IND vs AUS 1st Test: ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆ: ಗಾಯದ ಕಾರಣ ಭಾರತಕ್ಕೆ ವಾಪಾಸ್ ಆದ ಸ್ಟಾರ್ ಆಟಗಾರ
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Aus 1st Test: ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆ: ಗಾಯದ ಕಾರಣ ಭಾರತಕ್ಕೆ ವಾಪಾಸ್ ಆದ ಸ್ಟಾರ್ ಆಟಗಾರ

IND vs AUS 1st Test: ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆ: ಗಾಯದ ಕಾರಣ ಭಾರತಕ್ಕೆ ವಾಪಾಸ್ ಆದ ಸ್ಟಾರ್ ಆಟಗಾರ

Border Gavaskar Trophy: ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ವೇಗದ ಬೌಲರ್ ಖಲೀಲ್ ಅಹ್ಮದ್ ಗಾಯಗೊಂಡಿದ್ದಾರೆ. ಗಾಯದಿಂದಾಗಿ ಇದೀಗ ಇವರು ಭಾರತಕ್ಕೆ ವಾಪಾಸ್ ಮರಳಿದ್ದಾರೆ. ಖಲೀಲ್ ಗಾಯಗೊಂಡ ಪರಿಣಾಮ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.

ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆ: ಗಾಯದ ಕಾರಣ ಭಾರತಕ್ಕೆ ವಾಪಾಸ್ ಆದ ಸ್ಟಾರ್ ಆಟಗಾರ
ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆ: ಗಾಯದ ಕಾರಣ ಭಾರತಕ್ಕೆ ವಾಪಾಸ್ ಆದ ಸ್ಟಾರ್ ಆಟಗಾರ

ಭಾರತ ಮತ್ತು ಆಸ್ಟ್ರೇಲಿಯಾ (IND vs AUS 1st Test) ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನವೆಂಬರ್ 22 ರಿಂದ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ಶುರುವಾಗಲಿದೆ. ಈ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಬಿಸಿಸಿಐ ಒಟ್ಟು 18 ಆಟಗಾರರನ್ನು ಭಾರತ ತಂಡದಲ್ಲಿ ಸೇರಿಸಿಕೊಂಡಿದೆ. ಅದೇ ಸಮಯದಲ್ಲಿ, ಮೂವರು ಆಸ್ಟ್ರೇಲಿಯಾಕ್ಕೆ ಮೀಸಲು ಆಟಗಾರರಾಗಿ ಹೋಗಿದ್ದಾರೆ. ಆದರೆ ಈ ಸರಣಿಗೂ ಮುನ್ನ ಟೀಂ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿದೆ. ಭಾರತ ತಂಡದ ವೇಗದ ಬೌಲರ್ ಗಾಯದ ಸಮಸ್ಯೆಯಿಂದ ಭಾರತಕ್ಕೆ ಮರಳಿದ್ದಾರೆ.

ಟೆಸ್ಟ್ ಆರಂಭಕ್ಕೂ ಮುನ್ನ ವೇಗದ ಬೌಲರ್ ಖಲೀಲ್ ಅಹ್ಮದ್ ಗಾಯಗೊಂಡಿದ್ದಾರೆ. ಖಲೀಲ್ ಅವರನ್ನು ಈ ಸರಣಿಗೆ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಆದರೆ ಗಾಯದಿಂದಾಗಿ ಇದೀಗ ಭಾರತಕ್ಕೆ ವಾಪಾಸ್ ಮರಳಿದ್ದಾರೆ. ಖಲೀಲ್ ಗಾಯಗೊಂಡ ಪರಿಣಾಮ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.

ಅಂತಹ ಪರಿಸ್ಥಿತಿಯಲ್ಲಿ, ವೈದ್ಯಕೀಯ ತಂಡವು ಅವರಿಗೆ ವಿಶ್ರಾಂತಿ ಸೂಚಿಸಿದೆ. ನಂತರ ಅವರನ್ನು ಭಾರತಕ್ಕೆ ಕಳುಹಿಸಲಾಯಿತು. ಖಲೀಲ್​ಗೆ ಐಪಿಎಲ್ 2025 ಹರಾಜು ಮಹತ್ವದ್ದಾಗಿದೆ. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಬಿಡುಗಡೆ ಮಾಡಿದೆ. ಇಂಜುರಿಯ ಕಾರಣ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯನ್ನು ಆಡುತ್ತಾರೋ ಇಲ್ಲವೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಈ ಆಟಗಾರನಿಗೆ ಬದಲಿ ಸ್ಥಾನ

ಖಲೀಲ್ ಅಹ್ಮದ್ ಬದಲಿಗೆ ಎಡಗೈ ವೇಗದ ಬೌಲರ್ ಯಶ್ ದಯಾಳ್​ ಅವರನ್ನು ಭಾರತದ ಮೀಸಲು ಆಟಗಾರರಲ್ಲಿ ಸೇರಿಸಲಾಗಿದೆ. ಯಶ್ ದಯಾಳ್​ ಅವರು ಇತ್ತೀಚಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತೀಯ ಟಿ20 ತಂಡದ ಭಾಗವಾಗಿದ್ದರು. ಆದರೆ ಆಡುವ ಅವಕಾಶ ಸಿಗಲಿಲ್ಲ. ಅವರು ಜೋಹಾನ್ಸ್‌ಬರ್ಗ್‌ನಿಂದ ನೇರವಾಗಿ ಪರ್ತ್ ತಲುಪಿದ್ದಾರೆ.

ಬಿಸಿಸಿಐ ಮೂಲವೊಂದು ಪಿಟಿಐಗೆ, 'ಭಾರತ ತಂಡಕ್ಕೆ ಅಭ್ಯಾಸಕ್ಕಾಗಿ ಮಿಚೆಲ್ ಸ್ಟಾರ್ಕ್ ಅವರಂತಹ ಬೌಲರ್ ಬೇಕಾಗಿರುವುದರಿಂದ ಇದು ಒಂದು ಆಯ್ಕೆಯಾಗಿದೆ. ದಯಾಳ್ ಭಾರತ ಎ ಟೆಸ್ಟ್ ಆಡಬೇಕಿತ್ತು. ಆದರೆ ಅವರನ್ನು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಯಿತು. ಸದ್ಯ ಖಲೀಲ್ ಬೌಲಿಂಗ್ ಮಾಡಲು ಸಾಧ್ಯವಾಗದ ಕಾರಣ ದಯಾಳ್ ಇಲ್ಲಿ ಉಳಿದುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪ ನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.

ಮೀಸಲು ಆಟಗಾರರು: ಮುಖೇಶ್ ಕುಮಾರ್, ನವದೀಪ್ ಸೈನಿ, ಯಶ್ ದಯಾಳ್.

Whats_app_banner