IND vs ENG: ಮೂರನೇ ಟೆಸ್ಟ್​ನಲ್ಲಿ ಕೆಎಸ್ ಭರತ್ ಬದಲಿಗೆ ಧ್ರುವ್ ಜುರೆಲ್​ ಅವಕಾಶ ಪಡೆಯಲು 3 ಕಾರಣಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Eng: ಮೂರನೇ ಟೆಸ್ಟ್​ನಲ್ಲಿ ಕೆಎಸ್ ಭರತ್ ಬದಲಿಗೆ ಧ್ರುವ್ ಜುರೆಲ್​ ಅವಕಾಶ ಪಡೆಯಲು 3 ಕಾರಣಗಳು

IND vs ENG: ಮೂರನೇ ಟೆಸ್ಟ್​ನಲ್ಲಿ ಕೆಎಸ್ ಭರತ್ ಬದಲಿಗೆ ಧ್ರುವ್ ಜುರೆಲ್​ ಅವಕಾಶ ಪಡೆಯಲು 3 ಕಾರಣಗಳು

India vs England 3rd Test : ಸಿಕ್ಕ ಅವಕಾಶ ಕೈಚೆಲ್ಲಿದ ಭರತ್ ಅವ​​​ರನ್ನು ಕೈ ಬಿಟ್ಟು ಧ್ರುವ್ ಜುರೆಲ್ ಅವರಿ​ಗೆ ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್​​ ಚಿಂತನೆ ನಡೆಸಿದೆ. ಆದರೆ 3ನೇ ಪಂದ್ಯದಲ್ಲಿ ಧ್ರುವ್​ ಜುರೆಲ್​ಗೆ ಅವಕಾಶ ಸಿಗಲಿದೆ ಎಂದು ಹೇಳಲು 3 ಕಾರಣಗಳು ಇಲ್ಲಿವೆ.

ಮೂರನೇ ಟೆಸ್ಟ್​ನಲ್ಲಿ ಕೆಎಸ್ ಭರತ್ ಬದಲಿಗೆ ಧ್ರುವ್ ಜುರೆಲ್​ ಅವಕಾಶ ಪಡೆಯಲು 3 ಕಾರಣಗಳು
ಮೂರನೇ ಟೆಸ್ಟ್​ನಲ್ಲಿ ಕೆಎಸ್ ಭರತ್ ಬದಲಿಗೆ ಧ್ರುವ್ ಜುರೆಲ್​ ಅವಕಾಶ ಪಡೆಯಲು 3 ಕಾರಣಗಳು (AP)

ಫೆಬ್ರವರಿ 15ರಂದು ಗುರುವಾರ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಟೆಸ್ಟ್ ಪಂದ್ಯ (India vs England 3rd Test) ನಡೆಯಲಿದೆ. ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​​ ಮೈದಾನದಲ್ಲಿ ಜರುಗಲಿದೆ. ಇಂಗ್ಲೆಂಡ್ ತನ್ನ ಪ್ಲೇಯಿಂಗ್​ ಇಲೆವೆನ್​​ ಪ್ರಕಟಿಸಿದೆ. ಆದರೆ ಭಾರತದ ಆಡುವ 11ರ ಬಳಗದಲ್ಲಿ ಯಾರೆಲ್ಲಾ ಕಣಕ್ಕಿಳಿಯುತ್ತಾರೆ ಎಂಬ ಗೊಂದಲ ಹುಟ್ಟಿದೆ. ಪ್ರಮುಖ ಆಟಗಾರರೇ 3ನೇ ಟೆಸ್ಟ್​​ಗೆ ಅಲಭ್ಯರಾಗಲಿದ್ದಾರೆ.

ಹಾಗಾಗಿ ಭಾರತ ತಂಡದಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರಮುಖ ಬದಲಾವಣೆ ಆಗುವುದು ಖಚಿತವಾಗಿದ್ದು, ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ವಿಕೆಟ್​ ಕೀಪರ್​ ಕೆಎಸ್‌ ಭರತ್ ಬದಲಿಗೆ ಯುವ ಆಟಗಾರ ಧ್ರುವ್ ಜುರೆಲ್‌ಗೆ ಅವಕಾಶ ನೀಡಲಾಗುತ್ತದೆ ಎಂದು ವರದಿಯಾಗಿದೆ. ವಿಕೆಟ್​ ಕೀಪಿಂಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕೆಎಸ್ ಭರತ್, ಬ್ಯಾಟಿಂಗ್​​ನಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದರು.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆಗೈದ ಕೆಎಸ್‌ ಭರತ್‌, ಅಲ್ಲಿಂದ ಇಲ್ಲಿಯವರೆಗೂ ಒಂದೇ ಒಂದು ಅರ್ಧಶತಕ ಸಿಡಿಸಿಲ್ಲ. ಇಲ್ಲಿಯವರೆಗೂ 7 ಟೆಸ್ಟ್​​ ಪಂದ್ಯಗಳ ಪೈಕಿ 12 ಇನ್ನಿಂಗ್ಸ್​​​​ಗಳಲ್ಲಿ 20.09ರ ಬ್ಯಾಟಿಂಗ್ ಸರಾಸರಿಯಲ್ಲಿ 221 ರನ್ ಕಲೆ ಹಾಕಿದ್ದಾರೆ. ಸಿಕ್ಕ ಅವಕಾಶ ಕೈಚೆಲ್ಲಿದ ಭರತ್​​​ರನ್ನು ಕೈ ಬಿಟ್ಟು ಜುರೆಲ್​ಗೆ ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್​​ ಚಿಂತನೆ ನಡೆಸಿದೆ. ಆದರೆ ಮೂರನೇ ಪಂದ್ಯದಲ್ಲಿ ಧ್ರುವ್​ ಜುರೆಲ್​ಗೆ ಅವಕಾಶ ಸಿಗಲಿದೆ ಎಂದು ಹೇಳಲು ಮೂರು ಕಾರಣಗಳು ಇಲ್ಲಿವೆ ನೋಡಿ.

ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಜುರೆಲ್ ಅಂಕಿ-ಅಂಶಗಳು

ಇಂಡಿಯನ್​ ಪ್ರೀಮಿಯರ್ ಲೀಗ್​​​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಫಿನಿಷರ್​ ಆಗಿರುವ ಧ್ರುವ್ ಜುರೆಲ್, ಉತ್ತಮ ದಾಖಲೆ ಹೊಂದಿದ್ದಾರೆ. ಅಲ್ಲದೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಅದ್ಭುತ ಅಂಕಿ-ಅಂಶ ಹೊಂದಿದ್ದಾರೆ. ಆಡಿದ 15 ಫಸ್ಟ್​ ಕ್ಲಾಸ್ ಪಂದ್ಯಗಳಲ್ಲಿ ಧ್ರುವ್ ಜುರೆಲ್, 47ರ ಬ್ಯಾಟಿಂಗ್​ ಸರಾಸರಿಯಲ್ಲಿ 790 ರನ್‌ ಸಿಡಿಸಿದ್ದಾರೆ. 1 ಶತಕ, 5 ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ ಎ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಜುರೆಲ್, ಇಂಗ್ಲೆಂಡ್‌ ಲಯನ್ಸ್ ವಿರುದ್ದವು ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್

ಆಂಗ್ಲರ ಎದುರಿನ ಮೊದಲ 2 ಟೆಸ್ಟ್​​ಗಳಲ್ಲಿ ಮೂವರು ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್​​ಮನ್​​ಗಳು ತೀವ್ರ ನಿರಾಸೆ ಮೂಡಿಸಿದರು. ಇದರಲ್ಲಿ ಕೆಎಸ್ ಭರತ್ ಕೂಡ ಒಬ್ಬರು. ಸಿಕ್ಕ ಅವಕಾಶವನ್ನು ಕೈಚೆಲ್ಲಿದ ಕಾರಣ ಭರತ್ ಅವರನ್ನು ಮೂರನೇ ಟೆಸ್ಟ್​ನಲ್ಲಿ ತಮ್ಮ ಸ್ಥಾನಕ್ಕೆ ಕುತ್ತು ತಂದು ಕೊಂಡಿದ್ದಾರೆ. ಬದಲಿಗೆ ಜುರೆಲ್​ಗೆ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಆಕ್ರಮಣಕಾರಿ ಆಟದ ಕೌಶಲ ಹೊಂದಿರುವ ಯುವ ಆಟಗಾರ ಸ್ಪಿನ್ನರ್​​ಗಳ ಎದುರು ಸಹ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ. ಮಧ್ಯಮ ಕ್ರಮಾಂಕ ಮತ್ತು ಕೊನೆಯಲ್ಲಿ ಫಿನಿಷರ್​ ಆಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.

ಯಂಗ್​ ಬ್ಯಾಟ್ಸ್​ಮನ್​

ಸದ್ಯ ಜುರೆಲ್​ಗೆ ಇನ್ನೂ 22 ವರ್ಷ. ಯುವ ಆಟಗಾರರನ್ನು ಟೆಸ್ಟ್​​​ನಲ್ಲಿ ದೀರ್ಘಾವಧಿ ಬಳಸಿಕೊಳ್ಳಲು ಬಯಸಿರುವ ಟೀಮ್ ಮ್ಯಾನೇಜ್​ಮೆಂಟ್ ಅವಕಾಶ ನೀಡಲು ಬಯಸಿದೆ. ಭವಿಷ್ಯದ ಆಟಗಾರರನಾಗಿ ರೂಪಿಸಲು ಸಜ್ಜಾಗಿದೆ. ಆದರೆ ರಿಷಭ್ ಪಂತ್‌ ತಂಡಕ್ಕೆ ಮರಳಿದರೆ, ವಿಕೆಟ್ ಕೀಪಿಂಗ್‌ ಜಾಗದಲ್ಲಿ ಬದಲಾವಣೆ ಆಗಲಿದೆ. ಪಂತ್​ಗೆ ಬ್ಯಾಕಪ್ ವಿಕೆಟ್ ಕೀಪರ್​ ಆಗಿ ಪಂತ್​ ಇರಲಿದ್ದಾರೆ. ಜುರೆಲ್​ಗೆ ಇದು ಉತ್ತಮ ಅವಕಾಶ ಕೂಡ ಹೌದು. ಸದ್ಯ ಇಶಾನ್‌ ಕಿಶನ್‌ ಫಸ್ಟ್​ ಕ್ಲಾಸ್ ಕ್ರಿಕೆಟ್‌ ಆಡುತ್ತಿಲ್ಲ. ಹಾಗೂ ಕೆಎಸ್‌ ಭರತ್​ಗೆ 30 ವರ್ಷ ದಾಟಿದೆ. ಹಾಗಾಗಿ ಯುವ ಆಟಗಾರನಿಗೆ ಅವಕಾಶ ನೀಡಿ ಸಾಮರ್ಥ್ಯ ಪರಿಶೀಲಿಸಲು ಟೀಮ್ ಮ್ಯಾನೇಜ್ಮೆಂಟ್ ಕಾಯುತ್ತಿದೆ.

Whats_app_banner