ಅಕ್ಟೋಬರ್‌ನಲ್ಲಿ ಟೀಮ್‌ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ; 3 ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಕ್ಟೋಬರ್‌ನಲ್ಲಿ ಟೀಮ್‌ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ; 3 ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿ ಇಲ್ಲಿದೆ

ಅಕ್ಟೋಬರ್‌ನಲ್ಲಿ ಟೀಮ್‌ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ; 3 ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿ ಇಲ್ಲಿದೆ

ಮುಂಬರುವ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಭಾರತ ಕ್ರಿಕೆಟ್‌ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಕಾಂಗರೂಗಳ ವಿರುದ್ಧ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ. ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಟೀಮ್‌ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ; ಏಕದಿನ ಹಾಗೂ ಟಿ20 ಸರಣಿಯ ವೇಳಾಪಟ್ಟಿ ಇಲ್ಲಿದೆ
ಟೀಮ್‌ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ; ಏಕದಿನ ಹಾಗೂ ಟಿ20 ಸರಣಿಯ ವೇಳಾಪಟ್ಟಿ ಇಲ್ಲಿದೆ (PTI )

ಭಾರತ ಕ್ರಿಕೆಟ್‌ ತಂಡದ ಆಟಗಾರರು ಸದ್ಯ ಐಪಿಎಲ್‌ನಲ್ಲಿ ನಿರತರಾಗಿದ್ದಾರೆ. ಐಪಿಎಲ್‌ ಮುಗಿದ ನಂತರ ರಾಷ್ಟ್ರೀಯ ತಂಡದ ಪಂದ್ಯಗಳ ಅವಧಿ ಮತ್ತೆ ಶುರುವಾಗಲಿದೆ. ಇದೀಗ ಭಾರತದ ವೇಳಾಪಟ್ಟಿಗೆ ಮತ್ತೊಂದು ಸರಣಿಯ ಸೇರ್ಪಡೆಯಾಗಿದೆ. ಈ ವರ್ಷಾಂತ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಕ್ರಿಕೆಟ್ ಆಸ್ಟ್ರೇಲಿಯಾ 2025ರ ಆಗಸ್ಟ್ ತಿಂಗಳಿನಿಂದ 2026ರ ಮಾರ್ಚ್‌ವರೆಗಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಭಾರತ ತಂಡವನ್ನು ತವರಿನ ಸರಣಿಗೆ ಆತಿಥ್ಯ ವಹಿಸುವುದು ಸೇರಿದೆ.

ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಐದು ಟಿ20 ಪಂದ್ಯಗಳನ್ನು ಆಡಲಿದೆ. ಇದು ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಭಾರತ ತಂಡಕ್ಕೆ ಮಹತ್ವದ ಸಿದ್ಧತೆಯಾಗಲಿದೆ. ತಂಡದ ಆಯ್ಕೆಯಿಂದ ಹಿಡಿದು, ಆಡುವ ಬಳಗವನ್ನು ಅಂತಿಮಗೊಳಿಸಲು ಈ ಸರಣಿ ಮಹತ್ವ ಪಡೆಯಲಿದೆ.

ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ಮೊದಲು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿವೆ. ಅಕ್ಟೋಬರ್ 19ರಿಂದ ಸರಣಿ ನಡೆಯಲಿದ್ದು, ಪರ್ತ್, ಅಡಿಲೇಡ್ ಮತ್ತು ಸಿಡ್ನಿಯಲ್ಲಿ ಮೂರು ಪಂದ್ಯಗಳು ನಡೆಯಲಿವೆ.

ಟಿ20 ಸರಣಿಯು ಕ್ಯಾನ್ಬೆರಾದ ಮನುಕಾ ಓವಲ್‌ನಲ್ಲಿ ಆರಂಭವಾಗಲಿದೆ. ಮುಖ್ಯವಾಗಿ ಗೋಲ್ಡ್ ಕೋಸ್ಟ್‌ನಲ್ಲಿ ಭಾರತೀಯ ಪುರುಷರ ತಂಡ ಇದೇ ಮೊದಲ ಪಂದ್ಯವನ್ನು ಆಡಲಿದೆ. ಐದು ಪಂದ್ಯಗಳ ಟಿ20 ಸರಣಿಯು ಕ್ಯಾನ್ಬೆರಾ, ಮೆಲ್ಬೋರ್ನ್, ಹೋಬರ್ಟ್, ಗೋಲ್ಡ್ ಕೋಸ್ಟ್ ಮತ್ತು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.

ಪುರುಷರ ತಂಡದ ಜೊತೆಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಕೂಡಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 3ಟಿ20, 3 ಏಕದಿನ ಹಾಗೂ 1 ಟೆಸ್ಟ್ ಪಂದ್ಯವನ್ನಾಡಲಿದೆ. ನಾಲ್ಕು ದಿನಗಳ ಟೆಸ್ಟ್ ಪಂದ್ಯವು ಪರ್ತ್‌ನಲ್ಲಿ ನಡೆಯಲಿದ್ದು, ಇದು ಹಗಲು-ರಾತ್ರಿ ಪಂದ್ಯವಾಗಲಿದೆ.

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಏಕದಿನ ಸರಣಿ ವೇಳಾಪಟ್ಟಿ

  • ಅಕ್ಟೋಬರ್ 19, ಭಾನುವಾರ: ಪರ್ತ್ ಕ್ರೀಡಾಂಗಣ, ಪರ್ತ್, (D/N)
  • ಅಕ್ಟೋಬರ್ 23, ಗುರುವಾರ: ಅಡಿಲೇಡ್ ಓವಲ್, ಅಡಿಲೇಡ್, (D/N)
  • ಅಕ್ಟೋಬರ್ 25, ಶನಿವಾರ: SCG, ಸಿಡ್ನಿ, (D/N)

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟ20 ಸರಣಿ ವೇಳಾಪಟ್ಟಿ

  • ಅಕ್ಟೋಬರ್ 29, ಬುಧವಾರ: ಮನುಕಾ ಓವಲ್, ಕ್ಯಾನ್‌ಬೆರಾ, (N)
  • ಅಕ್ಟೋಬರ್ 31, ಶುಕ್ರವಾರ: ಎಂಸಿಜಿ, ಮೆಲ್ಬೋರ್ನ್, (N)
  • ನವೆಂಬರ್ 2, ಭಾನುವಾರ: ಬೆಲ್ಲೆರಿವ್ ಓವಲ್, ಹೋಬಾರ್ಟ್, (N)
  • ನವೆಂಬರ್ 6, ಗುರುವಾರ: ಗೋಲ್ಡ್ ಕೋಸ್ಟ್ ಕ್ರೀಡಾಂಗಣ, ಗೋಲ್ಡ್ ಕೋಸ್ಟ್, (N)
  • ನವೆಂಬರ್ 8, ಶನಿವಾರ: ದಿ ಗಬ್ಬಾ, ಬ್ರಿಸ್ಬೇನ್, (N)

ಇದನ್ನೂ ಓದಿ | ಐಪಿಎಲ್‌ ಇತಿಹಾಸದಲ್ಲೇ ನಿಧಾನಗತಿಯ ಬೌಲ್‌ ಮಾಡಿದರಾ ಸತ್ಯನಾರಾಯಣ ರಾಜು; ಬ್ರಾವೋ ನೆನಪಿಸಿದ ಮುಂಬೈ ಬೌಲರ್

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.