IND vs ENG 2nd Test: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ರಜತ್ ಪಾಟೀದಾರ್ ಪದಾರ್ಪಣೆ ಸೇರಿ ಮೂರು ಬದಲಾವಣೆ
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Eng 2nd Test: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ರಜತ್ ಪಾಟೀದಾರ್ ಪದಾರ್ಪಣೆ ಸೇರಿ ಮೂರು ಬದಲಾವಣೆ

IND vs ENG 2nd Test: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ರಜತ್ ಪಾಟೀದಾರ್ ಪದಾರ್ಪಣೆ ಸೇರಿ ಮೂರು ಬದಲಾವಣೆ

India vs England 2nd Test toss Update : ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್​​ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ.

 ರಜತ್ ಪಾಟೀದಾರ್ ಪದಾರ್ಪಣೆ ಸೇರಿ ಮೂರು ಬದಲಾವಣೆ
ರಜತ್ ಪಾಟೀದಾರ್ ಪದಾರ್ಪಣೆ ಸೇರಿ ಮೂರು ಬದಲಾವಣೆ

ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ ತಂಡ, 2ನೇ ಟೆಸ್ಟ್​ನಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟರ್​ ರಜತ್ ಪಟಿದಾರ್​ ಪದಾರ್ಪಣೆ ಮಾಡಿದ್ದಾರೆ. ಆದರೆ ಸರ್ಫರಾಜ್ ಖಾನ್ ಅವಕಾಶ ಪಡೆಯುವಲ್ಲಿ ವಿಫರಾಗಿದ್ದಾರೆ.

ಮತ್ತೊಂದೆಡೆ ಮೊಹಮ್ಮದ್ ಸಿರಾಜ್​ ಬದಲಿಗೆ ಮುಕೇಶ್ ಕುಮಾರ್​​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡಕ್ಕೆ 3ನೇ ಸ್ಪಿನ್ನರ್​ ಆಗಿ ಕುಲ್ದೀಪ್​ ಯಾದವ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇಬ್ಬರು ವೇಗಿಗಳು ಮತ್ತು ಮೂವರು ಸ್ಪಿನ್ನರ್​​ಗಳ ಕಾಂಬಿನೇಷನ್​ನಲ್ಲಿ ಕಣಕ್ಕಿಳಿಯಲಿದೆ. ಸಿರಾಜ್​ಗೆ ವಿಶ್ರಾಂತಿ ನೀಡಲಾಗಿದೆ.

ರಜತ್ ಪಾಟೀದಾರ್ ಪದಾರ್ಪಣೆ

ದೇಶೀಯ ಕ್ರಿಕೆಟ್​ನಲ್ಲಿ ಧೂಳೆಬ್ಬಿಸಿದ ಮತ್ತು ಇತ್ತೀಚೆಗೆ ಇಂಗ್ಲೆಂಡ್​ ಲಯನ್ಸ್ ವಿರುದ್ಧ ಭಾರತ ಎ ತಂಡದ ಪರ ಶತಕಗಳ ಮೇಲೆ ಶತಕ ಸಿಡಿಸಿದ್ದ ರಜತ್ ಪಾಟೀದಾರ್, ಕೆಎಲ್ ರಾಹುಲ್ ಅವರ ಜಾಗದಲ್ಲಿ ಕಣಕ್ಕಿಳಿದಿದ್ದಾರೆ. ಅವರು ರಾಹುಲ್​ಗೆ ಗಾಯವಾಗಿದೆ. 2023ರ ಡಿಸೆಂಬರ್​ ಕೊನೆಯಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಪಾಟೀದಾರ್, ಇದೀಗ ಟೆಸ್ಟ್​ ಕ್ರಿಕೆಟ್​ಗೂ ಡೆಬ್ಯೂ ಮಾಡಿದ್ದಾರೆ.

ದೇಶೀಯ ಕ್ರಿಕೆಟ್​ನಲ್ಲಿ 55 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ರಜತ್ ಪಾಟೀದಾರ್ 46ರ ಸರಾಸರಿಯಲ್ಲಿ 4000 ರನ್ ಗಳಿಸಿದ್ದಾರೆ. 12 ಶತಕ, 22 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರನ್ ಬೇಟೆಯಾಡುವ ಪಾಟೀದಾರ್, ತನ್ನ ಪದಾರ್ಪಣೆ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.

ಸೇಡಿನ ಸಮರಕ್ಕೆ ಭಾರತ ಸಜ್ಜು

ಹೈದರಾಬಾದ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ 28 ರನ್​ಗಳ ಅಂತರದಿಂದ ಸೋಲು ಕಂಡಿತ್ತು. ಈ ಹೀನಾಯ ಸೋಲಿನೊಂದಿಗೆ ಸರಣಿಯನ್ನು 0-1ರಲ್ಲಿ ಹಿನ್ನಡೆ ಅನುಭವಿಸಿತ್ತು. ಇದೀಗ ಆ ಪಂದ್ಯದ ಸೋಲಿನ ಸೇಡನ್ನು ವೈಜಾಗ್​ನಲ್ಲಿ ತೀರಿಸಿಕೊಳ್ಳಲು ರೋಹಿತ್​ ಮಾಸ್ಟರ್​ ಪ್ಲಾನ್ ರೂಪಿಸಿದೆ.

ಇಂಗ್ಲೆಂಡ್ ತಂಡದಲ್ಲಿ ನಾಲ್ವರು ಸ್ಪಿನ್ನರ್ಸ್

ವೈಜಾಗ್ ಪಿಚ್​ ಕೂಡ ಸ್ಪಿನ್ನರ್​​ಗಳಿಗೆ ನೆರವಾಗಲಿದೆ ಎನ್ನುವ ಕಾರಣಕ್ಕೆ ಇಂಗ್ಲೆಂಡ್ ಮತ್ತೆ ನಾಲ್ವರು ಸ್ಪಿ್ನರ್​​ಗಳಿಗೆ ಮಣೆ ಹಾಕಿದೆ. ಜೋ ರೂಟ್​, ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲೆ, ಶೋಯೆಬ್ ಬಶೀರ್​ಗೆ ಸ್ಪಿನ್ನರ್​​ಗಳಾಗಿದ್ದಾರೆ. ಮೊದಲ ಪಂದ್ಯದಲ್ಲಿ ಜಾಕ್​ ಲೀಚ್​ ಗಾಯದಿಂದ ಹೊರಗುಳಿದಿದ್ದಾರೆ.

ಟೆಸ್ಟ್​ನಲ್ಲಿ ಉಭಯ ತಂಡಗಳ ಮುಖಾಮುಖಿ ದಾಖಲೆ

ಒಟ್ಟು ಪಂದ್ಯಗಳು - 132

ಭಾರತ ಗೆಲುವು - 31

ಇಂಗ್ಲೆಂಡ್ ಗೆಲುವು - 51

ಡ್ರಾ ಪಂದ್ಯಗಳು - 50

ಭಾರತ ಪ್ಲೇಯಿಂಗ್ XI

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮುಕೇಶ್ ಕುಮಾರ್, ಕುಲ್ದೀಪ್​ ಯಾದವ್.

ಇಂಗ್ಲೆಂಡ್ ಪ್ಲೇಯಿಂಗ್ XI

ಜಾಕ್ ಕ್ರಾವ್ಲಿ, ಬೆನ್​ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲೆ, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್.

ಜಡೇಜಾ ಮತ್ತು ರಾಹುಲ್​ಗೆ ಗಾಯ

ಮೊದಲ ಟಸ್ಟ್ ಪಂದ್ಯದ ಕೊನೆಯ ದಿನದಂದು ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಗಾಯಕ್ಕೆ ತುತ್ತಾದರು. ಹೀಗಾಗಿ ಎರಡನೇ ಟೆಸ್ಟ್​ಗೆ ಇಬ್ಬರು ಸಹ ಅಲಭ್ಯರಾಗಿದ್ದಾರೆ. ಸದ್ಯ ಜಡ್ಡು ಎನ್​ಸಿಎಗೆ ಬಂದಿಳಿದಿದ್ದು ಮೂರನೇ ಟೆಸ್ಟ್​ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Whats_app_banner