Ind vs Eng 5th Test: ಒಲ್ಲಿ ಪೋಪ್ ಸ್ಟಂಪ್‌ಔಟ್‌ ಮಾಡಿ ಮತ್ತೊಮ್ಮೆ ಎಂಎಸ್‌ ಧೋನಿ ಆಟವನ್ನ ನೆನಪಿಸಿದ ಧ್ರುವ್ ಜುರೆಲ್; ವಿಡಿಯೊ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Eng 5th Test: ಒಲ್ಲಿ ಪೋಪ್ ಸ್ಟಂಪ್‌ಔಟ್‌ ಮಾಡಿ ಮತ್ತೊಮ್ಮೆ ಎಂಎಸ್‌ ಧೋನಿ ಆಟವನ್ನ ನೆನಪಿಸಿದ ಧ್ರುವ್ ಜುರೆಲ್; ವಿಡಿಯೊ ವೈರಲ್

Ind vs Eng 5th Test: ಒಲ್ಲಿ ಪೋಪ್ ಸ್ಟಂಪ್‌ಔಟ್‌ ಮಾಡಿ ಮತ್ತೊಮ್ಮೆ ಎಂಎಸ್‌ ಧೋನಿ ಆಟವನ್ನ ನೆನಪಿಸಿದ ಧ್ರುವ್ ಜುರೆಲ್; ವಿಡಿಯೊ ವೈರಲ್

India vs England 5th Test: ರಾಂಚಿ ಪಂದ್ಯದಲ್ಲಿ ಧೋನಿ ಅವರ ಆಟವನ್ನ ನೆನಪಿಸಿದ್ದ ಧ್ರುವ್ ಜುರೆಲ್ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ 5ನೇ ಪಂದ್ಯದಲ್ಲಿ ಕ್ವಿಕ್ ಸಂಟ್‌ಔಟ್ ಮೂಲಕ ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಒಲ್ಲಿ ಪೋಪ್ ಅವರನ್ನು ಕ್ವಿಕ್ ಸ್ಟಂಪ್‌ಔಟ್ ಮಾಡಿರುವ ಧ್ರುವ್ ಜುರೆಲ್ ಅವರು ಎಂಎಸ್ ಧೋನಿ ಅವರ ಆಟವನ್ನು ನೆನಪಿಸಿದ್ದಾರೆ.
ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಒಲ್ಲಿ ಪೋಪ್ ಅವರನ್ನು ಕ್ವಿಕ್ ಸ್ಟಂಪ್‌ಔಟ್ ಮಾಡಿರುವ ಧ್ರುವ್ ಜುರೆಲ್ ಅವರು ಎಂಎಸ್ ಧೋನಿ ಅವರ ಆಟವನ್ನು ನೆನಪಿಸಿದ್ದಾರೆ.

ಧರ್ಮಶಾಲಾ (ಹಿಮಾಚಲ ಪ್ರದೇಶ): ರಾಂಚಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತದ 5 ವಿಕೆಟ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕೆಟ್ ಕೀಪರ್ ಧ್ರುವ್ ಜುರೆಲ್ (Dhruv Jerel) ಮತ್ತೊಮ್ಮೆ ಅದ್ಬುತ ಕೀಪಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಧರ್ಮಶಾಲಾದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ (India vs England 5th Test) ಮೊದಲ ದಿನದಾಟದ ವೇಳೆ ಇಂಗ್ಲೆಂಡ್ ಆಟಗಾರ ಒಲ್ಲಿ ಪೋಪ್ ಅವರನ್ನು ಕ್ವಿಕ್ ಸ್ಟಂಪ್ ಔಟ್ ಮಾಡುವ ಮೂಲಕ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ಆಟವನ್ನು ನೆನಪಿಸಿದ್ದಾರೆ. ಇಂಗ್ಲೆಂಡ್‌ನ ಇನ್ನಿಂಗ್ಸ್‌ನ 26ನೇ ಓವರ್‌ನಲ್ಲಿ ಕುಲ್ದೀಪ್ ಯಾದವ್ ಅವರ 3ನೇ ಎಸೆತವನ್ನು ಎದುರಿಸಿದ ಪೋಪ್ ಸ್ಟಂಪ್ ಬಿಟ್ಟು ಮುಂದೆ ಬಂದು ಚೆಂಡನ್ನು ಬೌಂಡರಿಗೆರೆಗಟ್ಟಲು ಪ್ರಯತ್ನಿಸಿದರು. ಆದರೆ ಅವರ ಪ್ಲಾನ್ ವಿಫಲವಾಗಿತ್ತು. ಯಾಕೆಂದರೆ ಕುಲ್ದೀಪ್ ಎಸೆದಿದ್ದ ಚೆಂಡು ಒಲ್ಲಿ ಪೋಪ್ ಅವರ ಬ್ಯಾಟ್‌ಗೆ ತಾಗದೆ ಸೀದಾ ವಿಕೆಟ್ ಕೀಪರ್ ಕೈಸೇರಿತ್ತು. ಒಂದು ಕ್ಷಣವೂ ತಡಮಾಡದ ಜುರೆಲ್ ವಿಕೆಟ್‌ಗಳನ್ನು ಹೊಡೆದರು. ಪೋಪ್ ಸ್ಟಂಪ್ ಔಟ್ ಆದರು.

ಧ್ರುವ್ ಜುರೆಲ್ ಅವರ ಈ ಕ್ವಿಕ್ ಸ್ಟಂಪ್ ಔಟ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಆಟವನ್ನು ನೆನಪಿಸುವಂತಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಧ್ರುಲ್ ಜುರೆಲ್ ಅವರ ಅದ್ಭುತ ಸ್ಟಂಪ್‌ ಔಟ್ ಹೇಗಿತ್ತು ನೋಡಿ.

ಟೀಂ ಇಂಡಿಯಾ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ತಂಡ 57.4 ಓವರ್‌ಗಳಲ್ಲಿ 218 ರನ್ ಗಳಿಸಿ ಆಲೌಟ್ ಆಗಿದೆ. ಇಂಗ್ಲೆಂಡ್ ಪರ ಆರಂಭಿಕ ಬ್ಯಾಟರ್ ಝಾಕ್ ಕ್ರಾಲಿ ಅವರು ಸಿಡಿಸಿದ 79 ರನ್ ತಂಡದ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿತು. ಇವರ ಈ ಅರ್ಧಶಕದಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸೇರಿತ್ತು. ಆದರೆ ಇನ್ನಿಂಗ್ಸ್‌ನ 38ನೇ ಓವರ್‌ನ ಎರಡನೇ ಎಸೆತದಲ್ಲಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ತಂಡವನ್ನು ಟೀಂ ಇಂಡಿಯಾ ಮೂರು ಸ್ಪಿನ್ನರ್‌ಗಳೇ ಕಟ್ಟಿಹಾಕಿದರು. ಕುಲ್ದೀಪ್ 5ವಿಕೆಟ್, 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ರವಿಚಂದ್ರನ್ ಅಶ್ವಿನ್ 4 ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಕಿತ್ತರು.

ರಾಂಚಿಯಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್ ಗಳಿಸಿದ ನಂತರ ಜುರೆಲ್ ಅವರನ್ನು ಧೋನಿಗೆ ಹೋಲಿಸಿದ ಕೆಲವೇ ಹಿರಿಯ ಕ್ರಿಕೆಟಿಗರಲ್ಲಿ ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಕೂಡ ಒಬ್ಬರು. ರಿಷಭ್ ಪಂತ್ ಟೆಸ್ಟ್ ತಂಡಕ್ಕೆ ಮರಳಿದ ನಂತರ ಟೀಂ ಇಂಡಿಯಾ ಜುರೆಲ್ ಅವರನ್ನು ಕೀಪರ್-ಬ್ಯಾಟ್ಸಮನ್ ಆಗಿ ಉಳಿಸಿಕೊಳ್ಳಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಂಬ್ಳೆ, ಒತ್ತಡದ ನಡುವೆಯೂ ಜುರೆಲ್ ಅವರ ಸಂಯೋಜಿತ ಬ್ಯಾಟಿಂಗ್ ವಿಧಾನದಿಂದ ಪ್ರಭಾವಿತರಾಗಿದ್ದರಿಂದ ಧೋನಿಯ ದಾಖಲೆಗಳನ್ನು ಸರಿಗಟ್ಟಲು ಯುವ ಆಟಗಾರ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದರು.

"ಹೌದು, ರಿಷಭ್ ಪಂತ್ ಇದ್ದಾರೆ. ಆತ ಯಾವಾಗ ಬರುತ್ತಾನೆ ಅಂತ ನಮಗೆ ತಿಳಿದಿಲ್ಲ. ರಿಷಭ್ ಪಂತ್‌ ಶೀಘ್ರದಲ್ಲೇ ತಂಡಕ್ಕೆ ಬರುವ ಭರವಸೆ ಇದೆ. ಇಲ್ಲದಿದ್ದರೆ, ಹೌದು, ಎಂಎಸ್ ಧೋನಿ ತಮ್ಮ ವೃತ್ತಿಜೀವನದಲ್ಲಿ ತಲುಪಿದ ಸ್ಥಳಕ್ಕೆ ಜುರೆಲ್ ತಲುಪಲು ಖಂಡಿತವಾಗಿಯೂ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಆದರೆ ಅವರು ತಮ್ಮ ತಂತ್ರದ ಮನೋಧರ್ಮವನ್ನು ಡಿಫೆನ್ಸ್‌ಗೆ ಮಾತ್ರವಲ್ಲ, ಆಕ್ರಮಣ ಮಾಡಿದಾಗಲೂ ತೋರಿಸಿದ್ದಾರೆ ಎಂದು ಅವರು ತೋರಿಸಿದ್ದಾರೆ ಎಂದು ಕುಂಬ್ಳೆ ಜಿಯೋ ಸಿನೆಮಾಗೆ ತಿಳಿಸಿದ್ದಾರೆ. ಟೀಂ ಇಂಡಿಯಾ ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಪಡೆದಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner