ವರುಣ್ ಚಕ್ರವರ್ತಿ ಪದಾರ್ಪಣೆ, ವಿರಾಟ್ ಕೊಹ್ಲಿ ಪುನರಾಗಮನ; ಇಂಗ್ಲೆಂಡ್ ವಿರುದ್ಧ 2ನೇ ಏಕದಿನದಲ್ಲೂ ಟಾಸ್ ಸೋತ ಭಾರತ
India vs England 2nd ODI: ಕಟಕ್ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಭಾರತ ಟಾಸ್ ಸೋತಿದೆ. ವರುಣ್ ಚಕ್ರವರ್ತಿ ಪದಾರ್ಪಣೆ ಮಾಡಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲೂ ಟಾಸ್ ಸೋತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಇಂಗ್ಲೆಂಡ್, ಈ ಪಂದ್ಯದಲ್ಲಿ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ. ಕಟಕ್ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಮೈದಾನದಲ್ಲಿ ಭಾರತ ಸರಣಿ ವಶಪಡಿಸಿಕೊಳ್ಳುವುದರ ಮೇಲೆ ಕಣ್ಣಿಟ್ಟಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೆ (ICC Champions Trophy 2025) ಇದು ತಯಾರಿಯ ಭಾಗವೂ ಹೌದು. ಈ ಪಂದ್ಯಕ್ಕೆ ಭಾರತ ತಂಡಕ್ಕೆ ಕೆಲವು ಬದಲಾವಣೆ ಕಂಡಿವೆ. ಕುಲ್ದೀಪ್ ಯಾದವ್ಗೆ ವಿಶ್ರಾಂತಿ ನೀಡಲಾಗಿದ್ದು, ವರುಣ್ ಚಕ್ರವರ್ತಿ (Varun Chakravarthy) ಪದಾರ್ಪಣೆ ಮಾಡಿದ್ದಾರೆ.
ಮೊದಲ ಪಂದ್ಯಕ್ಕೆ ಮೊಣಕಾಲಿನ ಸಮಸ್ಯೆಗೆ ಒಳಗಾಗಿದ್ದ ವಿರಾಟ್ ಕೊಹ್ಲಿ (Virat Kohli) ಇದೀಗ ಈ ಪಂದ್ಯಕ್ಕೆ ಮರಳಿದ್ದಾರೆ. ಇದು ಭಾರತೀಯ ಕ್ರಿಕೆಟ್ ಫ್ಯಾನ್ಸ್ ಮತ್ತು ಟೀಮ್ ಮ್ಯಾನೇಜ್ಮೆಂಟ್ಗಿದ್ದ ಆತಂಕವನ್ನು ದೂರ ಮಾಡಿದೆ. ಕೊಹ್ಲಿಗೆ ಯಶಸ್ವಿ ಜೈಸ್ವಾಲ್ ದಾರಿ ಬಿಟ್ಟುಕೊಟ್ಟಿದ್ದಾರೆ. ಮತ್ತೊಂದೆಡೆ ತಂಡಕ್ಕೆ ಪದಾರ್ಪಣೆ ಮಾಡುವ ಮೂಲಕ ವರುನ್ ಚಕ್ರವರ್ತಿ ದಾಖಲೆ ಬರೆದಿದ್ದಾರೆ. ಭಾರತ ತಂಡಕ್ಕೆ ಡೆಬ್ಯು ಮಾಡಿದ ಎರಡನೇ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದಲ ಸ್ಥಾನದಲ್ಲಿ ಫಾರೂಖ್ ಎಂಜಿನಿಯರ್ ಇದ್ದಾರೆ. ಅವರು 36ನೇ ವರ್ಷದಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಭಾರತ ಪರ ಅತ್ಯಂತ ಹಿರಿಯ ಏಕದಿನ ಪಂದ್ಯ ಆಡಿದ ಆಟಗಾರರು
36 ವರ್ಷ 138 ದಿನಗಳು: ಫಾರೂಖ್ ಎಂಜಿನಿಯರ್ vs ಇಂಗ್ಲೆಂಡ್ ಲೀಡ್ಸ್, 1974
33 ವರ್ಷ 164 ದಿನಗಳು: ವರುಣ್ ಚಕ್ರವರ್ತಿ vs ಇಂಗ್ಲೆಂಡ್ ಕಟಕ್, 2025*
33 ವರ್ಷ 103 ದಿನಗಳು: ಅಜಿತ್ ವಾಡೇಕರ್ vs ಇಂಗ್ಲೆಂಡ್ ಲೀಡ್ಸ್, 1974
32 ವರ್ಷ 350 ದಿನಗಳು: ದಿಲೀಪ್ ದೋಷಿ vs ಆಸ್ಟ್ರೇಲಿಯಾ ಮೆಲ್ಬೋರ್ನ್, 1980
32 ವರ್ಷ 307 ದಿನಗಳು: ಸೈಯದ್ ಅಬಿದ್ ಅಲಿ vs ಇಂಗ್ಲೆಂಡ್, ಲೀಡ್ಸ್ 1974
ಇಂಗ್ಲೆಂಡ್ ತಂಡದಲ್ಲಿ ಮೂರು ಬದಲಾವಣೆ
ಮೊದಲ ಪಂದ್ಯದ ಸೋಲಿನಿಂದ ಹೊರಬರುವ ಗುರಿ ಹೊಂದಿರುವ ಜೋಸ್ ಬಟ್ಲರ್, ಎರಡನೇ ಏಕದಿನಕ್ಕೆ ಮೂರು ಬದಲಾವಣೆ ಮಾಡಿದ್ದಾರೆ. ಮಾರ್ಕ್ ವುಡ್, ಗಸ್ ಆಟ್ಕಿನ್ಸನ್, ಜೆಮಿ ಓವರ್ಟನ್ ತಂಡಕ್ಕೆ ಮರಳಿದ್ದಾರೆ. ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಇಂಗ್ಲೆಂಡ್ ಪ್ಲೇಯಿಂಗ್ XI
ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟನ್, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಆದಿಲ್ ರಶೀದ್, ಮಾರ್ಕ್ ವುಡ್, ಸಾಕಿಬ್ ಮಹಮೂದ್.
ಭಾರತ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
