ಇಂಗ್ಲೆಂಡ್ ವಿರುದ್ಧ ಸೋತು ಕಳಪೆ ದಾಖಲೆ ನಿರ್ಮಿಸಿದ ಭಾರತ; ಕೆಟ್ಟ ರೆಕಾರ್ಡ್ಸ್ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ವಿರುದ್ಧ ಸೋತು ಕಳಪೆ ದಾಖಲೆ ನಿರ್ಮಿಸಿದ ಭಾರತ; ಕೆಟ್ಟ ರೆಕಾರ್ಡ್ಸ್ ಪಟ್ಟಿ ಇಲ್ಲಿದೆ

ಇಂಗ್ಲೆಂಡ್ ವಿರುದ್ಧ ಸೋತು ಕಳಪೆ ದಾಖಲೆ ನಿರ್ಮಿಸಿದ ಭಾರತ; ಕೆಟ್ಟ ರೆಕಾರ್ಡ್ಸ್ ಪಟ್ಟಿ ಇಲ್ಲಿದೆ

India Create poor records: ಹೈದರಾಬಾದ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಸೋತ ಭಾರತ ತಂಡ, ಹಲವು ಕಳಪೆ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಅವುಗಳ ಪಟ್ಟಿ ಈ ಕೆಳಗಿನಂತಿದೆ.

ಭಾರತ ತಂಡ.
ಭಾರತ ತಂಡ.

ಹೈದರಾಬಾದ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ಭಾರತ ತಂಡದ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 28 ರನ್​ಗಳ ಜಯ ದಾಖಲಿಸಿದ ಪ್ರವಾಸಿ ಇಂಗ್ಲೆಂಡ್ (India vs England 1st Test), ಸರಣಿಯಲ್ಲಿ 0-1ರಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೆ, ಹೈದರಾಬಾದ್​ನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡವನ್ನು ಮಣಿಸಿದ ಮೊದಲ ತಂಡದ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಮೂಲಕ ಭಾರತದ ಅಜೇಯ ಓಟಕ್ಕೆ ತಡೆ ಬಿದ್ದಿದೆ.

ಗೆಲ್ಲುವ ಪಂದ್ಯದಲ್ಲಿ ಹೀನಾಯವಾಗಿ ಸೋತ ಭಾರತ, ಮೊದಲ ಇನ್ನಿಂಗ್ಸ್​​​ನಲ್ಲಿ 190 ರನ್​ಗಳ ಮುನ್ನಡೆ ಸಾಧಿಸಿತ್ತು. ಪ್ರಥಮ ಇನ್ನಿಂಗ್ಸ್​​ನಲ್ಲಿ 100+ ಮುನ್ನಡೆ ಸಾಧಿಸಿದ್ದರ ಹೊರತಾಗಿಯೂ ತವರಿನಲ್ಲಿ ಭಾರತ ಸೋತಿದ್ದು ಇದೇ ಮೊದಲು. 231 ರನ್​ಗಳ ಅಲ್ಪ ಗುರಿ ಪಡೆದ ಟೀಮ್ ಇಂಡಿಯಾ, 4ನೇ ದಿನದಾಟದಂದೇ ಗೆಲುವಿನ ನಗೆ ಬೀರುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 202 ರನ್​ಗಳಿಗೆ ಆಲೌಟ್​ ಆಗಿ ಮುಖಭಂಗಕ್ಕೆ ಒಳಗಾಯಿತು. ಅಲ್ಲದೆ, ಹಲವು ಕಳಪೆ ದಾಖಲೆಗಳನ್ನು ಭಾರತ ತನ್ನ ಹೆಸರಿಗೆ ಬರೆದುಕೊಂಡಿದೆ.

ಕೆಟ್ಟ ದಾಖಲೆಗಳ ಪಟ್ಟಿ

ಮೊದಲ ಇನ್ನಿಂಗ್ಸ್​​ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಹೊರತಾಗಿಯೂ ಭಾರತದ ನೆಲದಲ್ಲಿ ಗೆದ್ದ ಟೆಸ್ಟ್​ ಪಂದ್ಯಗಳು - ಕೆಳಗಿನಂತಿವೆ

  • ಆಸ್ಟ್ರೇಲಿಯಾಗೆ 274 ರನ್​ಗಳ ಮುನ್ನಡೆ; ಭಾರತಕ್ಕೆ 171 ರನ್​ಗಳ ಗೆಲುವು (2001, ಕೋಲ್ಕತ್ತಾ)
  • ಭಾರತ ತಂಡಕ್ಕೆ 190 ರನ್​ಗಳ ಮುನ್ನಡೆ; ಇಂಗ್ಲೆಂಡ್ ತಂಡಕ್ಕೆ 28 ರನ್​ಗಳ ಗೆಲುವು (2024, ಹೈದರಾಬಾದ್)
  • ಆಸೀಸ್​ಗೆ 99 ರನ್​​ಗಳ ಮುನ್ನಡೆ; ಭಾರತ ತಂಡಕ್ಕೆ 13 ರನ್​ಗಳ ಜಯ (2005, ಮುಂಬೈ)
  • ವೆಸ್ಟ್ ಇಂಡೀಸ್​ಗೆ 95 ರನ್​ಗಳ ಮುನ್ನಡೆ; ಭಾರತ ತಂಡಕ್ಕೆ 5 ವಿಕೆಟ್ ಗೆಲುವು (2015, ಡೆಲ್ಲಿ)
  • ಆಸ್ಟ್ರೇಲಿಯಾಗೆ 87 ರನ್​​ಗಳ ಮುನ್ನಡೆ; ಭಾರತ ತಂಡಕ್ಕೆ 75 ರನ್​ಗಳ ಗೆಲುವು (2017, ಬೆಂಗಳೂರು)
  • ಇಂಗ್ಲೆಂಡ್​​ಗೂ ಮೊದಲು ಪ್ರವಾಸಿ ತಂಡವೊಂದು ಹಿನ್ನಡೆ ಪಡೆದರೂ ಭಾರತದ ನೆಲದಲ್ಲಿ ಗೆದಿದ್ದ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. 139 ರನ್​ಗಳ ಹಿನ್ನಡೆ ಅನುಭವಿಸಿ ಕೊನೆಗೆ 65 ರನ್​ಗಳಿಂದ ಭಾರತ ವಿರುದ್ಧ ಗೆದ್ದಿತ್ತು. (1964, ಚೆನ್ನೈ)

ಮೊದಲ ಇನ್ನಿಂಗ್ಸ್​ನಲ್ಲಿ ಹೆಚ್ಚು ಮುನ್ನಡೆ ಪಡೆದರೂ ಭಾರತ ಸೋತ ಪಂದ್ಯಗಳು ಇವು

  • 192 ರನ್​ ಮುನ್ನಡೆ vs ಶ್ರೀಲಂಕಾ, ಗಾಲೆ (2015)
  • 190 ರನ್​ ಮುನ್ನಡೆ vs ಇಂಗ್ಲೆಂಡ್, ಹೈದರಾಬಾದ್ (2024)
  • 132 ರನ್​​ ಮುನ್ನಡೆ vs ಇಂಗ್ಲೆಂಡ್, ಬರ್ಮಿಂಗ್​ಹ್ಯಾಮ್, (2022)
  • 80 ರನ್​ ಮುನ್ನಡೆ vs ಆಸ್ಟ್ರೇಲಿಯಾ, ಅಡಿಲೇಡ್, (1992)
  • 69 ರನ್​ ಮುನ್ನಡೆ vs ಆಸ್ಟ್ರೇಲಿಯಾ, ಸಿಡ್ನಿ (2008)

ಮೊದಲ ಇನ್ನಿಂಗ್ಸ್​ನಲ್ಲಿ ಗರಿಷ್ಠ ಮೊತ್ತ ಸಿಡಿಸಿದ್ದರ ಹೊರತಾಗಿಯೂ ಭಾರತಕ್ಕೆ ಸೋಲು

  • ಬೆಂಗಳೂರಿನಲ್ಲಿ (2005) ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 449 ರನ್ ಗಳಿಸಿತ್ತು. ಆದರೂ ಸೋತಿತ್ತು.
  • ಹೈದರಾಬಾದ್​ನಲ್ಲಿ (2024) ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ನಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ 436 ಸಿಡಿಸಿಯೂ ಸೋಲು ಕಂಡಿದೆ.
  • ಬೆಂಗಳೂರಿನಲ್ಲಿ (1998) ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 412 ರನ್ ಗಳಿಸಿ ಪರಾಭವಗೊಂಡಿತ್ತು.
  • ಚೆನ್ನೈನಲ್ಲಿ (1985) ಇಂಗ್ಲೆಂಡ್ ಎದುರಿನ ಟೆಸ್ಟ್​ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 412 ರನ್ ಗಳಿಸಿತ್ತು. ಕೊನೆಗೆ ಸೊಲೊಪ್ಪಿಕೊಂಡಿತು.
  • ಮುಂಬೈನಲ್ಲಿ (1975) ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲಿ 406 ರನ್ ಗಳಿಸಿದರೂ ಭಾರತ ಸೋತಿತ್ತು.

ಟೆಸ್ಟ್​​ನಲ್ಲಿ ಭಾರತ ಕಡಿಮೆ ರನ್​ಗಳ ಅಂತರದ ಸೋಲು

12 ರನ್ vs ಪಾಕಿಸ್ತಾನ, ಚೆನ್ನೈ, 1999

16 ರನ್ vs ಆಸ್ಟ್ರೇಲಿಯಾ, ಬ್ರಿಸ್ಬೇನ್, 1977

16 ರನ್ vs ಪಾಕಿಸ್ತಾನ, ಬೆಂಗಳೂರು 1987

28 ರನ್ vs ಇಂಗ್ಲೆಂಡ್, ಹೈದರಾಬಾದ್, 2024

31 ರನ್ vs ಇಂಗ್ಲೆಂಡ್, ಬರ್ಮಿಂಗ್​ಹ್ಯಾಮ್, 2018

Whats_app_banner