ಮೂರು ಏಕದಿನ, ಮೂರು ಟಿ20ಐ; ಬಾಂಗ್ಲಾದೇಶ-ಭಾರತದ ಸರಣಿಗೆ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
2025ರ ಆಗಸ್ಟ್ನಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೂರು ಏಕದಿನ, ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಈ ಮಹತ್ವದ ಸರಣಿಗೆ ಬಿಸಿಸಿಐ ವೇಳಾಪಟ್ಟಿ ಪ್ರಕಟಿಸಿದೆ.

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬಳಿಕ ಭಾರತೀಯ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬ್ಯುಸಿಯಾಗಲಿದೆ. ಜೂನ್ 20ರಿಂದ ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ಟೀಮ್ ಇಂಡಿಯಾ ವೈಟ್ ಬಾಲ್ ಕ್ರಿಕೆಟ್ ಆಡಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಂಗಳವಾರ (ಏಪ್ರಿಲ್ 15) ಬಾಂಗ್ಲಾದೇಶ ಪ್ರವಾಸದ ಬಿಳಿ ಚೆಂಡು ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಭಾರತ ತಂಡವು ಆಗಸ್ಟ್ 17 ರಿಂದ 31 ರವರೆಗೆ ಎರಡು ಸ್ಥಳಗಳಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಅಷ್ಟೇ ಸಂಖ್ಯೆಯ ಟಿ20 ಪಂದ್ಯಗಳ ಸರಣಿ ಆಡಲಿದೆ. ರೋಹಿತ್ ಶರ್ಮಾ ಭಾರತದ ಏಕದಿನ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ. ಆದರೆ ಇಂಗ್ಲೆಂಡ್ ಪ್ರವಾಸದ ಬಳಿಕ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡದಿದ್ದರೆ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ಸೂರ್ಯ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ.
ಮೀರ್ಪುರ್ನಲ್ಲಿ 4 ಪಂದ್ಯ, ಚಿತ್ತಗಾಂಗ್ನಲ್ಲಿ 2 ಪಂದ್ಯ
ಮೊದಲ ಎರಡು ಏಕದಿನ ಮತ್ತು ಕೊನೆಯ ಎರಡು ಟಿ20 ಪಂದ್ಯಗಳು ಮೀರ್ಪುರ್ನಲ್ಲಿ ನಡೆದರೆ, ಮೂರನೇ ಏಕದಿನ ಮತ್ತು ಮೊದಲ ಟಿ20 ಚಿತ್ತಗಾಂಗ್ನಲ್ಲಿ ನಡೆಯಲಿದೆ. ಭಾರತವು ಆಗಸ್ಟ್ 13, 2025 ರಂದು ಢಾಕಾವನ್ನು ತಲುಪಲಿದೆ. ಮೊದಲ ಎರಡು ಏಕದಿನ ಪಂದ್ಯಗಳು ಆಗಸ್ಟ್ 17 ಮತ್ತು 20 ರಂದು ನಡೆಯಲಿದ್ದು, ಆಗಸ್ಟ್ 23 ರಂದು ಮೂರನೇ ಏಕದಿನ ಪಂದ್ಯವನ್ನು ಆಡಲು ತಂಡ ಚಿತ್ತಗಾಂಗ್ಗೆ ತೆರಳಲಿದೆ. ಮೊದಲ ಟಿ20 ಪಂದ್ಯ ಆಗಸ್ಟ್ 26ರಂದು ಚಿತ್ತಗಾಂಗ್ನಲ್ಲೇ ನಡೆಯಲಿದೆ.
ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಲಕ್ನೋ ತಂಡಕ್ಕೆ ಸಿಹಿ ಸುದ್ದಿ
ಕೊನೆಯ 2 ಟಿ20 ಪಂದ್ಯಗಳು ಆಗಸ್ಟ್ 29 ಮತ್ತು 31ರಂದು ಮಿರ್ಪುರ್ನಲ್ಲಿ ನಡೆಯಲಿವೆ. ಈ ಪ್ರವಾಸವು ಏಷ್ಯಾಕಪ್ ಟಿ20 ಸಿದ್ಧತೆಗೆ ನೆರವಾಗಲಿದೆ. ಭಾರತ ಏಷ್ಯಾಕಪ್ಗೆ ಆತಿಥ್ಯ ವಹಿಸಿದೆ. ಆದರೆ, ಉಭಯ ದೇಶಗಳ ನಡುವಿನ ಒಪ್ಪಂದದ ಪ್ರಕಾರ ಪಾಕಿಸ್ತಾನವು ಭಾರತಕ್ಕೆ ಪ್ರಯಾಣಿಸುವುದಿಲ್ಲ. ಹೀಗಾಗಿ ಕಾರಣ ಪಂದ್ಯಾವಳಿಯನ್ನು ಶ್ರೀಲಂಕಾ, ಬಾಂಗ್ಲಾದೇಶ ಅಥವಾ ಯುಎಇಯಲ್ಲಿ ನಡೆಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಪಂದ್ಯ - ಬಾಂಗ್ಲಾ vs ಭಾರತ ವೇಳಾಪಟ್ಟಿ | ದಿನಾಂಕ | ಸ್ಥಳ |
---|---|---|
ಬಾಂಗ್ಲಾದೇಶ vs ಭಾರತ, ಮೊದಲ ಏಕದಿನ ಪಂದ್ಯ | ಆಗಸ್ಟ್ 17 | ಮೀರ್ಪುರ |
ಬಾಂಗ್ಲಾದೇಶ vs ಭಾರತ, 2ನೇ ಏಕದಿನ ಪಂದ್ಯ | ಆಗಸ್ಟ್ 20 | ಮೀರ್ಪುರ |
ಬಾಂಗ್ಲಾದೇಶ vs ಭಾರತ, 3ನೇ ಏಕದಿನ ಪಂದ್ಯ | ಆಗಸ್ಟ್ 23 | ಮೀರ್ಪುರ |
ಬಾಂಗ್ಲಾದೇಶ vs ಭಾರತ, ಮೊದಲ ಟಿ20ಐ | ಆಗಸ್ಟ್ 26 | ಚಿತ್ತಗಾಂಗ್ |
ಬಾಂಗ್ಲಾದೇಶ vs ಭಾರತ, 2ನೇ ಟಿ20ಐ | ಆಗಸ್ಟ್ 29 | ಚಿತ್ತಗಾಂಗ್ |
ಬಾಂಗ್ಲಾದೇಶ vs ಭಾರತ, 3ನೇ ಟಿ20ಐ | ಆಗಸ್ಟ್ 31 | ಮೀರ್ಪುರ |
ಬಿಸಿಬಿ ಸಿಇಒ ಹೇಳಿದ್ದೇನು?
‘ಈ ಸರಣಿಯು ನಮ್ಮ ದೇಶೀಯ ಕ್ಯಾಲೆಂಡರ್ನಲ್ಲಿ ಅತ್ಯಂತ ರೋಮಾಂಚಕಾರಿ ಘಟನೆಗಳಲ್ಲಿ ಒಂದಾಗಿದೆ’ ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಾಹಕ ನಿಜಾಮುದ್ದೀನ್ ಚೌಧರಿ 'ಇಎಸ್ಪಿನ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ. ಬಾಂಗ್ಲಾದೇಶ ಮತ್ತು ಭಾರತ ಇತ್ತೀಚಿನ ವರ್ಷಗಳಲ್ಲಿ ಕೆಲವು ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಮುಖಾಮುಖಿಯಾಗಿವೆ. ಆದರೆ ಇದು ಮತ್ತೊಂದು ತೀವ್ರ ಸ್ಪರ್ಧೆಯ ಮತ್ತು ಮನರಂಜನೆಯ ಸರಣಿಯಾಗಲಿದೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಸಿಎಸ್ಕೆ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ
