆಚ್ಚು ಹೊತ್ತು ತೊಂದರೆ ಉಂಟು ಮಾಡುವುದಿಲ್ಲ.

IPL_Entry_Point