ಡಬ್ಲ್ಯುಟಿಸಿ ಫೈನಲ್​ಗೇರದ ಭಾರತ, ಐಕಾನಿಕ್ ಲಾರ್ಡ್ಸ್ ಮೈದಾನಕ್ಕೆ 45 ಕೋಟಿ ನಷ್ಟ; ಟಿಕೆಟ್ ಬೆಲೆ ಅರ್ಧಕ್ಕರ್ಧ ಕಟ್
ಕನ್ನಡ ಸುದ್ದಿ  /  ಕ್ರಿಕೆಟ್  /  ಡಬ್ಲ್ಯುಟಿಸಿ ಫೈನಲ್​ಗೇರದ ಭಾರತ, ಐಕಾನಿಕ್ ಲಾರ್ಡ್ಸ್ ಮೈದಾನಕ್ಕೆ 45 ಕೋಟಿ ನಷ್ಟ; ಟಿಕೆಟ್ ಬೆಲೆ ಅರ್ಧಕ್ಕರ್ಧ ಕಟ್

ಡಬ್ಲ್ಯುಟಿಸಿ ಫೈನಲ್​ಗೇರದ ಭಾರತ, ಐಕಾನಿಕ್ ಲಾರ್ಡ್ಸ್ ಮೈದಾನಕ್ಕೆ 45 ಕೋಟಿ ನಷ್ಟ; ಟಿಕೆಟ್ ಬೆಲೆ ಅರ್ಧಕ್ಕರ್ಧ ಕಟ್

WTC 2025: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ 2025ರ ಫೈನಲ್ ಬಗ್ಗೆ ವರದಿಯೊಂದು ಆಘಾತಕಾರಿಯಾಗಿದೆ. ಭಾರತ ಫೈನಲ್​ ಪ್ರವೇಶಿಸಿದ ಕಾರಣ ಲಾರ್ಡ್ಸ್​ಗೆ ದೊಡ್ಡ ನಷ್ಟ ಅನುಭವಿಸಲಿದೆ.

ಡಬ್ಲ್ಯುಟಿಸಿ ಫೈನಲ್​ಗೇರದ ಭಾರತ, ಐಕಾನಿಕ್ ಲಾರ್ಡ್ಸ್ ಮೈದಾನಕ್ಕೆ 45 ಕೋಟಿ ನಷ್ಟ; ಟಿಕೆಟ್ ಬೆಲೆ ಅರ್ಧಕ್ಕರ್ಧ ಕಟ್
ಡಬ್ಲ್ಯುಟಿಸಿ ಫೈನಲ್​ಗೇರದ ಭಾರತ, ಐಕಾನಿಕ್ ಲಾರ್ಡ್ಸ್ ಮೈದಾನಕ್ಕೆ 45 ಕೋಟಿ ನಷ್ಟ; ಟಿಕೆಟ್ ಬೆಲೆ ಅರ್ಧಕ್ಕರ್ಧ ಕಟ್ (AFP)

ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಜೂನ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ 2025ರ ಫೈನಲ್​ಗೆ (WTC Final) ಅರ್ಹತೆ ಪಡೆಯಲು ಭಾರತ ತಂಡ ವಿಫಲವಾಗಿದೆ. ಭಾರತ ಕ್ವಾಲಿಫೈ ಆಗದ ಕಾರಣ ಈ 5 ದಿನಗಳ ಪಂದ್ಯದ ಆಯೋಜಕರಿಗೆ 4 ಮಿಲಿಯನ್ ಪೌಂಡ್ (ಸುಮಾರು 45 ಕೋಟಿ ರೂಪಾಯಿಗೂ ಹೆಚ್ಚು) ನಷ್ಟವಾಗುವ ಸಾಧ್ಯತೆ ಇದೆ. ವಿಶ್ವ ಕ್ರಿಕೆಟ್​ನಲ್ಲಿ ಭಾರತದ ತಾಕತ್ತು ಎಷ್ಟಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಕಳೆದ 2 ಆವೃತ್ತಿಗಳಲ್ಲೂ ಫೈನಲ್ ಪ್ರವೇಶಿಸಿದ್ದ ಭಾರತ, ಕ್ರಮವಾಗಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಸೋತು ರನ್ನರ್​ಅಪ್ ಆಗಿತ್ತು. ಆದರೆ 3ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಹೀನಾಯ ಸೋಲುಂಡ ಕಾರಣ ಸತತ 3ನೇ ಸಲ ಪ್ರಶಸ್ತಿ ಸುತ್ತಿಗೆ ಅರ್ಹತೆ ಗಳಿಸಲು ಸಾಧ್ಯವಾಗಿಲ್ಲ. ಬದಲಿಗೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಫೈನಲ್ ನಡೆಯಲಿದೆ.

2023-25ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಒಟ್ಟು 19 ಟೆಸ್ಟ್​ ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಆದರೆ ಗೆದ್ದಿರುವು 9 ಪಂದ್ಯ ಮಾತ್ರ. 8ರಲ್ಲಿ ಸೋಲು, 2ರಲ್ಲಿ ಡ್ರಾ ಸಾಧಿಸಿದೆ. ಅಂತೆಯೇ ಸ್ಲೋ ಓವರ್ ಕಾರಣದಿಂದ 2 ಅಂಕ ಕಳೆದುಕೊಂಡಿದೆ. ಆವೃತ್ತಿಯ ಅಂತ್ಯಕ್ಕೆ ಟೀಮ್ ಇಂಡಿಯಾ ಒಟ್ಟು 114 ಅಂಕಗಳಿಸಿದ್ದು, ಗೆಲುವಿನ ಶೇ 50 ರಷ್ಟಿದೆ. ಆ ಮೂಲಕ ಭಾರತ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ.

45 ಕೋಟಿ ರೂ ನಷ್ಟದ ಸಾಧ್ಯತೆ

ಡಬ್ಲ್ಯುಟಿಸಿ ಫೈನಲ್​​ಗೆ ಭಾರತ ಅರ್ಹತೆ ಪಡೆಯಲು ವಿಫಲವಾದ ಬೆನ್ನಲ್ಲೇ ಲಂಡನ್​ನ ಲಾರ್ಡ್ಸ್​ ಮೈದಾನಕ್ಕೆ 45 ಕೋಟಿ ರೂಪಾಯಿ ನಷ್ಟವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಜೂನ್ 11 ರಿಂದ 15ರ ತನಕ ಇಂಗ್ಲೆಂಡ್​ನ ಲಂಡನ್​ನಲ್ಲಿರುವ ಲಾರ್ಡ್ಸ್ ಮೈದಾನವು ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಪಂದ್ಯದಿಂದ ಲಾರ್ಡ್ಸ್​ಗೆ ಬರುವ ಆದಾಯದಲ್ಲಿ 45 ಕೋಟಿ ಕಡಿತವಾಗಲಿದೆ ಎನ್ನಲಾಗಿದೆ.

ಫೈನಲ್​ನಲ್ಲಿ ಭಾರತ ಆಡಿದ್ದರೆ ನಷ್ಟವಾಗುತ್ತಿರಲಿಲ್ಲ. ಆದರೆ ಭಾರತ ಅರ್ಹತೆ ಪಡೆಯದ ಕಾರಣ ನಷ್ಟವಾಗುವ ಸಾಧ್ಯತೆಯನ್ನು ಮೆರಿಲ್​ಬೊನ್ ಕ್ರಿಕೆಟ್ ಕ್ಲಬ್ ಅಂದಾಜಿಸಿದೆ. ಇದು ನಿರೀಕ್ಷಿಸಿದ ಆರ್ಥಿಕ ಲಾಭಗಳ ಮೇಲೆ ಪರಿಣಾಮ ಬೀರಿದೆ. ಇದು ಜಾಗತಿಕ ಆಟದಲ್ಲಿ ಭಾರತೀಯ ಕ್ರಿಕೆಟ್​​ನ ಆರ್ಥಿಕ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ. ಭಾರತ ಅರ್ಹತೆ ಪಡೆಯುತ್ತದೆ ಎಂದು ಕಾರಣಕ್ಕೆ ಮೈದಾನವನ್ನು ನವೀಕರಣಗೊಳಿಸಸಲಾಗಿದೆ.

ಟಿಕೆಟ್ ಬೆಲೆ ಕಡಿತ

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ಭಾರತವಿಲ್ಲದೆ ಬೇಡಿಕೆ ಕುಸಿಯುತ್ತಲೇ ಇತ್ತ ಟಿಕೆಟ್ ದರಗಳನ್ನು ಕಡಿಮೆ ಮಾಡಲಾಗಿದೆ. ಟಿಕೆಟ್ ಬೆಲೆ 4500 ರೂಪಾಯಿಯಿಂದ 10,000 ರೂಪಾಯಿ ತನಕ ನಿಗದಿಯಾಗಿದೆ. ಇದು ಆದಾಯದಲ್ಲಿ ಇಳಿಕೆಗೆ ಕಾರಣವಾಗಿದೆ. ಆದರೆ ಕಳೆದ ಬಾರಿಗಿಂತ 5500 ರೂನಷ್ಟು ಕಡಿಮೆ ಮಾಡಲಾಗಿದೆ. ಇದು ನಷ್ಟಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಡಬ್ಲ್ಯುಟಿಸಿ ಫೈನಲ್​ನಲ್ಲಿ ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ

ಜೂನ್ 11ರಿಂದ 15ರ ತನಕ ಲಾರ್ಡ್ಸ್​ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಡಬ್ಲ್ಯುಟಿಸಿ ಫೈನಲ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ಸತತ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ದಕ್ಷಿಣ ಆಫ್ರಿಕಾ ಚೊಚ್ಚಲ ಟ್ರೋಫಿ ಜಯಿಸುವ ಕನಸಿನಲ್ಲಿದೆ. 19 ಪಂದ್ಯಗಳಲ್ಲಿ 13 ಗೆಲುವು, 4 ಸೋಲಿನೊಂದಿಗೆ ಆಸ್ಟ್ರೇಲಿಯಾ 2ನೇ ಸ್ಥಾನಕ್ಕೇರಿ ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಗೆಲುವಿನ ಪ್ರಮಾಣ 67.54 ರಷ್ಟಿದೆ. ದಕ್ಷಿಣ ಆಫ್ರಿಕಾ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲಿನೊಂದಿಗೆ 69.440ರಷ್ಟು ಗೆಲುವಿನ ಶೇಕಡವಾರು ಹೊಂದಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner