ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Sa Final: ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ಮತ್ತದೇ ತಂಡ ಕಣಕ್ಕಿಳಿಸಿದ ರೋಹಿತ್

IND vs SA Final: ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ಮತ್ತದೇ ತಂಡ ಕಣಕ್ಕಿಳಿಸಿದ ರೋಹಿತ್

India vs South Africa Final : ಟಿ20 ವಿಶ್ವಕಪ್ 2024 ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ಮತ್ತದೇ ತಂಡ ಕಣಕ್ಕಿಳಿಸಿದ ರೋಹಿತ್
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ಮತ್ತದೇ ತಂಡ ಕಣಕ್ಕಿಳಿಸಿದ ರೋಹಿತ್

ಐಸಿಸಿ ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ ಕೊನೆಯ ಪಂದ್ಯ ಇಂದು ನಡೆಯಲಿದೆ. ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಣಸಾಟ ನಡೆಸುತ್ತಿವೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಮಾಡಿಕೊಂಡಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ ಮೈದಾನದಲ್ಲಿ ಅಂತಿಮ ಹಣಾಹಣಿ ನಡೆಯುತ್ತಿದೆ.

ಉಭಯ ತಂಡಗಳಲ್ಲೂ ಯಾವುದೇ ಬದಲಾವಣೆ ಕಂಡಿಲ್ಲ. ಯಶಸ್ವಿ ಜೈಸ್ವಾಲ್ ಅವಕಾಶ ಪಡೆಯುವ ನಿರೀಕ್ಷೆ ಇದೆ ಎಂದು ಹೇಳಲಾಗಿತ್ತು. ಆದರೆ ಈ ಪಂದ್ಯದಲ್ಲೂ ಅವಕಾಶ ಪಡೆಯಲಿಲ್ಲ. ವಿರಾಟ್ ಕೊಹ್ಲಿ ಮತ್ತೊಮ್ಮೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿದ ವಿರಾಟ್ ಈ ಪಂದ್ಯದಲ್ಲಾದರೂ ಸಿಡಿದೇಳಬೇಕಿದೆ.

ರೋಹಿತ್​-ಕೊಹ್ಲಿಗೆ ಇದೇ ಟಿ20 ವಿಶ್ವಕಪ್

ಭಾರತ ತಂಡದ ಹಿರಿಯ ಆಟಗಾರರಾದ ನಾಯಕ ರೋಹಿತ್​ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಇದೇ ಕೊನೆಯ ಟಿ20 ವಿಶ್ವಕಪ್​​ ಆಗಿದೆ. ಈ ವಿಶ್ವಕಪ್ ನಂತರ 2026ರಲ್ಲಿ 10ನೇ ಆವೃತ್ತಿಯು ನಡೆಯಲಿದೆ. ಪ್ರಸ್ತುತ 37 ವರ್ಷದ ರೋಹಿತ್​ ಅವರು ಅಷ್ಟರೊಳಗೆ 39 ವರ್ಷಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಈ ಫಾರ್ಮೆಟ್​ಗೆ ನಿವೃತ್ತಿ ಘೋಷಿಸುವ ನಿರೀಕ್ಷೆಯೂ ಇದೆ. ಕೊಹ್ಲಿ ಫಿಟ್​ ಆಗಿದ್ದರೂ ಅವರನ್ನು ಟಿ20 ಕ್ರಿಕೆಟ್​ಗೆ ಇನ್ಮುಂದೆ ಪರಿಗಣಿಸುವುದು ಕಷ್ಟವಾಗಿದೆ. ಹೀಗಾಗಿ ಕಡೆಗಣಿಸುವ ಮೊದಲೇ ಕೊಹ್ಲಿ ಚುಟುಕು ಫಾರ್ಮೆಟ್​ನಿಂದ ಹಿಂದೆ ಸರಿಯುವ ನಿರೀಕ್ಷೆ ಇದೆ.

ಟ್ರೆಂಡಿಂಗ್​ ಸುದ್ದಿ

ರಾಹುಲ್​ ದ್ರಾವಿಡ್​ ಅವಧಿಯೂ ಅಂತ್ಯ

ಟೀಮ್ ಇಂಡಿಯಾ ಹೆಡ್​ಕೋಚ್ ರಾಹುಲ್ ದ್ರಾವಿಡ್ ಅವಧಿಯೂ ಇವತ್ತಿಗೆ ಅಂತ್ಯವಾಗಲಿದೆ. 2021ರ ಟಿ20 ವಿಶ್ವಕಪ್​ ನಂತರ ಅಧಿಕಾರಕ್ಕೇರಿದ್ದ ದ್ರಾವಿಡ್ ಅವಧಿ 2023ರ ಏಕದಿನ ವಿಶ್ವಕಪ್​ಗೆ ಮುಕ್ತಾಯಗೊಂಡಿತ್ತು. ತದನಂತರ ಬಿಸಿಸಿಐ ಮನವೊಲಿಸಿ 2024ರ ಟಿ20 ವಿಶ್ವಕಪ್​ವರೆಗೂ ಅಧಿಕಾರ ವಿಸ್ತರಿಸಿತ್ತು.

ಭಾರತಕ್ಕೆ ಹ್ಯಾಟ್ರಿಕ್ ಫೈನಲ್

ಕಳೆದೊಂದು ವರ್ಷದಲ್ಲಿ ಭಾರತ ತಂಡವು 3 ಫಾರ್ಮೆಟ್​ಗಳ ಐಸಿಸಿ ಟೂರ್ನಿಗಳಲ್ಲಿ ಫೈನಲ್​ಗೇರಿದ ಸಾಧನೆ ಮಾಡಿದೆ. ಕಳೆದ ವರ್ಷ ಜೂನ್​ನಲ್ಲಿ ನಡೆದ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಮತ್ತು ಅದೇ ವರ್ಷ ನವೆಂಬರ್​​​ನಲ್ಲಿ ನಡೆದ ಏಕದಿನ ವಿಶ್ವಕಪ್​​ ಫೈನಲ್​ನಲ್ಲೂ ಆಸ್ಟ್ರೇಲಿಯಾ ಎದುರೇ ಭಾರತ ಮುಗ್ಗರಿಸಿತ್ತು. ಇದೀಗ 2024ರ ಟಿ20 ವಿಶ್ವಕಪ್​ನಲ್ಲೂ ಭಾರತ ಫೈನಲ್​ ಆಡುತ್ತಿದೆ.

2007ರಲ್ಲಿ ಭಾರತ ಚಾಂಪಿಯನ್ ಆಗಿತ್ತು!

2007ರಲ್ಲಿ ಆರಂಭಗೊಂಡ ಉದ್ಘಾಟನಾ ಟೂರ್ನಿಯ ಟಿ20 ವಿಶ್ವಕಪ್​​ನಲ್ಲೇ ಭಾರತ ತಂಡ ಟ್ರೋಫಿಗೆ ಮುತ್ತಿಕ್ಕಿತ್ತು. ಅಂದು ಫೈನಲ್​ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ತದನಂತರ 2014ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲೂ ಭಾರತ ಫೈನಲ್​ಗೇರಿತ್ತು. ಶ್ರೀಲಂಕಾ ವಿರುದ್ಧ ಸೋತು ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ 3ನೇ ಬಾರಿಗೆ ಫೈನಲ್​ ಪ್ರವೇಶಿಸಿದ್ದು, ಎರಡನೇ ಟ್ರೋಫಿಯ ನಿರೀಕ್ಷೆಯಲ್ಲಿದೆ.

ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI)

ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಮ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಆನ್ರಿಚ್ ನೋಕಿಯಾ, ತಬ್ರೈಜ್ ಶಮ್ಸಿ

ಭಾರತ (ಪ್ಲೇಯಿಂಗ್ XI)

ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.