ಕನ್ನಡ ಸುದ್ದಿ  /  ಕ್ರಿಕೆಟ್  /  140 ಕೋಟಿ ಭಾರತೀಯರ ಕನಸು ಕೊನೆಗೂ ನನಸು; ಸೌತ್ ಆಫ್ರಿಕಾ ಸೋಲಿಸಿ ಐತಿಹಾಸಿಕ ಟಿ20 ವಿಶ್ವಕಪ್ ಗೆದ್ದ ಭಾರತ

140 ಕೋಟಿ ಭಾರತೀಯರ ಕನಸು ಕೊನೆಗೂ ನನಸು; ಸೌತ್ ಆಫ್ರಿಕಾ ಸೋಲಿಸಿ ಐತಿಹಾಸಿಕ ಟಿ20 ವಿಶ್ವಕಪ್ ಗೆದ್ದ ಭಾರತ

India vs South Africa Final : ಟಿ20 ವಿಶ್ವಕಪ್ 2024 ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 7 ರನ್​ಗಳ ರೋಚಕ ಗೆಲುವು ಸಾಧಿಸಿ ಭಾರತ ವಿಶ್ವಕಪ್​ ಗೆದ್ದು ಐತಿಹಾಸಿಕ ದಾಖಲೆ ಬರೆಯಿತು.

140 ಕೋಟಿ ಭಾರತೀಯರ ಕನಸು ಕೊನೆಗೂ ನನಸು; ಸೌತ್ ಆಫ್ರಿಕಾ ಸೋಲಿಸಿ ಐತಿಹಾಸಿಕ ಟಿ20 ವಿಶ್ವಕಪ್ ಗೆದ್ದ ಭಾರತ
140 ಕೋಟಿ ಭಾರತೀಯರ ಕನಸು ಕೊನೆಗೂ ನನಸು; ಸೌತ್ ಆಫ್ರಿಕಾ ಸೋಲಿಸಿ ಐತಿಹಾಸಿಕ ಟಿ20 ವಿಶ್ವಕಪ್ ಗೆದ್ದ ಭಾರತ (AP)

140 ಕೋಟಿ ಭಾರತೀಯರ ಕನಸು ಕೊನೆಗೂ ನನಸಾಯಿತು. ಟೀಮ್ ಇಂಡಿಯಾ 2ನೇ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ದಾಖಲೆ ಬರೆಯಿತು. 2024ರ ಟಿ20 ವಿಶ್ವಕಪ್ ಫೈನಲ್​ನಲ್ಲಿ ರೋಚಕ ಗೆಲುವು ಸಾಧಿಸಿದ ರೋಹಿತ್​ ಪಡೆ, ಎರಡು ಚುಟುಕು ಟ್ರೋಫಿ ಗೆದ್ದ 3ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದರೊಂದಿಗೆ ಏಳೇ ತಿಂಗಳಲ್ಲಿ ಏಕದಿನ ವಿಶ್ವಕಪ್​ ಸೋಲಿನ ನೋವನ್ನು ಮರೆಸಿತು. ಫೈನಲ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ 8 ರನ್​ಗಳ ರೋಚಕ ಜಯ ದಾಖಲಿಸಿ ಕೊನೆಗೂ ಟ್ರೋಫಿ ಬರ ಕೊನೆಗೊಳಿಸಿತು. 

ಟ್ರೆಂಡಿಂಗ್​ ಸುದ್ದಿ

2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಂತರ ಅಂದರೆ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದು ಬೀಗಿದ ಭಾರತ ತಂಡವು, ರೋಹಿತ್​ ಶರ್ಮಾ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿತು. 2011ರ ನಂತರ 13 ವರ್ಷಗಳ ವಿಶ್ವಕಪ್ ಗೆದ್ದಿತು. ಆದರೆ ಸೌತ್ ಆಫ್ರಿಕಾ ಚೊಚ್ಚಲ ವಿಶ್ವಕಪ್ ಟ್ರೋಫಿ ಗೆಲ್ಲಲು ವಿಫಲವಾಯಿತು. ತನಗಿರುವ ಚೋಕರ್ಸ್ ಹಣೆಪಟ್ಟಿಯನ್ನು ಕಳಚಲು ವಿಫಲವಾಯಿತು. 24 ಎಸೆತಗಳಲ್ಲಿ 26 ರನ್ ಬೇಕಿದ್ದ ಅವಧಿಯಲ್ಲಿ ಭಾರತ ಗೆಲ್ಲುವುದು ಬಹುತೇಕ ಕಷ್ಟವಾಗಿತ್ತು. ಆದರೆ, ಆ ಬಳಿಕ ನಡೆದಿದ್ದೇ ಪವಾಡ.

ಕಪಿಲ್ ದೇವ್, ಎಂಎಸ್ ಧೋನಿ ನಂತರ ರೋಹಿತ್​ ಶರ್ಮಾ ವಿಶ್ವಕಪ್ ಗೆದ್ದ ಮೂರನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಬಲದಿಂದ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್​​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ, ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿತು. ಅದರಲ್ಲೂ ಹೆನ್ರಿಚ್ ಕ್ಲಾಸೆನ್ ಅದ್ಭುತ ಪ್ರದರ್ಶನ ನೀಡಿದರು. 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.

177 ರನ್​ಗಳ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ರೀಜಾ ಹೆಂಡ್ರಿಕ್ಸ್ ಮತ್ತು ಏಡನ್ ಮಾರ್ಕ್ರಮ್ ಬೇಗನೇ ಔಟಾದರು. ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಆ ಬಳಿಕ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಬೌಲರ್​ಗಳ ಮೇಲೆ ಸವಾರಿ ನಡೆಸಿದರು. 3ನೇ ವಿಕೆಟ್​ಗೆ 58 ರನ್​ಗಳ ಪಾಲುದಾರಿಕೆ ಬಂತು. ಈ ಹಂತದಲ್ಲಿ ಅಕ್ಷರ್​ ಪಟೇಲ್ ವಿಕೆಟ್ ಪಡೆದರು. ಸ್ಟಬ್ಸ್ 31 ರನ್ ಗಳಿಸಿ ಔಟಾದರು.

ಡಿ ಕಾಕ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರೆ, ಸ್ಟಬ್ಸ್ ಬಳಿಕ ಕಣಕ್ಕಿಳಿದ ಹೆನ್ರಿಚ್ ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್​ಗೆ ಒತ್ತು ಕೊಟ್ಟರು. ಕ್ರೀಸ್​ಗೆ ಬಂದ ತಕ್ಷಣವೇ 3 ಸಿಕ್ಸರ್ ಚಚ್ಚಿದರು. ಪಂದ್ಯ ಕೈ ತಪ್ಪುತ್ತಿದ್ದ ಹಂತದಲ್ಲಿ ಅರ್ಷದೀಪ್ ಮುನ್ನಡೆ ತಂದುಕೊಟ್ಟರು. ಕ್ವಿಂಟನ್ ಡಿ ಕಾಕ್ ಉಪಯುಕ್ತ 39 ರನ್ ಗಳಿಸಿ ಕ್ಯಾಚ್​ ನೀಡಿದರು. ವಿಕೆಟ್ ಪತನದ ನಡುವೆಯೂ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಟೀಮ್ ಇಂಡಿಯಾ ಬೌಲರ್​ಗಳನ್ನು ಚೆಂಡಾಡಿದರು. ಕ್ಲಾಸೆನ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

ಆದರೆ ಅರ್ಧಶತಕದ ಬೆನ್ನಲ್ಲೇ ಕ್ಲಾಸೆನ್ ಅವರನ್ನು ಹಾರ್ದಿಕ್ ಪಾಂಡ್ಯ ಹೊರ ಹಾಕಿದರು. ಆಗ ತಂಡದ ಗೆಲುವಿಗೆ ಬೇಕಿದ್ದದ್ದು 24 ಎಸೆತಗಳಲ್ಲಿ 26 ರನ್ ಮಾತ್ರ. ಆದರೆ ಈ ಹಂತದಲ್ಲಿ ಭಾರತೀಯ ಬೌಲರ್​​ಗಳು ಟೈಟ್ ಬೌಲಿಂಗ್ ನಡೆಸಿದರು. 17ನೇ ಓವರ್​​ನಲ್ಲಿ 4 ರನ್ ನೀಡಿದರೆ, 18ನೇ ಓವರ್​​ನಲ್ಲಿ 2 ರನ್ ಮಾತ್ರ. 19ನೇ ಓವರ್​​ನಲ್ಲಿ 4 ರನ್ ಬಂತು. ಹೀಗಾಗಿ ಕೊನೆಯ ಓವರ್​​ನಲ್ಲಿ ಆಫ್ರಿಕಾ ಗೆಲುವಿಗೆ ಬೇಕಿದ್ದದ್ದು 16 ರನ್. ಹಾರ್ದಿಕ್ ಎಸೆದ ಈ ಓವರ್​ನಲ್ಲಿ ಮಿಲ್ಲರ್​ ಸಿಕ್ಸರ್ ಸಿಡಿಸಲು ಯತ್ನಿಸಿದರು. ಆದರೆ ಸೂರ್ಯಕುಮಾರ್ ಅದ್ಭುತ ಕ್ಯಾಚ್ ಹಿಡಿದು ತಂಡಕ್ಕೆ ತಿರುವು ಕೊಟ್ಟರು.

ವಿರಾಟ್ ಕೊಹ್ಲಿ ಹೋರಾಟ

ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಸ್ಫೋಟಕ ಆರಂಭ ಪಡೆಯುವ ಭರವಸೆ ನೀಡಿತು. ಆದರೆ ಎರಡನೇ ಓವರ್​ ಎಸೆದ ಕೇಶವ್ ಮಹಾರಾಜ್, ಭಾರತಕ್ಕೆ ಡಬಲ್ ಆಘಾತ ನೀಡಿದರು. ರೋಹಿತ್​ ಶರ್ಮಾ (9) ಮತ್ತು ರಿಷಭ್ ಪಂತ್ (47) ಅವರನ್ನ ಹೊರದಬ್ಬಿದರು. ನಂತರ ಸೂರ್ಯಕುಮಾರ್ (3) ಕೂಡ ಹೆಚ್ಚು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಈ ವೇಳೆ ಒಂದಾದ ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ತಂಡವನ್ನು ರಕ್ಷಿಸಿದರು. ಅಕ್ಷರ್ ಪಟೇಲ್ ಅಬ್ಬರದ 47 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಮೊದಲ ಅರ್ಧಶತಕ ಸಿಡಿಸಿದರು.

4ನೇ ವಿಕೆಟ್​ಗೆ ಅರ್ಧಶತಕ ಜೊತೆಯಾಟವನ್ನೂ ಆಡಿದ್ದಲ್ಲದೆ, ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ನಂತರ ಶಿವಂ ದುಬೆ ಮತ್ತು ವಿರಾಟ್ ಕೊಹ್ಲಿ ಕೂಡ ಆಕರ್ಷಕ ಆಟವಾಡಿದರು. 5ನೇ ವಿಕೆಟ್​ಗೆ 50+ಪಾಲುದಾರಿಕೆ ಒದಗಿಸಿದರು. ಆದರೆ ಕೊಹ್ಲಿ 59 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 76 ರನ್ ಸಿಡಿಸಿ ಔಟಾದರು. ಕೊನೆಯಲ್ಲಿ ಶಿವಂ ದುಬೆ 27, ಹಾರ್ದಿಕ್ ಪಾಂಡ್ಯ 5*, ರವೀಂದ್ರ ಜಡೇಜಾ 2 ರನ್ ಗಳಿಸಿದರು. ಕೇಶವ್ ಮಹಾರಾಜ್, ಆನ್ರಿಚ್ ನೋಕಿಯಾ ತಲಾ 2 ವಿಕೆಟ್ ಪಡೆದರು.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2007 ರಿಂದ 2024 ರವರೆಗಿನ T20 ವಿಶ್ವಕಪ್ ವಿಜೇತರ ಪಟ್ಟಿ
ವರ್ಷಅತಿಥೇಯ ದೇಶವಿಜೇತ (ರನ್ನರ್​ಅಪ್)
2007ದಕ್ಷಿಣ ಆಫ್ರಿಕಾಭಾರತ (ಪಾಕಿಸ್ತಾನ)
2009ಇಂಗ್ಲೆಂಡ್ಪಾಕಿಸ್ತಾನ (ಶ್ರೀಲಂಕಾ)
2010ವೆಸ್ಟ್ ಇಂಡೀಸ್ಇಂಗ್ಲೆಂಡ್ (ಆಸ್ಟ್ರೇಲಿಯಾ)
2012ಶ್ರೀಲಂಕಾವೆಸ್ಟ್ ಇಂಡೀಸ್ (ಶ್ರೀಲಂಕಾ)
2014ಬಾಂಗ್ಲಾದೇಶಶ್ರೀಲಂಕಾ (ಭಾರತ)
2016ಭಾರತವೆಸ್ಟ್ ಇಂಡೀಸ್ (ಇಂಗ್ಲೆಂಡ್)
2021ಯುಎಇ/ಓಮನ್ಆಸ್ಟ್ರೇಲಿಯಾ (ನ್ಯೂಜಿಲೆಂಡ್)
2022ಆಸ್ಟ್ರೇಲಿಯಾಇಂಗ್ಲೆಂಡ್ (ಪಾಕಿಸ್ತಾನ)
2024ಯುಎಸ್​/ವೆಸ್ಟ್ ಇಂಡೀಸ್ಭಾರತ (ಸೌತ್ ಆಫ್ರಿಕಾ)