ಅಲ್ಪ ಮೊತ್ತ ಗಳಿಸಿಯೂ 46 ರನ್​ಗಳ ಮುನ್ನಡೆ ಪಡೆದ ಭಾರತ ಮುಂದಿರುವ ಸವಾಲೇನು? 24 ವರ್ಷಗಳ ನಂತರ ಆಸ್ಟ್ರೇಲಿಯಾ ಕಳಪೆ ದಾಖಲೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಲ್ಪ ಮೊತ್ತ ಗಳಿಸಿಯೂ 46 ರನ್​ಗಳ ಮುನ್ನಡೆ ಪಡೆದ ಭಾರತ ಮುಂದಿರುವ ಸವಾಲೇನು? 24 ವರ್ಷಗಳ ನಂತರ ಆಸ್ಟ್ರೇಲಿಯಾ ಕಳಪೆ ದಾಖಲೆ

ಅಲ್ಪ ಮೊತ್ತ ಗಳಿಸಿಯೂ 46 ರನ್​ಗಳ ಮುನ್ನಡೆ ಪಡೆದ ಭಾರತ ಮುಂದಿರುವ ಸವಾಲೇನು? 24 ವರ್ಷಗಳ ನಂತರ ಆಸ್ಟ್ರೇಲಿಯಾ ಕಳಪೆ ದಾಖಲೆ

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಲ್ಪ ಮೊತ್ತ ಗಳಿಸಿಯೂ ಟೀಮ್ ಇಂಡಿಯಾ 46 ರನ್​ಗಳ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಆಸೀಸ್ ಕಳಪೆ ದಾಖಲೆ ನಿರ್ಮಿಸಿದೆ. ಮತ್ತೊಂದೆಡೆ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ತಂಡದ ಮುಂದಿನ ಸವಾಲುಗಳೇನು?

ಅಲ್ಪ ಮೊತ್ತ ಗಳಿಸಿಯೂ 46 ರನ್​ಗಳ ಮುನ್ನಡೆ ಪಡೆದ ಭಾರತ ಮುಂದಿರುವ ಸವಾಲೇನು? 24 ವರ್ಷಗಳ ನಂತರ ಆಸ್ಟ್ರೇಲಿಯಾ ಕಳಪೆ ದಾಖಲೆ
ಅಲ್ಪ ಮೊತ್ತ ಗಳಿಸಿಯೂ 46 ರನ್​ಗಳ ಮುನ್ನಡೆ ಪಡೆದ ಭಾರತ ಮುಂದಿರುವ ಸವಾಲೇನು? 24 ವರ್ಷಗಳ ನಂತರ ಆಸ್ಟ್ರೇಲಿಯಾ ಕಳಪೆ ದಾಖಲೆ (AFP)

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಮೊದಲ ಟೆಸ್ಟ್​ ಪಂದ್ಯದಲ್ಲಿ ಸಾಧಾರಣ ಮೊತ್ತ ಕಲೆ ಹಾಕಿದ್ದರೂ ಭಾರತ ತಂಡ ಪ್ರತಿದಾಳಿ ನಡೆಸುವ ಮೂಲಕ 46 ರನ್​ಗಳ ಮುನ್ನಡೆ ಪಡೆದಿದೆ. ಪರ್ತ್​ನ ಆಪ್ಟಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸೀಸ್, ಮೊದಲ ಇನ್ನಿಂಗ್ಸ್​ನಲ್ಲಿ 104 ರನ್​ಗಳಿಗೆ ಆಲೌಟ್ ಆಗಿದೆ. ಆದರೆ ಮಿಚೆಲ್ ಸ್ಟಾರ್ಕ್​ ಕೊನೆಯಲ್ಲಿ ಭಾರತ ತಂಡವನ್ನು ಸಿಕ್ಕಾಪಟ್ಟೆ ಕಾಡಿದರು. ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಮತ್ತು ಮೊಹಮ್ಮದ್ ಸಿರಾಜ್ ಮಾರಕ ದಾಳಿ ನಡೆಸಿ ಅತಿಥೇಯರಿಗೆ ತಿರುಗೇಟು ನೀಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 150ಕ್ಕೆ ಸರ್ವಪತನ ಕಂಡಿತ್ತು.

ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 67ಕ್ಕೆ 7 ವಿಕೆಟ್ ಕಳೆದುಕೊಂಡಿತ್ತು. ಇದೇ ಸ್ಕೋರ್​ನೊಂದಿಗೆ ಎರಡನೇ ದಿನದಾಟ ಆರಂಭಿಸಿದ ಆಸೀಸ್​, ಭೋಜನ ವಿರಾಮಕ್ಕೆ 104ಕ್ಕೆ ಸರ್ವಪತನಗೊಂಡಿತು. 19 ರನ್​ಗಳೊಂದಿಗೆ ಇನ್ನಿಂಗ್ಸ್ ಮುಂದುವರೆಸಿದ ಅಲೆಕ್ಸ್ ಕ್ಯಾರಿ, ಕೇವಲ 2 ರನ್ ಸೇರ್ಪಡೆಗೊಳಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಹೊರ ನಡೆದರು. ಇದು ಬುಮ್ರಾಗೆ ಐದನೇ ವಿಕೆಟ್ ಆಯಿತು. ಇನ್ನು ಮೊದಲ ದಿನದಂದು ಒಂದು ವಿಕೆಟ್ ಪಡೆದಿದ್ದ ಹರ್ಷಿತ್, ಉಳಿದ ಎರಡು ವಿಕೆಟ್ ಕಿತ್ತರು. ಆದರೆ ಕಾಂಗರೂ ಪಡೆ 100ರ ಒಳಗೆ ಆಲೌಟ್ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಆದರೆ ಮಿಚೆಲ್ ಸ್ಟಾರ್ಕ್​ 26 ರನ್ ಸಿಡಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.​

24 ವರ್ಷಗಳ ನಂತರ ತವರಿನಲ್ಲಿ ಆಸ್ಟ್ರೇಲಿಯಾ ಕಡಿಮೆ ಮೊತ್ತಗಳು

104 ರನ್​ಗಳಿಗೆ ಆಲೌಟ್​ ಆಗುವುದರೊಂದಿಗೆ ಆಸ್ಟ್ರೇಲಿಯಾ 2000ರ ನಂತರ ಕಳಪೆ ದಾಖಲೆ ಬರೆದಿದೆ. 24 ವರ್ಷಗಳ ಬಳಿಕ ಟೆಸ್ಟ್​ನ ಇನ್ನಿಂಗ್ಸ್​ವೊಂದರಲ್ಲಿ ಮೂರನೇ ಬಾರಿಗೆ ಕಡಿಮೆ ಮೊತ್ತವನ್ನು ದಾಖಲಿಸಿದೆ.

2016ರಲ್ಲಿ ಹೋಬಾರ್ಟ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ 85 ರನ್​​ಗಳಿಗೆ ಆಲೌಟ್ ಆಗಿತ್ತು.

2010ರಲ್ಲಿ ಮೆಲ್ಬರ್ನ್​ನಲ್ಲಿ ಇಂಗ್ಲೆಂಡ್ ವಿರುದ್ಧ 98 ರನ್​ಗಳಿಗೆ ಕುಸಿದಿತ್ತು

2024ರಲ್ಲಿ ಪರ್ತ್​​ನಲ್ಲಿ ಇಂದು (ನವೆಂಬರ್​ 23) ಭಾರತದ ವಿರುದ್ಧ 104 ರನ್​ಗಳಿಗೆ ಸರ್ಪಪತನ ಕಂಡಿತ್ತು.

2010ರಲ್ಲಿ ಸಿಡ್ನಿಯಲ್ಲಿ ಪಾಕಿಸ್ತಾನ ವಿರುದ್ಧ 127 ರನ್​ಗಳಿಗೆ ಆಸ್ಟ್ರೇಲಿಯಾ 10 ವಿಕೆಟ್ ಕಳೆದುಕೊಂಡಿತ್ತು.

2011ರಲ್ಲಿ ಹೋಬಾರ್ಟ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 136 ರನ್​ಗಳಿಗೆ ಆಲೌಟ್​ ಆಗಿತ್ತು.

ಭಾರತ ಮೊದಲ ಇನ್ನಿಂಗ್ಸ್​​ನಲ್ಲಿ ಕಡಿಮೆ ಮೊತ್ತ ದಾಖಲಿಸಿ ಮುನ್ನಡೆ ಪಡೆದ ಪಂದ್ಯಗಳು

2002ರಲ್ಲಿ ಹ್ಯಾಮಿಲ್ಟನ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಸ್ಕೋರ್ ಮಾಡಿತ್ತು. ಆದರೆ ಈ ಪಂದ್ಯದಲ್ಲಿ ಭಾರತ 5 ರನ್​ಗಳ ಮುನ್ನಡೆ ಪಡೆದಿತ್ತು.

1936ರಲ್ಲಿ ಲಾರ್ಡ್ಸ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್​​ನಲ್ಲಿ 147 ರನ್ ಸಿಡಿಸಿದ್ದ ಭಾರತ 13 ರನ್​ಗಳ ಲೀಡ್ ಪಡೆದುಕೊಂಡಿತ್ತು.

2024ರಲ್ಲಿ ಪರ್ತ್​ನಲ್ಲಿ ಇಂದು (ನವೆಂಬರ್​ 23) ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್​ನಲ್ಲಿ 150 ರನ್ ಸಿಡಿಸಿದ್ದ ಟೀಮ್ ಇಂಡಿಯಾ 46 ರನ್​ಗಳ ಲೀಡ್ ಪಡೆದಿದೆ.

1981ರಲ್ಲಿ ವಾಂಖೆಡೆಯಲ್ಲಿ ಇಂಗ್ಲೆಂಡ್ ಎದುರು ಭಾರತ 179 ರನ್ ಗಳಿಸಿತ್ತು. ಆದರೂ 13 ರನ್​ಗಳ ಮುನ್ನಡೆ ಪಡೆದುಕೊಂಡಿತ್ತು.

ಟೀಮ್ ಇಂಡಿಯಾ ಸವಾಲೇನು?

46 ರನ್​ಗಳ ಮುನ್ನಡೆ ಪಡೆದಿರುವ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ 300 ಪ್ಲಸ್ ಅಥವಾ 350 ಪ್ಲಸ್ ಸ್ಕೋರ್ ಮಾಡಬೇಕು. ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟರ್​ ಮಾಡಿದ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು. ಎದುರಾಳಿ ಬೌಲರ್​ಗಳ ವೀಕ್ನೆಸ್, ಪಿಚ್ ಮರ್ಮ ಸೇರಿದಂತೆ ಎಲ್ಲವನ್ನೂ ಅರಿತು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕಿದೆ. ಟಾಪ್​ ಆರ್ಡರ್ ಬ್ಯಾಟರ್​​ಗಳು ಉತ್ತಮ ಭದ್ರಬುನಾದಿ ಹಾಕಿಕೊಟ್ಟರೆ, ಕೆಳ ಕ್ರಮಾಂಕದ ಆಟಗಾರರಿಗೆ ವಿಶ್ವಾಸ ಹೆಚ್ಚಾಗಲಿದೆ. ಬೃಹತ್ ಗುರಿ ನೀಡಿದರಷ್ಟೆ ಆಸೀಸ್​ಗೆ ಕಠಿಣ ಪೈಪೋಟಿ ನೀಡಿದಂತಾಗುತ್ತದೆ. ತವರಿನ ಪಿಚ್​ಗಳಲ್ಲಿ ಆಸೀಸ್ ಎಂದೆಂದಿಗೂ ಬಲಿಷ್ಠ ಎಂಬುದನ್ನು ಮರೆಯುವಂತಿಲ್ಲ.

Whats_app_banner