IND vs AUS World Cup Highlights: ಟೀಂ ಇಂಡಿಯಾವನ್ನು ಮಣಿಸಿ 6ನೇ ಬಾರಿ ಏಕದಿನ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ
India vs Australia Cricket World Cup Final Latest Updates: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ವಿಶ್ವಕಪ್ ಫೈನಲ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಪಂದ್ಯದ ಲೈವ್ ಅಪ್ಡೇಟ್ಸ್ ಇಲ್ಲಿದೆ.
ಏಕದಿನ ವಿಶ್ವಕಪ್ 2023ರ (ICC ODI World Cup 2023) ಫೈನಲ್ ಪಂದ್ಯಕ್ಕೆ ಕೊನೆಗೂ ಕ್ಷಣಗಣನೆ ಶುರುವಾಗಿದೆ. ನವೆಂಬರ್ 19ರ ಭಾನುವಾರ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಬಂದಿದೆ. ಅದಕ್ಕೂ ಮುನ್ನವೇ ಭಾರತ ತಂಡವು ನ್ಯೂಜಿಲ್ಯಾಂಡ್ ಅನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. 2003ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಬಲಿಷ್ಠ ಇಂಡೋ ಆಸೀಸ್ ತಂಡಗಳ ಜಿದ್ದಿನ ಕದನಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ರೋಚಕ ಪಂದ್ಯ ಹಾಗೂ ಪಂದ್ಯಕ್ಕೂ ಮುನ್ನ ನಡೆಯುತ್ತಿರುವ ಏರ್‌ಶೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಲೈವ್ ಅಪ್ಡೇಟ್ಸ್ ಇಲ್ಲಿದೆ.
ಟ್ರೆಂಡಿಂಗ್ ಸುದ್ದಿ
09.24 PM IND vs AUS ICC ODI World Cup 2023 Final Live Updates AUS 241/4 (43): ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು 6 ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ 6ನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 240 ರನ್‌ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದೆ.
09.10 PM IND vs AUS ICC ODI World Cup 2023 Final Live Updates AUS 225/3 (40): ಆಸ್ಟ್ರೇಲಿಯಾ 40 ಓವರ್‌ಗಳ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದೆ. ಟ್ರಾವಿಸ್ ಹೆಡ್ ಮತ್ತು ಲಾಬುಶೇನ್ ಬ್ಯಾಟಿಂಗ್ ಮುಂದುವರಿಸಿದ್ದಾರೆ.
08.58 PM IND vs AUS ICC ODI World Cup 2023 Final Live Updates AUS 212/3 (37.3): ಆಸ್ಟ್ರೇಲಿಯಾ 200 ರನ್ ಪೂರೈಸಿದ್ದು, 6ನೇ ಬಾರಿ ವಿಶ್ವಕಪ್ ಚಾಂಪಿಯನ್ ಪಟ್ಟದ ಸನಿಹದಲ್ಲಿದೆ.
08.51 PM IND vs AUS ICC ODI World Cup 2023 Final Live Updates AUS 196/3 (36.1): ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಿದ್ದಾರೆ.
08.49 PM IND vs AUS ICC ODI World Cup 2023 Final Live Updates AUS 192/3 (35): ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಭರ್ಜರಿ ಶತಕ ಸಿಡಿಸಿದ್ದಾರೆ. ಹೆಡ್ 99 ಎಸೆತಗಳಿಂದ 14 ಬೌಂಡರಿ ಹಾಗೂ 2 ಸಿಕ್ಸರ್ ಸೇರಿ 107 ರನ್ ಗಳಿಸಿ ಆಡುತ್ತಿದ್ದಾರೆ.
08.34 PM IND vs AUS ICC ODI World Cup 2023 Final Live Updates AUS 172/3 (32): ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲೆಸ್ ಅವರು ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಿದ್ದು, ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸುತ್ತಿದ್ದಾರೆ.
08.29 PM IND vs AUS ICC ODI World Cup 2023 Final Live Updates AUS 167/3 (30): ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಡಿ ನಡ್ಡಾ ಅವರು ಹೈದರಾಬಾದ್‌ನ ಮಲ್ಕಜ್‌ಗಿರಿಯಲ್ಲಿ ಪಕ್ಷದ ಮುಖಂಡರೊಂದಿಗೆ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಆಸ್ಟ್ರೇಲಿಯಾ 30 ಓವರ್‌ಗಳ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ.
08.17 PM IND vs AUS ICC ODI World Cup 2023 Final Live Updates AUS 157/3 (27.4): ಆಸ್ಟ್ರೇಲಿಯಾ 150ರ ಗಡಿ ದಾಟಿದೆ. ಟ್ರಾವಿಸ್ ಹೆಡ್ ಮತ್ತು ಲಾಬುಶೇನ್ ಬ್ಯಾಟಿಂಗ್ ಮುಂದುವರಿಸಿದ್ದಾರೆ.
07.55 PM IND vs AUS ICC ODI World Cup 2023 Final Live Updates AUS 115/3 (21.3): ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ ಅರ್ಧ ಶತಕ ಸಿಡಿಸಿದ್ದಾರೆ. 58 ಎಸೆತಗಳನ್ನು ಎದುರಿಸಿರುವ 6 ಬೌಂಡರಿ ಮತ್ತು 1 ಸಿಕ್ಸರ್ ಸೇರಿ 50 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
07.49 PM IND vs AUS ICC ODI World Cup 2023 Final Live Updates AUS 104/3 (20): ಆಸ್ಟ್ರೇಲಿಯಾ 20 ಓವರ್‌ಗಳ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ. ಟ್ರಾವಿಸ್ ಹೆಡ್ (44) ಮತ್ತು ಲಬುಶೇನ್ (17) ಬ್ಯಾಟಿಂಗ್ ಮಾಡುತ್ತಿದ್ದಾರೆ.
07.30 PM IND vs AUS ICC ODI World Cup 2023 Final Live Updates AUS 78/3 (15): ಆಸ್ಟ್ರೇಲಿಯಾ 15 ಓವರ್‌ಗಳ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿದೆ. ಟ್ರಾವಿಸ್ ಹೆಡ್ ಮತ್ತು ಲಬುಶೇನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
07.12 PM IND vs AUS ICC ODI World Cup 2023 Final Live Updates AUS 60/3 (10): ಆಸ್ಟ್ರೇಲಿಯಾ 10 ಓವರ್‌ಗಳ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ. ಟ್ರಾವಿಸ್ ಹೆಡ್ ಮತ್ತು ಲಬುಶೇನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
07.07 PM IND vs AUS ICC ODI World Cup 2023 Final Live Updates AUS 51/3 (9): ಆಸ್ಟ್ರೇಲಿಯಾ 9 ಓವರ್‌ಗಳ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 51 ರನ್ ಗಳಿಸಿದೆ.
06.59 PM IND vs AUS ICC ODI World Cup 2023 Final Live Updates AUS 47/3 (7): ಆಸ್ಟ್ರೇಲಿಯಾದ 3ನೇ ವಿಕೆಟ್ ಪತನವಾಗಿದೆ. ಸ್ವೀವ್ ಸ್ಮಿತ್ 4 ರನ್ ಗಳಿಸಿ ಬುಮ್ರಾ ಅವರ ಅವರ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದಿದ್ದಾರೆ.
06.48 PM IND vs AUS ICC ODI World Cup 2023 Final Live Updates AUS 41/2 (4.3): ಆಸ್ಟ್ರೇಲಿಯಾದ 2 ವಿಕೆಟ್ ಪಡೆಯುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದ್ದು, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಮಿಚೆಲ್ ಮಾರ್ಷ್ ಔಟಾಗಿದ್ದಾರೆ.
06.33 PM IND vs AUS ICC ODI World Cup 2023 Final Live Updates AUS 16/1 (1.1): ಆಸ್ಟ್ರೇಲಿಯಾ ಮೊದಲ ವಿಕೆಟ್ ಪತನವಾಗಿದೆ. ಡೇವಿಡ್ ವಾರ್ನರ್ 7 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ.
06.30 PM IND vs AUS ICC ODI World Cup 2023 Final Live Updates AUS 15/0 (1): ಆಸ್ಟ್ರೇಲಿಯಾ ತಂಡವು 241 ರನ್ ಚೇಸಿಂಗ್‌ಗೆ ಇಳಿದಿದೆ. ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ ಎಸೆತದಲ್ಲೇ ವಾರ್ನರ್ ವಿಕೆಟ್ ಪಡೆಯುವ ಅವಕಾಶವನ್ನು ಭಾರತ ಕೈಚೆಲ್ಲಿದೆ. ಮೊದಲ ಓವರ್‌ನಲ್ಲೇ ಬುಮ್ರಾ 15 ರನ್ ಬಿಟ್ಟುಕೊಟ್ಟಿದ್ದಾರೆ.
05.55 PM IND vs AUS ICC ODI World Cup 2023 Final Live Updates IND 240 (50) : ಭಾರತ ತಂಡ ನಿಗದಿತ 50 ಓವರ್‌ಗಳಿಗೆ 240 ರನ್ ಗಳಿಸಿ ಆಲೌಟ್ ಆಗಿದೆ. ಆಸ್ಟ್ರೇಲಿಯಾ ತಂಡಕ್ಕೆ 241 ರನ್ ಟಾರ್ಗೆಟ್ ಸಿಕ್ಕಿದೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತ ಇದೇ ಮೊದಲ ಬಾರಿಗೆ ಆಲೌಟ್ ಆಗಿದೆ.
IND vs AUS ICC ODI World Cup 2023 Final Live Updates: ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ಗೆ ಬಂದಿದ್ದಾರೆ. ಅವರು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬರಲಿದ್ದಾರೆ.
05.40 PM IND vs AUS ICC ODI World Cup 2023 Final Live Updates IND 214/8 (44.5): ಡೆತ್ ಓವರ್‌ಗಳಲ್ಲಿ ಅಬ್ಬರಿಸುವ ಅವಕಾಶ ಪಡೆದಿದ್ದ ಸೂರ್ಯಕುಮಾರ್ ಸಂಪೂರ್ಣ ನಿರಾಸೆ ಮೂಡಿಸಿದರು. 28 ಎಸೆತ ಎದುರಿಸಿದ ಕೇವಲ 18 ರನ್ ಗಳಿಸಿ ಔಟಾಗಿದ್ದಾರೆ. ಭಾರತದ ರನ್ ಗಳಿಕೆಯ ಆಸೆ ಅಂತ್ಯಗೊಂಡಿದೆ.
05.25 PM IND vs AUS ICC ODI World Cup 2023 Final Live Updates IND 214/8 (44.5): ಜಸ್ಪ್ರೀತ್ ಬುಮ್ರಾ 1 ರನ್ ಗಳಿಸಿದ ಬಳಿಕ ವಿಕೆಟ್ ಒಪ್ಪಿಸಿದ್ದಾರೆ. ಭಾರತ 8 ವಿಕೆಟ್ ಕಳೆದುಕೊಂಡಿದೆ. ಅಹಮದಾಬಾದ್ ಮೈದಾನದಲ್ಲಿ ಈ ಮೊತ್ತ ಸ್ಪರ್ಧಾತ್ಮಕವಲ್ಲ. ಸದ್ಯ ಸೂರ್ಯಕುಮಾರ್ ಯಾದವ್ ಅಬ್ಬರಿಸುವುದು ಅನಿವಾರ್ಯವಾಗಿದೆ.
05.10 PM IND vs AUS ICC ODI World Cup 2023 Final Live Updates IND 203/6 (41.4): ಕೆಎಲ್ ರಾಹುಲ್ ಅವರ 66 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಅಂತ್ಯವಾಗಿದೆ. ಭಾರತ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಬ್ಯಾಟರ್ ಆಗಿ ಸೂರ್ಯಕುಮಾರ್ ಯಾದವ್ ಒಬ್ಬರೇ ತಂಡದಲ್ಲಿ ಉಳಿದಿದ್ದಾರೆ.
04.40 PM IND vs AUS ICC ODI World Cup 2023 Final Live Updates IND 178/5 (35.5): ಕೆಎಲ್ ರಾಹುಲ್ ಜೊತೆಗಿನ 30 ರನ್ ಜೊತೆಯಾಟದ ಬಳಿಕ ರವೀಂದ್ರ ಜಡೇಜಾ ಔಟಾಗಿದ್ದಾರೆ. ಭಾರತ 5ನೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. 9 ರನ್ ಗಳಿಸಿದ ಜಡ್ಡು ಹೇಜಲ್‌ವುಡ್ ಎಸೆತದಲ್ಲಿ ಕೀಪರ್ ಇಂಗ್ಲಿಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.
04.35 PM IND vs AUS ICC ODI World Cup 2023 Final Live Updates IND 173/4 (35): ಇದರ ಅನಿವಾರ್ಯವಿತ್ತು. ಭಾರತಕ್ಕೆ ಇದು ಬೇಕಿತ್ತು. ಪಂದ್ಯದಲ್ಲಿ ಕೆಎಲ್ ರಾಹುಲ್ ಎರಡನೇಯವರಾಗಿ ಅಮೂಲ್ಯ ಅರ್ಧಶತಕ ಸಿಡಿಸಿದ್ದಾರೆ. ಜವಾಬ್ದಾರಿಯುತ ಆಟದೊಂದಿಗೆ 86 ಎಸೆತಗಳಲ್ಲಿ 50 ರನ್ ಬಂದಿವೆ. ಆಸೀಸ್‌ಗೆ ಮತ್ತೆ ಕನ್ನಡಿಗನೇ ಕಂಟಕರಾಗುವ ಸೂಚನೆ ಸಿಗುತ್ತಿದೆ. ಮೈದಾನದಲ್ಲಿ ಕೆಲ ನಿಮಿಷಗಳ ಬಳಿಕ ಹರ್ಷೋದ್ಘಾರ ಕೇಳಿಸುತ್ತಿದೆ...
04.05 PM IND vs AUS ICC ODI World Cup 2023 Final Live Updates IND 148/4 (28.3): ನರೇಂದ್ರ ಮೋದಿ ಸ್ಟೇಡಿಯಂ ಸ್ಮಶಾನ ಮೌನಕ್ಕೆ ಶರಣಾಗಿದೆ. ವಿರಾಟ್ ಕೊಹ್ಲಿ 63 ಎಸೆತಗಳಲ್ಲಿ 54 ರನ್ ಗಳಿಸಿ ಔಟಾಗಿದ್ದಾರೆ. ರಾಹುಲ್ ಜೊತೆಗಿನ ಅರ್ಧಶತಕದ ಜೊತೆಯಾಟ ಕೂಡಾ ಅಂತ್ಯವಾಗಿದೆ. ನಾಯಕ ಕಮಿನ್ಸ್ ಮತ್ತೊಂದು ಅಮೂಲ್ಯ ವಿಕೆಟ್ ತಂಡಕ್ಕಾಗಿ ಕಬಳಿಸಿದ್ದಾರೆ. ಭಾರತ ಭಾರಿ ಆಘಾತಕ್ಕೊಳಗಾಗಿದೆ.
03.55 PM IND vs AUS ICC ODI World Cup 2023 Final Live Updates IND 134/3 (25.4): ವಿರಾಟ್ ಕೊಹ್ಲಿ ಅತ್ಯಮೂಲ್ಯ ಅರ್ಧಶತಕ ಸಿಡಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಇದು ಅವರ ಸತತ ಐದನೇ ಹಾಗೂ ಒಟ್ಟು 9ನೇ ಅರ್ಧಶತಕವಾಗಿದೆ. ಕೊಹ್ಲಿ ಫಾರ್ಮ್ ಮತ್ತು ಒಂದೊಂದು ರನ್ ಕೂಡಾ ಎಷ್ಟು ಮುಖ್ಯ ಎಂಬುದು ಆಕಾಶ ಮತ್ತು ಭೂಮಿಯಷ್ಟೇ ಸ್ಪಷ್ಟ ಮತ್ತು ಸತ್ಯ.
03.15 PM IND vs AUS ICC ODI World Cup 2023 Final Live Updates IND 101/3 (16): ವಿರಾಟ್ ಹಾಗೂ ಕೆಎಲ್ ರಾಹುಲ್ ಮೇಲೆ ಈಗ ಮಹತ್ವದ ಜವಾಬ್ದಾರಿ ನಿಂತಿದೆ. ಲೀಗ್ ಹಂತದ ಮೊದಲ ಪಂದ್ಯದಲ್ಲಿಯೂ ಆಸೀಸ್ ವಿರುದ್ಧ ಭಾರತವನ್ನು ಗೆಲ್ಲಿಸಿದವರು ಈ ಇಬ್ಬರು ಬ್ಯಾಟರ್‌ಗಳು. ಇದೀಗ ಮತ್ತೆ ಇವರ ಮೇಲೆ ಭಾರತ ತಂಡ ನಿಂತಿದೆ.
02.50 PM IND vs AUS ICC ODI World Cup 2023 Final Live Updates IND 81/3 (10.2): ಇದು ನಿಜಕ್ಕೂ ಅರಗಿಸಲಾಗದ್ದು. ಇನ್‌ಫಾರ್ಮ್ ಬ್ಯಾಟರ್ ಹಾಗೂ ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಶ್ರೇಯಸ್ ಅಯ್ಯರ್ ಒಂದು ಬೌಂಡರಿ ಸಿಡಿಸಿ ಔಟಾಗಿದ್ದಾರೆ. ಕಾಂಗರೂ ನಾಯಕ ಕಮಿನ್ಸ್ ಮೊದಲ ವಿಕೆಟ್ ಪಡೆದಿದ್ದಾರೆ.
IND vs AUS ICC ODI World Cup 2023 Final Live Updates: ಪ್ರಸಕ್ತ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಸತತ ಎರಡು ಪಂದ್ಯಗಳಲ್ಲಿ 47 ರನ್ ಗಳಿಸಿ ಔಟಾಗಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿಯೂ ಅವರು 47 ರನ್ ಗಳಿಸಿ ಅರ್ಧಶತಕ ವಂಚಿತರಾಗಿದ್ದರು. ಭಾನುವಾರ ಮತ್ತೆ ಅದೇ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಟೂರ್ನಿಯಲ್ಲಿ ಹಿಟ್‌ಮ್ಯಾನ್ ಒಟ್ಟು ನಾಲ್ಕು ಬಾರಿ 40+ ರನ್ ಗಳಿಸಿದ್ದ ವೇಳೆ ವಿಕೆಟ್ ಒಪ್ಪಿಸಿದ್ದಾರೆ. ಲೀಗ್ ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ಹಿಟ್‌ಮ್ಯಾನ್ 48 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ನಂತರ ಕಿವೀಸ್ ವಿರುದ್ಧದ ಪಂದ್ಯದಲ್ಲಿ 46 ರನ್ ಗಳಿಸಿ ಮತ್ತೊಮ್ಮೆ ಅರ್ಧಶತಕ ಸಿಡಿಸುವ ಅವಕಾಶ ಕಳೆದುಕೊಂಡರು.
02.45 PM IND vs AUS ICC ODI World Cup 2023 Final Live Updates IND 54/1 (7): 47 ರನ್‌ಗೆ ನಾಯಕ ರೋಹಿತ್ ಶರ್ಮಾ ಔಟ್. ಸತತ ಎರಡನೇ ಪಂದ್ಯದಲ್ಲಿ ಇದೇ ಮೊತಕ್ಕೆ ನಾಯಕ ಔಟಾಗಿದ್ದಾರೆ. ಇದು ಹಿಟ್‌ಮ್ಯಾನ್ ನಿಸ್ವಾರ್ಥ ಆಟಕ್ಕೆ ಮತ್ತೊಂದು ಸಾಕ್ಷಿ.
02.35 PM IND vs AUS ICC ODI World Cup 2023 Final Live Updates IND 54/1 (7): 4 4 4. ಸ್ಟಾರ್ಕ್ ಎಸೆದ ಏಳನೇ ಓವರ್‌ನ ಮೊದಲ ಮೂರು ಎಸೆತಗಳನ್ನು ಬೌಂಡರಿಗಟ್ಟಿದ ವಿರಾಟ್ ಕೊಹ್ಲಿ. ಇದು ನಿಸ್ವಾರ್ಥ ಬ್ಯಾಟಿಂಗ್.
02.25 PM IND vs AUS ICC ODI World Cup 2023 Final Live Updates, IND 30/1 (4.4): ಶುಬ್ಮನ್ ಗಿಲ್ ಔಟ್. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೌನ. 7 ಎಸೆತಗಳಲ್ಲಿ 4 ರನ್ ಗಳಿಸಿ ಸ್ಟಾರ್ಕ್‌ಗೆ ಕ್ಯಾಚ್ ನೀಡಿ ಔಟಾದ ಗಿಲ್.
02.20 PM IND vs AUS ICC ODI World Cup 2023 Final Live Updates IND 30/0 (4): ಸಿಕ್ಸರ್....ಭಾರತದ ಇನ್ನಿಂಗ್ಸ್‌ನ 3.5 ನೇ ಓವರ್‌ನಲ್ಲಿ ಮೊದಲ ಸಿಕ್ಸರ್ ಸಿಡಿದಿದೆ. ರೋಹಿತ್ ಶರ್ಮಾ ಲೆಗ್ ಕಟರ್ ಮೂಲಕ ಮೊದಲ ಚೆಂಡನ್ನು ಬೌಂಡರಿಯ ಹೊರಗಟ್ಟಿದ್ದಾರೆ.
02.05 PM IND vs AUS ICC ODI World Cup 2023 Final Live Updates 13/0 (1.4): ಹಿಟ್‌ಮ್ಯಾನ್ ಅಬ್ಬರ ಆರಂಭಿಸಿದ್ದಾರೆ. ಹೇಜಲ್‌ವುಡ್ ಎಸೆದ ಎರಡನೇ ಓವರ್ ಎರಡನೇ ಎಸೆತದಲ್ಲಿ ಮೊದಲ ಬೌಂಡರಿ ಸಿಡಿಸಿದ್ದಾರೆ. ರೋಹಿತ್ ಶರ್ಮಾ ನಿಸ್ವಾರ್ಥ ಆಟ ಮುಂದುವರೆದಿದೆ...
02.00 PM IND vs AUS ICC ODI World Cup 2023 Final Live Updates, IND 3/0 (1): ಭಾರತ ಬ್ಯಾಟಿಂಗ್ ಆರಂಭಿಸಿದೆ. ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಮಿಚೆಲ್ ಸ್ಟಾರ್ಕ್ ಹೊಸ ಚೆಂಡು ಬೌಲಿಂಗ್ ಮಾಡಿದ್ದಾರೆ.
01.40 PM IND vs AUS ICC ODI World Cup 2023 Final Live Updates: ನರೇಂದ್ರ ಮೋದಿ ಕ್ರೀಡಾಂಗಣದ ಬಾನೆತ್ತರದಲ್ಲಿ ಏರ್‌ಶೋ ಆರಂಭವಾಗಿದೆ.
ಭಾರತ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಸಂಭಾವ್ಯ ಆಡುವ ಬಳಗ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ, ಜೋಶ್ ಹೇಜಲ್‌ವುಡ್.
01.30 PM IND vs AUS ICC ODI World Cup 2023 Final Live Updates: ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡಗಳ ಆಡುವ ಬಳದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
01.30 PM IND vs AUS ICC ODI World Cup 2023 Final Live Updates: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಏನೆಲ್ಲಾ ನಡೆಯುತ್ತಿದೆ
- ಪಂದ್ಯಕ್ಕೂ ಮುನ್ನ ಮಧ್ಯಾಹ್ನ 1:35 ರಿಂದ 1:50ವರೆಗೆ ಐಎಎಫ್ ಸೂರ್ಯಕಿರಣ್ ತಂಡದಿಂದ ಏರ್ ಶೋ
- 1ನೇ ಇನ್ನಿಂಗ್ಸ್ ಡ್ರಿಂಕ್ಸ್ ಬ್ರೇಕ್ - ಆದಿತ್ಯ ಗಾಧ್ವಿ ಪ್ರದರ್ಶನ
- ಇನ್ನಿಂಗ್ಸ್ ಬ್ರೇಕ್ - ಪ್ರೀತಮ್ ಚಕ್ರವರ್ತಿ, ಜೊನಿತಾ ಗಾಂಧಿ, ನಕಾಶ್ ಅಜೀಜ್, ಅಮಿತ್ ಮಿಶ್ರಾ, ಆಕಾಶ ಸಿಂಗ್ ಮತ್ತು ತುಷಾರ್ ಜೋಶಿ ಅವರಿಂದ ಪ್ರದರ್ಶನಗಳು
- 2ನೇ ಇನ್ನಿಂಗ್ಸ್ ಡ್ರಿಂಕ್ಸ್ ಬ್ರೇಕ್ - ಲೇಸರ್ ಮತ್ತು ಲೈಟ್ ಶೋ
12.50 PM IND vs AUS ICC ODI World Cup 2023 Final Live Updates: ಭಾರತ ತಂಡದ ಆಟಗಾರರು ನರೇಂದ್ರ ಮೋದಿ ಕ್ರೀಡಾಂಗಣ ತಲುಪಿದ್ದಾರೆ.
IND vs AUS ICC ODI World Cup 2023 Final Live Updates: ಟೀಂಇಂಡಿಯಾದ ಗೆಲುವಿಗಾಗಿ ಪ್ರಾರ್ಥಿಸಿ ವಾರಣಸಿಯಲ್ಲಿ ವಿಶೇಷ ಪೂಜೆ.. ಆರತಿ ಎತ್ತಿದ ಭಕ್ತರು
12.05 PM IND vs AUS ICC ODI World Cup 2023 Final Live Updates: ಫೈನಲ್ ಪಂದ್ಯಕ್ಕಾಗಿ ಭಾರತ ತಂಡದ ಆಟಗಾರರು ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ತೆರಳಿದ್ದಾರೆ.
ವರ್ಲ್ಡ್‌ಕಪ್ ನೋಡಲು ಹೋಗುವ ಅಭಿಮಾನಿಗಳಿಗೆ ಸ್ಪೆಷಲ್ ಟ್ರೈನ್
11.40 AM IND vs AUS ICC ODI World Cup 2023 Final Live Updates: ಭಾರತ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಪ್ರವೇಶ ದ್ವಾರದ ಹೊರಗೆ ಜಮಾಯಿಸಿರುವ ಅಪಾರ ಸಂಖ್ಯೆಯ ಜನರು.
ಟ್ರಾಫಿಕ್ ವ್ಯವಸ್ಥೆ ಸುಗಮ
11.00 AM IND vs AUS ICC ODI World Cup 2023 Final Live Updates: ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಹಮದಾಬಾದ್ ಪೊಲೀಸರು ಕೂಡಾ ಸಜ್ಜಾಗಿದ್ದಾರೆ. ಸಂಚಾರ ವ್ಯವಸ್ಥೆ ಕುರಿತು ಟ್ರಾಫಿಕ್ ಎಸಿಪಿ ನರೇಂದ್ರ ಚೌಧರಿ ಮಾತನಾಡಿ, “ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಗಿದೆ. 17 ಸಾಮಾನ್ಯ ಪಾರ್ಕಿಂಗ್ ತಾಣಗಳು ಮತ್ತು 6 ವಿಐಪಿ ಪಾರ್ಕಿಂಗ್ ಪ್ಲಾಟ್‌ಗಳಿವೆ. 1600 ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ಸಂಚಾರ ವ್ಯವಸ್ಥೆ ಸುಗಮವಾಗಿದೆ,” ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಕ್ರೀಡಾಂಗಣದ ಮುಂದೆ ಬೆಳಗ್ಗೆಯೇ ಜನಸಾಗರ
10.30 AM IND vs AUS ICC ODI World Cup 2023 Final Live Updates: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಆರಂಭಕ್ಕೆ ಇನ್ನೂ ಗಂಟೆಗಳು ಬಾಕಿ ಇವೆ. ಆದರೆ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಪ್ರವೇಶ ದ್ವಾರದ ಹೊರಗೆ ಬೆಳಗ್ಗೆಯೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ.
ನಟ ಅನುಪಮ್ ಖೇರ್ ವಿಶ್ವಾಸ
10.10 AM IND vs AUS ICC ODI World Cup 2023 Final Live Updates: ಇಂದು ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್. ಭಾರತದ ಗೆಲುವಿನ ಕುರಿತು ಇಡೀ ವಿಶ್ವವೇ ಮಾತನಾಡುತ್ತಿದೆ. ನಾವು 100 ಪ್ರತಿಶತ ಗೆಲ್ಲುತ್ತೇವೆ ಎಂದು ನಟ ಅನುಪಮ್ ಖೇರ್ ಹೇಳಿದ್ದಾರೆ.
ಅಹಮದಾಬಾದ್ ಹವಾಮಾನ ಹೇಗಿದೆ?
9.50 AM IND vs AUS ICC ODI World Cup 2023 Final Live Updates: ಭಾರತ ಸೇರಿದಂತೆ ಜಗತ್ತಿನಾದ್ಯಂತ ಇರುವ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಶುಭ ಸುದ್ದಿ ಇದೆ. ಅಹಮದಾಬಾದ್‌ನಲ್ಲಿ ಇಂದು ಮಳೆ ಬೀಳುವ ಸಾಧ್ಯತೆ ಶೂನ್ಯ ಪ್ರಮಾಣದಲ್ಲಿದೆ. ಆಕ್ಯುವೆದರ್ ಪ್ರಕಾರ, "ಸಾಕಷ್ಟು ಬಿಸಿಲು" ಇರುತ್ತದೆ. ರಾತ್ರಿ ವೇಳೆ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ ಇದೆ. ಮಧ್ಯಾಹ್ನದ ವೇಳೆ ಅತಿ ಹೆಚ್ಚು ತಾಪಮಾನ ಅಂದರೆ, 33 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತದೆ. ಹೀಗಾಗಿ ಅಹಮದಾಬಾದ್‌ನಲ್ಲಿ ನಡೆಯುವ ಇಂಡೋ-ಆಸಿಸ್ ಪಂದ್ಯವನ್ನು ಯಾವುದೇ ಅಡೆತಡೆಯಿಲ್ಲದ ಸಂಪೂರ್ಣವಾಗಿ ಸವಿಯಬಹುದು.
ಮೋದಿ ಕ್ರೀಡಾಂಗಣದ ಮುಂದೆ ಅಭಿಮಾನಿಗಳು
9.25 AM IND vs AUS ICC ODI World Cup 2023 Final Live Updates: ಫೈನಲ್ ಪಂದ್ಯ ನಡೆಯುತ್ತಿರುವ ನರೇಂದ್ರ ಮೋದಿ ಕ್ರೀಡಾಂಗಣದ ಮುಂದೆ ಅಭಿಮಾನಿಗಳು ಟೀಮ್ ಇಂಡಿಯಾವನ್ನು ಹುರಿದುಂಬಿಸುವ ದೃಶ್ಯ
ನಾಗ್ಪುರದಲ್ಲಿ ಟೀಮ್ ಇಂಡಿಯಾಗೆ ಬೆಂಬಲ
9.20 AM IND vs AUS ICC ODI World Cup 2023 Final Live Updates: ಭಾರತದ ವಿಶ್ವಕಪ್ ಗೆಲುವಿಗಾಗಿ ಆಟಗಾರರನ್ನು ಹುರಿದುಂಬಿಸಲು ಶಿವಜ್ಞಾ ಪ್ರತಿಷ್ಠಾನದ ಸದಸ್ಯರು ನಾಗ್ಪುರದಲ್ಲಿ ಸಾಂಪ್ರದಾಯಿಕ ಮಹಾರಾಷ್ಟ್ರದ ಧೋಲ್ ನೃತ್ಯ ಮಾಡಿದರು.
ಫೈನಲ್ ಪಂದ್ಯಕ್ಕೆ ಮೊದಲು ಪಿಚ್ ಪರಿಶೀಲನೆ
ಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡದ ಸದಸ್ಯರು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಿಚ್ ಪರಿಶೀಲಿಸಿದರು.
ನರೇಂದ್ರ ಮೋದಿ ಸ್ಟೇಡಿಯಂ ಹೊರಗೆ ಕಾಯುತ್ತಿರುವ ಕ್ರಿಕೆಟ್ ಫ್ಯಾನ್ಸ್
ನರೇಂದ್ರ ಮೋದಿ ಸ್ಟೇಡಿಯಂ ಹೊರಭಾಗದಲ್ಲಿ ಕಾಯುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು. ಫೈನಲ್ ಪಂದ್ಯ ವೀಕ್ಷಣೆಗಾಗಿ ಮುಂಚಿತವಾಗಿಯೇ ಆಗಮಿಸಿದ ಅವರ ಮುಖದಲ್ಲಿ ಸಂಭ್ರಮ, ಸಡಗರ ಕಾಣಿಸುತ್ತಿದೆ.
ಅಹಮದಾಬಾದ್‌ಗೆ ಸಚಿನ್ ತೆಂಡುಲ್ಕರ್ ಆಗಮನ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸುವುದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
"ನನ್ನ ಶುಭಾಶಯಗಳನ್ನು ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ, ನಾವು ಇಂದು ಟ್ರೋಫಿಯನ್ನು ಎತ್ತುತ್ತೇವೆ ಎಂಬ ನಂಬಿಕೆಯಲ್ಲಿದ್ದೇವೆ. ಎಲ್ಲರೂ ಈ ದಿನಕ್ಕಾಗಿ ಕಾಯುತ್ತಿದ್ದರು..." ಎಂದು ಸಚಿನ್ ತೆಂಡೂಲ್ಕರ್ ಇದೇ ವೇಳೆ ಹೇಳಿದರು.
ಭಾರತದ ಗೆಲುವಿಗಾಗಿ ಉಜ್ಜಯಿನಿ ಮಹಾಕಾಲ್ ದೇವಸ್ಥಾನದಲ್ಲಿ ವಿಶೇಷ ಪೂಜೆ
ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಲ್ ದೇವಸ್ಥಾನದಲ್ಲಿ ಭಸ್ಮ ಆರತಿ ಮಾಡಲಾಯಿತು.
ಫೈನಲ್ ಪಂದ್ಯ ವೀಕ್ಷಣೆಗೆ ಕರ್ನಾಟಕದ ಜಿಲ್ಲಾ ಕ್ರೀಡಾಂಗಣಗಳಲ್ಲಿ ಅವಕಾಶ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ನೇರ ಪ್ರಸಾರವನ್ನು ವೀಕ್ಷಣೆಗಾಗಿ ಬೇಕಾದ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲ ಜಿಲ್ಲಾ ಕ್ರೀಡಾಂಗಣಗಳಲ್ಲಿ ಮಾಡಿದೆ.
ವಿವರ ಓದಿಗೆ ಕ್ಲಿಕ್ ಮಾಡಿ - ಕರ್ನಾಟಕದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಗೆ ಅವಕಾಶ
ವಿಶ್ವಕಪ್ ಫೈನಲ್ ಪಂದ್ಯಕ್ಕೆ ಗೂಗಲ್ ಡೂಡಲ್ ಸಂಭ್ರಮ
ವಿಶ್ವಕಪ್ ಫೈನಲ್ ಪಂದ್ಯವು ಆತಿಥೇಯ ಭಾರತ ತಂಡ ಮತ್ತು 5 ಬಾರಿಯ ಚಾಂಪಿಯನ್‌ಗಳ ನಡುವಿನ ಹೈವೋಲ್ಟೇಜ್ ಕದನವಾಗಿದ್ದು ಕ್ರಿಕೆಟ್ ಪ್ರೇಮಿಗಳ ನಿದ್ದೆಗೆಡಿಸಿದೆ. ಈ ಪಂದ್ಯ ಜಗತ್ತಿನ ಗಮನಸೆಳೆದಿದ್ದು, ಗೂಗಲ್ ಇಂಡಿಯಾ ವಿಶ್ವಕಪ್ ಪಂದ್ಯಕ್ಕೆ ಸಂಬಂಧಿಸಿದ ಡೂಡಲ್ ಅನ್ನು ಪ್ರಕಟಿಸಿ ಕ್ರಿಕೆಟ್ ಪ್ರೇಮಿಗಳ ಮನಗೆಲ್ಲಲ್ಲು ಯತ್ನಿಸಿದೆ.
ವಿವರ ಓದಲು ಕ್ಲಿಕ್ ಮಾಡಿ - ಭಾರತ vs ಆಸ್ಟ್ರೇಲಿಯಾ ಐಸಿಸಿ ವಿಶ್ವಕಪ್ 2023 ಫೈನಲ್ ಪಂದ್ಯದ ದಿನ ಗೂಗಲ್ ಡೂಡಲ್ ಸಂಭ್ರಮ ವಿಶೇಷ
ವಿಶ್ವದ ಅತಿದೊಡ್ಡ ಸ್ಟೇಡಿಯಂನಲ್ಲಿ ಇಂದಿನ ಫೈನಲ್ ಪಂದ್ಯ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ ಫೈನಲ್‌ಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ಕಲ್ಪಿಸುತ್ತಿದೆ. ಇದು ವಿಶ್ವದ ಅತಿದೊಡ್ಡ ಸ್ಟೇಡಿಯಂ ಎಂಬ ಖ್ಯಾತಿ ಪಡೆದಿದೆ. ಈ ಸ್ಟೇಡಿಯಂ ಬಹಳಷ್ಟು ವಿಶೇಷಗಳನ್ನು ಒಳಗೊಂಡಿದೆ.
ಟೀಂ ಇಂಡಿಯಾದ ಸಂಭಾವ್ಯ ಆಡುವ ಬಳಗ
IND vs AUS ICC ODI World Cup 2023 Final Live Updates: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಸಂಭಾವ್ಯ ಆಡುವ ಬಳಗ
IND vs AUS ICC ODI World Cup 2023 Final Live Updates: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ, ಜೋಶ್ ಹೇಜಲ್‌ವುಡ್.
ತಂಡಗಳ ಬಲಾಬಲ
IND vs AUS ICC ODI World Cup 2023 Final Live Updates: ಪ್ರಸಕ್ತ ವಿಶ್ವಕಪ್ ಆವೃತ್ತಿಯಲ್ಲಿ ಭಾರತ ತಂಡವು ಇಲ್ಲಿಯವರೆಗೆ ಆಡಿದ ಎಲ್ಲಾ 10 ಪಂದ್ಯಗಳನ್ನು ಗೆದ್ದು ಟೂರ್ನಿಯ ಅಜೇಯ ತಂಡವಾಗಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಲೀಗ್ ಹಂತದಲ್ಲಿ ಸತತ ಒಂಬತ್ತು ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನಿಯಾಗಿ ಸೆಮೀಸ್ ಪ್ರವೇಶಿದ ಭಾರತ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 70 ರನ್‌ಗಳಿಂದ ಸೋಲಿಸಿತ್ತು. ಅತ್ತ ಬಲಿಷ್ಠ ಸತತ ಎರಡು ಸೋಲುಗಳನ್ನು ಕಂಡ ಬಳಿಕ ಪುಟಿದೆದ್ದ ಆಸೀಸ್, ಆ ಬಳಿಕ ಲೀಗ್ ಹಂತದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದು ಸೆಮೀಸ್ ಪ್ರವೇಶಿಸಿತು. ಅಲ್ಲಿ ಹರಿಣಗಳನ್ನು ಮಣಿಸಿ ಭಾರತದೊಂದಿಗೆ ಪೈಪೋಟಿ ನಡೆಸಲು ಫೈನಲ್‌ಗೆ ಬಂದಿದೆ.
ವಿಶ್ವಕಪ್ ನಾಕೌಟ್ ಹಂತದಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ
IND vs AUS ICC ODI World Cup 2023 Final Live Updates: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಹಿಂದೆ ಒಟ್ಟು ಮೂರು ಬಾರಿ ವಿಶ್ವಕಪ್‌ನ ನಾಕೌಟ್ ಹಂತಗಳಲ್ಲಿ ಮುಖಾಮುಖಿಯಾಗಿದ್ದವು. ಅದರಲಿ 2003ರ ವಿಶ್ವಕಪ್ ಆವೃತ್ತಿಯಲ್ಲಿ ಫೈನಲ್ ಪಂದ್ಯದಲ್ಲೇ ಎದುರಾಗಿವೆ. ಅದರಲ್ಲಿ ಭಾರತ ಸೋಲನುಭವಿಸಿತ್ತು. 2011ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಮಣಿಸಿ ಸೆಮೀಸ್ ಪ್ರವೇಶಿಸಿತ್ತು. ಆ ಬಳಿಕ 2015ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತವನ್ನು ಆಸ್ಟ್ರೇಲಿಯಾ ಸೋಲಿಸಿ ಫೈನಲ್ ತಲುಪಿತ್ತು.
ವಿವರ ಓದಿಗೆ ಕ್ಲಿಕ್ ಮಾಡಿ - ಸೋತು ಗೆದ್ದ ಆಸೀಸ್ ವಿಶ್ವಕಪ್ ಜರ್ನಿಯೇ ರೋಚಕ; ಲೀಗ್ನಿಂದ ಫೈನಲ್ ತನಕ ಬಂದ ಹಾದಿ ಹೇಗಿದೆ
ನೇರಪ್ರಸಾರ ವಿವರ
IND vs AUS ICC ODI World Cup 2023 Final Live Updates: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್ ಪಂದ್ಯವನ್ನು ನೇರಪ್ರಸಾರ ಮಾಡಲಾಗುತ್ತದೆ.
ಲೈವ್ ಸ್ಟ್ರೀಮಿಂಗ್ ವಿವರ
IND vs AUS ICC ODI World Cup 2023 Final Live Updates: ಭಾರತ vs ಆಸ್ಟ್ರೇಲಿಯಾ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್ ಪಂದ್ಯವನ್ನು ಭಾರತದಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಮೊಬೈಲ್‌ನಲ್ಲಿ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು.
ವಿವರ ಓದಿಗೆ ಕ್ಲಿಕ್ ಮಾಡಿ - ವಿಶ್ವಕಪ್ 2023 ಫೈನಲ್ ಪಂದ್ಯ ಇಂದು, ಭಾರತ vs ಆಸ್ಟ್ರೇಲಿಯಾ ಆಟ ಎಷ್ಟು ಗಂಟೆಗೆ ಶುರು, ಫ್ರೀಯಾಗಿ ನೋಡುವುದೆಲ್ಲಿ
ಅಹಮದಾಬಾದ್ ಪಿಚ್ ರಿಪೋರ್ಟ್
IND vs AUS ICC ODI World Cup 2023 Final Live Updates: ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರನ್ ಮಳೆ ಹರಿದು ಬರುತ್ತದೆ. ಆದರೆ, ಲೈನ್ ಮತ್ತು ಲೆಂಗ್ತ್ ಕಾಪಾಡಿಕೊಂಡರೆ, ಬೌಲರ್‌ಗಳು ಮಿಂಚಬಹುದು. ಇದೇ ಮೈದಾನದಲ್ಲಿ ಭಾರತವು ಪಾಕಿಸ್ತಾನವನ್ನು 200 ರನ್ ಒಳಗೆ ಆಲೌಟ್ ಮಾಡಿತ್ತು. ಅಲ್ಲದೆ ಪ್ರಸಕ್ತ ಆವೃತ್ತಿಯ ವಿಶ್ವಕಪ್‌ನಲ್ಲಿ ನಡೆದ ಈವರೆಗಿನ ಎಲ್ಲಾ ನಾಲ್ಕು ಪಂದ್ಯಗಳಲ್ಲಿಯೂ ತಂಡಗಳ ಮೊತ್ತವು 300ರ ಗಡಿ ದಾಟಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬಿನಿಯಿಂದ ಬೌಲರ್‌ಗಳು ವಿಕೆಟ್ ಪಡೆಯುವುದು ಸ್ವಲ್ಪ ಕಷ್ಟವಾಗಬಹುದು.
ಹವಾಮಾನ ವರದಿ
IND vs AUS ICC ODI World Cup 2023 Final Live Updates: ಭಾರತದ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಯಾಕೆಂದರೆ ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗಾಳಿ ಗಂಟೆಗೆ 11 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ. ಆದ್ರತೆ ಶೇಕಡಾ 39 ರಷ್ಟು ಇರಲಿದೆ. ಹೀಗಾಗಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವು ಸಾಧ್ಯತೆ ಇಲ್ಲ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಸಂಬಂಧಿತ ಲೇಖನ
ವಿಭಾಗ