ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಸೂರ್ಯ ಟಿ20ಐಗೆ ನೂತನ ನಾಯಕ, ಗಿಲ್​ಗೆ ಹೊಸ ಪಾತ್ರ; ಒಡಿಐಗೆ ಮರಳಿದ ಅಯ್ಯರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಸೂರ್ಯ ಟಿ20ಐಗೆ ನೂತನ ನಾಯಕ, ಗಿಲ್​ಗೆ ಹೊಸ ಪಾತ್ರ; ಒಡಿಐಗೆ ಮರಳಿದ ಅಯ್ಯರ್

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಸೂರ್ಯ ಟಿ20ಐಗೆ ನೂತನ ನಾಯಕ, ಗಿಲ್​ಗೆ ಹೊಸ ಪಾತ್ರ; ಒಡಿಐಗೆ ಮರಳಿದ ಅಯ್ಯರ್

India squad announcement: ಶ್ರೀಲಂಕಾ ವಿರುದ್ಧದ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಟಿ20ಐ ಹಾಗೂ ಏಕದಿನ ಸರಣಿಗೆ ಪ್ರತ್ಯೇಕ ತಂಡಗಳನ್ನು ಘೋಷಿಸಲಾಗಿದೆ.

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಸೂರ್ಯ ಟಿ20ಐಗೆ ನೂತನ ನಾಯಕ, ಗಿಲ್​ಗೆ ಹೊಸ ಪಾತ್ರ; ಒಡಿಐಗೆ ಮರಳಿದ ರೋಹಿತ್-ಕೊಹ್ಲಿ
ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಸೂರ್ಯ ಟಿ20ಐಗೆ ನೂತನ ನಾಯಕ, ಗಿಲ್​ಗೆ ಹೊಸ ಪಾತ್ರ; ಒಡಿಐಗೆ ಮರಳಿದ ರೋಹಿತ್-ಕೊಹ್ಲಿ

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಬಲಿಷ್ಠ ಭಾರತ ತಂಡವನ್ನು ಗುರುವಾರ (ಜುಲೈ 18) ಪ್ರಕಟಿಸಿದೆ. ಜುಲೈ 27 ರಿಂದ ಶುರುವಾಗುವ ತಲಾ 3 ಪಂದ್ಯಗಳ ಟಿ20ಐ ಹಾಗೂ ಏಕದಿನ ಸರಣಿಗೆ ಪ್ರತ್ಯೇಕವಾಗಿ ತಂಡಗಳನ್ನು ಘೋಷಿಸಲಾಗಿದೆ. ಆದರೆ ಟಿ20ಐ ಕ್ರಿಕೆಟ್ ನಾಯಕತ್ವದಿಂದ ಹಾರ್ದಿಕ್​ ಪಾಂಡ್ಯ ಅವರನ್ನು ಕಿತ್ತೊಗೆದಿದ್ದು, ಸೂರ್ಯಕುಮಾರ್​ಗೆ ಪಟ್ಟ ಕಟ್ಟಲಾಗಿದೆ.

ಸೂರ್ಯಕುಮಾರ್​-ಶುಭ್ಮನ್​ ಗಿಲ್​ಗೆ ಬಡ್ತಿ

ಟಿ20ಐ ಕ್ರಿಕೆಟ್​ಗೆ ಸೂರ್ಯ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ರೋಹಿತ್​ಗೆ ಉಪನಾಯಕನಾಗಿದ್ದ ಹಾಗೂ ಅವರ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ್ದ ಅನುಭವ ಹೊಂದಿದ್ದ ಹಾರ್ದಿಕ್, 2026ರ ಟಿ20 ವಿಶ್ವಕಪ್​ಗೆ ನಾಯಕನಾಗಿ ತಂಡದ ಜವಾಬ್ದಾರಿ ಹೊರಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ನೂತನ ಕೋಚ್ ಗಂಭೀರ್​ ಅವರು ಚುಟುಕು ಕ್ರಿಕೆಟ್​ನ ಜವಾಬ್ದಾರಿಯನ್ನು ಸೂರ್ಯ ಹೆಗಲಿಗೆ ವಹಿಸಿದ್ದಾರೆ.

ಮತ್ತೊಂದೆಡೆ ಹಾರ್ದಿಕ್ ಏಕದಿನ ವೈಸ್ ಕ್ಯಾಪ್ಟನ್ ಪಟ್ಟವನ್ನೂ ಕಳೆದುಕೊಂಡಿದ್ದಾರೆ. ನೂತನ ಉಪನಾಯಕನಾಗಿ ಶುಭ್ಮನ್ ಗಿಲ್ ನೇಮಕಗೊಂಡಿದ್ದಾರೆ. ಶುಭ್ಮನ್​​ ಗಿಲ್​ಗೆ ಬಡ್ತಿ ಸಿಕ್ಕಿದ್ದು, ಸೀಮಿತ ಓವರ್​​ಗಳ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದ ಕಾರಣ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಟಿ20ಐನಲ್ಲಿ ಸೂರ್ಯಗೆ, ಏಕದಿನದಲ್ಲಿ ರೋಹಿತ್​ಗೆ ಉಪನಾಯಕನಾಗಿ ಸೇವೆ ಸಲ್ಲಿಸದ್ದಾರೆ. ಒಂದು ವೇಳೆ ಇವರು ಗಾಯಗೊಂಡರೆ ಗಿಲ್ ನಾಯಕನಾಗಲಿದ್ದಾರೆ.

ಏಕದಿನ ವಿಶ್ವಕಪ್ ನಂತರ ಒಡಿಐಗೆ ಮರಳಿದ ಹಿರಿಯರು

ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅವರು 2023ರ ಏಕದಿನ ವಿಶ್ವಕಪ್​ ಫೈನಲ್ ನಂತರ ಏಕದಿನ ಕ್ರಿಕೆಟ್​ಗೆ ಮರಳಿದ್ದಾರೆ. ಅಂದಿನಿಂದ ಒಂದೇ ಒಂದು ಏಕದಿನ ಪಂದ್ಯವನ್ನಾಡದ ಈ ಅನುಭವಿಗಳು ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಮೊಹಮ್ಮದ್ ಶಮಿ ಇನ್ನೂ ಫಿಟ್ ಆಗದ ಕಾರಣ ಅವರಿಗೆ ಅವಕಾಶ ಸಿಕ್ಕಿಲ್ಲ. ಮತ್ತೊಂದೆಡೆ ಯುಜ್ವೇಂದ್ರ ಚಹಲ್ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಯುವ ಆಟಗಾರರಿಗೆ ಮಣೆ, ಋತುರಾಜ್ ಔಟ್

ಜಿಂಬಾಬ್ವೆ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಋತುರಾಜ್ ಗಾಯಕ್ವಾಡ್ ಅವಕಾಶ ಪಡೆದಿಲ್ಲ. ಆದರೆ ರಿಯಾನ್ ಪರಾಗ್ ಟಿ20ಐ, ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಂ ದುಬೆ ಒಡಿಐಗೂ ಮರಳಿದ್ದಾರೆ. ಖಲೀಲ್​ ಅಹ್ಮದ್ ಕೂಡ ಭರ್ಜರಿ ಲಾಟರಿ ಹೊಡೆದಿದ್ದು, ಎರಡೂ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ನಾಯಕತ್ವ, ವೈಸ್ ಕ್ಯಾಪ್ಟನ್ ಪಟ್ಟ ಕಳೆದುಕೊಂಡಿರುವ ಹಾರ್ದಿಕ್​ಗೆ ಏಕದಿನ ತಂಡದಲ್ಲೂ ಸ್ಥಾನ ಸಿಕ್ಕಿಲ್ಲ.

ಭಾರತ ಟಿ20ಐ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.

ಭಾರತ ಏಕದಿನ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

ಭಾರತ ಹಾಗೂ ಶ್ರೀಲಂಕಾ ನಡುವಿನ 3 ಟಿ20ಐ ಪಂದ್ಯಗಳ ಸರಣಿಯು ಜುಲೈ 27 ರಿಂದ ಪ್ರಾರಂಭವಾಗಲಿದ್ದು, ಜುಲೈ 30ಕ್ಕೆ ಕೊನೆಗೊಳ್ಳಲಿದೆ. ಎಲ್ಲಾ ಪಂದ್ಯಗಳು ಪಲ್ಲೆಕೆಲೆಯಲ್ಲಿ ನಡೆಯಲಿದೆ. ಆಗಸ್ಟ್ 02 ರಿಂದ ಕೊಲಂಬೊದಲ್ಲಿ 3 ಏಕದಿನ ಪಂದ್ಯಗಳು ನಡೆಯಲಿವೆ. ಆಗಸ್ಟ್ 7ಕ್ಕೆ ಸರಣಿ ಕೊನೆಗೊಳ್ಳಲಿದೆ.

ಕ್ರ,ಸಂದಿನ ಮತ್ತು ದಿನಾಂಕಸಮಯಹೊಂದಾಣಿಕೆಸ್ಥಳ
1ಶನಿವಾರ27-ಜುಲೈ-24ರಾತ್ರಿ 7.001ನೇ ಟಿ20ಐಪಲ್ಲೆಕೆಲೆ
2ಭಾನುವಾರ28-ಜುಲೈ-24ರಾತ್ರಿ 7.002ನೇ  ಟಿ20ಐಪಲ್ಲೆಕೆಲೆ
3ಮಂಗಳವಾರ30-ಜುಲೈ-24ರಾತ್ರಿ 7.003ನೇ  ಟಿ20ಐಪಲ್ಲೆಕೆಲೆ
4ಶುಕ್ರವಾರ2-ಆಗಸ್ಟ್-24ಮಧ್ಯಾಹ್ನ 02.301ನೇ  ಏಕದಿನಕೊಲಂಬೊ
5ಭಾನುವಾರ4-ಆಗಸ್ಟ್-24ಮಧ್ಯಾಹ್ನ 02.302ನೇ ಏಕದಿನಕೊಲಂಬೊ
6ಬುಧವಾರ7-ಆಗಸ್ಟ್-24ಮಧ್ಯಾಹ್ನ 02.303ನೇ  ಏಕದಿನಕೊಲಂಬೊ

Whats_app_banner