ಭಾರತ ತಂಡ ದೊಡ್ಡ ಅಪಾಯಕ್ಕೆ ಸಿಲುಕಿದೆ; ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್​ಗೆ ಮೈಕಲ್ ಕ್ಲಾರ್ಕ್​ ಎಚ್ಚರಿಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ತಂಡ ದೊಡ್ಡ ಅಪಾಯಕ್ಕೆ ಸಿಲುಕಿದೆ; ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್​ಗೆ ಮೈಕಲ್ ಕ್ಲಾರ್ಕ್​ ಎಚ್ಚರಿಕೆ

ಭಾರತ ತಂಡ ದೊಡ್ಡ ಅಪಾಯಕ್ಕೆ ಸಿಲುಕಿದೆ; ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್​ಗೆ ಮೈಕಲ್ ಕ್ಲಾರ್ಕ್​ ಎಚ್ಚರಿಕೆ

Michael Clarke on Rahul Dravid-Rohit Sharma: ಟೀಮ್ ಇಂಡಿಯಾ ದೊಡ್ಡ ಅಪಾಯಕ್ಕೆ ಸಿಲುಕಿದೆ ಎಂದು ಮೈಕಲ್ ಕ್ಲಾರ್ಕ್ ಮತ್ತು ರೋಹಿತ್​ ಶರ್ಮಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಭಾರತ ತಂಡ ದೊಡ್ಡ ಅಪಾಯಕ್ಕೆ ಸಿಲುಕಿದೆ; ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್​ಗೆ ಮೈಕಲ್ ಕ್ಲಾರ್ಕ್​ ಎಚ್ಚರಿಕೆ
ಭಾರತ ತಂಡ ದೊಡ್ಡ ಅಪಾಯಕ್ಕೆ ಸಿಲುಕಿದೆ; ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್​ಗೆ ಮೈಕಲ್ ಕ್ಲಾರ್ಕ್​ ಎಚ್ಚರಿಕೆ

ಜೂನ್ 1ರಿಂದ ಪ್ರಾರಂಭವಾಗುವ ಬಹುನಿರೀಕ್ಷಿತ ಟಿ20 ವಿಶ್ವಕಪ್​​ನಲ್ಲಿ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಇರುವ ತಂಡಗಳ ಬಗ್ಗೆ ತಜ್ಞರು, ಮಾಜಿ ಕ್ರಿಕೆಟರ್ಸ್​ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ ಟ್ರೋಫಿ ಗೆದ್ದಿದ್ದ ಟೀಮ್ ಇಂಡಿಯಾ, ಈ ಬಾರಿ ಸಹ ಟಿ20 ವಿಶ್ವಕಪ್ (T20 World Cup 2024) ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಈ ಸಾಲಿಗೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮೈಕಲ್ ಕ್ಲಾರ್ಕ್ (Michael Clarke)​ ಸೇರಿದ್ದಾರೆ. ಭಾರತ ಗೆಲ್ಲುವ ಫೇವರಿಟ್ ಎಂದಿರುವ ಕ್ಲಾರ್ಕ್​, ದೊಡ್ಡ ಅಪಾಯವನ್ನೂ ಎದುರಿಸುತ್ತಿದೆ ಎಂದಿದ್ದಾರೆ.

ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲೋ ಫೇವರಿಟ್​ ಎನಿಸಿದ ಆಸ್ಟ್ರೇಲಿಯಾ ತಂಡದ ಅವಕಾಶಗಳಿಗೆ ಭಾರತ ತಂಡವೇ ದೊಡ್ಡ ಬೆದರಿಕೆಯಾಗಿದೆ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ. ಸ್ಪಿನ್ನರ್‌ಗಳ ಮೇಲೆ ಹೆಚ್ಚಿನ ಅವಲಂಬನೆಯು ತಂಡಕ್ಕೆ ಭಾರಿ ಹಿನ್ನಡೆಯಾಗಬಹುದು ಎಂದು ಹೇಳಿದ್ದಾರೆ. ಭಾರತ ನಾಲ್ವರು ಸ್ಪಿನ್ನರ್​​ಗಳನ್ನು ಆಯ್ಕೆ ಮಾಡಿದ್ದು, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಆಲ್‌ರೌಂಡರ್ಸ್,​​ಕುಲ್ದೀಪ್ ಯಾದವ್-ಯುಜ್ವೇಂದ್ರ ಚಹಲ್ ಇಬ್ಬರು ಮಣಿಕಟ್ಟಿನ ಸ್ಪಿನ್ನರ್‌ಗಳಾಗಿದ್ದಾರೆ.

ಭಾರತ ಅಪಾಯಕ್ಕೆ ಸಿಲುಕಿದೆ ಎಂದ ಕ್ಲಾರ್ಕ್​

ಟಿ20 ವಿಶ್ವಕಪ್ ಗೆಲ್ಲುವ ಆಸ್ಟ್ರೇಲಿಯಾದ ಅವಕಾಶಗಳಿಗೆ ಭಾರತ ದೊಡ್ಡ ಬೆದರಿಕೆ ಹಾಕಬಹುದು ಎಂದು ಕ್ಲಾರ್ಕ್ ಹೇಳಿದ್ದಾರೆ. ನಾಲ್ವರು ಸ್ಪಿನ್ನರ್​​ಗಳನ್ನು ಆಯ್ಕೆ ಮಾಡಿದ್ದು, ಭಾರತಕ್ಕೆ ಹಿನ್ನಡೆಯಾಗಬಹುದು. ದೊಡ್ಡ ಗ್ಯಾಂಬ್ಲಿಂಗ್ ಮಾಡಲು ಹೊರಟಿದೆ ಎಂದು ಹೇಳಿದ್ದಾರೆ. 2024ರ ಟಿ20 ವಿಶ್ವಕಪ್ ಜೂನ್ 1 ಪ್ರಾರಂಭವಾಗಲಿದ್ದು, ಭಾರತದ ಮೊದಲ ಪಂದ್ಯ ಜೂನ್ 5 ರಂದು ಐರ್ಲೆಂಡ್ ವಿರುದ್ಧ ನಡೆಯಲಿದೆ. ಇದೇ ವೇಳೆ ಭಾರತಕ್ಕೆ ದೊಡ್ಡ ಅಪಾಯಕ್ಕೂ ಸಿಲುಕಿದೆ ಎಂದು ಹೇಳಿದ್ದಾರೆ.

ಭಾರತ ತಂಡವು ಆಯ್ಕೆ ಮಾಡಿದ ತಂಡದೊಂದಿಗೆ ಅಪಾಯಕ್ಕೆ ಸಿಲುಕಲಿದೆ ಎಂದು ಭಾವಿಸುತ್ತೇನೆ. ಏಕೆಂದರೆ ಸ್ಪಿನ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆಸ್ಟ್ರೇಲಿಯಾ ತಂಡಕ್ಕಿಂತ ತುಂಬಾ ಭಿನ್ನವಾಗಿದೆ. ಆದರೆ ಕೆರಿಬಿಯನ್‌ನಲ್ಲಿ ಆಡಿದ ಪರಿಸ್ಥಿತಿಗಳಲ್ಲಿ ನೀವು ಸ್ಪಿನ್ ಬಳಕೆ ಮಾಡುತ್ತೀರಿ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಆದರೆ, ನೀವು ಯಶಸ್ವಿಯಾಗುತ್ತೀರೋ ಇಲ್ಲವೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಯಾರು ವಿಶ್ವಕಪ್ ಗೆಲ್ಲುತ್ತಾರೆ ಗೊತ್ತಿಲ್ಲ. ಭಾರತ ಬೇರೆ ತಂಡಕ್ಕೆ ಬೆದರಿಕೆಯಾಗಬಹುದು ಅಥವಾ ತಾನೇ ಅಪಾಯಕ್ಕೂ ಸಿಲುಕಬಹುದು ಎಂದು ಕ್ಲಾರ್ಕ್ ಇಎಸ್‌ಪಿಎನ್‌ಗೆ ತಿಳಿಸಿದ್ದಾರೆ.

ಭಾರತ ಅತ್ಯುತ್ತಮ ತಯಾರಿ ಮಾಡಿದೆ ಎಂದು ಆಸೀಸ್ ಮಾಜಿ ಕ್ರಿಕೆಟಿಗ

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಧಾರದ ಮೇಲೆ ಭಾರತ ತಂಡವು ನೆಚ್ಚಿನ ತಂಡವಾಗಿದೆ. ನೀವು ವಿಶ್ವಕಪ್‌ಗೆ ಮೆಚ್ಚಿನವುಗಳನ್ನು ನೋಡಿದರೆ, ಅದು ಭಾರತವೇ ಆಗಿರುತ್ತದೆ. ಏಕೆಂದರೆ ತಯಾರಿಯು ಅತ್ಯುತ್ತಮವಾಗಿದೆ. ಭಾರತಕ್ಕೆ ಪರಿಸ್ಥಿತಿಗಳು ವಿಭಿನ್ನವಾಗಿವೆ. ಆದರೆ, ಯುಎಸ್​ಎ ಮತ್ತು ಕೆರಿಬಿಯನ್ನರ ಪಿಚ್​ಗಳಿಗೆ ಸಾಕಷ್ಟು ಹೋಲಿಕೆಗಳಿವೆ. ಹಾಗಾಗಿ ಹೇಗೆಲ್ಲಾ ಪ್ರದರ್ಶನ ನೀಡುತ್ತಾರೆ ಎಂಬುದು ಎಲ್ಲರಿಗೂ ಕುತೂಹಲ ಮೂಡಿಸಿದೆ ಎಂದಿದ್ದಾರೆ.

ಪ್ರಸ್ತುತ ಟೀಮ್ ಇಂಡಿಯಾ ನ್ಯೂಯಾರ್ಕ್​ನಲ್ಲಿ ರೋಹಿತ್ ಪಡೆ ಭರ್ಜರಿ ಸಮರಾಭ್ಯಾಸ ನಡೆಸುತ್ತಿದೆ. ಈಗಾಗಲೇ ಎಲ್ಲಾ ಆಟಗಾರರು ಅಮೆರಿಕ ಪ್ರಯಾಣಿಸಿದ್ದು, ಬ್ಯಾಟಿಂಗ್ ಸೂಪರ್ ಸ್ಟಾರ್​ ವಿರಾಟ್ ಕೊಹ್ಲಿ ಮೇ 31ರಂದು ವಿಮಾನ ಹತ್ತಿದ್ದಾರೆ. ಜೂನ್ 5ರಿಂದ ಭಾರತ ತನ್ನ ಅಭಿಯಾನ ಆರಂಭಿಸಲಿದ್ದು, ಜೂನ್ 9ರಂದು ಬದ್ಧವೈರಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈಗ ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.

Whats_app_banner