ಕನ್ನಡ ಸುದ್ದಿ  /  ಕ್ರಿಕೆಟ್  /  ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ಪ್ರವಾಸ; ಪೂರ್ಣ ವೇಳಾಪಟ್ಟಿ, ತಂಡಗಳು, ದಿನಾಂಕ, ಲೈವ್ ಸ್ಟ್ರೀಮಿಂಗ್ ಮಾಹಿತಿ

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ಪ್ರವಾಸ; ಪೂರ್ಣ ವೇಳಾಪಟ್ಟಿ, ತಂಡಗಳು, ದಿನಾಂಕ, ಲೈವ್ ಸ್ಟ್ರೀಮಿಂಗ್ ಮಾಹಿತಿ

India vs Zimbabwe T20Is: ಜಿಂಬಾಬ್ವೆ ಮತ್ತು ಟೀಮ್ ಇಂಡಿಯಾ ನಡುವಿನ ಟಿ20ಐ ಸರಣಿಯು ಜುಲೈ 6 ರಿಂದ ಶುರುವಾಗಲಿದೆ. ಈ ಸರಣಿಯ ವೇಳಾಪಟ್ಟಿ, ತಂಡಗಳು, ದಿನಾಂಕ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ.

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ಪ್ರವಾಸ; ಪೂರ್ಣ ವೇಳಾಪಟ್ಟಿ, ತಂಡಗಳು, ದಿನಾಂಕ, ಲೈವ್ ಸ್ಟ್ರೀಮಿಂಗ್ ಮಾಹಿತಿ
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ಪ್ರವಾಸ; ಪೂರ್ಣ ವೇಳಾಪಟ್ಟಿ, ತಂಡಗಳು, ದಿನಾಂಕ, ಲೈವ್ ಸ್ಟ್ರೀಮಿಂಗ್ ಮಾಹಿತಿ

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ 2024 (T20 World Cup 2024) ಗೆದ್ದ ನಂತರ ಟೀಮ್ ಇಂಡಿಯಾ ಮತ್ತೊಂದು ಸರಣಿಗೆ ಸಿದ್ಧವಾಗುತ್ತಿದೆ. ಜುಲೈ 6 ರಿಂದ ಜುಲೈ 14ರವರೆಗೆ ನಡೆಯುವ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಜಿಂಬಾಬ್ವೆ ತಂಡವನ್ನು ಭಾರತದ ಯುವಕರ ತಂಡ (Indian Cricket Team) ಎದುರಿಸಲಿದೆ. ಟಿ20 ವಿಶ್ವಕಪ್ ಆಡಿದ ಭಾರತದ 15 ಸದಸ್ಯರ ತಂಡದಿಂದ ಮೂವರು ಸದಸ್ಯರು ಮಾತ್ರ ಈ ಪ್ರವಾಸ ಭಾಗವಾಗಿದ್ದಾರೆ. ಸಂಜು ಸ್ಯಾಮ್ಸನ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಅವಕಾಶ ಪಡೆದಿದ್ದಾರೆ.

ಯುವ ಆಟಗಾರರಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಅವರು ಚೊಚ್ಚಲ ಅವಕಾಶ ಪಡೆದಿದ್ದಾರೆ. ನಿತೀಶ್ ರೆಡ್ಡಿ ಕೂಡ ಮೊದಲ ಬಾರಿಗೆ ಅವಕಾಶ ಪಡೆದುಕೊಂಡಿದ್ದರು. ಇದೀಗ ಅವರ ಬದಲಿಗೆ ಶಿವಂ ದುಬೆಗೆ ಚಾನ್ಸ್ ಕೊಡಲಾಗಿದೆ. 2024ರ ಐಪಿಎಲ್‌ನಲ್ಲಿ ಶುಭ್ಮನ್ ಗಿಲ್ ನಾಯಕನಾಗಿ ಪದಾರ್ಪಣೆ ಮಾಡಿದ್ದರು. ಆತನಿಗೆ ಇದೇ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಲಾಗಿದೆ. ಈ ತಂಡದಲ್ಲಿ ಹಿರಿಯ ಆಟಗಾರರಿಗೆ ಅವಕಾಶ ನೀಡಲಾಗಿಲ್ಲ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮತ್ತು ರವೀಂದ್ರ ಜಡೇಜಾ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದರು. ಹೀಗಾಗಿ 2026ರಲ್ಲಿ ಶ್ರೀಲಂಕಾ ಮತ್ತು ಭಾರತ ಜಂಟಿ ಆತಿಥ್ಯದಲ್ಲಿ ನಡೆಯುವ 10ನೇ ಆವೃತ್ತಿಯ ಟಿ20 ವಿಶ್ವಕಪ್​ಗೆ ಈ ಸರಣಿಯಿಂದಲೇ ಭಾರತ ತಂಡವನ್ನು ಸಜ್ಜುಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಭಾರತೀಯ ಕಾಲಮಾನದ ಪ್ರಕಾರ (IST) ಸಂಜೆ 4 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 4.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದಲ್ಲಿ ಎಲ್ಲಿ ಹೇಗೆ ವೀಕ್ಷಿಸಬೇಕು?

ಭಾರತ ಮತ್ತು ಜಿಂಬಾಬ್ವೆ ಟಿ20ಐ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್​​ನಲ್ಲಿ ಭಾರತದಲ್ಲಿ ಪ್ರಸಾರ ಮಾಡಲಾಗುತ್ತದೆ. ಸೋನಿ ಟೆನ್-5 ನಲ್ಲಿ ಇಂಗ್ಲಿಷ್ ಕಾಮೆಂಟರಿ ಮತ್ತು ಸೋನಿ ಟೆನ್ 3 ಹಿಂದಿ ಕಾಮೆಂಟರಿಯೊಂದಿಗೆ ನೇರ ಪ್ರಸಾರ ಮಾಡುತ್ತದೆ. ಲೈವ್ ಸ್ಟ್ರೀಮಿಂಗ್ SonyLiv ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಭಾರತ ತಂಡ

ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋನಿ, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಕೇಶ್ ಕುಮಾರ್, ತುಷಾರ್ ದೇಶಪಾಂಡೆ.

ಜಿಂಬಾಬ್ವೆ ತಂಡ

ಸಿಕಂದರ್ ರಾಜಾ (ನಾಯಕ), ಫರಾಜ್ ಅಕ್ರಮ್, ಬ್ರಿಯಾನ್ ಬೆನೆಟ್, ಜೊನಾಥನ್ ಕ್ಯಾಂಪ್‌ಬೆಲ್, ಟೆಂಡೈ ಚಟಾರಾ, ಲ್ಯೂಕ್ ಜೊಂಗ್ವೆ, ಇನ್ನೋಸೆಂಟ್ ಕೈಯಾ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ, ವೆಲ್ಲಿಂಗ್‌ಟನ್ ಮಸಕಡ್ಜಾ, ಬ್ರ್ಯಾಂಡನ್ ಮೌಝಾರಾಬ್, ಬ್ರ್ಯಾಂಡನ್ ಮೌಝಾರಾಬ್, ಬ್ರ್ಯಾಂಡನ್ ಮವುಟರಾಬ್ , ರಿಚರ್ಡ್ ಶಿಪ್, ಮಿಲ್ಟನ್ ಲಯನ್.

ಭಾರತ vs ಜಿಂಬಾಬ್ವೆ ಟಿ20ಐ ಸರಣಿ ವೇಳಾಪಟ್ಟಿ

1 ನೇ ಟಿ20ಐ - ಶನಿವಾರ, ಜುಲೈ 6

2 ನೇ ಟಿ20ಐ - ಭಾನುವಾರ, ಜುಲೈ 7

3 ನೇ ಟಿ20ಐ - ಬುಧವಾರ, ಜುಲೈ 10

4 ನೇ ಟಿ20ಐ - ಶನಿವಾರ, ಜುಲೈ 13

5 ನೇ ಟಿ20ಐ - ಭಾನುವಾರ, ಜುಲೈ 14