ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತ ತಂಡ ಪ್ರಕಟ; ರಿಷಭ್ ಪಂತ್ ರಿಟರ್ನ್, ಯಶ್ ದಯಾಳ್​ಗೆ ಚೊಚ್ಚಲ ಕರೆ-india squad for 1st bangladesh test rishabh pant is back yash dayal earns maiden call up as big selection calls made prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತ ತಂಡ ಪ್ರಕಟ; ರಿಷಭ್ ಪಂತ್ ರಿಟರ್ನ್, ಯಶ್ ದಯಾಳ್​ಗೆ ಚೊಚ್ಚಲ ಕರೆ

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತ ತಂಡ ಪ್ರಕಟ; ರಿಷಭ್ ಪಂತ್ ರಿಟರ್ನ್, ಯಶ್ ದಯಾಳ್​ಗೆ ಚೊಚ್ಚಲ ಕರೆ

India vs Bangladesh 1st Test: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯಕ್ಕೆ ಬಿಸಿಸಿಐ, 16 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ್ದು, ಪ್ರಮುಖರ ಹೆಸರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತ ತಂಡ ಪ್ರಕಟ
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತ ತಂಡ ಪ್ರಕಟ

India vs Bangladesh 1st Test: ಸೆಪ್ಟೆಂಬರ್​ 19 ರಿಂದ 24ರ ತನಕ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ 16 ಸದಸ್ಯರ ಭಾರತದ ಬಲಿಷ್ಠ ತಂಡವನ್ನು ಬಿಸಿಸಿಐ ಭಾನುವಾರ (ಸೆಪ್ಟೆಂಬರ್​ 8) ಪ್ರಕಟಿಸಿದೆ. ಭೀಕರ ಅಪಘಾತದ ನಂತರ ಅಂದರೆ ಹತ್ತತ್ರ ಎರಡು ವರ್ಷಗಳ ನಂತರ ರಿಷಭ್​ ಪಂತ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ವೇಗಿ ಯಶ್ ದಯಾಳ್ ಮೊದಲ ಬಾರಿಗೆ ಮೊದಲ ಬಾರಿಗೆ ಅವಕಾಶ ಪಡೆದಿದ್ದರೆ, ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ಸಿಕ್ಕಿಲ್ಲ. ಅಲ್ಲದೆ, ಮೊಹಮ್ಮದ್ ಶಮಿ ಕೂಡ ಅವಕಾಶ ಪಡೆಯಲು ವಿಫಲರಾಗಿದ್ದಾರೆ.

ಭಾರತದ ಟಿ20 ವಿಶ್ವಕಪ್ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಮೊದಲ ಬಾರಿಗೆ ಜಸ್ಪ್ರೀತ್ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ಸರಣಿಗೆ ಅವರು ವಿಶ್ರಾಂತಿ ಪಡೆದಿದ್ದರು. ಬುಮ್ರಾ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಜೊತೆಯಾಗಲಿದ್ದು, ಆಕಾಶ್ ದೀಪ್ ಮತ್ತು ದಯಾಳ್ ತಂಡದ ಇತರ ಇಬ್ಬರು ವೇಗಿಗಳಾಗಿದ್ದಾರೆ. ಆದರೆ ಎನ್​ಸಿಎನಲ್ಲಿ ತರಬೇತಿ ಪಡೆಯುತ್ತಿರುವ ಮೊಹಮ್ಮದ್ ಶಮಿ ಇನ್ನೂ ಫಿಟ್ ಆಗಿಲ್ಲ.

ತವರಿನಲ್ಲಿ ಟೆಸ್ಟ್ ಸರಣಿ ನಡೆಯಲಿರುವ ಕಾರಣ ಭಾರತ ತಂಡವು ಪ್ರಮುಖ ನಾಲ್ವರು ಸ್ಪಿನ್ನರ್​​ಗಳಿಗೆ ಮಣೆ ಹಾಕಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದುಲೀಪ್ ಟ್ರೋಫಿಯು ಇಂಡೋ-ಬಾಂಗ್ಲಾ ಟೆಸ್ಟ್ ಸರಣಿಯ ಆಯ್ಕೆಗೆ ನಿರ್ಣಾಯಕ ಪಾತ್ರವಹಿಸಿದೆ. ಭಾರತ ಎ ಪರ ಮೊದಲ ಇನ್ನಿಂಗ್ಸ್​ನಲ್ಲಿ ಮಿಂಚದ ಪಂತ್, 2ನೇ ಇನ್ನಿಂಗ್ಸ್​​ನಲ್ಲಿ 47 ಎಸೆತಗಳಲ್ಲಿ 61 ರನ್ ಗಳಿಸಿದ್ದರು.

ಅಲ್ಲದೆ, ಗ್ಲೋಸ್ ಹಾಕಿಕೊಂಡು ಸ್ಟಂಪ್ಸ್​ ಹಿಂದೆ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆ ಮೂಲಕ ತನ್ನ ಹಳೆಯ ಖದರ್​ ತೋರಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಯಿತು. ಪಂತ್ ಜೊತೆಗೆ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಕ್ರಿಕೆಟ್​​ಗೆ ಪದಾರ್ಪಣೆಗೈದಿದ್ದ ಧ್ರುವ್ ಜುರೆಲ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಬ್ಯಾಕಪ್ ವಿಕೆಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು ಇಂಗ್ಲೆಂಡ್ ಎದುರು ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಮರಳಿದ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಕಳೆದುಕೊಂಡಿದ್ದರು. ಸರಣಿಯ ಎಲ್ಲಾ 5 ಟೆಸ್ಟ್‌ಗಳಿಂದಲೂ ಹಿಂದೆ ಸರಿದಿದ್ದಾರೆ. ಜನವರಿಯ ಆರಂಭದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕಾಣಿಸಿಕೊಂಡಿದ್ದರು. ಇದೀಗ 8 ತಿಂಗಳ ನಂತರ ತಂಡಕ್ಕೆ ಮರಳಿದ್ದಾರೆ.

ಶ್ರೇಯಸ್ ಅಯ್ಯರ್‌ಗೆ ಸ್ಥಾನವಿಲ್ಲ

ಇಂಡಿಯಾ ಸಿ ವಿರುದ್ಧದ ದುಲೀಪ್ ಟ್ರೋಫಿ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಡಿ ಪರ ಅರ್ಧಶತಕ ಗಳಿಸಿದರೂ ಶ್ರೇಯಸ್ ಅಯ್ಯರ್​ಗೆ ಟೆಸ್ಟ್ ಸರಣಿಯಲ್ಲಿ ಸ್ಥಾನ ಸಿಗಲಿಲ್ಲ. ಇಂಗ್ಲೆಂಡ್ ವಿರುದ್ಧದ ಭಾರತದ ಟೆಸ್ಟ್ ಸರಣಿಯ ವೇಳೆ ಗಾಯಗೊಂಡ ನಂತರ, ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಕಣಕ್ಕಿಳಿಯದೇ ನಿರ್ಲಕ್ಷ್ಯ ತೋರಿದ್ದರು. ಪರಿಣಾಮ ಅವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿತ್ತು. ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಸರಣಿಯಲ್ಲಿ ಬ್ಯಾಟಿಂಗ್‌ನಿಂದ ಬೆರಗುಗೊಳಿಸಿದ್ದ ಸರ್ಫರಾಜ್ ಖಾನ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಕೆಎಲ್ ರಾಹುಲ್‌ ಸಹ ತಂಡದಲ್ಲಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್​), ಧ್ರುವ್ ಜುರೆಲ್ (ವಿಕೆಟ್ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.

mysore-dasara_Entry_Point