ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್; ಕುಲ್ದೀಪ್, ಅಶ್ವಿನ ಸ್ಪಿನ್ ಬಲೆಗೆ ಬಿದ್ದ ಸ್ಟೋಕ್ಸ್ ಪಡೆ; ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗೆ ಆಲೌಟ್-india vs england fifth test kuldeep yadav spin trap ben stokes team all out for 218 runs in first innings rmy ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಇಂಗ್ಲೆಂಡ್ 5ನೇ ಟೆಸ್ಟ್; ಕುಲ್ದೀಪ್, ಅಶ್ವಿನ ಸ್ಪಿನ್ ಬಲೆಗೆ ಬಿದ್ದ ಸ್ಟೋಕ್ಸ್ ಪಡೆ; ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗೆ ಆಲೌಟ್

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್; ಕುಲ್ದೀಪ್, ಅಶ್ವಿನ ಸ್ಪಿನ್ ಬಲೆಗೆ ಬಿದ್ದ ಸ್ಟೋಕ್ಸ್ ಪಡೆ; ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗೆ ಆಲೌಟ್

ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 218 ರನ್‌ಗಳಿಗೆ ಆಲೌಟ್ ಆಗಿದೆ. ಟೀಂ ಇಂಡಿಯಾದ ಸ್ಪಿನ್ನರ್‌ಗಳು ಎಲ್ಲಾ ವಿಕೆಟ್‌ ಪಡೆದಿದ್ದು ವಿಶೇಷ.

ಧರ್ಮಶಾಲಾದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಪಡೆದಾಗ ಕುಲ್ದೀಪ್ ಯಾದವ್ ಅವರನ್ನು ಸಹ ಆಟಗಾರರು ಅಭಿನಂದಿಸಿದರು. (AFP)
ಧರ್ಮಶಾಲಾದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಪಡೆದಾಗ ಕುಲ್ದೀಪ್ ಯಾದವ್ ಅವರನ್ನು ಸಹ ಆಟಗಾರರು ಅಭಿನಂದಿಸಿದರು. (AFP)

ಧರ್ಮಶಾಲಾ (ಹಿಮಾಚಲ ಪ್ರದೇಶ): ಟೀಂ ಇಂಡಿಯಾ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದಿದ್ದತ್ತು. ಆದರೆ ಈ ತಂಡದ ಆರಂಭಿಕರುವ ಉತ್ತಮ ಆರಂಭವನ್ನು ದೊಡ್ಡ ಮೊತ್ತಕ್ಕೆ ಪರಿವರ್ತಿಸುವ ಯೋಜನೆಗೆ ಟೀಂ ಇಂಡಿಯಾದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವಕಾಶವನ್ನೇ ನೀಡಿಲ್ಲ. 17.6 ಎಸೆತಗಳಲ್ಲಿ 64 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಮತ್ತೆ ಬ್ಯಾಟಿಂಗ್‌ಗೆ ಕಚ್ಚಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಪರಿಣಾಮವಾಗಿ 57.4 ಓವರ್‌ಗಳಲ್ಲಿ 218 ರನ್ ಗಳಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಸರ್ವ ಪತನ ಕಂಡಿದೆ.

ಇಂಗ್ಲೆಂಡ್ ಪರ ಆರಂಭಿಕ ಬ್ಯಾಟರ್ ಝಾಕ್ ಕ್ರಾಲಿ ಅವರು ಸಿಡಿಸಿದ 79 ರನ್ ತಂಡದ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿತು. ಇವರ ಈ ಅರ್ಧಶಕದಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸೇರಿತ್ತು. ಆದರೆ ಇನ್ನಿಂಗ್ಸ್‌ನ 38ನೇ ಓವರ್‌ನ ಎರಡನೇ ಎಸೆತದಲ್ಲಿ ಕುಲ್ದೀಪ್ ಯಾದವ್ ಶತಕದತ್ತ ದಾಪುಗಾಲು ಇಡುತ್ತಿದ್ದ ಕ್ರಾಲಿ ಅವರನ್ನು ಕ್ಲೀನ್ ಬ್ಲೋಡ್ ಮಾಡಿದ್ರು.

ಬೆನ್ ಡಕೆಟ್ (27), ಒಲಿ ಪೋಪ್ (11), ಜೋ ರೂಟ್ (26), ಬೆನ್ ಸ್ಟೋಕ್ಸ್ (0), ಜಾನಿ ಬೈರ್‌ಸ್ಟೋ (29), ವಿಕೆಟ್ ಕೀಪರ್ ಬೆನ್ ಫೋಕ್ಸ್ (24), ಟಾಮ್ ಹಾರ್ಟ್ಲಿ (6), ಮಾರ್ಕ್ ವುಡ್ (0), ಜೇಮ್ಸ್ ಆಂಡರ್ಸನ್ (0) ಹಾಗೂ ಶೋಯೆಬ್ ಬಶೀರ್ ಔಟಾಗದೆ 11 ರನ್ ಗಳಿಸಿದರು. ಇಂಗ್ಲೆಂಡ್‌ನ ಮೊದಲ ಮೂರು ಬ್ಯಾಟರ್‌ಗಳನ್ನು ಕುಲ್ದೀಪ್ ಯಾದವ್ ಔಟ್ ಮಾಡಿದರು. ಆ ಬಳಿಕವೂ ಅವರ ವಿಕೆಟ್ ಸರಣಿ ಮುಂದುವರಿಯಿತು. ಮಧ್ಯಮ ಕ್ರಮಾಂಕದ ಜಾನಿ ಬೈರ್‌ಸ್ಟೋ ಹಾಗೂ ನಾಯಕ ಬೆನ್ ಸ್ಟೋಕ್ಸ್ ಅವರ ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು. ಈ ಇನ್ನಿಂಗ್ಸ್‌ನಲ್ಲಿ ಕುಲ್ದೀಪ್ ಒಟ್ಟು 5 ವಿಕೆಟ್‌ಗಳ ಸಾಧನೆಯನ್ನು ಮಾಡಿದರು. ಆರ್ ಅಶ್ವಿನ್ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 1 ವಿಕೆಟ್ ಕಿತ್ತರು.

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಉಭಯ ತಂಡಗಳ ಇಬ್ಬರು ಆಟಗಾರರು ತುಂಬಾ ವಿಶೇಷವಾಗಿದೆ. ಟೀಂ ಇಂಡಿಯಾ ಪರ ಆರ್ ಅಶ್ವಿನ್ ಹಾಗೂ ಇಂಗ್ಲೆಂಡ್ ಜಾನಿ ಬೈರ್‌ಸ್ಟೋ ಅವರಿಗೆ ಇದು 100 ನೇ ಟೆಸ್ಟ್ ಪಂದ್ಯವಾಗಿದೆ. ಕನ್ನಡಿಗ ದೇವದತ್ ಪಡಿಕ್ಕಲ್ ಈ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ.

5ನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಭಾರತ, ಇಂಗ್ಲೆಂಡ್ ತಂಡಗಳು

ಭಾರತ ಆಡುವ 11ರ ಬಳಗ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ,

ಇಂಗ್ಲೆಂಡ್ ಆಡುವ 11ರ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋ, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್

(This copy first appeared in Hindustan Times Kannada website. To read more like this please logon to kannada.hindustantimes.com )