ಕನ್ನಡ ಸುದ್ದಿ  /  Cricket  /  India Vs Australia Live World Cup 2023 Final When And Where To Watch It For Free On Tv And Online Uks

IND Vs AUS : ವಿಶ್ವಕಪ್ 2023 ಫೈನಲ್ ಪಂದ್ಯ ಇಂದು, ಭಾರತ vs ಆಸ್ಟ್ರೇಲಿಯಾ ಆಟ ಎಷ್ಟು ಗಂಟೆಗೆ ಶುರು, ಫ್ರೀಯಾಗಿ ನೋಡುವುದೆಲ್ಲಿ

ಗುಜರಾತಿನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು(ನ. 19) ನಡೆಯಲಿರುವ ಏಕದಿನ ವಿಶ್ವಕಪ್ 2023 ರ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ರೋಹಿತ್ ಶರ್ಮಾ ತಂಡವು ಈ ವರ್ಷದ ಹೈವೋಲ್ಟೇಜ್‌ ಪಂದ್ಯದಲ್ಲಿ 5 ಸಲದ ಚಾಂಪಿಯನ್‌ ಅನ್ನು ಎದುರಿಸಲು ಸಜ್ಜಾಗಿದೆ. ಇದರ ನೇರ ಪ್ರಸಾರ ಎಷ್ಟು ಗಂಟೆಗೆ, ಎಲ್ಲಿನೋಡಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.

ವಿಶ್ವಕಪ್ 2023ರ ಫೈನಲ್ ಪಂದ್ಯ - ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ. (ಸಾಂಕೇತಿಕ ಚಿತ್ರ)
ವಿಶ್ವಕಪ್ 2023ರ ಫೈನಲ್ ಪಂದ್ಯ - ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ. (ಸಾಂಕೇತಿಕ ಚಿತ್ರ)

ಭಾರತದ ಕ್ರಿಕೆಟ್ ಪ್ರೇಮಿಗಳ ನಿದ್ದೆಗೆಡಿಸಿರುವ ವಿಶ್ವಕಪ್ 2023ರ ಫೈನಲ್ ಪಂದ್ಯ ಇಂದು (ನ.19) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ವರ್ಷ ಏಕದಿನದ ವಿಶ್ವಕಪ್‌ನಲ್ಲಿ ಭಾರತವು ಇಲ್ಲಿಯವರೆಗೆ ಆಡಿದ ಎಲ್ಲ 10 ಪಂದ್ಯಗಳನ್ನು ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಗೆಲುವು ದಾಖಲಿಸುವುದಕ್ಕೆ 12 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಲು ಮತ್ತು ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗಲು ಟೀಂ ಇಂಡಿಯಾ ಎದುರು ನೋಡುತ್ತಿದೆ.

ಟೀಂ ಇಂಡಿಯಾ ವಿಶ್ವಕಪ್ ಗೆದ್ದ ವಿವರ

ಟೀಂ ಇಂಡಿಯಾ ಮೊದಲ ಬಾರಿಗೆ 1983ರಲ್ಲಿ ಮತ್ತು ಅದಾಗಿ 2011 ರ ಏಕದಿನ ವಿಶ್ವಕಪ್ ಫೈನಲ್‌ಗಳನ್ನು ಗೆದ್ದಿಕೊಂಡಿದೆ. 2003 ರ ಆವೃತ್ತಿಯಲ್ಲಿ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸೀಸ್ ತಂಡ ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾವನ್ನು 125 ರನ್‌ಗಳಿಂದ ಸೋಲಿಸಿತು. ಆ ಸೋಲಿಗೆ ಭಾರತವೂ ಸೇಡು ತೀರಿಸಿಕೊಳ್ಳುವ ಗುರಿ ಈಗ ಟೀಂ ಇಂಡಿಯಾ ಎದುರಿಗೆ ಇದೆ. ಆದರೆ ಭಾರತದ ರೆಡ್-ಹಾಟ್ ಫಾರ್ಮ್ ಹೊರತಾಗಿಯೂ, ಫೈನಲ್ ಪಂದ್ಯವು ಟೀಂ ಇಂಡಿಯಾಕ್ಕೆ ಸುಲಭದ ತುತ್ತಲ್ಲ. ಆಸ್ಟ್ರೇಲಿಯಾ ತಂಡವೂ ಬಲಿಷ್ಠವಾಗಿದೆ. ಆಸ್ಟ್ರೇಲಿಯಾ ತಂಡ ಕೂ ಕೊನೆಯ ಎಂಟು ಪಂದ್ಯಗಳನ್ನು ಗೆದ್ದು ಇಂದು ಫೈನಲ್ ಪಂದ್ಯವಾಡುತ್ತಿದೆ.

ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡ ಈ ಸಲ ವಿಶ್ವಕಪ್ ಪೈನಲ್ ತಲುಪಿದ್ದು ಹೀಗೆ

ಮುಂಬೈನಲ್ಲಿ ನವೆಂಬರ್ 15 ರಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 70 ರನ್‌ಗಳಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಕೋಲ್ಕತ್ತಾದಲ್ಲಿ ಆಸೀಸ್ ಮೂರು ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಆಸ್ಟ್ರೇಲಿಯಾ ಪರ ಡೇವಿಡ್ ವಾನರ್ 10 ಪಂದ್ಯಗಳಲ್ಲಿ 528 ರನ್ ಗಳಿಸಿದ್ದು, ಆಡಮ್ ಝಂಪಾ 22 ವಿಕೆಟ್ ಪಡೆದಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ನಾಯಕ ಕಮ್ಮಿನ್ಸ್ ಅವರ ಕಳಪೆ ಫಾರ್ಮ್ ಐದು ಬಾರಿಯ ಚಾಂಪಿಯನ್‌ಗಳ ಚಿಂತೆಗೆ ಕಾರಣವಾಗಿದೆ.

ವಿಶ್ವಕಪ್ 2023 ಫೈನಲ್ ಭಾರತ vs ಆಸ್ಟ್ರೇಲಿಯಾ ಲೈವ್ ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು:

ಭಾರತದಲ್ಲಿ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ವಿಶ್ವಕಪ್ 2023 ಫೈನಲ್ ಪಂದ್ಯದ ನೇರ ಪ್ರಸಾರ (India vs. Australia World Cup 2023 final live) ವನ್ನು ಎಲ್ಲಿ ಮತ್ತು ಯಾವಾಗ ವೀಕ್ಷಿಸಬೇಕು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ವಿಶ್ವಕಪ್ 2023 ಫೈನಲ್ ಪಂದ್ಯವು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. ಇದಕ್ಕೂ ಅರ್ಧ ಗಂಟೆ ಮೊದಲು ಅಂದರೆ ಮಧ್ಯಾಹ್ನ 1.30ಕ್ಕೆ ಟಾಸ್ ಆಯ್ಕೆ ನಡೆಯಲಿದೆ.

ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ವಿಶ್ವಕಪ್ 2023 ಫೈನಲ್ ಪಂದ್ಯವು ಸ್ಟಾರ್‌ ಸ್ಪೋರ್ಟ್ಸ್‌ 1, ಸ್ಟಾರ್‌ ಸ್ಪೋರ್ಟ್ಸ್ 1 ಹೆಚ್‌ಡಿ, ಸ್ಟಾರ್‌ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್‌ಸ್ಪೋರ್ಟ್ಸ್ 1 ಹಿಂದಿ ಹೆಚ್‌ಡಿ ಮತ್ತು ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ನ ಇತರೆ ಕೆಲವು ನಿಶ್ಚಿತ ಭಾಷಾ ಚಾನೆಲ್‌ಗಳಲ್ಲಿ ಅಂದರೆ ಕನ್ನಡ, ತೆಲುಗು, ತಮಿಳು ಭಾಷೆಯ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ.

ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ವಿಶ್ವಕಪ್ 2023 ಫೈನಲ್‌ ಪಂದ್ಯವನ್ನು ಉಚಿತವಾಗಿ ಡಿಡಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.

ಇದೇ ರೀತಿ, ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ವಿಶ್ವಕಪ್ 2023 ಫೈನಲ್‌ ಪಂದ್ಯದ ಲೈವ್ ಸ್ಟ್ರೀಮಿಂಗ್ Disney + Hotstar app ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಡಿಸ್ನಿ ಹಾಟ್‌ಸ್ಟಾರ್‌ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಭಿಮಾನಿಗಳು ಫೈನಲ್ ಅನ್ನು ಉಚಿತವಾಗಿ ವೀಕ್ಷಿಸಬಹುದು.

ನಿಮ್ಮಂತೆ ನಮಗೂ ಕ್ರಿಕೆಟ್ ಅಂದ್ರೆ ಪ್ರಾಣ. ವಿಶ್ವಕಪ್‌ ಫೈನಲ್‌ ಸಂಭ್ರಮದ ಪಿನ್‌ ಟು ಪಿನ್‌ ಅಪ್ಡೇಟ್‌ ನಾವು ಕೊಡ್ತೀವಿ, ನೀವು ನಮ್ಮೊಂದಿಗಿರಿ.

ನಿಮ್ಮಂತೆ ನಮಗೂ ಕ್ರಿಕೆಟ್ ಅಂದ್ರೆ ಪ್ರಾಣ. ವಿಶ್ವಕಪ್‌ ಫೈನಲ್‌ ಸಂಭ್ರಮದ ಪಿನ್‌ ಟು ಪಿನ್‌ ಅಪ್ಡೇಟ್‌ ನಾವು ಕೊಡ್ತೀವಿ, ನೀವು ನಮ್ಮೊಂದಿಗಿರಿ.
ನಿಮ್ಮಂತೆ ನಮಗೂ ಕ್ರಿಕೆಟ್ ಅಂದ್ರೆ ಪ್ರಾಣ. ವಿಶ್ವಕಪ್‌ ಫೈನಲ್‌ ಸಂಭ್ರಮದ ಪಿನ್‌ ಟು ಪಿನ್‌ ಅಪ್ಡೇಟ್‌ ನಾವು ಕೊಡ್ತೀವಿ, ನೀವು ನಮ್ಮೊಂದಿಗಿರಿ.

ಮ್ಯಾಚ್ ರಿಪೋರ್ಟ್, ಹೈಲೈಟ್ಸ್‌, ರೆಕಾರ್ಡ್ಸ್‌... ಇಷ್ಟೇ ಅಲ್ಲ, ಇನ್ನಷ್ಟು, ಮತ್ತಷ್ಟು, ಮೊಗೆದಷ್ಟು. ಕ್ರಿಕೆಟ್ ಇಷ್ಟಪಡುವವರು "ಕ್ರೀಡೆ ಕಮ್ಯುನಿಟಿ"ಯಲ್ಲಿ ಇದ್ದೇ ಇರ್ತಾರೆ. 'ಎಚ್‌ಟಿ ಕನ್ನಡ' ಕ್ರೀಡಾ ಕಮ್ಯುನಿಟಿ ಸೇರಲು ಲಿಂಕ್ https://chat.whatsapp.com/HiHmGi1FlW3LSYCkR10aKC