ಫಾರ್ಮ್‌ನಲ್ಲಿಲ್ಲದ ಸ್ಯಾಮ್ಸನ್‌ಗೆ ಮತ್ತೆ ಅವಕಾಶ, ಶಿವಂ ದುಬೆ ಕಮ್‌ಬ್ಯಾಕ್‌; ಇಂಗ್ಲೆಂಡ್ ವಿರುದ್ಧದ 5ನೇ ಟಿ20ಗೆ ಭಾರತ ಸಂಭಾವ್ಯ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಫಾರ್ಮ್‌ನಲ್ಲಿಲ್ಲದ ಸ್ಯಾಮ್ಸನ್‌ಗೆ ಮತ್ತೆ ಅವಕಾಶ, ಶಿವಂ ದುಬೆ ಕಮ್‌ಬ್ಯಾಕ್‌; ಇಂಗ್ಲೆಂಡ್ ವಿರುದ್ಧದ 5ನೇ ಟಿ20ಗೆ ಭಾರತ ಸಂಭಾವ್ಯ ತಂಡ

ಫಾರ್ಮ್‌ನಲ್ಲಿಲ್ಲದ ಸ್ಯಾಮ್ಸನ್‌ಗೆ ಮತ್ತೆ ಅವಕಾಶ, ಶಿವಂ ದುಬೆ ಕಮ್‌ಬ್ಯಾಕ್‌; ಇಂಗ್ಲೆಂಡ್ ವಿರುದ್ಧದ 5ನೇ ಟಿ20ಗೆ ಭಾರತ ಸಂಭಾವ್ಯ ತಂಡ

India vs England 5th T20I: ಕನ್ಕಷನ್ ಬದಲಿ ಆಟಗಾರನಾಗಿ ಹರ್ಷಿತ್‌ ರಾಣಾಗೆ ಅವಕಾಶ ಕೊಡಲು ತಂಡದಿಂದ ಹೊರಹೋಗಿದ್ದ ಶಿವಂ ದುಬೆ, ಮತ್ತೆ ತಂಡಕ್ಕೆ ಮರಳಲಿದ್ದಾರೆ. ಈಗಾಗಲೇ ಸರಣಿ ಗೆದ್ದಿರುವ ಭಾರತ ತಂಡ ಇಂಗ್ಲೆಂಡ್‌ ವಿರುದ್ಧದ 5ನೇ ಟಿ20ಗೆ ಮರಳಲಿದ್ದಾರೆ.

ಶಿವಂ ದುಬೆ ಕಮ್‌ಬ್ಯಾಕ್‌; ಇಂಗ್ಲೆಂಡ್ ವಿರುದ್ಧದ 5ನೇ ಟಿ20ಗೆ ಭಾರತ ಸಂಭಾವ್ಯ ತಂಡ
ಶಿವಂ ದುಬೆ ಕಮ್‌ಬ್ಯಾಕ್‌; ಇಂಗ್ಲೆಂಡ್ ವಿರುದ್ಧದ 5ನೇ ಟಿ20ಗೆ ಭಾರತ ಸಂಭಾವ್ಯ ತಂಡ (BCCI-X)

ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ನಾಲ್ಕು ಪಂದ್ಯಗಳು ಮುಗಿದಿದ್ದು, ಆತಿಥೇಯ ಭಾರತ ತಂಡವು ಈಗಾಗಲೇ 3 ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿದೆ. ಇಂದು (ಫೆ.2) ಸರಣಿಯ ಅಂತಿಮ ಪಂದ್ಯ ನಡೆಯಲಿದ್ದು, ಇದರಲ್ಲೂ ಗೆದ್ದು 4-1 ಅಂತರದಿಂದ ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ಐದನೇ ಟಿ20 ಪಂದ್ಯ ನಡೆಯುತ್ತಿದ್ದು, ಚುಟುಕು ಸರಣಿಯಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಲಿವೆ. ನಾಲ್ಕನೇ ಟಿ20 ಪಂದ್ಯದಲ್ಲಿ ಹರ್ಷಿತ್ ರಾಣಾ ಅವರಿಗೆ ಆಡುವ ಬಳಗದಲ್ಲಿ ಅವಕಾಶ ನೀಡುವ ಸಲುವಾಗಿ ಶಿವಂ ದುಬೆ ಚೇಸಿಂಗ್‌ ವೇಳೆ ತಂಡದಿಂದ ಹೊರನಡೆದಿದ್ದರು. ಕನ್ಕಷನ್ ಬದಲಿ ಆಟಗಾರನಾಗಿ ರಾಣಾ ಒಳಬಂದಿದ್ದು ತುಸು ಚರ್ಚೆಗೂ ಗ್ರಾಸವಾಯ್ತು. ಇದೀಗ ದುಬೆ ಮತ್ತೆ ತಂಡಕ್ಕೆ ಮರಳುವ ನಿರೀಕ್ಷೆ ಇದೆ.

ಕೊನೆಯ ಪಂದ್ಯದಲ್ಲಿ ಹರ್ಷಿತ್‌ ರಾಣಾ ಬದಲಿ ಆಟಗಾರನಾಗಿ ಆಡುವ ಬಳಗ ಸೇರಿಕೊಂಡು ಲಿಯಾಮ್ ಲಿವಿಂಗ್‌ಸ್ಟನ್ ಅವರನ್ನು ಎರಡನೇ ಎಸೆತದಲ್ಲಿಯೇ ಔಟ್ ಮಾಡಿದ್ದರು. ಆದರೆ ದುಬೆ ಬದಲಿಗೆ ರಾಣಾ ಅವರನ್ನು ಆಡಿಸಿದ್ದು ಸರಿಯಲ್ಲ ಎಂದು ಇಂಗ್ಲೆಂಡ್ ಶಿಬಿರದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (53) ಮತ್ತು ಶಿವಂ ದುಬೆ (53) ಹೊರತುಪಡಿಸಿ ಯಾರೂ ಉತ್ತಮ ಪ್ರದರ್ಶನ ನೀಡಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಇವರಿಬ್ಬರ ಅರ್ಧಶತಕಗಳ ನೆರವಿನಿಂದಾಗಿ, ಆರಂಭಿಕ ಆಘಾತದ ನಡುವೆಯೂ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಅತ್ತ ಪ್ರವಾಸಿ ತಂಡದ ಪರ ಸಾಕಿಬ್ ಮಹಮೂದ್ 3 ವಿಕೆಟ್ ಕಿತ್ತರೆ, ಜೇಮಿ ಓವರ್ಟನ್ 2 ವಿಕೆಟ್ ಪಡೆದರು. 182 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್, 19.4 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ರವಿ ಬಿಷ್ಣೋಯ್ ಮತ್ತು ರಾಣಾ ಕ್ರಮವಾಗಿ ತಲಾ ಮೂರು ವಿಕೆಟ್ ಪಡೆದರು.

ಸಂಜುಗೆ ಮತ್ತೆ ಅವಕಾಶ, ಸೂರ್ಯ ನಾಯಕ

ಇದೀಗ ಐದನೇ ಟಿ20 ಪಂದ್ಯದಲ್ಲಿ ಭಾರತ ತಂಡದಲ್ಲಿ ಹೆಚ್ಚು ಬದಲಾವಣೆ ಸಾಧ್ಯತೆ ಇಲ್ಲ. ಸರಣಿಯುದ್ದಕ್ಕೂ ಬ್ಯಾಟಿಂಗ್‌ ಮರೆತಿರುವ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಅಭಿಷೇಕ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಓಪನಿಂಗ್ ಮಾಡುವ ನಿರೀಕ್ಷೆಯಿದೆ. ಕೊನೆಯ ಪಂದ್ಯದಲ್ಲಿ ಸಂಜು ಮೂರು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ಔಟಾಗಿದ್ದರು. ಅತ್ತ ಅಭಿಷೇಕ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪ್ರಸಕ್ತ ಸರಣಿಯಲ್ಲಿ 197.26ರ ಸ್ಟ್ರೈಕ್ ರೇಟ್‌ನಲ್ಲಿ 144 ರನ್ ಗಳಿಸಿ ಸರಣಿಯ ಗರಿಷ್ಠ ರನ್‌ ಸ್ಕೋರರ್‌ ಆಗಿದ್ದಾರೆ. ಇದರಲ್ಲಿ 17 ಬೌಂಡರಿಗಳು ಮತ್ತು 9 ಸಿಕ್ಸರ್‌ ಸೇರಿವೆ.

ನಾಲ್ಕನೇ ಪಂದ್ಯದಲ್ಲಿ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಡಕೌಟ್ ಆಗಿದ್ದರು. ಇವರಿಬ್ಬರೂ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ. ಅಲ್ಲದೆ 3 ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಕೊನೆಯ ಪಂದ್ಯದಲ್ಲಿ ಆಡುವ ಬಳಗಕ್ಕೆ ಮರಳಿದ ರಿಂಕು ಸಿಂಗ್ 26 ಎಸೆತಗಳಲ್ಲಿ 30 ರನ್ ಗಳಿಸಿದ್ದರು. ರಿಂಕು ತಂಡದಲ್ಲಿ ಉಳಿಯಲಿದ್ದು, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ. ನಾಲ್ಕನೇ‌ ಟಿ20ಯಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದ್ದ ದುಬೆ ಮತ್ತು ಪಾಂಡ್ಯ ನಂತರದ ಕ್ರಮಾಂಕದಲ್ಲಿ ಪಿಚ್‌ಗೆ ಬರಲಿದ್ದಾರೆ.

ಅಕ್ಷರ್ ಪಟೇಲ್ ಸ್ಪಿನ್‌ ಆಲ್‌ರೌಂಡರ್‌ ಆಗಿ ಆಡಲಿದ್ದು, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ ಆಡುವ ಬಳಗಲ್ಲಿ ಕಾಣಿಸಿಕೊಳ್ಳಬಹುದು.

ಭಾರತ ಸಂಭಾವ್ಯ ತಂಡ

ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಅಭಿಷೇಕ್ ಶರ್ಮಾ‌, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್‌, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ

Whats_app_banner