ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಲೈವ್ ಸ್ಟ್ರೀಮಿಂಗ್‌ನಲ್ಲಿ ಬದಲಾವಣೆ; ಟಿವಿ ಹಾಗೂ ಡಿಜಿಟಲ್ ಪ್ರಸಾರಕ್ಕೆ ಭಿನ್ನ ವೇದಿಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಇಂಗ್ಲೆಂಡ್ ಟೆಸ್ಟ್ ಸರಣಿಯ ಲೈವ್ ಸ್ಟ್ರೀಮಿಂಗ್‌ನಲ್ಲಿ ಬದಲಾವಣೆ; ಟಿವಿ ಹಾಗೂ ಡಿಜಿಟಲ್ ಪ್ರಸಾರಕ್ಕೆ ಭಿನ್ನ ವೇದಿಕೆ

ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಲೈವ್ ಸ್ಟ್ರೀಮಿಂಗ್‌ನಲ್ಲಿ ಬದಲಾವಣೆ; ಟಿವಿ ಹಾಗೂ ಡಿಜಿಟಲ್ ಪ್ರಸಾರಕ್ಕೆ ಭಿನ್ನ ವೇದಿಕೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ ಸರಣಿಯ ಎಲ್ಲಾ ಪಂದ್ಯಗಳನ್ನು ಭಾರತದಲ್ಲಿ ಅಭಿಮಾನಿಗಳು ಜಿಯೋ ಹಾಟ್‌ಸ್ಟಾರ್‌ ಮೂಲಕ ನೋಡಬಹುದು. ಇದೇ ವೇಳೆ ಸೋನಿ ವಾಹಿನಿಯು ದೂರದರ್ಶನದ ಪ್ರಸಾರ ಹಕ್ಕುಗಳನ್ನು ಪಡೆದಿದೆ.

ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಲೈವ್ ಸ್ಟ್ರೀಮಿಂಗ್‌ನಲ್ಲಿ ಬದಲಾವಣೆ (File)
ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಲೈವ್ ಸ್ಟ್ರೀಮಿಂಗ್‌ನಲ್ಲಿ ಬದಲಾವಣೆ (File)

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಮುಂದಿನ ತಿಂಗಳು ಆರಂಭವಾಗಲಿದೆ. ಮಹತ್ವದ ಸರಣಿಗೆ ಶುಭ್ಮನ್‌ ಗಿಲ್‌ ನೇತೃತ್ವದಲ್ಲಿ ಈಗಾಗಲೇ ಭಾರತ ಕ್ರಿಕೆಟ್ ತಂಡವನ್ನು ಘೋಷಿಸಲಾಗಿದೆ. ಈ ನಡುವೆ ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸಲು ಸಿದ್ಧವಾಗಿರುವ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಜಿಯೋ ಹಾಟ್‌ಸ್ಟಾರ್ ಪಡೆದುಕೊಂಡಿದೆ. ಅಂದರೆ, ಜೂನ್ 20ರಂದು ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಪ್ರಾರಂಭವಾಗಲಿರುವ ಈ ಸರಣಿಯ ಪಂದ್ಯಗಳನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ.

ದೂರದರ್ಶನ ಪ್ರಸಾರ ಹಕ್ಕುಗಳನ್ನು ಸೋನಿ ಉಳಿಸಿಕೊಂಡಿದೆ. ಹೀಗಾಗಿ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್‌ ಚಾನೆಲ್‌ನಲ್ಲಿ ಸರಣಿಯ ಪಂದ್ಯಗಳನ್ನು ಪ್ರಸಾರ ಮಾಡಲಿದೆ.

ಈ ಪ್ರವಾಸದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯವು ಜೂನ್ 20ರಂದು ಹೆಡಿಂಗ್ಲೆಯಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಜುಲೈ 2ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಜುಲೈ 10ರಂದು ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ನಡೆದರೆ. ನಾಲ್ಕನೇ ಟೆಸ್ಟ್ ಜುಲೈ 23ರಂದು ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಐದನೇ ಹಾಗೂ ಕೊನೆಯ ಟೆಸ್ಟ್ ಜುಲೈ 31ರಂದು ದಿ ಓವಲ್‌ನಲ್ಲಿ ನಡೆಯಲಿದೆ.

ಜಿಯೋ ಹಾಟ್‌ಸ್ಟಾರ್‌ನಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ 2023ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಆಸ್ತಿಗಳ ಮೇಲಿನ ವಿಶೇಷ ಭಾರತದ ಹಕ್ಕುಗಳನ್ನು 2031ರವರೆಗೆ, ಅಂದರೆ ಎಂಟು ವರ್ಷಗಳ ಒಪ್ಪಂದದ ಅಡಿಯಲ್ಲಿ ಸ್ವಾಧೀನಪಡಿಸಿಕೊಂಡಿತ್ತು.

ಅನುಭವಸ್ಥರ ಕೊರತೆ

ಶುಭ್ಮನ್‌ ಗಿಲ್ ಭಾರತದ ನೂತನ ಟೆಸ್ಟ್ ನಾಯಕರಾಗಿ ನೇಮಕಗೊಂಡಿದ್ದಾರೆ. ಆಂಗ್ಲರ ನಾಡಿನಲ್ಲಿ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯು 25ರ ಹರೆಯದ ಆಟಗಾರನಿಗೆ ದೊಡ್ಡ ಸವಾಲಾಗಲಿದೆ. ತಂಡದಲ್ಲಿ ಮೂವರು ಅನುಭವಿ ಆಟಗಾರರು ಆಡುತ್ತಿಲ್ಲ. ವಿರಾಟ್ ಕೊಹ್ಲಿ‌, ರೋಹಿತ್ ಶರ್ಮಾ ಹಾಗೂ ಆರ್‌ ಅಶ್ವಿನ್‌ ನಿವೃತ್ತಿ ಪಡೆದಿದ್ದು, ಇವರ ಅನುಪಸ್ಥಿತಿಯಲ್ಲಿ ಹಲವು ವರ್ಷಗಳ ನಂತರ ಆಡಬೇಕಾಗಿ ಬಂದಿದೆ. ಹೀಗಾಗಿ ಅನುಭವಿ ಆಟಗಾರರ ಬೆಂಬಲದ ಕೊರತೆ ಗಿಲ್‌ಗೆ ಕಾಡಲಿದೆ. 25 ವರ್ಷದ ಗಿಲ್ ಭಾರತದ ಐದನೇ ಕಿರಿಯ ಟೆಸ್ಟ್ ನಾಯಕನಾಗಲಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡ

ಶುಭ್ಮನ್‌ ಗಿಲ್‌ (ನಾಯಕ), ರಿಷಭ್‌ ಪಂತ್‌‌ (ಉಪನಾಯಕ ಮತ್ತು ವಿಕೆಟ್‌ ಕೀಪರ್), ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌‌, ಸಾಯಿ ಸುದರ್ಶನ್‌, ಅಭಿಮನ್ಯು ಈಶ್ವರನ್, ಕರುಣ್‌ ನಾಯರ್, ನಿತೀಶ್‌ ಕುಮಾರ್‌ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್‌ ಜುರೆಲ್‌ (ವಿಕೆಟ್‌ ಕೀಪರ್), ವಾಷಿಂಗ್ಟನ್‌ ಸುಂದರ್‌, ಶಾರ್ದುಲ್ ಠಾಕೂರ್‌, ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್ ಕೃಷ್ಣ, ಆಕಾಶ್‌ ದೀಪ್‌, ಅರ್ಷದೀಪ್‌ ಸಿಂಗ್‌, ಕುಲ್ದೀಪ್‌ ಯಾದವ್.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.