ಕನ್ನಡ ಸುದ್ದಿ  /  ಕ್ರಿಕೆಟ್  /  ಅನುಭವಿ ಬಾಂಗ್ಲಾದೇಶಕ್ಕೆ ಅಚ್ಚರಿಯ ಸೋಲುಣಿಸಿದ ಯುಎಸ್‌ಎ; ಮಿಂಚಿದ ಮಾಜಿ ಭಾರತೀಯ ಹರ್ಮೀತ್ ಸಿಂಗ್, ವಿಶ್ವಕಪ್‌ಗೆ ಭರ್ಜರಿ ತಯಾರಿ

ಅನುಭವಿ ಬಾಂಗ್ಲಾದೇಶಕ್ಕೆ ಅಚ್ಚರಿಯ ಸೋಲುಣಿಸಿದ ಯುಎಸ್‌ಎ; ಮಿಂಚಿದ ಮಾಜಿ ಭಾರತೀಯ ಹರ್ಮೀತ್ ಸಿಂಗ್, ವಿಶ್ವಕಪ್‌ಗೆ ಭರ್ಜರಿ ತಯಾರಿ

USA vs BAN: 2010ರಲ್ಲಿ ಭಾರತ ಅಂಡರ್ 19 ವಿಶ್ವಕಪ್ ಗೆದ್ದ ತಂಡದಲ್ಲಿ ಆಡಿದ್ದ ಮಾಜಿ ಕ್ರಿಕೆಟಿಗ ಹರ್ಮೀತ್ ಸಿಂಗ್, ಟಿ20 ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಸೋಲುಣಿಸಿದ್ದಾರೆ. ಇದರೊಂದಿಗೆ ಯುಎಸ್ಎ ತಂಡದ ಗೆಲುವಿನ ಹೀರೋ ಆಗಿದ್ದರು.

ಅನುಭವಿ ಬಾಂಗ್ಲಾದೇಶಕ್ಕೆ ಅಚ್ಚರಿಯ ಸೋಲುಣಿಸಿದ ಯುಎಸ್‌ಎ
ಅನುಭವಿ ಬಾಂಗ್ಲಾದೇಶಕ್ಕೆ ಅಚ್ಚರಿಯ ಸೋಲುಣಿಸಿದ ಯುಎಸ್‌ಎ (USA Cricket)

ಕ್ರಿಕೆಟ್‌ನಲ್ಲಿ ಫಲಿತಾಂಶ ಏನಾಗುತ್ತೆ ಎಂಬುದನ್ನು ಮುಂಚೆಯೇ ನಿಖರವಾಗಿ ಊಹಿಸುವುದು ಕಷ್ಟ. ಪ್ರಬಲ ದಾಖಲೆ ಹೊಂದಿರುವ ಬಲಿಷ್ಠ ತಂಡವೊಂದನ್ನು ಸಾಧಾರಣ ತಂಡವೊಂದು ಮಣಿಸಬಹುದು. ಆಯಾ ಪಂದ್ಯದ ಮೇಲಿನ ಹಿಡಿತ, ಪಿಚ್‌ ಹಾಗೂ ಸಂದರ್ಭಕ್ಕೆ ತಕ್ಕಂತೆ ತಂತ್ರ ರೂಪಿಸಿ ಪಂದ್ಯ ಗೆಲ್ಲಲು ಸಾಧ್ಯ. ಈ ಬಾರಿ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಸಹ ಆತಿಥ್ಯ ವಹಿಸುತ್ತಿರವ ಯುಎಸ್‌ಎ ಇದೀಗ ಇಂಥಾ ಸಾಧನೆ ಮಾಡಿದೆ. ಪೂರ್ಣ ಸದಸ್ಯತ್ವ ಹೊಂದಿರುವ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಛಾಪು ಮೂಡಿಸಿರುವ ಬಾಂಗ್ಲಾದೇಶ ತಂಡಕ್ಕೆ ಅಮೆರಿಕ ಶಾಕ್‌ ಕೊಟ್ಟಿದೆ. ತನ್ನದೇ ತವರಿನಲ್ಲಿ ಬಾಂಗ್ಲಾ ಹುಲಿಗಳನ್ನು 5 ವಿಕೆಟ್‌ಗಳಿಂದ ಮಣಿಸಿ ಮೂರು ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಟ್ರೆಂಡಿಂಗ್​ ಸುದ್ದಿ

ಜೂನ್‌ 2ರಿಂದ ಟಿ20 ವಿಶ್ವಕಪ್‌ ನಡೆಯಲಿದೆ. ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಆತಿಥೇಯ ಅಮೆರಿಕ ಕ್ರಿಕೆಟ್‌ ತಂಡ ಇದೀಗ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಮೇ 21ರ ಮಂಗಳವಾರ ಹೂಸ್ಟನ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಐದು ವಿಕೆಟ್‌ಗಳ ಅಚ್ಚರಿಯ ಗೆಲುವು ಸಾಧಿಸಿದೆ. ವೆಸ್ಟ್ ಇಂಡೀಸ್‌ನೊಂದಿಗೆ ವಿಶ್ವಕಪ್‌ಗೆ ಸಹ ಆತಿಥ್ಯ ವಹಿಸುತ್ತಿರುವ ತಂಡವು, ಗುಂಪು ಹಂತದ ಪಂದ್ಯಗಳನ್ನು ಆಯೋಜಿಸಲಿದೆ. ಟೂರ್ನಿಗೂ ಮುನ್ನ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಸರಣಿಯು ತಂಡಕ್ಕೆ ಅಭ್ಯಾಸ ಪಂದ್ಯವಾಗಲಿದೆ.

ವಿಶ್ವ ಟಿ20 ಶ್ರೇಯಾಂಕದಲ್ಲಿ ಬಾಂಗ್ಲಾದೇಶ ತಂಡವು ಒಂಬತ್ತನೇ ಸ್ಥಾನದಲ್ಲಿದ್ದರೆ, ಯುಎಸ್ಎ ತಂಡವು ನೇಪಾಳ ಮತ್ತು ಒಮಾನ್ ತಂಡಗಳ ನಂತರ 19ನೇ ಸ್ಥಾನದಲ್ಲಿದೆ. ತಮಗಿಂತ ಅನುಭವಿ ಹಾಗೂ ಬಲಿಷ್ಠ ತಂಡಕ್ಕೆ ಅಮೆರಿಕನ್ನರು ಅಚ್ಚರಿ ಮೂಡಿಸಿದ್ದಾರೆ.

ಮಾಜಿ ಭಾರತೀಯ ಹರ್ಮೀತ್ ಸಿಂಗ್ ಅಬ್ಬರ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತೌಹಿದ್ ಹ್ರಿದೋಯ್ 47 ಎಸೆತಗಳಲ್ಲಿ 58 ರನ್ ಗಳಿಸಿದರು. ಅತ್ತ ಅಮೆರಿಕ ಪರ ಆಫ್ ಸ್ಪಿನ್ನರ್ ಸ್ಟೀವನ್ ಟೇಲರ್ 3 ಓವರ್‌ಗಳಲ್ಲಿ 9 ರನ್‌ ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್ ಪಡೆದರು. ಅಂತಿಮವಾಗಿ ತಂಡ 153 ರನ್‌ ಮಾತ್ರ ಗಳಿಸಿತು. ಸರಳ ಗುರಿ ಬೆನ್ನಟ್ಟಿದ ಯುಎಸ್‌ಎ ಪರ, 2010ರಲ್ಲಿ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದ ಹರ್ಮೀತ್ ಸಿಂಗ್ ಅಬ್ಬರಿಸಿದರು. ಕೋರಿ ಆಂಡರ್ಸನ್ ಜೊತೆಗೂಡಿ ಭಾರತದ ಮಾಜಿ ಆಟಗಾರ 61 ರನ್‌ ಜೊತೆಯಾಟವಾಡಿದರು. ಹೀಗಾಗಿ ಯುಎಸ್ಎ ತಂಡ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು.

ಇದನ್ನೂ ಓದಿ | ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಡೆಲ್ಲಿ ಕ್ಯಾಪಿಟಲ್ಸ್ ಸಿಡಿಗುಂಡು ಜೇಕ್ ಫ್ರೇಸರ್ ಮೆಕ್‌ಗುರ್ಕ್

ನ್ಯೂಜಿಲೆಂಡ್‌ನ ಮಾಜಿ ಅನುಭವಿ ಆಟಗಾರ ಕೋರಿ ಆಂಡರ್ಸನ್ 25 ಎಸೆತಗಳಲ್ಲಿ 2 ಸಿಕ್ಸರ್‌ ಸಹಿತ 34 ರನ್ ಗಳಿಸಿದರೆ, ಸಿಂಗ್ ಕೇವಲ 13 ಎಸೆತಗಳಲ್ಲಿ 33 ರನ್ ಗಳಿಸಿದರು. ಇದರಲ್ಲಿ 3 ಸಿಕ್ಸರ್‌ ಕೂಡಾ ಸೇರಿದೆ.

ಕೊನೆಯ ಓವರ್‌ನಲ್ಲಿ ಅಮೆರಿಕನ್ನರಿಗೆ ಒಂಬತ್ತು ರನ್‌ ಅವಶ್ಯಕತೆಯಿತ್ತು. ಮಹಮುದುಲ್ಲಾ ಎಸೆತದಲ್ಲಿ ಆಂಡರ್ಸನ್ ಮೊದಲ ಎಸೆತಕ್ಕೆ ಸಿಕ್ಸರ್ ಸಿಡಿಸಿದರು. ಮೂರನೇ ಎಸೆತದಲ್ಲಿ ನಾಲ್ಕು ರನ್ ಬಾರಿಸಿದ ಹರ್ಮೀತ್‌ ತಂಡಕ್ಕೆ ಐತಿಹಾಸಿಕ ಗೆಲುವು ತಂಡದುಕೊಟ್ಟರು.

ಸರಣಿಯ ಎರಡನೇ ಪಂದ್ಯ ಗುರುವಾರ ಹೂಸ್ಟನ್‌ನ ಇದೇ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ | ಟಿ20 ವಿಶ್ವಕಪ್​ಗೆ ರಾಹುಲ್​ ದ್ರಾವಿಡ್ ಅಧಿಕಾರ ಅಂತ್ಯ; ಮುಖ್ಯಕೋಚ್ ಸ್ಥಾನಕ್ಕೆ ಮೂವರ ನಡುವೆ ತೀವ್ರ ಪೈಪೋಟಿ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ