ಸಿಡ್ನಿ ಟೆಸ್ಟ್​​ನ 5 ದಿನವೂ ಮಳೆ ಸಾಧ್ಯತೆ; ಅಂತಿಮ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ, WTC ಫೈನಲ್ ಲೆಕ್ಕಾಚಾರ ಏನು?
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಡ್ನಿ ಟೆಸ್ಟ್​​ನ 5 ದಿನವೂ ಮಳೆ ಸಾಧ್ಯತೆ; ಅಂತಿಮ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ, Wtc ಫೈನಲ್ ಲೆಕ್ಕಾಚಾರ ಏನು?

ಸಿಡ್ನಿ ಟೆಸ್ಟ್​​ನ 5 ದಿನವೂ ಮಳೆ ಸಾಧ್ಯತೆ; ಅಂತಿಮ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ, WTC ಫೈನಲ್ ಲೆಕ್ಕಾಚಾರ ಏನು?

Sydney Pink Test: ಬಾರ್ಡರ್ ಗವಾಸ್ಕರ್ ಟ್ರೋಫಿ ಸಮಬಲ ಸಾಧಿಸಲು ಮತ್ತು ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭಾರತ ತಂಡಕ್ಕೆ ಇರುವ ಸಾಸಿವೆ ಕಾಳಿನಷ್ಟು ಅವಕಾಶಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡುವ ಅಂದಾಜಿದೆ.

Sydney Weather: ಬಿಜಿಟಿ ಸರಣಿ ಸಮಬಲ ಸಾಧಿಸಲು ಭಾರತ ತಂಡದ ಕನಸಿಗೆ ತಣ್ಣೀರು; ಸಿಡ್ನಿ ಟೆಸ್ಟ್​ಗೆ ಮಳೆಯೇ ವಿಲನ್?
Sydney Weather: ಬಿಜಿಟಿ ಸರಣಿ ಸಮಬಲ ಸಾಧಿಸಲು ಭಾರತ ತಂಡದ ಕನಸಿಗೆ ತಣ್ಣೀರು; ಸಿಡ್ನಿ ಟೆಸ್ಟ್​ಗೆ ಮಳೆಯೇ ವಿಲನ್? (ಸಂಗ್ರಹ ಚಿತ್ರ)

Border-Gavaskar Trophy: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ (India vs Australia 5th Test) ಭರ್ಜರಿ ಸಿದ್ಧತೆ ನಡೆಸುತ್ತಿವೆ. ಇದು ಜನವರಿ 3 ರಿಂದ 7 ರವರೆಗೆ ಐಕಾನಿಕ್ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (Sydney Cricket Ground) ನಡೆಯಲಿದೆ. ಐದು ಟೆಸ್ಟ್​ಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಪ್ರಸ್ತುತ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದು, ಅಂತಿಮ ಟೆಸ್ಟ್ ಜಯಿಸಿ ಸರಣಿ ಡ್ರಾ ಮಾಡಿಕೊಳ್ಳಲು ಭಾರತ ತಂಡಕ್ಕಿರುವ ಕೊನೆಯ ಅವಕಾಶ ಇದಾಗಿದೆ. ಆದರೆ ಈ ನಡುವೆ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿ ಟೆಸ್ಟ್​ಗೆ ಮಳೆ ಅಡ್ಡಿ?

ಬಿಜಿಟಿ ಸರಣಿ ಸಮಬಲ ಸಾಧಿಸಲು ಮತ್ತು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪ್ರವೇಶಿಸಲು ಇರುವ ಸಾಸಿವೆ ಕಾಳಿನಷ್ಟು ಅವಕಾಶಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಸಿಡ್ನಿಯಲ್ಲಿ ಪಿಂಕ್ ಟೆಸ್ಟ್‌ನ ಕೊನೆಯ 2 ದಿನಗಳಿಗೆ ಬಹುತೇಕ ಮಳೆ ಅಡಚಣೆ ಉಂಟು ಮಾಡುತ್ತದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ. ಇದು ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಗೂಗಲ್ ಹವಾಮಾನದ ಪ್ರಕಾರ, ಮೊದಲ ದಿನವೇ ದಟ್ಟವಾದ ಮೋಡ ಕವಿದ ವಾತಾವರಣ ಇರಲಿದ್ದು, ಶೇ 25ರಷ್ಟು ಮಳೆ ಸಾಧ್ಯತೆ ಇದೆ.

ಆದರೆ, 2ನೇ ದಿನ ಶೇ 5ರಷ್ಟು ಇದರ ಪ್ರಮಾಣ ಇಳಿಕೆಯಾಗಲಿದೆ ಎಂದು ವರದಿ ಹೇಳುತ್ತಿದೆ. ಮೂರನೇ ದಿನದಾಟವು ಯಾವುದೇ ಮಳೆ ಇಲ್ಲದೆ ಸುಗಮವಾಗಲಿದೆ. ಪ್ರಕಾಶಮಾನವಾಗಿ, ಬಿಸಿಲಿನಿಂದ ಕೂಡಿರುತ್ತದೆ ಎನ್ನಲಾಗಿದೆ. ಪಂದ್ಯದ ಕೊನೆಯ ಎರಡು ದಿನಗಳು ಮತ್ತೆ ಪ್ರತಿಕೂಲ ಹವಾಮಾನ ಹೊಂದಿರಲಿದೆ. ನಾಲ್ಕನೇ ದಿನದ ಅಂತ್ಯದಲ್ಲಿ ತುಂತುರು ಮಳೆ ಆಗಬಹುದು. ಅದೇ ದಿನ ರಾತ್ರಿ ಇಡೀ ಮಳೆ ಸುರಿಯಲಿದೆಯಂತೆ. ಟೆಸ್ಟ್‌ನ 5ನೇ ದಿನ ನಿರಂತರ ತುಂತುರು ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಹವಾಮಾನ ಪರಿಸ್ಥಿತಿ ನೋಡುತ್ತಿದ್ದರೆ ಪಂದ್ಯಕ್ಕೆ ಬಹುತೇಕ ಅಡ್ಡಿಯಾಗುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಬಹುದು ಎನ್ನಲಾಗುತ್ತಿದೆ.

ಅಲ್ಲದೆ, ಬಿಬಿಸಿ ಹವಾಮಾನದ ಪ್ರಕಾರ, ಪಂದ್ಯದ ಆರಂಭದ ದಿನ ಶುಕ್ರವಾರ ಮಧ್ಯಾಹ್ನ ಸ್ವಲ್ಪ ಮಳೆ ಬೀಳಬಹುದು. ವಾರಾಂತ್ಯದಲ್ಲಿ ಸ್ವಲ್ಪ ಬಿಸಿಲಿದ್ದರೂ ಪಂದ್ಯದ 4ನೇ ದಿನವಾದ ಸೋಮವಾರ ರಾತ್ರಿ ಮಳೆ ಬೀಳುವ ಸಾಧ್ಯತೆ ಶೇ 68ರಷ್ಟಿದ್ದು, ದಿನದಾಟದ ವೇಳೆಗೆ ವಾತಾವರಣ ತಿಳಿಯಾಗುವ ಸಾಧ್ಯತೆ ಇದೆ. ಐದನೇ ದಿನವೂ ಭಾರೀ ಮಳೆಯಾಗುವ ಸಾಧ್ಯತೆಯಿದೆ, ಇದು ದಿನವಿಡೀ ಮುಂದುವರಿಯುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಒಂದು ವೇಳೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ ಭಾರತ ತಂಡಕ್ಕೆ ದೊಡ್ಡ ನಷ್ಟವಾಗಲಿದ್ದು, ಸರಣಿ ಕಳೆದುಕೊಳ್ಳುವುದರ ಜೊತೆಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಇರುವ ಸಾಸಿವೆ ಕಾಳಿನಷ್ಟು ಅವಕಾಶ ಅಂತ್ಯಗೊಳ್ಳುತ್ತದೆ.

ಸಿಡ್ನಿ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡರೆ ಏನಾಗಬಹುದು?

ಸಿಡ್ನಿ ಟೆಸ್ಟ್ ಫಲಿತಾಂಶ ಇಲ್ಲದೆ ಅಂತ್ಯಗೊಂಡರೆ 2-1 ಅಂತರದಿಂದ ಸರಣಿ ವಶಪಡಿಸಿಕೊಳ್ಳಲಿರುವ ಆಸ್ಟ್ರೇಲಿಯಾ, ಸರಣಿ ಗೆಲುವಿನ ಜತೆಗೆ ಜೂನ್‌ನಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್​​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC Final) ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಒಂದು ವೇಳೆ ಭಾರತ ತಂಡವು ಪಂದ್ಯ ಗೆದ್ದರೆ ಸರಣಿಯನ್ನು ಡ್ರಾ ಸಾಧಿಸಿದರೆ, ಟ್ರೋಫಿ ಉಳಿಸಿಕೊಳ್ಳುವ ಬದಲಿಗೆ ಡಬ್ಲ್ಯುಟಿಸಿ ಫೈನಲ್​ ರೇಸ್​ನಲ್ಲಿ ಉಳಿದುಕೊಳ್ಳಲಿದೆ. ಇದು ಆಸ್ಟ್ರೇಲಿಯಾ-ಶ್ರೀಲಂಕಾ ಸರಣಿಯ ಫಲಿತಾಂಶದ ಆಧಾರದ ಮೇಲೆ ಪರಿಣಾಮ ಬೀರುತ್ತದೆ.

Whats_app_banner