ಶ್ರೀಲಂಕಾದಲ್ಲಿ ರೋಹಿತ್ ಶರ್ಮಾಗೆ ಅವಮಾನ: ಸ್ಟೇಡಿಯಂಗೆ ಬಂದ ತಕ್ಷಣ ಏನಾಯಿತು ನೋಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೀಲಂಕಾದಲ್ಲಿ ರೋಹಿತ್ ಶರ್ಮಾಗೆ ಅವಮಾನ: ಸ್ಟೇಡಿಯಂಗೆ ಬಂದ ತಕ್ಷಣ ಏನಾಯಿತು ನೋಡಿ

ಶ್ರೀಲಂಕಾದಲ್ಲಿ ರೋಹಿತ್ ಶರ್ಮಾಗೆ ಅವಮಾನ: ಸ್ಟೇಡಿಯಂಗೆ ಬಂದ ತಕ್ಷಣ ಏನಾಯಿತು ನೋಡಿ

Rohit Sharma: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ಅಭ್ಯಾಸ ಆರಂಭಿಸಿದೆ. ನಾಯಕ ರೋಹಿತ್ ಶರ್ಮಾ ಕೂಡ ಪ್ರೇಮದಾಸ ಸ್ಟೇಡಿಯಂನಲ್ಲಿ ತರಬೇತಿ ಅವಧಿಯಲ್ಲಿ ಭಾಗವಹಿಸಿದ್ದಾರೆ. ಆದರೆ, ಈ ಸಂದರ್ಭ ಹಿಟ್​ಮ್ಯಾನ್​ಗೆ ಅವಮಾನ ಆಗುವಂತಹ ಘಟನೆ ನಡೆದಿದೆ.

ಶ್ರೀಲಂಕಾದಲ್ಲಿ ರೋಹಿತ್ ಶರ್ಮಾಗೆ ಅವಮಾನ: ಸ್ಟೇಡಿಯಂಗೆ ಬಂದ ತಕ್ಷಣ ಏನಾಯಿತು ನೋಡಿ
ಶ್ರೀಲಂಕಾದಲ್ಲಿ ರೋಹಿತ್ ಶರ್ಮಾಗೆ ಅವಮಾನ: ಸ್ಟೇಡಿಯಂಗೆ ಬಂದ ತಕ್ಷಣ ಏನಾಯಿತು ನೋಡಿ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಸೇರಿ ಹಿರಿಯ ಆಟಗಾರರು ಲಂಕಾನ್ನರ ನಾಡಲ್ಲಿ ಬೀಡುಬಿಟ್ಟಿದ್ದಾರೆ. ಮೂರು ಏಕದಿನ ಪಂದ್ಯಗಳ ಸರಣಿ ಪೈಕಿ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಆಗಸ್ಟ್ 2 ರಂದು ಮೊದಲ ಪಂದ್ಯ ಆಯೋಜಿಸಲಾಗಿದೆ. ಇದಕ್ಕಾಗಿ ಟೀಮ್ ಇಂಡಿಯಾ ಅಭ್ಯಾಸ ಆರಂಭಿಸಿದೆ. ನಾಯಕ ರೋಹಿತ್ ಶರ್ಮಾ ಕೂಡ ಪ್ರೇಮದಾಸ ಸ್ಟೇಡಿಯಂನಲ್ಲಿ ತರಬೇತಿ ಅವಧಿಯಲ್ಲಿ ಭಾಗವಹಿಸಿದ್ದಾರೆ. ಆದರೆ, ಈ ಸಂದರ್ಭ ಹಿಟ್​ಮ್ಯಾನ್​ಗೆ ಅವಮಾನ ಆಗುವಂತಹ ಘಟನೆ ನಡೆದಿದೆ.

ರೋಹಿತ್ ಪ್ರಾಕ್ಟೀಸ್​ಗೆಂದು ನೆಟ್‌ಗೆ ತೆರಳುವ ಮುನ್ನವೇ ಒಂದು ಘಟನೆ ನಡೆದಿದ್ದು, ಕ್ರೀಡಾಂಗಣದಲ್ಲಿ ಎಲ್ಲರ ಗಮನ ಸೆಳೆಯಿತು. ಭಾರತೀಯ ನಾಯಕ ಪ್ಯಾಡ್ ಕಟ್ಟಿ ಡ್ರೆಸ್ಸಿಂಗ್ ರೂಮ್ ಮೆಟ್ಟಿಲುಗಳ ಮೇಲೆ ಬ್ಯಾಟ್ ಮಾಡಲು ಹೊರನಡೆದಾಗ, ಶ್ರೀಲಂಕಾದ ಅಭಿಮಾನಿಯೊಬ್ಬರು 'ಈ ಬಾರಿ ಮುಂಬೈ ಇಂಡಿಯನ್ಸ್ ಬೇಡ' ಎಂದು ಜೋರಾಗಿ ಕೂಗಿದ್ದಾರೆ. ಇದು ಅನೇಕರ ಕಣ್ಣುಕುಕ್ಕುವಂತೆ ಮಾಡಿದೆ. ಆದರೆ, ಇದು ಯಾವುದಕ್ಕೂ ತಲೆಕೆಡೆಸಿಕೊಳ್ಳದ ರೋಹಿತ್ ನಗುತ್ತಾ ತಮ್ಮ ಕೆಲಸವನ್ನು ಮುಂದುವರೆಸಿದರು.

ಮುಂಬೈ ಇಂಡಿಯನ್ಸ್​ನಿಂದ ಹೊರಬರುತ್ತಾರಾ ರೋಹಿತ್?

ರೋಹಿತ್ ಶರ್ಮಾ ಅವರು 2011 ರಲ್ಲಿ ಮುಂಬೈ ಇಂಡಿಯನ್ಸ್ ಸೇರಿಕೊಂಡರು. ಸುಮಾರು ಒಂದು ದಶಕದ ಕಾಲ ಎಂಐಗೆ ನಾಯಕತ್ವ ವಹಿಸಿದರು. ಅಷ್ಟೇ ಅಲ್ಲದೆ ಐದು ಪ್ರಶಸ್ತಿಗಳನ್ನು ತಂದುಕೊಟ್ಟರು. ಇವರು ಐಪಿಎಲ್ ಅತ್ಯಂತ ಶ್ರೇಷ್ಠ ನಾಯಕ ಕೂಡ ಹೌದು. ಆದಾಗ್ಯೂ, 2024ರ ಐಪಿಎಲ್‌ಗೆ ಮುಂಚಿತವಾಗಿ ರೋಹಿತ್ ಅವರನ್ನು ಕ್ಯಾಪ್ಟನ್ ಹುದ್ದೆಯಿಂದ ತೆಗೆದುಹಾಕಲಾಯಿತು. ಗುಜರಾತ್ ಟೈಟಾನ್ಸ್‌ನಿಂದ ಟ್ರೇಡಿಂಗ್ ಮೂಲಕ ಎಂಐ ಫ್ರಾಂಚೈಸಿಗೆ ಮರಳಿದ ಹಾರ್ದಿಕ್ ಪಾಂಡ್ಯ ಅವರು ನಾಯಕನ ಅಧಿಕಾರ ವಹಿಸಿಕೊಂಡರು. ರೋಹಿತ್ ಈ ನಿರ್ಧಾರದಿಂದ ನಿರಾಶೆಗೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಅವರು ಐಪಿಎಲ್ 2025 ರಲ್ಲಿ ಮುಂಬೈ ತಂಡದ ಪರ ಆಡುವುದು ಅನುಮಾನ.

ಸದ್ಯಕ್ಕೆ 2025ರ ಐಪಿಎಲ್ ಮೆಗಾ ಹರಾಜಿನ ಮೊದಲು ಪ್ರತಿ ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಕೈಬಿಡುವ ಆಟಗಾರರ ಸಂಖ್ಯೆಯ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ.

 

ಭಾರತ ಮತ್ತು ಶ್ರೀಲಂಕಾ ಏಕದಿನ ಸರಣಿ ವೇಳಾಪಟ್ಟಿ

ಆಗಸ್ಟ್ 2, 1ನೇ ಏಕದಿನ - ಪ್ರೇಮದಾಸ ಕ್ರೀಡಾಂಗಣ

ಆಗಸ್ಟ್ 4, 2ನೇ ಏಕದಿನ - ಪ್ರೇಮದಾಸ ಸ್ಟೇಡಿಯಂ

ಆಗಸ್ಟ್ 7, 3ನೇ ಏಕದಿನ, ಪ್ರೇಮದಾಸ ಸ್ಟೇಡಿಯಂ

ಭಾರತ ಏಕದಿನ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

ಶ್ರೀಲಂಕಾ ಏಕದಿನ ತಂಡ

ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಸದಿರ ಸಮರವಿಕ್ರಮ್, ಕಮಿಂದು ಮೆಂಡಿಸ್, ಜನಿತ್ ಲಿಯಾಂಗೆ, ನಿಶಾನ್ ಮದುಷ್ಕ, ವನಿಂದು ಹಸರಂಗ, ದುನಿತ್ ವೆಲಲಾಗೆ, ಚಮೇಕ ಕರುಣಾರತ್ನೆ, ಡಿ. ದಿಲಾಶನ್, ಮಥೀಶ ಪತಿರಾನ ಮತ್ತು ಅಸಿತ ಫೆರ್ನಾಂಡೋ.

 

Whats_app_banner