ಇಂಡೋ-ಆಫ್ರಿಕಾ ಸರಣಿಯ ವೇಳಾಪಟ್ಟಿ, ಪಂದ್ಯಗಳ ಸಮಯ, ನೇರಪ್ರಸಾರ, ತಂಡಗಳು; ಸಂಪೂರ್ಣ ಮಾಹಿತಿ ಇಲ್ಲಿದೆ
India Tour Of South Africa 2023: ಭಾರತ-ದಕ್ಷಿಣ ಆಫ್ರಿಕಾ ಸಿರೀಸ್ ಯಾವಾಗ ಶುರು? ಎಷ್ಟು ಗಂಟೆಗೆ? ಪಂದ್ಯ ವೀಕ್ಷಿಸುವುದೆಲ್ಲಿ? ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಕಾಂಗರೂ ಬೇಟೆಯಾಡಿದ ಭಾರತ ಈಗ ಹರಿಣಗಳ ನಾಶಕ್ಕೆ ಸಜ್ಜಾಗಿದೆ. ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಬೆನ್ನಲ್ಲೇ ಡಿಸೆಂಬರ್ 10 ರಿಂದ ಸೌತ್ ಆಫ್ರಿಕಾ (India vs South Africa) ಎದುರು ಟೆಸ್ಟ್, ಏಕದಿನ, ಟಿ20 ಸಿರೀಸ್ಗೆ ಭರ್ಜರಿ ತಯಾರಿ ಆರಂಭಿಸಿದೆ. ಎರಡೂ ದೇಶಗಳು ತಮ್ಮ ದ್ವಿಪಕ್ಷೀಯ ಸರಣಿಗಳಿಗೆ ಬಲಿಷ್ಠ ತಂಡಗಳನ್ನು ಪ್ರಕಟಿಸಿವೆ.
ಡಿಸೆಂಬರ್ 10ರಿಂದ ಆರಂಭವಾಗುವ ಭಾರತದ ದಕ್ಷಿಣ ಆಫ್ರಿಕಾದ ಪ್ರವಾಸ ಜನವರಿ 7ರವರೆಗೂ ಇರಲಿದೆ. ಸರಿ ಸುಮಾರು ಒಂದು ತಿಂಗಳ ಕಾಲ ಆಫ್ರಿಕಾ ನಾಡಲ್ಲೇ ಭಾರತ ಆಟಗಾರರು ಉಳಿದುಕೊಳ್ಳಲಿದ್ದಾರೆ. ಕೊನೆಯದಾಗಿ 2021ರ ಡಿಸೆಂಬರ್ನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಗೆ ಸೌತ್ ಆಫ್ರಿಕಾಗೆ ಹಾರಿತ್ತು ಭಾರತ.
ಉಭಯ ತಂಡಗಳಲ್ಲೂ ಘಟಾನುಘಟಿ ಆಟಗಾರರೇ ತುಂಬಿದ್ದು, ರೋಚಕತೆ ಹೆಚ್ಚಿಸುವ ಸಾಧ್ಯತೆ ಇದೆ. ಅಲ್ಲದೆ, 2021ರ ಸೋಲಿನ ಸೇಡು ತೀರಿಸಿಕೊಳ್ಳಲು ಇದು ಸುವರ್ಣಾವಕಾಶ. ಹಾಗಾದರೆ ಭಾರತ-ದಕ್ಷಿಣ ಆಫ್ರಿಕಾ ಸಿರೀಸ್ ಯಾವಾಗ ಶುರು? ಎಷ್ಟು ಗಂಟೆಗೆ? ಪಂದ್ಯ ವೀಕ್ಷಿಸುವುದೆಲ್ಲಿ? ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಇಂಡೋ-ಆಫ್ರಿಕಾ ಸರಣಿ ಲೈವ್ ಸ್ಟ್ರೀಮಿಂಗ್
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯನ್ನು ಭಾರತದಲ್ಲಿ ಸ್ಟಾರ್ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಡಿಸ್ನಿ+ ಹಾಟ್ಸ್ಟಾರ್ನಲ್ಲೂ ಕಣ್ತುಂಬಿಕೊಳ್ಳಬಹುದು.
ಭಾರತ ತಂಡ
2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ | ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್. ಸಿರಾಜ್, ಮುಕೇಶ್ ಕುಮಾರ್, ಮೊಹಮ್ಮದ್ ಶಮಿ*, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ. |
3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ | ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ/ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಲ್, ಮುಕೇಶ್ ಕುಮಾರ್, ಅವೇಶ್ ಖಾನ್, ಆರ್ಷ್ದೀಪ್ ಸಿಂಗ್, ದೀಪಕ್ ಚಹರ್. |
3 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ | ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ದೀಪಕ್ ಚಹರ್. |
ದಕ್ಷಿಣ ಆಫ್ರಿಕಾ ತಂಡ
ದಕ್ಷಿಣ ಆಫ್ರಿಕಾ ಟಿ20 ತಂಡ | ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ನಾಂಡ್ರೆ ಬರ್ಗರ್, ಗೆರಾಲ್ಡ್ ಕೋಯೆಟ್ಜಿ, ಡೊನೊವನ್ ಫೆರೆರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆಂಡಿಲೊ ಪೆಹ್ಲುಕ್ವಾಯೋ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್, ಲಿಜಾಡ್ ವಿಲಿಯಮ್ಸ್. |
ದಕ್ಷಿಣ ಆಫ್ರಿಕಾ ಏಕದಿನ ತಂಡ | ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ನಾಂಡ್ರೆ ಬರ್ಗರ್, ಟೋನಿ ಡಿ ಜೊರ್ಜಿ, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ರಾಸ್ಸಿ, ವ್ಯಾನ್ ಡೆರ್ ಡ್ಯುಸ್ಸೆನ್, ಕೈಲ್ ವೆರಿನ್ನೆ, ಲಿಜಾರ್ಡ್ ವಿಲಿಯಮ್ಸನ್. |
ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ | ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಯೆಟ್ಜಿ, ಟೋನಿ ಡಿ ಜೊರ್ಜಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಕೀಗನ್ ಪೀಟರ್‌ಸನ್, ಕಗಿಸೋ ರಬಾಡಾ , ಕೈಲ್ ವೆರಿನ್ನೆ, ಟ್ರಿಸ್ಟಾನ್ ಸ್ಟಬ್ಸ್. |
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವೇಳಾಪಟ್ಟಿ
ಭಾರತ - ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್, ಏಕದಿನ, ಟಿ20 ಸರಣಿಗಳ ಸಂಪೂರ್ಣ ವೇಳಾಪಟ್ಟಿ | ||||
---|---|---|---|---|
ದಿನಾಂಕ | ದಿನಾಂಕ | ಸಮಯ (ಭಾರತೀಯ ಕಾಲಮಾನ) | ಪಂದ್ಯಗಳು | ಸ್ಥಳ |
ಡಿ.10, 2023, | ಭಾನುವಾರ | ರಾತ್ರಿ 9.30 | 1ನೇ ಟಿ20 | ಡರ್ಬನ್ |
ಡಿ.12, 2023 | ಮಂಗಳವಾರ | ರಾತ್ರಿ 9.30 | 2ನೇ ಟಿ20 | ಗ್ಕೆಬರ್ಹಾ |
ಡಿ.14, 2023 | ಗುರುವಾರ | ರಾತ್ರಿ 9.30 | 3ನೇ ಟಿ20 | ಜೋಹಾನ್ಸ್‌ಬರ್ಗ್ |
ಡಿ.17, 2023 | ಭಾನುವಾರ | ಮಧ್ಯಾಹ್ನ 1.30 | 1ನೇ ಏಕದಿನ | ಜೋಹಾನ್ಸ್‌ಬರ್ಗ್ |
ಡಿ.19, 2023 | ಮಂಗಳವಾರ | ಸಂಜೆ 4.30 | 2ನೇ ಏಕದಿನ | ಗ್ಕೆಬರ್ಹಾ |
ಡಿ.21, 2023 | ಗುರುವಾರ | ಸಂಜೆ 4.30 | 3ನೇ ಏಕದಿನ | ಪರ್ಲ್ |
ಡಿ.26-30, 2023 | ಮಂಗಳವಾರ | ಮಧ್ಯಾಹ್ನ 1.30 | 1ನೇ ಟೆಸ್ಟ್ | ಸೆಂಚುರಿಯನ್ |
ಜ.3ರಿಂದ ಜ.07, 2024 | ಬುಧವಾರ | ಮಧ್ಯಾಹ್ನ 2ಕ್ಕೆ | 2ನೇ ಟೆಸ್ಟ್ | ಕೇಪ್ ಟೌನ್ |