ಕನ್ನಡ ಸುದ್ದಿ  /  Cricket  /  India Are Missing Virat Kohli Ex Batter Sanjay Manjrekar Makes Huge Remark On Commentary During Ind Vs Eng 4th Test Prs

ಕೊಹ್ಲಿಯನ್ನು ಭಾರತ ಮಿಸ್ ಮಾಡಿಕೊಳ್ತಿದೆ; ಈ ವಿಚಾರದಲ್ಲಿ ಆತ ಯಾವತ್ತಿದ್ರೂ ಕಿಂಗ್; ಮಾಜಿ ಕ್ರಿಕೆಟಿಗ ಗುಣಗಾನ

Sanjay Manjrekar on Kohli : ವೈಯಕ್ತಿಕ ಕಾರಣದಿಂದ ಟೆಸ್ಟ್​ ಸರಣಿಯಿಂದ ಹಿಂದೆ ಸರಿದಿರುವ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ ತಂಡದಲ್ಲಿ ಇರಬೇಕಿತ್ತು ಎನ್ನುವ ಬಯಕೆ ಹೊರ ಹಾಕಿದ್ದಾರೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್.

ಕೊಹ್ಲಿಯನ್ನು ಭಾರತ ಮಿಸ್ ಮಾಡಿಕೊಳ್ತಿದೆ; ಈ ವಿಚಾರದಲ್ಲಿ ಆತ ಯಾವತ್ತಿದ್ರೂ ಕಿಂಗ್; ಮಾಜಿ ಕ್ರಿಕೆಟಿಗ ಗುಣಗಾನ
ಕೊಹ್ಲಿಯನ್ನು ಭಾರತ ಮಿಸ್ ಮಾಡಿಕೊಳ್ತಿದೆ; ಈ ವಿಚಾರದಲ್ಲಿ ಆತ ಯಾವತ್ತಿದ್ರೂ ಕಿಂಗ್; ಮಾಜಿ ಕ್ರಿಕೆಟಿಗ ಗುಣಗಾನ

ಭಾರತ ಪ್ರಸ್ತುತ ರಾಂಚಿಯ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಐದು ಪಂದ್ಯಗಳ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡುತ್ತಿದೆ. ಸದ್ಯ ಭಾರತ ಈ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿದೆ. ಆದರೆ ನಾಲ್ಕನೇ ಟೆಸ್ಟ್​​ ಭಾರತೀಯ ಬ್ಯಾಟರ್​​​ ನಿರಾಸೆ ಮೂಡಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಇರಬೇಕಿತ್ತು ಎಂದು ಮಾಜಿ ಕ್ರಿಕೆಟರೊಬ್ಬರು ಆಶಯ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕ ಕಾರಣದಿಂದ ಟೆಸ್ಟ್​ ಸರಣಿಯಿಂದ ಹಿಂದೆ ಸರಿದಿರುವ ಸ್ಟಾರ್​ ಆಟಗಾರ ವಿರಾಟ್ ತಂಡದಲ್ಲಿ ಇರಬೇಕಿತ್ತು ಎನ್ನುವ ಬಯಕೆ ಹೊರ ಹಾಕಿದ್ದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್. ಪಂದ್ಯದ ಎರಡನೇ ದಿನದಾಟದಲ್ಲಿ ಜೋ ರೂಟ್​ ಮತ್ತು ಒಲ್ಲಿ ರಾಬಿನ್ಸನ್ ಬ್ಯಾಟಿಂಗ್ ನಡೆಸುವ ವೇಳೆ ಭಾರತ ಫೀಲ್ಡರ್ಸ್ ಉತ್ಸಾಹ ಕಳೆದುಕೊಂಡಂತಿತ್ತು. ಪ್ರೇಕ್ಷಕರು ಮುಖದಲ್ಲೂ ಮಂದಹಾಸ ಇರಲಿಲ್ಲ.

‘ಕೊಹ್ಲಿಯನ್ನು ಭಾರತ ಮಿಸ್ ಮಾಡಿಕೊಳ್ತಿದೆ’

ಈ ಕಾರಣಕ್ಕಾಗಿ ಕೊಹ್ಲಿ ತಂಡದಲ್ಲಿ ಇರಬೇಕಿತ್ತು ಎಂದು ಮಂಜ್ರೇಕರ್​ ಹೇಳಿದ್ದಾರೆ. ವಿರಾಟ್ ಕೊಹ್ಲಿ ಮೈದಾನದಲ್ಲಿ ಇದ್ದಿದ್ದರೆ ಆಟಗಾರರ ಮತ್ತು ಪ್ರೇಕ್ಷಕರ ಜೋಶ್ ಹೆಚ್ಚಿಸುತ್ತಿದ್ದರು. ಪ್ರೇಕ್ಷಕರನ್ನು ತಮ್ಮ ಕಡೆ ಸೆಳೆಯುತ್ತಿದ್ದರು. ಬೆಂಬಲ ಪಡೆಯುತ್ತಿದ್ರು. ಆದರೀಗ ಕೊಹ್ಲಿಯನ್ನು ಭಾರತ ಮಿಸ್ ಮಾಡಿಕೊಳ್ಳುತ್ತಿದೆ ಎಂದು ಲೈವ್ ಕಾಮೆಂಟರಿಯಲ್ಲಿ ಹೇಳಿದರು. ಇದಕ್ಕೆ ನೆಟ್ಟಿಗರು ಸಹಮತ ವ್ಯಕ್ತಪಡಿಸಿದ್ದಾರೆ.

ಫೀಲ್ಡರ್​​ಗಳು ನಿರುತ್ಸಾಹಗೊಂಡಿದ್ದರೆ ಅಥವಾ ಶಾಂತವಾಗಿದ್ದರೆ ಅದನ್ನು ಹಿಮ್ಮೆಟ್ಟಿಸಲು ಪ್ರೇಕ್ಷಕರಿಂದ ಬೆಂಬಲ ಪಡೆಯುವ ಆಟಗಾರರಲ್ಲಿ ವಿರಾಟ್ ಕೊಹ್ಲಿ ಒಬ್ಬರು. ಪ್ರೇಕ್ಷಕರಿಗೆ ಶಕ್ತಿ ತುಂಬಿ, ಅವರಿಂದ ಆಟಗಾರರಿಗೆ ಪವರ್ ಕೊಡಿಸುತ್ತಾರೆ. ಸದ್ಯ ಭಾರತ ತಂಡದ ಪರಿಸ್ಥಿತಿ ನೋಡಿದರೆ ಆತನ ಕೊರತೆಯೂ ಎದ್ದುಕಾಣುತ್ತಿದೆ. ಇಡೀ ಭಾರತ ಆತನನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.

ಮಂಜ್ರೇಕರ್ ಜೊತೆಗೆ ಕಾಮೆಂಟರಿಯಲ್ಲಿದ್ದ ದಿನೇಶ್ ಕಾರ್ತಿಕ್ ಕೂಡ ಈ ಸತ್ಯವನ್ನು ಒಪ್ಪಿಕೊಂಡರು. ಕೊಹ್ಲಿಗೆ ಪ್ರೇಕ್ಷಕರನ್ನು ಸೆಳೆಯುವ ವಿಶೇಷವಾದ ಕೌಶಲ್ಯ ಇದೆ ಎಂದು ವಿಕೆಟ್ ಕೀಪರ್ ಹೇಳಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2ನೇ ಬಾರಿಗೆ ಪೋಷಕರಾಗಿದ್ದು, ಲಂಡನ್​ನಲ್ಲಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಮಗನಿಗೆ ಅಕಾಯ್ ಎಂದು ಹೆಸರು ಇಟ್ಟಿದ್ದಾರೆ.

ಮೈದಾನದಲ್ಲಿ ಕೊಹ್ಲಿ ಸಖತ್ ಆ್ಯಕ್ಟೀವ್

ಕೊಹ್ಲಿ ಮೈದಾನದಲ್ಲಿದ್ದರೆ ಸಖತ್ ಸಕ್ರಿಯರಾಗಿರುತ್ತಾರೆ. ಸಹ ಆಟಗಾರರನ್ನು ಕೀಟಲೆ ಮಾಡುವುದು, ಡ್ಯಾನ್ಸ್ ಮಾಡುವುದು, ಕೆಣಕುವುದು, ಹುರಿದುಂಬಿಸುವುದು, ವಿಭಿನ್ನವಾಗಿ ಸೆಲೆಬ್ರೇಟ್ ಮಾಡುವುದು, ಗೇಲಿ ಮಾಡುವುದು ಹೀಗೆ ಒಂದಿಲ್ಲೊಂದು ಮನರಂಜನೆ ನೀಡುತ್ತಿರುತ್ತಾರೆ. ಇದು ಮೈದಾನದಲ್ಲಿರುವ ನೆರೆದಿರುವ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತದೆ. ಇದೇ ಕಾರಣಕ್ಕೆ ಸಂಜಯ್ ಮಂಜ್ರೇಕರ್ ಕೊಹ್ಲಿ ಇರಬೇಕಿತ್ತು ಎಂದು ಹೇಳಿದ್ದಾರೆ.

ಐಪಿಎಲ್​ಗೆ ಮರಳುವ ಸಾಧ್ಯತೆ

ಸದ್ಯ ಕೊಹ್ಲಿ ಲಂಡನ್​ನಲ್ಲಿದ್ದು, ಅನುಷ್ಕಾ ಶರ್ಮಾ ಜೊತೆ ಸಮಯ ಕಳೆಯುತ್ತಿದ್ದಾರೆ. ಕೆಲವು ವರದಿಗಳ ಪ್ರಕಾರ ಐದನೇ ಟೆಸ್ಟ್​ ಪಂದ್ಯಕ್ಕೆ ಮರಳುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಎಷ್ಟರಮಟ್ಟಿಗೆ ಸತ್ಯ ಎಂಬುದರ ಕುರಿತು ಸ್ಪಷ್ಟನೆ ಇಲ್ಲ. ಆದರೆ ಐಪಿಎಲ್​ಗೆ ಮರಳುವುದು ಖಚಿತ. ಏಕೆಂದರೆ ಇನ್ನೂ ಒಂದು ತಿಂಗಳು ಬಾಕಿ ಇದ್ದು ಮಿಲಿಯನ್ ಡಾಲರ್​ ಟೂರ್ನಿಯಲ್ಲಿ ಮಿಂಚುವ ನಿರೀಕ್ಷೆಯಲ್ಲಿದ್ದಾರೆ.

IPL_Entry_Point